ಕಲ್ನಾರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಕಲ್ನಾರು''' : ಎಳೆ ಎಳೆಯಾಗಿ ದೊರೆಯುವ, ಕಲ್ಲುಗಳ ರೂಪ ತಳೆಯಬಲ್ಲ ಅತ್ಯುಪಯುಕ್...
 
No edit summary
೧ ನೇ ಸಾಲು:
{{Wikify}}
'''ಕಲ್ನಾರು''' : ಎಳೆ ಎಳೆಯಾಗಿ ದೊರೆಯುವ, ಕಲ್ಲುಗಳ ರೂಪ ತಳೆಯಬಲ್ಲ ಅತ್ಯುಪಯುಕ್ತ ಖನಿಜಗಳ ಸಾಮಾನ್ಯನಾಮ (ಆಸ್ ಬೆಸ್ಟಸ್). ವಿವಿಧ ದರ್ಜೆಯ ಖನಿಜದ ಎಳೆಗಳಿಂದ ತಯಾರಿಸಲಾದ ವಸ್ತುಗಳ ಉಷ್ಣನಿರೋಧಕ ಗುಣದಿಂದ ಕಲ್ನಾರಿಗೆ ಪ್ರಾಮುಖ್ಯ ಬಂದಿದೆ. ಈ ಖನಿಜವನ್ನು ನಾರಿನಂತೆ ಎಳೆ ಎಳೆಯಾಗಿ ಬಿಡಿಸಬಹುದು. ಎಳೆಗಳು ರೇಷ್ಮೆಯಂತೆ ನಯವಾಗಿವೆ. ಇದರ ಬಣ್ಣ ಬಿಳುಪು; ಕಾಠಿಣ್ಯ ೩.೫_೪.೧; ಸಾಪೇಕ್ಷ ಸಾಂದ್ರತೆ ೨.೫_೨.&. ಇದರಲ್ಲಿ ಆಂಫಿಬೋಲ್ ಕಲ್ನಾರು ಮತ್ತು ಕ್ರೈಸೊಲೈಟ್ ಕಲ್ನಾರು ಎಂಬೆರಡು ಜಾತಿಗಳಿವೆ. ಮೊದಲನೆಯದು ಶುದ್ಧವಾದುದು. ಎರಡನೆಯದು ವ್ಯಾಪಾರದ ಬಹುಭಾಗವನ್ನು ಪುರೈಸುತ್ತದೆ. ಎರಡೂ ನಮ್ಮ ದೇಶದಲ್ಲಿವೆ. ಮೊದಲನೆಯದು ಮೈಸೂರು ಜಿಲ್ಲೆಯಲ್ಲಿರುವ ಮಾವಿನಹಳ್ಳಿ ಮತ್ತು ಗೋಪಾಲಪುರದ ಬಳಿ. ಹಾಸನ ಜಿಲ್ಲೆಯಲ್ಲಿ ಹೊಳೇನರಸೀಪುರದ ಹತ್ತಿರ ಇಡೆಗೊಂಡೆನಹಳ್ಳಿ ಮತ್ತು ಕಬ್ಬೂರಿನ ಬಳಿ ಸಿಕ್ಕುತ್ತದೆ. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲೂ ಬಿಹಾರ್, ರಾಜಸ್ತಾನಗಳಲ್ಲಿಯೂ ಸಿಕ್ಕುತ್ತದೆ. ಈ ಕಲ್ನಾರಿನ ನೂಲಿನ ಎಳೆಯ ಶಕ್ತಿ ಅಲ್ಪವಾದ್ದರಿಂದ ಇದು ಬಟ್ಟೆ ತಯಾರಿಕೆಗೆ ಅರ್ಹವಲ್ಲ. ಅಗ್ನಿನಿರೋಧಕ ಕಾಗದ, ಹಲಗೆ ಮೊದಲಾದವನ್ನು ಇದರಿಂದ ತಯಾರಿಸಬಹುದು. ಅಕ್ವಿನೊಲೈಟ್ ಪತ್ರಶಿಲೆ ಇದರ ಮುಖ್ಯ ಆಕರ; ಇದು