ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೪೧ ನೇ ಸಾಲು:
 
==ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಳು==
*ಎರಡನೇ ಮಹಾಯುದ್ದ ಸಮಯದಲ್ಲಿ ಗಣಿಗಾರಿಕೆ ಮತ್ತು ಉತ್ಪಾದನಾ ಕೈಗಾರಿಕೆಗಳ ಅಭಿವೃದ್ಧಿಯಾಯಿತು. ಹಲವು ವಿಧದ ಕಚ್ಛಾ ವಸ್ತುಗಳ ಉತ್ಪಾದನೆಯಾಯಿತು. ಖನಿಜ ಸಂಪತ್ತುಗಳ ಶೋಧನೆಯಾಯಿತು. ಆಫ್ರಿಕಾದಿಂದ ಹೆಚ್ಚೆಚ್ಚು ಯುದ್ದ ಸಾಮಗ್ರಿಗಳು ಮತ್ತು ಗಣಿ ಸಂಪತ್ತುಗಳನ್ನು ಸಂಸ್ಕರಿಸಿ ಸಾಗಿಸುತ್ತಿದ್ದರಿಂದ 1940-45ರ ಅವಧಿಯಲ್ಲಿ ಆಫ್ರಿಕಾದ ನಗರಗಳು ಮೂರುಪಟ್ಟು ನಾಲ್ಕುಪಟ್ಟು ಹೆಚ್ಚಾದವು. ನೈಸಗರ್ಿಕ ಮತ್ತು ಮಾನವ ಸಂಪನ್ಮೂಲಗಳನ್ನು ಆಫ್ರಿಕಾದಿಂದ ಸಾಗಣೆ ಮಾಡುವ ಸಲುವಾಗಿ ಜೀವನಕ್ಕಾಗಿ ಕೃಷಿ ಮಾಡುತ್ತಿದ್ದ ಮತ್ತು ಸಣ್ಣ ಕೈಗಾರಿಕೆಗಳಿದ್ದ ಆಫ್ರಿಕಾದ ಆಥರ್ಿಕ ತಳಪಾಯವನ್ನು ಬೃಹತ್ ಮಟ್ಟದ ರಪ್ತು-ಆಧಾರಿತ ಆಥರ್ಿಕತೆಯನ್ನಾಗಿ ಪರಿವತರ್ಿಸಲಾಯಿತು. ಈ ಮಧ್ಯೆ, ಏಷ್ಯಾದಿಂದ ಬರುತ್ತಿದ್ದ ಲಾಭಕ್ಕೆ ಪೆಟ್ಟು ಬಿದ್ದ ನಂತರ ಪ್ರಪಂಚದ ಸುಲಿಗೆಕೋರರ ದೃಷ್ಟಿ ಆಫ್ರಿಕಾ ವಸಾಹತುವಿನತ್ತ ಹೆಚ್ಚೆಚ್ಚು ಹರಿಯಿತು. ಇದರಿಂದಾಗಿ ಸಾವಿರಾರು ವರ್ಷಗಳಿಂದ ಬೆಳೆದುಬಂದ ಸಂಸ್ಕೃತಿಯನ್ನು ನಾಶಗೊಳಿಸಿ ರೈತಾಪಿಯನ್ನು ಬಲವಂತವಾಗಿ ಕೈಗಾರಿಕಾ ಕಾಮರ್ಿಕರನ್ನಾಗಿಸಲಾಯಿತು. ಹಳ್ಳಿಗರನ್ನು ಗಣಿಗಳು, ರೈಲು-ರಸ್ತೆಗಳು ಮತ್ತು ಸಂಸ್ಕರಣಾ ಘಟಕಗಳಲ್ಲಿ ಕೆಲಸ ಮಾಡಲು ಯೋಗ್ಯವಿರುವ 'ಕ್ರೂರಪಶು' ಗಳೆಂದು ಪರಿಗಣಿಸಲಾಗುತ್ತಿತ್ತು.
