ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೨೨ ನೇ ಸಾಲು:
(೧೧ ಏಪ್ರಿಲ್ ೨೦೦೯)
*ಆಫ್ರಿಕಾ ಖಂಡವು ಪೂವರ್ಾರ್ಧಗೋಳದಲ್ಲಿರುವ ವಿಸ್ತೀರ್ಣದಲ್ಲಿ ಏಷ್ಯಾ ಖಂಡಕ್ಕೆ ಎರಡನೆಯದು. ಇಡೀ ಜಗತ್ತಿನ ಒಟ್ಟು ಭೂಭಾಗದ ಐದನೇ ಒಂದು ಭಾಗವನ್ನು ಇದು ಆಕ್ರಮಿಸಿದ್ದು ವಿಸ್ತೀರ್ಣದಲ್ಲಿ ಯೂರೋಪಿನ ಮೂರು ಪಟ್ಟು ಇದೆ. ಉತ್ತರದಿಂದ ದಕ್ಷಿಣಕ್ಕೆ ಸುಮಾರು 5,000 ಮೈಲಿ ಉದ್ದವೂ ಪೂರ್ವ ಪಶ್ಚಿಮವಾಗಿ 4,500 ಮೈಲಿಗಳಷ್ಟು ಅಗಲವಾಗಿಯೂ ಇದೆ.
 
*ಕಳೆದ ಮೂರು-ನಾಲ್ಕು ಶತಮಾನಗಳಲ್ಲಿ ಆಫ್ರಿಕಾ ಖಂಡದ ನೈಸಗರ್ಿಕ ಮತ್ತು ಮಾನವ ಸಂಪನ್ಮೂಲಗಳನ್ನು ಸಾಮ್ರಾಜ್ಯಶಾಹಿ ರಾಷ್ಟ್ರಗಳು ಲೂಟಿ ಮಾಡಿ ಅಭಿವೃದ್ಧಿಗೆ ಕಡಿವಾಣ ಹಾಕಿದ್ದರ ಫಲವಾಗಿ ಈ ಭೂಭಾಗಕ್ಕೆ ಕಗ್ಗತ್ತಲೆಯ ಖಂಡವೆಂಬ ಹಣೆಪಟ್ಟಿ ನೀಡಲಾಗಿದೆ. ಆಫ್ರಿಕಾದಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಚಿನ್ನ, ದಂತ, ವಜ್ರ ಮುಂತಾದ ಕಣ್ಣು ಕೋರೈಸುವ ಸಂಪತ್ತನ್ನು ದೋಚಲು ವ್ಯಾಪಾರದ ಸೋಗು ಹಾಕಿಕೊಂಡು ಪೋಚರ್ುಗೀಸರು, ಡಚ್ಚರು ಮತ್ತು ಫ್ರೆಂಚರು ಈ ಭೂಖಂಡಕ್ಕೆ ಬಂದಿಳಿದರು. ಆಫ್ರಿಕಾದ ವಿವಿಧ ಜನಾಂಗ ಮತ್ತು ಬುಡಕಟ್ಟುಗಳ ನಡುವಿನ ವೈರುಧ್ಯ-ವೈಮನಸ್ಯಗಳನ್ನು ಬಳಸಿಕೊಂಡು ಮಿಲಿಟರಿ ಬಲದಿಂದ ತಮ್ಮ ಯಜಮಾನಿಕೆಯನ್ನು ಹೇರುವಲ್ಲಿ ಯಶಸ್ವಿಯಾದರು. ಕಾಲಕ್ರಮೇಣ ವಸಾಹತುಗಳಾಗಿ ಪರಿವತರ್ಿತಗೊಂಡ ಈ ಭೂಭಾಗದಲ್ಲಿ ಪೋಚರ್ುಗೀಸರು ಪಶ್ಚಿಮ ಆಫ್ರಿಕಾದ ಕರಾವಳಿ ಪ್ರದೇಶದಲ್ಲಿ, ಫ್ರೆಂಚರು ವಾಯುವ್ಯ ಪ್ರದೇಶದಲ್ಲಿ, ಬ್ರಿಟಿಷರು ಪೂರ್ವದಲ್ಲಿ, ಡಚ್ಚರು ದಕ್ಷಿಣದಲ್ಲಿ, ಬೆಲ್ಜಿಯನ್ನರು ಮಧ್ಯ ಆಫ್ರಿಕಾದಲ್ಲಿ, ಇಟಾಲಿಯನ್ನರು ಉತ್ತರ ಆಫ್ರಿಕಾ ಪ್ರದೇಶಗಳನ್ನು ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದ್ದರು. 