ಬೊಮ್ಮಲಮ್ಮಗುಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕನ್ನಡ ತೆಲುಗು ಈ ಎರಡು ನುಡಿಗಳಿಗೂ ಐತಿಹಾಸಿಕವಾಗಿ ಪ್ರಮುಖವೆನಿಸಿದ ಶಾಸನದ ಪರಿಚಯ
೧ ನೇ ಸಾಲು:
[[ತೆಲಂಗಾಣ]] ರಾಜ್ಯದ [[ಕರೀಮ್ ನಗರ]] ಜಿಲ್ಲೆಯ [[ಗಂಗಾಧರಂ]] ಮಂಡಲದಲ್ಲಿರುವ [[ಕುರಿಕ್ಯಾಲ]] ಗ್ರಾಮದ ಅಂಚಿನಲ್ಲಿರುವುದೇ ಬೊಮ್ಮಲಮ್ಮಗುಟ್ಟ.<ref>https://te.wikipedia.org/wiki/%E0%B0%95%E0%B1%81%E0%B0%B0%E0%B0%BF%E0%B0%95%E0%B0%BF%E0%B0%AF%E0%B0%B2%E0%B1%8D</ref> <ref>http://censusindia.gov.in/PopulationFinder/Sub_Districts_Master.aspx?state_code=28&district_code=03</ref>
==ಚಕ್ರೇಶ್ವರಿ==
ಅದು ಹತ್ತನೇ ಶತಮಾನದಲ್ಲಿ [[ವೃಷಭಗಿರಿ]] ಎಂದು ಪ್ರಸಿದ್ಧವಾಗಿತ್ತು. ದೂರದಿಂದ ಎತ್ತಿನ ರೂಪದಲ್ಲಿ ಕಾಣುವ ಈ ಗುಡ್ಡ ಕನ್ನಡ ತೆಲುಗು ಸಾಹಿತ್ಯಚರಿತ್ರೆಗಳಲ್ಲಿ ಬಹುಮುಖ್ಯ ಸ್ಥಾನ ಪಡೆದಿದೆ. ಗುಡ್ಡದ ಮೇಲೆ ೪೦ ಅಡಿ ಎತ್ತರ ೨೫ ಅಡಿ ಅಗಲದ ದೊಡ್ಡ ಬಂಡೆ ಇದೆ. ಈ ಬಂಡೆಯ ಮೇಲೆ [[ಜೈನ]] ದೇವತೆ [[ಚಕ್ರೇಶ್ವರಿ]]ಯನ್ನು ಕಂಡರಿಸಲಾಗಿದೆ. ಅದರ ಮೇಲುಗಡೆ ಜೈನರ ಆದಿತೀರ್ಥಂಕರನಾದ [[ವೃಷಭನಾಥ]]ನ ಹಾಗೂ ಕೊನೆಯ ತೀರ್ಥಂಕರನಾದ [[ಮಹಾವೀರ]]ನ ವಿಗ್ರಹಗಳನ್ನೂ ಆಕರ್ಷಣೀಯವಾಗಿ ಕೆತ್ತಲಾಗಿದೆ. ಎಂಟು ಕೈಗಳ ಚಕ್ರೇಶ್ವರೀದೇವಿಯು ವಿವಿಧ ಆಯುಧಗಳು, ಆಭರಣಗಳೊಂದಿಗೆ ಗರುಡವಾಹನದ ಮೇಲೆ ನೆಲೆಸಿದ್ದಾಳೆ. ಅವಳ ಇಕ್ಕೆಲಗಳಲ್ಲಿ ತಲಾ ಮೂವರು [[ಜೈನ ದಿಗಂಬರ]]ರಿದ್ದಾರೆ. ಚಕ್ರೇಶ್ವರಿಯ ಎರಡೂ ಭುಜಗಳ ಬಳಿ ಆಕೆಯ ಸೇವಕಿಯರಂತೆ ಕಾಣುವ ಸ್ತ್ರೀ ಆಕೃತಿಗಳಿವೆ. ಚಕ್ರೇಶ್ವರಿಯನ್ನೂ ಆಕೆಯ ಅಕ್ಕಪಕ್ಕದಲ್ಲಿನ ