ಕ್ವಾಂಟಮ್ ಮೆಕ್ಯಾನಿಕ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು newlines
→‎ಫೋಟಾನುಗಳು: ದ್ಯುತಿವಿದ್ಯುತ್ ಪರಿಣಾಮ
೨೧ ನೇ ಸಾಲು:
ಬೆಳಕು ಒಂದು ಅಲೆಯೇ ಅಥವಾ ಕಣಗಳ ಝರಿಯೇ ಎಂದು ಶತಮಾನಗಳಿಂದ ವಿಜ್ಞಾನಿಗಳು ಚರ್ಚೆ ಮಾಡಿದ್ದರು. ೧೯ನೆಯ ಶತಮಾನದ ಹೊತ್ತಿಗೆ ಈ ಚರ್ಚೆಯು ಬಹುಮಟ್ಟಿಗೆ ಇತ್ಯರ್ಥವಾಗಿದೆಯೆಂದು ತಿಳಿಯಲಾಗಿತ್ತು. ಅದೇನೆಂದರೆ ಬೆಳಕು ಒಂದು ಅಲೆ. ಇದಕ್ಕೆ ಕಾರಣ ಈ ಸಿದ್ಧಾಂತದಿಂದ ಪ್ರಕೃತಿಯಲ್ಲಿ ಗಮನಿಸಿದ ಬೆಳಕಿನ [[ವಕ್ರೀಭವನ]], [[ವಿವರ್ತನೆ]]([[:w:Diffraction|Diffraction]]), [[ವ್ಯತಿಕರಣ]]([[:w:Interference|Interference]]) ಮತ್ತು [[ಧ್ರುವೀಕರಣ]]([[:w:Polarization|Polarization]])ಗಳನ್ನು ವಿವರಿಸಲು ಸಾಧ್ಯವಾಗಿತ್ತು.
ಆದರೆ ನಂತರದ ದಿನಗಳಲ್ಲಿ ಫೋಟಾನ್ ಕಲ್ಪನೆಯೇ ಸ್ಥಿರವಾಯಿತು. ಇದಕ್ಕೆ ಪ್ರಮುಖ ಕಾರಣ ಈ ಕಲ್ಪನೆಯು ದ್ಯುತಿವಿದ್ಯುತ್ ಪರಿಣಾಮದ ವಿಚಿತ್ರ ಗುಣವಿಶೇಷಗಳನ್ನು ವಿವರಿಸಲು ಸಾಧ್ಯವಾಗಿದ್ದು. ಆದಾಗ್ಯೂ, ವಕ್ರೀಭವನ, ವಿವರ್ತನೆ, ವ್ಯತಿಕರಣ ಇವುಗಳನ್ನು ವಿವರಿಸಲು ಅಲೆಯ ಸಿದ್ಧಾಂತವೂ ಅಗತ್ಯವಾಗಿದೆ.
 
===ದ್ಯುತಿವಿದ್ಯುತ್ ಪರಿಣಾಮ ([[:w:Photoelectric Effect|Photoelectric Effect]])===
{{ಮುಖ್ಯ|ದ್ಯುತಿವಿದ್ಯುತ್ ಪರಿಣಾಮ}}
[[File:Photoelectric effect.svg|thumb|right|ದ್ಯುತಿವಿದ್ಯುತ್ ಪರಿಣಾಮ]]
[[ಲೋಹ|ಲೋಹಗಳ]] ಮೇಲ್ಮೈಗೆ ಬೆಳಕು ಬಿದ್ದಾಗ ಅವುಗಳಲ್ಲಿನ ಎಲೆಕ್ಟ್ರಾನುಗಳು ಹೊರದೂಡಲ್ಪಡುತ್ತವೆ. ಈ ವಿದ್ಯಮಾನಕ್ಕೆ [[ದ್ಯುತಿವಿದ್ಯುತ್ ಪರಿಣಾಮ|ದ್ಯುತಿವಿದ್ಯುತ್ ಪರಿಣಾಮವೆನ್ನುತ್ತಾರೆ]]. ಸಾಕಷ್ಟು ಕಂಪನಾಂಕವುಳ್ಳ ಬೆಳಕಿನ ಕಿರಣಗಳು ಲೋಹಗಳ ಮೇಲ್ಮೈಗೆ ಬಿದ್ದಾಗ ಅವು ಎಲೆಕ್ಟ್ರಾನುಗಳನ್ನು ಹೊರಸೂಸುತ್ತವೆ ಎಂದು [[ಹೈನ್ರಿಚ್ ಹರ್ಟ್ಸ್]] ಎಂಬ ವಿಜ್ಞಾನಿಯು ೧೮೮೭ರಲ್ಲಿ ಗಮನಿಸಿದನು.<ref name="taylor_127-9">{{cite book|last1=ಟೇಲರ್|first1=ಜೆ.ಆರ್.|last2=ಜ಼ಾಫಿರಟೊಸ್|first2=ಸಿ. ಡಿ.|last3=ಡಬ್ಸನ್|first3=ಎಮ್. ಎ.|year=2004|title=Modern Physics for Scientists and Engineers|publisher=Prentice Hall|pages=127–9|isbn=0-13-589789-0}}</ref> ಹೀಗೆ ಹೊರದೂಡಲ್ಪಟ್ಟ ಎಲೆಕ್ಟ್ರಾನುಗಳ ಗರಿಷ್ಠ ಶಕ್ತಿಯು ಬೆಳಕಿನ [[ತೀವ್ರತೆ (ಭೌತವಿಜ್ಞಾನ)|ತೀವ್ರತೆಗೆ]] ಸಂಬಂಧಿಸದೇ ಅದರ [[ಕಂಪನಾಂಕ|ಕಂಪನಾಂಕಕ್ಕೆ]] ಸಂಬಂಧಿಸಿದ್ದಾಗಿದೆ ಎಂದು ೧೯೦೨ರಲ್ಲಿ [[ಫಿಲಿಪ್ ಲೆನಾರ್ಡ್]] ಎಂಬ ವಿಜ್ಞಾನಿಯು ಕಂಡುಹಿಡಿದನು. ಕಂಪನಾಂಕವು ತೀರ ಕಡಿಮೆಯಾಗಿದ್ದಾಗ, ಅದೆಷ್ಟೇ ಬೆಳಕಿನ ತೀವ್ರತೆಯಿದ್ದರೂ ಲೋಹಗಳು ಎಲೆಕ್ಟ್ರಾನುಗಳನ್ನು ಹೊರಸೂಸುವುದಿಲ್ಲ. ಉದಾ: ಕೆಂಪು ಬೆಳಕಿನ ಕಿರಣಗಳು ಅತ್ಯಂತ ತೀವ್ರವಾಗಿದ್ದರೂ ಏನೂ ವಿದ್ಯುತ್ತನ್ನು ಉಂಟುಮಾಡದೇ ಇರಬಹುದು. ಅತಿ ಕಡಿಮೆ ತೀವ್ರತೆಯಿರುವ ಅತಿನೇರಳೆ ಕಿರಣಗಳು ಹೆಚ್ಚು ವಿದ್ಯುತ್ತನ್ನು ಉತ್ಪಾದಿಸಬಲ್ಲವು. ಎಲೆಕ್ಟ್ರಾನುಗಳನ್ನು ಹೊರಸೂಸಲು ಬೇಕಾದ ಕನಿಷ್ಠ ಕಂಪನಾಂಕವನ್ನು '''ಕಂಪನಾಂಕದ ಮಿತಿ'''ಯೆಂದು ಕರೆಯುತ್ತಾರೆ. ಈ ಮಿತಿಯು ಪ್ರತಿಯೊಂದು ಲೋಹಕ್ಕೂ ಬೇರೆ ಬೇರೆಯಾಗಿರುತ್ತದೆ.<ref name="Hawking">ಸ್ಟೀಫನ್ ಹಾಕಿಂಗ್, ''The Universe in a Nutshell'', Bantam, 2001.</ref>{{rp|24}}
 
ಬೆಳಕಿನ ಕಿರಣಗಳು [[ಫೋಟಾನ್|ಫೋಟಾನುಗಳೆಂಬ]] ಕಣಗಳ ಒಂದು ಝರಿ. ಈ ಝರಿಯ ಕಂಪನಾಂಕವು {{math|''f''}} ಆಗಿದ್ದರೆ, ಅದರ ಪ್ರತಿ ಫೋಟಾನಿನ ಶಕ್ತಿಯು {{math|''hf''}} ಆಗಿರುತ್ತದೆ. ಒಂದು ಎಲೆಕ್ಟ್ರಾನಿಗೆ ಕೇವಲ ಒಂದು ಫೊಟಾನು ಮಾತ್ರವೇ ಢಿಕ್ಕಿ ಹೊಡೆಯುತ್ತದೆ. ಹೀಗೆ ಢಿಕ್ಕಿ ಹೊಡೆದಾಗ ಆ ಫೋಟಾನು ಗರಿಷ್ಠವೆಂದರೆ {{math|''hf''}}ನಷ್ಟು ಶಕ್ತಿಯನ್ನು ವರ್ಗಾಯಿಸಬಹುದು. ಆದ್ದರಿಂದ ಇಲ್ಲಿ ಬೆಳಕಿನ ತೀವ್ರತೆಯ ಯಾವುದೇ ಪರಿಣಾಮವಿರುವುದಿಲ್ಲ. ಎಲೆಕ್ಟ್ರಾನಿಗೆ ವರ್ಗಾಯಿಸಬಹುದಾದ ಶಕ್ತಿಯ ಗರಿಷ್ಠ ಮಿತಿಯನ್ನು ಕಂಪನಾಂಕ ಮಾತ್ರವೇ ನಿರ್ಧರಿಸುತ್ತದೆ. ಹೀಗೆಂದು ವಿವರಣೆಯನ್ನು ನೀಡಿದ್ದು ಐನ್‍ಸ್ಟೈನ್.
 
==ಉಲ್ಲೇಖನ==