ಆಂಗಸ್ ಡೀಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
 
No edit summary
೧ ನೇ ಸಾಲು:
 
ಆಂಗಸ್ ಡೀಟನ್ ಅವರು 19 ಅಕ್ಟೋಬರ್ 1945 ರಲ್ಲಿ ಎಡಿನ್ಬರೊ, ಸ್ಕಾಟ್ಲೆಂಡ್ನಲ್ಲಿ ಜನಿಸಿದರು ಮತ್ತು ತಮ್ಮ ವಿದ್ಯಾಭ್ಯಾಸವನ್ನು ಫೆಟಿಸ್ ಕಾಲೇಜಿನಲ್ಲಿ ಪ್ರಾರಂಭಿಸಿದರು. ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಬಿ. ಎ., ಎಂಎ ಮತ್ತು ಡಿ.ಫಿಲ್ ಪದವಿಗಳನ್ನು ಪಡೆದರು. 1975 ರಲ್ಲಿ ಅವರ ಪ್ರಬಂಧ ಅನುಭೋಗಿ ಬೇಡಿಕೆಯ ಮಾದರಿಗಳು ಮತ್ತು ಸಂಯುಕ್ತ ಸಂಸ್ಥಾನಕ್ಕೆ ಅದರ ಅನ್ವಯ ನಂತರ ಅವರು ಫಿಟ್ಜ್ ವಿಲಿಯಮ್ ಕಾಲೇಜಿನಲ್ಲಿ ಸಂಶೋಧನಾರ್ಥಿಯಾಗಿ, ಮತ್ತು ಸಂಶೋಧನಾ ಆಫೀಸರ್ ಆಗಿ 'ಅನ್ವಯಿಕ ಅರ್ಥಶಾಸ್ತ್ರ' ವಿಭಾಗದಲ್ಲಿ ರಿಚರ್ಡ ಸ್ಟೋನ್ ಮತ್ತು ಟೆರ್ರಿ ಬಾರ್ಕರ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು.
1976ರಲ್ಲಿ ಡೀಟನ್ ಅವರು ಬ್ರಿಸ್ಟಾಲ್ ವಿಶ್ವವಿದ್ಯಾನಿಲಯದಲ್ಲಿ ಎಕನಾಮೆಟ್ರಿಕ್ಸ್ 'ಸಂಖ್ಯಾಗಣಿತಶಾಸ್ತ್ರ' ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ಸ್ವೀಕರಿಸಿದರು. ಈ ಸಮಯದಲ್ಲಿ, ಅವರು ತಮ್ಮ ಅತ್ಯಂತ ಪ್ರಭಾವಶಾಲಿ ಕೃತಿಯ ಗುರುತರವಾದ ಭಾಗವನ್ನು ಪೂರ್ಣಗೊಳಿಸಿದರು. 1978 ರಲ್ಲಿ ಅವರು ಎಕನಾಮೆಟ್ರಿಕ್ಸ್'ಸಂಖ್ಯಾಗಣಿತಶಾಸ್ತ್ರ ಸೊಸೈಟಿ' ಪ್ರತಿ ಎರಡು ವರ್ಷಕ್ಕೊಮ್ಮೆ ಕೊಡುವ 'ಫ್ರಿಶ್ಚ್ ಪದಕ' ಪಡೆದ ಮೊಟ್ಟ ಮೊದಲಿಗರು. 1980 ರಲ್ಲಿ ಅವರ 'ವಿವಿಧ ಅನುಭೋಗಿ ಸರಕುಗಳ ಬೇಡಿಕೆ ಹೇಗೆ ಬೆಲೆ ಮತ್ತು ಆದಾಯವನ್ನು ಅವಲಂಬಿಸಿರುತ್ತದೆ' ಎಂಬ ಲೇಖನ ದಿ ಅಮೇರಿಕನ್ ಎಕನಾಮಿಕ್ ರಿವ್ಯೂ ನಲ್ಲಿ ಪ್ರಕಟವಾಯಿತು. ಈ ಲೇಖನವು 1970 ರಿಂದೀಚೆಗೆ ಈ ಪತ್ರಿಕೆಯಲ್ಲಿ ಪ್ರಕಟಗೊಂಡ 20 ಅತ್ಯಂತ ಪ್ರಭಾವಶಾಲಿ ಲೇಖನಗಳಲ್ಲೊಂದಾಗಿದೆ.
1980 ರಲ್ಲಿ ಅವರು ಬ್ರಿಸ್ಟಾಲ್ ವಿಶ್ವವಿದ್ಯಾನಿಲಯವನ್ನು ಬಿಟ್ಟು ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಡ್ವೈಟ್ ಡಿ ಐಸಿನ್ಹೋವರ್ ಅಂತರರಾಷ್ಟ್ರೀಯ ವಿಷಯದ ಪ್ರಾಧ್ಯಾಪಕರಾಗಿ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಮತ್ತು ವುಡ್ರೋ ವಿಲ್ಸನ್ ಶಾಲೆಯ ಸಾರ್ವಜನಿಕ ಮತ್ತು ಅಂತರರಾಷ್ಟ್ರೀಯ ವಿಷಯದ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುತ್ತಾರೆ. ಅವರು ಬ್ರಿಟನ್ ಮತ್ತು ಅಮೇರಿಕದ ಪೌರತ್ವವನ್ನು ಹೊಂದಿದ್ದಾರೆ.
ಅಕ್ಟೋಬರ್ 2015ರಲ್ಲಿ ಡೀಟನ್ ಅವರು ಆ ವರ್ಷದ ಅರ್ಥಶಾಸ್ತ್ರ ವಿಜಾನದ ನೋಬೆಲ್ ಮೆಮೋರಿಯಲ್ ಬಹುಮಾನವನ್ನು ಗೆದ್ದಿದ್ದಾರೆಂದು ಘೋಷಿಸಲಾಯಿತು.
"https://kn.wikipedia.org/wiki/ಆಂಗಸ್_ಡೀಟನ್" ಇಂದ ಪಡೆಯಲ್ಪಟ್ಟಿದೆ