ಕೋಶ ವಿಭಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
ಟೀಲೋಫೇಸ್ ಮುಗಿಯುತಿದ್ದಂತೆಯೆ ಕೋಶರಸ ವಿಭಜನೆ ಪ್ರಾರಂಭವಾಗುವುದು.ಟಲೊಫೇಸ್ ಕೊನೆಗೊಳ್ಳುತಿದ್ದಂತೆಯೇ ಕೋಶವು ಎರಡಾಗಿ ವಿಭಜಿಸಲು ಪ್ರಾರಂಭವಾಗುವುದು.ಪ್ರಾಣಿಕೋಶಗಳಲ್ಲಿ ಕೋಶಹದ ಮಧ್ಯ ಭಾಗವು ಹೊರಗಿನಿಂದ ಒಳಗೆ ಕ್ರಮೇಣ ಸಂಪೀಡನೆಗೊಂಡು ಎರಡಾಗಿ ಕತ್ತರಿಸುತ್ತದೆ.ಕೋಶವು ಸೀಳಿ ಎರಡು ಮರಿ ಕೋಶಗಳಾಗುತ್ತವೆ.ಕೋಶರಸ ವಿಭಜನೆಗೆ ಸೈಟೊಕೈನೆಸಿಸ್ ಎಂದು ಹೆಸರು .
ಮೈಟಾಸಿಸ್ ಕೋಶ ವಿಭಜನೆಯಿಂದ ಜನಿಸುವ ಎರಡು ಮರಿ ಕೋಶಗಳಲ್ಲಿ ಸಮಾನಾಂತರ ವರ್ಣತಂತುಗಳ ಸಂಖ್ಯೆ ತಾಯಿ ಕೋಶದಲ್ಲಿದ್ದಷ್ಟೆ ಇರುವುದು.ಈ ಸಂಖ್ಯೆಗೆ ದ್ವಿಗುಣಿತ ಸಂಖ್ಯೆ ಅಥವಾ ಡಿಪ್ಲಾಯಿಡ್ ಎಂದು ಹೆಸರು.ಈ ಸಂಖ್ಯೆಯನ್ನು 2n ಎಂದು ಸೂಚಿಸುವುದು.<ref>http://www.uic.edu/classes/bios/bios100/lecturesf04am/lect16.htm</ref>
==ಮಿಯಾಸಿಸ್==
ಲೈಂಗಿಕ ರೀತಿಯ ಪ್ರಜನನ ಕ್ರಿಯೆಯಲ್ಲಿ ಹೆಣ್ಣು ಮತ್ತು ಗಂಡು ಪ್ರಜನನ ಕೋಶಗಳು ಸೇರಿ ಯುಗ್ಮಜ ಎನ್ನುವ ಒಂದು ಕೋಶವಾಗುವುದು .ಈ ಕೋಶದಲ್ಲಿ ವರ್ಣ ತಂತುಗಳು ದ್ವಿಗುಣಿತ ಸ್ಂಖ್ಯೆಯಲ್ಲಿರುತ್ತವೆ. ತಾಯಿಯಿಂದ ಒಂದು ತಂಡ ವರ್ಣ ತಂತುಗಳು ಮತು ತಂದೆಯಿಂದ ಒಂದು ತಂಡ ಬಂದಿದ್ದರೂ ಸಹ ದಿಗುಣಿತ ಸಂಖ್ಯೆ ಎರಡರ‍‍‍‍‍‍ಶ್ಟಾಗಿರುವುದಿಲ್ಲ .ಪ್ರಜನನ ಕೋಶಗಳಲ್ಲಿ ನಡೆಯುವ ಕೋಶ ವಿಭಜನೆಯು ಲಿಂಗಾಣುಗಲನ್ನು ಉತ್ಪತ್ತಿ ಮಾಡುತ್ತದೆ.ಈ ಕೋಶ ವಿಭಜನೆಗೆ ಮಿಯಾಸಿಸ್ ಕೋಶವಿಭಜನೆ ಎಂದು ಹೆಸರು.ಈ ಸಂಖ್ಯೆಯನ್ನು ಏಕಗುಣಿತ ಸ್ಂಖ್ಯೆ ಎನ್ನುವರು.ಇದನ್ನು n ಎಂದು ಗುರುತಿಸಲಾಗುವುದು.ಆದ್ದರಿಂದ ಮಿಯಾಸಿಸ್ ಗೆ ಸಂಖ್ಯಾ ಕ್ಷೀಣ ವಿಭಜನೆ ಎಂದು ಹೆಸರು.
 
=ಮಿಯಾಸಿಸ್ ವಿಭಜನೆಯ ಹಂತಗಳು=
ಮಿಯಾಸಿಸ್ ಎರಡು ವಿಭಜನೆಗಳನ್ನು ಒಳಗೊಂಡಿದೆ.ಮೊದಲನೆಯ ವಿಭಜನೆಯನ್ನು ಮಿಯಾಸಿಸ್ ೧ ಮತು ಎರಡನೆಯ ವಿಭಜನೆಯನ್ನು ಮಿಯಾಸಿಸ್ ೨ ಎಂದು ಕರೆಯುತ್ತಾರೆ.ಮಿಯಾಸಿಸ್ ೧ ರಲ್ಲಿ ವರ್ಣ ತಂತುಗಳ ದ್ವಿಗುಣಿತ ಸಂಖ್ಯೆ ಏಕಗುಣಿತ ಸಂಖ್ಯೆಯಾಗಿ ಪರಿವರ್ತನೆಗೊಳ್ಳುವುದು.ಅಂದರೆ ೨ಎನ್ ಸಂಖ್ಯೆ ಎನ್ ಆಗುವುದು.
ಮಿಯಸಿಸ್ ೧ರಲ್ಲಿಯೂ ಕೋಶಕೇಂದ್ರ ವಿಭಜನೆ ಹಾಗೂ ಕೋಶರಸ ವಿಭಜನೆ ಎಂಬ ಎರಡು ಹಂತಗಳಿವೆ.
==ಮಿಯಸಿಸ್ ೧ರ ಕೋಶಕೇಂದ್ರ ವಿಭಜನೆ==
ಈ ವಿಭಜನೆಯನ್ನು ಪ್ರೊಫೇಸ್ ೧,ಮೆಟಾಫೇಸ್ ೧, ಅನಫೇಸ್ ೧, ಮತ್ತು ಟೀಲೋಫೇಸ್ ೧ ಎಂಬ ನಾಲ್ಕು ಹಂತಗಳನ್ನು ಗುರುತಿಸಲಾಗಿದೆ.ಈ ವಿಭಜನೆಯ ಕೊನೆಯಲ್ಲಿ ಉತ್ಪತ್ತಿಯಾಗುವ ಮರಿಕೋಶಗಳಲ್ಲಿ ಏಕಗುಣಿತ ವರ್ಣತಂತುಗಳಿರುತ್ತವೆ.
==ಪ್ರೊಫೇಸ್ ೧==
ಈ ಹಂತದಲ್ಲಿ ಕೋಶಕೇಂದ್ರದಲ್ಲಿರುವ ವರ್ಣಗ್ರಾಹಕ ಜಾಲವು ಸುರುಳಿಗೊಂಡು ದಪ್ಪನಾದ ವರ್ಣತಂತುಗಳಾಗಿ ಮಾರ್ಪಾಡಾಗುತ್ತದೆ.ಕಿರು ಕೋಶ ಕೇಂದ್ರವು ಅದೃಶ್ಯವಾಗುತ್ತದೆ.ಕೋಶ ಕೇಂದ್ರದ ಪೊರೆಯು ಶಿಥಿಲವಾಗಿ ಮಾಯವಾಗುತ್ತದೆ.ಕದಿರು ಎಳೆಗಳು ರಚನೆಯಾಗುತ್ತವೆ.
==ಮೆಟಾಫೇಸ್ ೧==
ಈ ಹಂತದಲ್ಲಿ ವರ್ನತಂತುಗಳು ಕೋಶದ ಸಮಭಾಜಕ ಸಮತಲಕ್ಕೆ ಚಲಿಸುತ್ತವೆ.ಈ ಸಮಭಾಜಕ ಸಮತಲದ ಎರಡು ಬದಿಗೆ ಸಮರೂಪಿ ವರ್ಣ ತಂತುಗಳ ಎರಡು ತಂಡಗಳು ನೆಲೆಸುತ್ತವೆ.
==ಅನಫೇಸ್ ೧==
ಈ ಹಂತದಲ್ಲಿ ವರ್ಣತಂತುಗಳ ಎರಡು ತಂಡಗಳು ವಿರುದ್ಧ ದಿಕ್ಕುಗಳಿಗೆ ಚಲಿಸುತ್ತವೆ. ಆದರೆ ಎರಡು ಕ್ರೊಮ್ಯಾಟಿಡ್ ಗಳನ್ನು ಹಿಡಿದುಕೊಂಡಿರುವ ಸೆಂಟ್ರೊಮಿಯರ್ ವಿಭಜಿಸುವುದಿಲ್ಲ.ಅನಫೆಸ್ ೧ ವೈಶಿಶ್ಟ್ಯವೇನೆಂದರೆ,ವರ್ಣ ತಂತುಗಳು ಏಕಗುಣಿತ ತಂಡಗಳಾಗಿ ಬೇರ್ಪಡುತ್ತವೆ.ಒಂದೊಂದು ಏಕಗುಣಿತ ವರ್ಣತಂತುಗಳ ತಂಡ ಒಂದೊಂದು ಧ್ರುವವನ್ನು ಸೇರುತ್ತವೆ.ಅಂದರೆ ದ್ವಿಗುಣಿತ ವರ್ಣತಂತುಗಳು ಏಕಗುಣಿತವಾಗುವುದು.ಅಡ್ಡ ಹಾಯುವಿಕೆಯಿಂದ ಏಕಗುಣಿತ ವರ್ಣತಂತುತಳಲ್ಲಿನ ಜೀನ್ ಗಳ ಜೋಡಣೆ ತಂದೆತಾಯಿಗಳ ವರ್ಣತಂತುಗಳಲ್ಲಿರುವ ಜೀನ್ ಗಳ ಜೋಡಣೆಗಿಂತ ಭಿನ್ನವಾಗಿರುತ್ತದೆ.
==ಟೀಲೊಫೇಸ್==
ಈ ಹಂತದಲ್ಲಿ ಸಮಾನಾಂತರ ವರ್ಣತಂತುಗಳು ವಿರುದ್ದ ಧ್ರುವಗಳನ್ನು ಸೇರುತ್ತವೆ.ಇವು ಏಕಗುಣಿತವಾಗಿದ್ದರೂ ಕ್ರೊಮ್ಯಟಿಡ್ ಗಳನ್ನು ಬೇರ್ಪಟ್ಟಿರುವುದಿಲ್ಲ.ಅಡ್ಡಹಾಯುವಿಕೆಯಿಂದಾಗಿ ಇವು ಒಂದೇ ರೀತಿಯ ಜೀನ್ ಗಳನ್ನು ಹೊಂದಿರುವುದಿಲ್ಲ. ಈ ಕ್ರೊಮ್ಯಾಟಿಡ್ ಗಳನ್ನು ಬೇರ್ಪಡಿಸಲು ಮಿಯಸಿಸ್ ೨ ವಿಭಜನೆ ನಡೆಯುವುದು.ಪ್ರತಿಯೊಂದು ಮರಿಕೋಶದ ಎರಡೂ ಧ್ರುವಗಳಲ್ಲಿರುವ ವರ್ಣತಂತುಗಳು ಸುರುಳಿ ಬಿಚ್ಚಿಕೊಂಡು ನೀಳವಾದ ತೆಳುವಾದ ದಾರಗಳಂತೆ ಪರಿವರ್ತನೆಗೊಳ್ಳುತ್ತದೆ.ಕೋಶ ಕೇಂದ್ರದ ಪೊರೆ ಪುನರ್ರಚಿತವಾಗುತದೆ. ಎರಡೂ ಧ್ರುವಗಳಲ್ಲೂ ಕಿರುಕೋಶಕೇಂದ್ರಗಳು ರೂಪುಗೊಳ್ಳುತವೆ.ಹೀಗೆ ಎರಡು ಕೋಶ ಕೇಂದ್ರ ಗಳು ರೂಪುಗೊಳ್ಳುತ್ತಿದ್ದಂತೆ ಕೋಶ ರಸ ವಿಭಜನೆ ಉಂಟಾಗಿ ಎರಡು ಏಕಗುಣಿತ ಮರಿಕೋಶಗಳು ರೂಪುಗೊಳ್ಳುತ್ತವೆ.
ಹೊಸದಾಗಿ ರೊಪುಗೊಂಡ ಎರಡು ಏಕಗುಣಿತ ಮರಿಕೋಶಗಳಲ್ಲಿ ಮಿಯಾಸಿಸ್ ೨ ಏಕಕಾಲದಲ್ಲಿ ಪ್ರಾರಂಭವಾಗುತ್ತದೆ.