ಕ್ಯಾಲ್ಸಿಯಂ-ಮೆಗ್ನೀಸಿಯಂ-ಐರನ್-ಸಿಲಿಕೇಟ್. ಅಮೊಸೈಟ್ ಮೆಗ್ನೀಸಿಯಂ_ಐರನ್ ಸಿಲಿಕೇಟ್. ಇದು ನೀಳವಾದ ನೂಲುಗಳಿರುವ ಶುದ್ಧವಾದ ಕಲ್ನಾರು. ಅಗ್ನಿಸ್ಪರ್ಶದಿಂದಲೇ ಇದರ ಬಟ್ಟೆ ಶುದ್ಧವಾಗುತ್ತದೆ. ಕ್ರಾಸಿಡೋಲೈಟ್ ನೀಲವರ್ಣದ ಸೋಡಿಯಂ_ಐರನ್_ಸಿಲಿಕೇಡ್; ಇದು ಮಾರ್ಪಟ್ಟು ಹೊಂಬಣ್ಣದ ಛಾಯೆಯ ಕೆಂಪು ಬಣ್ಣವನ್ನು ಹೊಂದುವುದುಂಟು; ಆಗ ಇದರಲ್ಲಿ ಸಿಲಿಕ ನಿಕ್ಷೇಪವಾದರೆ ಬಲು ಅಂದವಾಗಿ ಕಾಣುತ್ತದೆ. ಇದೊಂದು ಅಲಂಕಾರಶಿಲೆ (ಆರ್ನಮೆಂಟಲ್ ಸ್ಟೋನ್). ವೈಡೂರ್ಯ, ಆಮೊಸೈಟ್, ಕ್ರಾಸಿಡೊಲೈಟುಗಳು ಆಮ್ಲಗಳಿಗೆ ಜಗ್ಗುವುದಿಲ್ಲ. ಕ್ರೈಸೊಲೈಟ್ ಕಲ್ನಾರು ಆಮ್ಲಗಳಿಂದ ರಾಸಾಯನಿಕ ಪರಿವರ್ತನೆ ಹೊಂದುತ್ತದೆ. ಎರಡನೆಯ ಜಾತಿಯ ಈ ಕಲ್ನಾರು ಸರ್ಪೆಂಟೀನ್, ಹೈಡ್ರಸ್. ಮೆಗ್ನೀಸಿಯಂ_ಸಿಲಿಕೇಟ್ [ಒg೬Si೪ಔ೧೦ (ಔಊ)s] ಶಿಲಾರಾಶಿಗಳಲ್ಲಿರುವ ಅಸಂಖ್ಯಾತ ಸಿರಗಳಲ್ಲಿ ಸಿಕ್ಕುತ್ತದೆ. ಸಿಲಿಕಾ (Siಔ೨) ಅಲ್ಪವಾಗಿರುವ ಅಗ್ನಿಶಿಲೆಗಳಲ್ಲಿರುವ ಆಲಿವೀನ್ (ಒg೨Siಔ೪) ಖನಿಜ ಬಹುಬೇಗ ನೀರನ್ನು ಹೀರಿ ಸರ್ಪೆಂಟೀನ್ ಆಗುತ್ತದೆ. ಈ ಖನಿಜದ ತೆಳುವಾದ ಸಿರಗಳಲ್ಲಿರುವ ರೇಷ್ಮೆಯ ಎಳೆಗಳಂತಿರುವ ವಸ್ತುವಿಗೆ ಕಲ್ನಾರಿನ ಗುಣಗಳಿವೆ. ಇದರಿಂದ ಕಲ್ನಾರಿನ ಹೆಂಚು, ಹಾಳೆ ಮೊದಲಾದ ಅಗ್ನಿನಿರೋಧಕ ವಸ್ತು ನಿರ್ಮಾಣವಾಗುತ್ತದೆ. ಶುದ್ಧವಾದ ಕಲ್ನಾರನ್ನು ಔಷಧಕ್ಕೂ ಬಳಸುತ್ತಾರೆ. ಇದರೊಡನೆ ಮ್ಯಾಗ್ನೆಸೈಟ್ ಮತ್ತು ಕ್ರೋಮೈಟ್ ಎಂಬ ಉಪಯುಕ್ತ ಖನಿಜಗಳು ಸಿಕ್ಕುವುದುಂಟು. ಉದಾಹರಣೆಗೆ ನಂಜನಗೂಡಿನ ಬಳಿ ಕಡಕೊಳದ ಗಣಿಗಳು, ಸೇಲಂ ಜಾಕ್ ಬೆಟ್ಟಗಳು ಇವೆರಡೂ ಆದಿಯುಗದವು (ಆರ್ಕೇಯನ್).
 
'''ಕಲ್ನಾರು''' : ಎಳೆ ಎಳೆಯಾಗಿ ದೊರೆಯುವ, ಕಲ್ಲುಗಳ[[ಕಲ್ಲು]]ಗಳ ರೂಪ ತಳೆಯಬಲ್ಲ ಅತ್ಯುಪಯುಕ್ತ ಖನಿಜಗಳ ಸಾಮಾನ್ಯನಾಮ (ಆಸ್ ಬೆಸ್ಟಸ್). ವಿವಿಧ ದರ್ಜೆಯ ಖನಿಜದ ಎಳೆಗಳಿಂದ ತಯಾರಿಸಲಾದ ವಸ್ತುಗಳ ಉಷ್ಣನಿರೋಧಕ ಗುಣದಿಂದ ಕಲ್ನಾರಿಗೆ ಪ್ರಾಮುಖ್ಯ ಬಂದಿದೆ. ಈ ಖನಿಜವನ್ನು ನಾರಿನಂತೆ ಎಳೆ ಎಳೆಯಾಗಿ ಬಿಡಿಸಬಹುದು. ಎಳೆಗಳು ರೇಷ್ಮೆಯಂತೆ ನಯವಾಗಿವೆ. ಇದರ ಬಣ್ಣ ಬಿಳುಪು; ಕಾಠಿಣ್ಯ ೩.೫_೪.೧; ಸಾಪೇಕ್ಷ ಸಾಂದ್ರತೆ ೨.೫_೨.&. ಇದರಲ್ಲಿ ಆಂಫಿಬೋಲ್ ಕಲ್ನಾರು ಮತ್ತು ಕ್ರೈಸೊಲೈಟ್ ಕಲ್ನಾರು ಎಂಬೆರಡು ಜಾತಿಗಳಿವೆ. ಮೊದಲನೆಯದು ಶುದ್ಧವಾದುದು. ಎರಡನೆಯದು ವ್ಯಾಪಾರದ ಬಹುಭಾಗವನ್ನು ಪುರೈಸುತ್ತದೆ. ಎರಡೂ ನಮ್ಮ ದೇಶದಲ್ಲಿವೆ. ಮೊದಲನೆಯದು ಮೈಸೂರು ಜಿಲ್ಲೆಯಲ್ಲಿರುವ ಮಾವಿನಹಳ್ಳಿ ಮತ್ತು ಗೋಪಾಲಪುರದ ಬಳಿ. ಹಾಸನ ಜಿಲ್ಲೆಯಲ್ಲಿ ಹೊಳೇನರಸೀಪುರದ ಹತ್ತಿರ ಇಡೆಗೊಂಡೆನಹಳ್ಳಿ ಮತ್ತು ಕಬ್ಬೂರಿನ ಬಳಿ ಸಿಕ್ಕುತ್ತದೆ. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲೂ ಬಿಹಾರ್, ರಾಜಸ್ತಾನಗಳಲ್ಲಿಯೂ ಸಿಕ್ಕುತ್ತದೆ. ಈ ಕಲ್ನಾರಿನ ನೂಲಿನ ಎಳೆಯ ಶಕ್ತಿ ಅಲ್ಪವಾದ್ದರಿಂದ ಇದು ಬಟ್ಟೆ ತಯಾರಿಕೆಗೆ ಅರ್ಹವಲ್ಲ. ಅಗ್ನಿನಿರೋಧಕ ಕಾಗದ, ಹಲಗೆ ಮೊದಲಾದವನ್ನು ಇದರಿಂದ ತಯಾರಿಸಬಹುದು. ಅಕ್ವಿನೊಲೈಟ್ ಪತ್ರಶಿಲೆ ಇದರ ಮುಖ್ಯ ಆಕರ; ಇದು ಕ್ಯಾಲ್ಸಿಯಂ-ಮೆಗ್ನೀಸಿಯಂ-ಐರನ್-ಸಿಲಿಕೇಟ್. ಅಮೊಸೈಟ್ ಮೆಗ್ನೀಸಿಯಂ_ಐರನ್ ಸಿಲಿಕೇಟ್. ಇದು ನೀಳವಾದ ನೂಲುಗಳಿರುವ ಶುದ್ಧವಾದ ಕಲ್ನಾರು. ಅಗ್ನಿಸ್ಪರ್ಶದಿಂದಲೇ ಇದರ ಬಟ್ಟೆ ಶುದ್ಧವಾಗುತ್ತದೆ. ಕ್ರಾಸಿಡೋಲೈಟ್ ನೀಲವರ್ಣದ ಸೋಡಿಯಂ_ಐರನ್_ಸಿಲಿಕೇಡ್; ಇದು ಮಾರ್ಪಟ್ಟು ಹೊಂಬಣ್ಣದ ಛಾಯೆಯ ಕೆಂಪು ಬಣ್ಣವನ್ನು ಹೊಂದುವುದುಂಟು; ಆಗ ಇದರಲ್ಲಿ ಸಿಲಿಕ ನಿಕ್ಷೇಪವಾದರೆ ಬಲು ಅಂದವಾಗಿ ಕಾಣುತ್ತದೆ. ಇದೊಂದು ಅಲಂಕಾರಶಿಲೆ (ಆರ್ನಮೆಂಟಲ್ ಸ್ಟೋನ್). ವೈಡೂರ್ಯ, ಆಮೊಸೈಟ್, ಕ್ರಾಸಿಡೊಲೈಟುಗಳು ಆಮ್ಲಗಳಿಗೆ ಜಗ್ಗುವುದಿಲ್ಲ. ಕ್ರೈಸೊಲೈಟ್ ಕಲ್ನಾರು ಆಮ್ಲಗಳಿಂದ ರಾಸಾಯನಿಕ ಪರಿವರ್ತನೆ ಹೊಂದುತ್ತದೆ. ಎರಡನೆಯ ಜಾತಿಯ ಈ ಕಲ್ನಾರು ಸರ್ಪೆಂಟೀನ್, ಹೈಡ್ರಸ್. ಮೆಗ್ನೀಸಿಯಂ_ಸಿಲಿಕೇಟ್ [ಒg೬Si೪ಔ೧೦ (ಔಊ)s] ಶಿಲಾರಾಶಿಗಳಲ್ಲಿರುವ ಅಸಂಖ್ಯಾತ ಸಿರಗಳಲ್ಲಿ ಸಿಕ್ಕುತ್ತದೆ. ಸಿಲಿಕಾ (Siಔ೨) ಅಲ್ಪವಾಗಿರುವ ಅಗ್ನಿಶಿಲೆಗಳಲ್ಲಿರುವ ಆಲಿವೀನ್ (ಒg೨Siಔ೪) ಖನಿಜ ಬಹುಬೇಗ ನೀರನ್ನು ಹೀರಿ ಸರ್ಪೆಂಟೀನ್ ಆಗುತ್ತದೆ. ಈ ಖನಿಜದ ತೆಳುವಾದ ಸಿರಗಳಲ್ಲಿರುವ ರೇಷ್ಮೆಯ ಎಳೆಗಳಂತಿರುವ ವಸ್ತುವಿಗೆ ಕಲ್ನಾರಿನ ಗುಣಗಳಿವೆ. ಇದರಿಂದ ಕಲ್ನಾರಿನ ಹೆಂಚು, ಹಾಳೆ ಮೊದಲಾದ ಅಗ್ನಿನಿರೋಧಕ ವಸ್ತು ನಿರ್ಮಾಣವಾಗುತ್ತದೆ. ಶುದ್ಧವಾದ ಕಲ್ನಾರನ್ನು ಔಷಧಕ್ಕೂ ಬಳಸುತ್ತಾರೆ. ಇದರೊಡನೆ ಮ್ಯಾಗ್ನೆಸೈಟ್ ಮತ್ತು ಕ್ರೋಮೈಟ್ ಎಂಬ ಉಪಯುಕ್ತ ಖನಿಜಗಳು ಸಿಕ್ಕುವುದುಂಟು. ಉದಾಹರಣೆಗೆ ನಂಜನಗೂಡಿನ ಬಳಿ ಕಡಕೊಳದ ಗಣಿಗಳು, ಸೇಲಂ ಜಾಕ್ ಬೆಟ್ಟಗಳು ಇವೆರಡೂ ಆದಿಯುಗದವು (ಆರ್ಕೇಯನ್).
 
==ಅದಿರುಗಳು==
"https://kn.wikipedia.org/wiki/ಕಲ್ನಾರು" ಇಂದ ಪಡೆಯಲ್ಪಟ್ಟಿದೆ