ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೫೩ ನೇ ಸಾಲು:
 
==ರಫ್ತು ಕುಸಿತ==
*ಅಸಮಾನ ವ್ಯಾಪಾರ ನೀತಿಗಳಿಂದ ಆಫ್ರಿಕಾಗೆ ಬಹಳ ಪೆಟ್ಟು ಬಿದ್ದಿತು. ರಪ್ತು ಉತ್ಪನ್ನಗಳಿಗೆ ದೊರಕುತ್ತಿದ್ದ ಬೆಲೆಯು ಆಮದು ಉತ್ಪನ್ನಗಳಿಗೆ ಹೋಲಿಸಿದಲ್ಲಿ ಏನೇನೂ ಇರಲಿಲ್ಲ. ಜಾಗತಿಕ ವ್ಯಾಪಾರದಲ್ಲಿ ಆಫ್ರಿಕಾದ ಪಾಲು ಕುಸಿದು ಹೋಗಲು ಕಾರಣವೆಂದರೆ ಬಹುತೇಕ ರಾಷ್ಟ್ರಗಳು ಕೇವಲ ಕೆಲವೇ ಉತ್ಪನ್ನಗಳ ರಪ್ತಿನ ಮೇಲೆ ಅವಲಂಬಿತವಾಗಿದ್ದವು. ಒಟ್ಟಾರೆ ರಪ್ತಿನಲ್ಲಿ ಶೇ. 75ರಷ್ಟು ಪಾಲು ಒಂದೇ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ರಾಷ್ಟ್ರಗಳೆಂದರೆ: ಅಂಗೋಲ, ಬೊಟ್ಸಾವಾನಾ, ಬುರುಂಡಿ, ಕಾಂಗೋ, ಗ್ಯಾಬನ್, ನೈಜರ್, ನೈಜೀರಿಯಾ, ಸೋಮಾಲಿಯಾ, ಉಗಾಂಡಾ ಮತ್ತು ಜಾಂಬಿಯಾ. ತಮ್ಮ ರಪ್ತು ಪ್ರಮಾಣದಲ್ಲಿ ಕನಿಷ್ಟ ಶೇ. 25 ರಷ್ಟನ್ನು ನಾಲ್ಕಕ್ಕೂ ಹೆಚ್ಚು ಉತ್ಪನ್ನಗಳಿಂದ ಗಳಿಸುವ ರಾಷ್ಟ್ರಗಳೆಂದರೆ: ಗ್ಯಾಂಬಿಯಾ, ಲೆಸೊತೊ, ದಕ್ಷಿಣ ಆಫ್ರಿಕಾ, ಸ್ವಾಜಿಲ್ಯಾಂಡ್, ಟ್ಯಾಂಜೇನಿಯಾ ಮತ್ತು ಜಿಂಬಾಬ್ವೆ. 1980 ರಿಂದ 2000 ರವರೆಗೆ, ಆಫ್ರಿಕಾದ ರಪ್ತು ಪ್ರಮಾಣವು ಕುಸಿತಗೊಂಡು ಸಕ್ಕರೆ ಶೇ. 77 ರಷ್ಟು ಕೋಕೋ ಶೇ. 71, ಕಾಫಿ ಶೇ. 64ರಷ್ಟು ಮತ್ತು ಹತ್ತಿಯು ಶೇ. 47ರಷ್ಟು ಕುಸಿತಗೊಂಡಿದೆ. ಇದೇ ವೇಳೆ ಆಫ್ರಿಕಾದಿಂದ ಅಮೇರಿಕಾಗೆ ರಫ್ತಾಗುವ ಕಡಲೆಕಾಯಿ ಮೇಲಿನ ಆಮದು ಸುಂಕವನ್ನು ಅಮೇರಿಕಾವು ಶೇ. 132 ರಷ್ಟು ಹೆಚ್ಚಿಸಿದೆ.
ಈ ಮಧ್ಯೆ ಚೀನಾ ಆಫ್ರಿಕಾ ನಡುವಿನ ಬಾಂಧವ್ಯ ವೃದ್ದಿಸುತ್ತಿದೆ. 1990 ರ ಹೊತ್ತಿಗೆ ಆಫ್ರಿಕಾ-ಚೀನಾದ ವ್ಯಾಪಾರವು ಶೇ. 700 ರಷ್ಟು ಬೆಳವಣಿಗೆ ಹೊಂದಿದೆ. ಅಂಗೋಲಾ, ಸೂಡಾನ್ ಮತ್ತು ಇನ್ನಿತರ ದೇಶಗಳಿಂದ ಚೀನಾ ಪೆಟ್ರೋಲಿಯಂ ನ್ನು ಆಮದು ಮಾಡಿಕೊಳ್ಳುತ್ತಿದೆ. ಅಮೇರಿಕಾ ಮತ್ತು ಫ್ರಾನ್ಸ್ನ ನಂತರ ಚೀನಾ ಅತಿ ದೊಡ್ಡ ವ್ಯಾಪಾರ ಮೈತ್ರಿಯನ್ನು ಏರ್ಪಡಿಸಿದೆ. ಚೀನಾದ ಮೈತ್ರಿಯು ಬರೆ ವ್ಯಾಪಾರೋದ್ದೇಶಕ್ಕೆ ಮಾತ್ರವೇ ಸೀಮಿತವಾಗಿರದೆ, ಆಫ್ರಿಕಾದಲ್ಲಿ ರೈಲು ಮಾರ್ಗ, ಶಾಲೆಗಳು, ರಸ್ತೆಗಳು, ಆಸ್ಪತ್ರೆಗಳು, ಸೇತುವೆಗಳು, ಮತ್ತು ಕಛೇರಿ ನಿಮರ್ಾಣಗಳಂಥಹ ಅಭಿವೃದ್ಧಿ ಕಾರ್ಯಗಳಿಗೂ ಸಹ ನೆರವು ನೀಡುತ್ತಿದೆ. ಆಫ್ರಿಕಾ ಪಡೆದಿದ್ದ 10 ಬಿಲಿಯನ್ ಡಾಲರ್ ಸಾಲವನ್ನು ಚೀನಾ ಇತ್ತೀಚೆಗಷ್ಟೆ ಮನ್ನಾ ಮಾಡಿತು. ಆಫ್ರಿಕಾ ದೇಶಗಳಲ್ಲಿ ಶಾಂತಿ ಪಾಲನೆಗಾಗಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ ಸುಮಾರು 1,500 ಸೈನಿಕರನ್ನು ಅದು ಕಳುಹಿಸಿದೆ. ಆರೋಗ್ಯ ಸೇವೆ ಒದಗಿಸಲು ತನ್ನ ಡಾಕ್ಟರುಗಳನ್ನು ಆಫ್ರಿಕಾಗೆ ಕಳುಹಿಸಿದೆ. ಆಫ್ರಿಕಾದ ಕಾಮರ್ಿಕರು ಮತ್ತು ವಿದ್ಯಾಥರ್ಿಗಳು ಚೀನಾದ ವಿಶ್ವವಿದ್ಯಾನಿಲಯ ಮತ್ತು ತರಬೇತಿ ಕೇಂದ್ರಗಳಲ್ಲಿ ತರಬೇತು ಪಡೆಯುತ್ತಿದ್ದಾರೆ.
 
*ಇನ್ನೊಂದೆಡೆ, ನಿರಂತರವಾಗಿ ಆಫ್ರಿಕನ್ ರಾಷ್ಟ್ರಗಳಿಗೆ ಅಗಾಧ ಪ್ರಮಾಣದ ಸಾಲ ನೀಡುತ್ತಾ ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಪಾರ ಹೊರೆಯನ್ನು ಹೇರಿದವು. ಉದಾಹರಣೆಗೆ, 1990ರಲ್ಲಿ 60 ಬಿಲಿಯನ್ ಡಾಲರ್ ಸಾಲ ಪಡೆದದ್ದಕ್ಕೆ 1997ರ ಹೊತ್ತಿಗೆ ಆಫ್ರಿಕಾದ ರಾಷ್ಟ್ರಗಳು 162 ಬಿಲಿಯನ್ ಡಾಲರ್ ಬಡ್ಡಿ ಸಮೇತ ಸಾಲ ಮರು ಪಾವತಿ ಮಾಡಿದ್ದವು. ಕುತ್ತಿಗೆಯ ಸುತ್ತ ಉಸಿರುಗಟ್ಟುವಂತೆ ಬಿಗಿದಿದ್ದ ಸಾಲವನ್ನು ಮರುಪಾವತಿ ಮಾಡಲಾಗದೆ ಮಿಸುಕಾಡುತ್ತಿದ್ದವು. ಇದರಿಂದಾಗಿ ವಿಶ್ವ ಸಂಸ್ಥೆಯ ವರದಿಯಂತೆ, ಸರಾಸರಿ ಆಫ್ರಿಕಾದ ಕುಟುಂಬಕ್ಕೆ 25 ವರ್ಷಗಳ ಹಿಂದೆ ಸಿಗುತ್ತಿದ್ದ ಆಹಾರಕ್ಕಿಂತ ಶೇಕಡಾ 20ರಷ್ಟು ಕಡಿಮೆ ಆಹಾರ ದೊರಕುತ್ತಿದೆ. ಅಮೇರಿಕಾದ ಪ್ರಜೆಯೊಬ್ಬ ಗಳಿಸುವ ಪ್ರತಿ ಡಾಲರ್ಗೆ ಆಫ್ರಿಕಾದ ಪ್ರಜೆ ಕೇವಲ 0.06 ಡಾಲರ್ ಗಳಿಸುತ್ತಿದ್ದಾನಷ್ಟೆ. 1998ರಲ್ಲಿ ಆಫ್ರಿಕಾವು ಶೇ. 10ರಷ್ಟು ವಿಶ್ವ ಜನಸಂಖ್ಯೆಯನ್ನು ಹೊಂದಿದ್ದರೆ, ಕೇವಲ ಶೇ. 1ರಷ್ಟು ಕೈಗಾರಿಕಾ ಉತ್ಪಾದನೆಯ ಪಾಲನ್ನು ಹೊಂದಿತ್ತು. ಇಸ್ತ್ರೇಲ್ ಮತ್ತು ಬೆಲ್ಜಿಯಂ ದೇಶಗಳು ಅಗಾಧ ಮೊತ್ತದ ಶಸ್ತ್ರಾಸé್ರಗಳನ್ನು ಉಗಾಂಡಕ್ಕೆ ನೀಡಿ ಬದಲಿಗೆ ಅಲ್ಲಿನ ಬೆಲೆಬಾಳುವ ವಜ್ರಗಳನ್ನು ಕೊಳ್ಳೆ ಹೊಡೆಯುತ್ತಿವೆ. ಆಫ್ರಿಕಾ ರಾಷ್ರಗಳಲ್ಲಿ ಮಕ್ಕಳ ಅಪೌಷ್ಟಿಕತೆಯ ಪ್ರಮಾಣವು ಶೇ. 25 ರಿಂದ 50ರವರೆಗೂ ಇದೆ. ಹೆಚ್.ಐ.ವಿ ರೋಗದ ಸೋಂಕಿಗೆ ತುತ್ತಾದವರ ಸಂಖ್ಯೆಯು ವಿಶೇಷವಾಗಿ ಪೂರ್ವ, ಮಧ್ಯ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಎಬೋಲಾದಂಥಹ ಅಪಾಯಕಾರಿ ವೈರಸ್ ರೋಗಗಳನ್ನು ನಿಯಂತ್ರಿಸಲಾಗದೆ ಸಾವಿರಾರು ಆಪ್ರಿಕನ್ನರು ಮರಣವಾದರು.
 
*ಪ್ರತಿಭಾ ಪಲಾಯನ:
*ಪ್ರತಿ ವರ್ಷ ಸುಮಾರು 70,000 ಪರಿಣಿತ ಕೆಲಸಗಾರರು ಆಫ್ರಿಕಾದಿಂದ ಅಭಿವೃದ್ಧಿ ಹೊಂದಿದ ರಾಷ್ರಗಳಿಗೆ ವಲಸೆ ಹೋಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಜಾಂಬಿಯಾವು ತನ್ನ 1400 ಡಾಕ್ಟರುಗಳಲ್ಲಿ ಸುಮಾರು 400 ಮಂದಿಯನ್ನು ಪ್ರತಿಭಾ ಪಲಾಯನದಿಂದಾಗಿ ಕಳೆದುಕೊಂಡಿದೆ.
 
==ಉಲ್ಲೇಖ==
*'''ಆಕರ ಗ್ರಂಥ:'''
"https://kn.wikipedia.org/wiki/ಆಫ್ರಿಕಾ" ಇಂದ ಪಡೆಯಲ್ಪಟ್ಟಿದೆ