ಕಾಮರ್ಿಕ ಪಡೆಯನ್ನು ನಿಮರ್ಿಸಲು ಎರಡು ವಿಧಾನಗಳನ್ನು ಬಳಸಲಾಗುತ್ತಿತ್ತು. ಮೊದಲನೆಯದು, ಹೆಚ್ಚೆಚ್ಚು ತೆರಿಗೆಯನ್ನು ವಿಧಿಸಿ ಅದನ್ನು ಹಣದ ರೂಪದಲ್ಲೇ ಪಾವತಿಸುವಂತೆ ಮಾಡಿದ್ದು. ಈ ತೆರಿಗೆ ಪಾವತಿಸಲು ಹಣಕ್ಕಾಗಿ ಆಫ್ರಿಕನ್ನರು ಯೂರೋಪ್ ಅಥವಾ ಅಮೇರಿಕಾದ ಕಂಪನಿಗಳಲ್ಲಿ ಕೆಲಸಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದರು. ಬಹುತೇಕ ವಸಾಹತುಗಳಲ್ಲಿ ಆಫ್ರಿಕನ್ನರ ಭೂಮಿ ಮೇಲಿನ ಒಡೆತನ ಶೇಕಡಾ 10ಕ್ಕೆ ಮಾತ್ರ ಸೀಮಿತವಾಗಿತ್ತು. ಉಳಿದ ಭೂಮಿಯನ್ನು ರಪ್ತು-ಆಧಾರಿತ ಬೆಳೆ ಬೆಳೆಯಲು ಅಗತ್ಯಕ್ಕಿಂತ ಅಗಾಧವಾದ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಮತ್ತು ವಸಾಹತುಶಾಹಿಗಳಿಗೆ ನೀಡಿದ್ದರಿಂದ ಸ್ವಾವಲಂಬಿಯಾಗಿದ್ದ ಆಫ್ರಿಕಾ ಆಹಾರಕ್ಕಾಗಿ ಆಮದು ಮಾಡಿಕೊಳ್ಳಬೇಕಾಯಿತು. ಎರಡನೆಯದು, ಬಲಾತ್ಕಾರದಿಂದ ಕಾಮರ್ಿಕರನ್ನು ನೇಮಿಸಿಕೊಳ್ಳುವುದು ಅಥವಾ ಆಧುನಿಕ ಗುಲಾಮಗಿರಿ. ಹಳ್ಳಿಗಳಿಂದ ಅಪಹರಿಸಿದ ಜನರನ್ನು ಗುತ್ತಿಗೆದಾರರ ನೆರವಿನಿಂದ ಬಲವಂತವಾಗಿ ಕಾಮರ್ಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಆರೋಗ್ಯ ಸಂರಕ್ಷಣೆ, ನೈರ್ಮಲ್ಯ ವ್ಯವಸ್ಥೆ, ಕುಡಿಯುವ ನೀರು, ಮುಂತಾದ ಅತ್ಯವಶ್ಯ ಸೌಲಭ್ಯಗಳಿಲ್ಲದೆ ಹಂದಿಗೂಡಿನಂಥಹ ವಸತಿಗಳಲ್ಲಿ ವಾಸವಾಗಿದ್ದುಕೊಂಡು ದೀಘರ್ಾವಧಿ ಸಮಯ ಕೆಲಸ ಮಾಡುತ್ತಾ ಕುಟುಂಬದ ಸಂಪರ್ಕವಿಲ್ಲದೆ ಕಾಮರ್ಿಕರ ಜೀವನ ಹೀನಾಯ ಸ್ಥಿತಿಯಲ್ಲಿತ್ತು.
*ಇಂಥಹ ಕ್ರೂರ ಸ್ಥಿತಿಗಳಿಂದಾಗಿ ಉತ್ತಮ ವೇತನ, ಉತ್ತಮ ದುಡಿಯುವ ವಾತಾವರಣಕ್ಕಾಗಿ ಮತ್ತು ಗುಲಾಮಗಿರಿಯನ್ನು ಕೊನೆಗಾಣಿಸಲು ಕಾಮರ್ಿಕ ಸಂಘಟನೆಗಳು 1920ರ ದಶಕದಲ್ಲಿ ತುನೀಷಿಯಾ, ಜಾಂಬಿಯಾ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಬೆಳೆದುಬಂದವು. ಆರಂಭದ ಕಾಮರ್ಿಕ ಸಂಘಟನೆಗಳು ಕಾನೂನುಬಾಹಿರವಾಗಿದ್ದು ಮುಷ್ಕರಗಳನ್ನು ನಡೆಸುವವರಿಗೆ ಆಮಿಷವನ್ನೊಡ್ಡಲಾಗುತ್ತಿತ್ತು, ಇದಕ್ಕೆ ಬಗ್ಗದಿದ್ದರೆ ದಂಡನೆಗೊಳಪಡಿಸಲಾಗುತ್ತಿತ್ತು. ಮುಷ್ಕರಗಳಲ್ಲಿ ಡಜನ್ಗಟ್ಟಲೆ ಕಾಮರ್ಿಕರನ್ನು ಕೊಂದು ನೂರಾರು ಮಂದಿಯನ್ನು ಬಂಧಿಸಿ ಅವರನ್ನು ಮತ್ತೆ ಆಧುನಿಕ ಗುಲಾಮಗಿರಿಗೆ ದೂಡಲಾಗುತ್ತಿತ್ತು.
"https://kn.wikipedia.org/wiki/ಆಫ್ರಿಕಾ" ಇಂದ ಪಡೆಯಲ್ಪಟ್ಟಿದೆ