19 ನೇ ಶತಮಾನದ ಕೊನೆಯ ಭಾಗದಲ್ಲಿ ತೃತೀಯ ರಾಷ್ಟ್ರಗಳನ್ನು ವಸಾಹತುಗೊಳಿಸುತ್ತಾ ಬಂಡವಾಳವು ಅಗಾಧ ಮಟ್ಟದಲ್ಲಿ ಬೆಳೆಯತೊಡಗಿತ್ತು. ವಿಶ್ವದ ಭೂಭಾಗಗಳನ್ನು ಹಂಚಿಕೊಳ್ಳಲು ಯೂರೋಪಿನ ಬಂಡವಾಳಶಾಹಿ ರಾಷ್ಟ್ರಗಳ ನಡುವೆ ಇನ್ನಿಲ್ಲದಂಥ ಸ್ಪಧರ್ೆ ಏರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಆಫ್ರಿಕಾದ ರಾಷ್ಟ್ರಗಳನ್ನು ವಸಾಹತುಗಳನ್ನಾಗಿ ತೀವ್ರಗತಿಯಲ್ಲಿ ಪರಿವತರ್ಿಸಲಾಯಿತು. 1876 ರ ಹೊತ್ತಿಗೆ ಆಫ್ರಿಕಾದ ಹತ್ತನೇ ಒಂದು ಭಾಗವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದ್ದರೆ, 1900 ರ ಹೊತ್ತಿಗೆ ಹತ್ತನೆ ಒಂಬತ್ತರಷ್ಟು ಭಾಗವನ್ನು ವಶಪಡಿಸಿಕೊಳ್ಳಲಾಗಿತ್ತು.
 
==ಆಫ್ರಿಕಾ ಭೂಖಂಡ ಹಂಚಿಕೆಗಾಗಿ ಕಾದಾಟ==
*ಈಜಿಪ್ಟ್ನ ಕೈರೋದಿಂದ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ವರೆಗೆ ಪೂರ್ಣ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿದ್ದ ಇಂಗ್ಲೆಂಡ್ನ ಆಸೆ ಮೊದಲನೆ ವಿಶ್ವ ಮಹಾಯುದ್ದ ನಂತರವಷ್ಟೆ ಕೈಗೂಡಿತು. ಈಜಿಪ್ಟ್ನ್ನು ಆಕ್ರಮಿಸಿಕೊಳ್ಳುವಾಗಲೇ ಪೂರ್ವ ಸೂಡಾನ್ನೊಳಗೂ ಇಂಗ್ಲೆಂಡ್ ಒಳ ನುಸುಳಿಕೊಂಡಿತು. ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಾದ ಘಾನಾ ಮತ್ತು ನೈಜೀರಿಯಾದ ಭೂಭಾಗಗಳ ಮೇಲೆ ಇಂಗ್ಲೆಂಡ್ ಆಕ್ರಮಣಕಾರಿ ಯುದ್ದಗಳನ್ನು ಹೂಡಿತ್ತು. ಫ್ರಾನ್ಸ್ ಕೂಡ ಆಫ್ರಿಕಾದಲ್ಲಿ ಅತಿ ದೊಡ್ಡ ವಸಾಹತು ಸಾಮ್ರಾಜ್ಯವನ್ನೇ ಹೊಂದಿತ್ತು. ಅಲ್ಜೀರಿಯಾದಿಂದ ಆರಂಭಿಸಿ ತುನಿಷಿಯಾ, ಮೊರಾಕೊ ಮತ್ತು ಸೆನೆಗಲ್ಗಳನ್ನು ಫ್ರಾನ್ಸ್ ವಸಾಹತುವನ್ನಾಗಿಸಿತು. ಜರ್ಮನಿಯು ಆಫ್ರಿಕಾದ ಕೆಲವು ಬುಡಕಟ್ಟು ನಾಯಕರುಗಳ ಮೇಲೆ ಅಸಮ್ಮತ ಒಪ್ಪಂದಗಳನ್ನು ಹೇರಿ ಪೂರ್ವ ಆಫ್ರಿಕಾದ ಭಾಗಗಳನ್ನು ಒಳಗೊಂಡಂತೆ ಪಶ್ಚಿಮದ ಟೋಗೋ, ಮತ್ತು ಕೆಮರೂನ್ಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತು.
"https://kn.wikipedia.org/wiki/ಆಫ್ರಿಕಾ" ಇಂದ ಪಡೆಯಲ್ಪಟ್ಟಿದೆ