==ಮಿಯಸಿಸ್ ೨==
ಈ ವಿಭಜನೆಯಲ್ಲಿಯೂ ಕೋಶ ಕೇಂದ್ರ ವಿಭಜನೆ ಮತ್ತು ಕೋಶ ರಸ ವಿಭಜನೆ ಎಂಬ ಎರಡು ವಿಧಗಳಿವೆ.ಮಿಯಸಿಸ್ ಎರಡರ ಕೋಶ ಕೇಂದ್ರ ವಿಭಜನೆಯಲ್ಲಿ ಪ್ರೊಫೇಸ್ ೨,ಮೆಟಾಫೇಸ್ ೨,ಅನಫೇಸ್ ೨ ,ಮತ್ತು ಟೀಲೊಫೇಸ್ ೨ ಎಂಬ ನಾಲ್ಕು ಹಂತಗಲಳಿವೆ.
==ಪ್ರೊಫೇಸ್ ೨==
ಈ ಹಂತದಲ್ಲ್ಲಿ ಜರುಗುವ ಬದಲಾವಣೆಗಳು ಮೈಟಸಿಸ್ ಪ್ರೊಫೇಸ್ ನ ಬದಲಾವಣೆಗಳನ್ನು ಬಹುತೇಕ ಹೋಲುತ್ತವೆ.ಎರಡು ಧ್ರುವಗಳಲ್ಲಿರುವ ಆಸ್ಟರ್ ಗಳ ನಡುವೆ ಕದಿರು ಎಳೆಗಳು ರೂಪುಗೊಳ್ಳುತ್ತವೆ .ಕೋಶಕೆಂದ್ರದ ಪೊರೆ ಅದ್ರುಶ್ಯವಾಗುತ್ತದೆ.ವರ್ಣತಂತುಗಳು ಸ್ವೇಚ್ಛೆಯಾಗಿ ಕೋಶರಸದಲ್ಲಿ ಹರಡಲ್ಪಡುತ್ತವೆ.
==ಮೆಟಾಫೇಸ್ ೨==
ಈ ಹಂತದಲ್ಲಿ ವರ್ಣತಂತುಗಳು ಸಮಭಾಜಕ ರೇಖೆಯತ ಬಂದು ತಂಗುತ್ತವೆ.ಕದಿರೆಳೆಗಳೂ ಸೆಂಟ್ರೋಮಿಯರ್ ಗೆ ಅಂಟಿಕೊಳ್ಳುತ್ತವೆ..
==ಅನಫೇಸ್ ೨==
ಇಲ್ಲಿ ಸೆಂಟ್ರೋಮಿಯರ್ ಗಳು ಎರಡು ಭಾಗವಾಗಿ ವಿಭಜಿಸುವುದರಿಂದ ಕ್ರೊಮ್ಯಾಟಿಡ್ ಗಳು ಸಂಪೂರ್ಣವಾಗಿ ಬೇರ್ಪಡುತ್ತವೆ.ಈ ರೀತಿ ಬೇರ್ಪಡೆಯಾದ ವರ್ಣ ತಂತುಗಳು ವಿರುದ್ಧ ಧ್ರುವಗಳಿಗೆ ಚಲಿಸುತ್ತವೆ.
==ಟೀಲೊಫೇಸ್೨==
ಈ ಹಂತದಲ್ಲಿ ಕೋಶ ಕೇಂದ್ರ ಪುನ್ ರಚನೆಯಾಗುತ್ತದೆ.ಕದಿರೆಳೆಗಳೂ ಮಾಯವಾಗುತ್ತದೆ.ಕೋಶಪೊರೆ ರಚನೆಯಾಗುತ್ತದೆ.ಕೋಶರಸದ ವಿಭಜನೆ ಉಂಟಾಗಿ ನಾಲ್ಕು ಏಕಗುಣಿತ ಮರಿಕೋಶಗಳು ಉಂಟಾಗುತ್ತವೆ.
 
==ಉಲ್ಲೇಖ==
<references>
"https://kn.wikipedia.org/wiki/ಕೋಶ_ವಿಭಜನೆ" ಇಂದ ಪಡೆಯಲ್ಪಟ್ಟಿದೆ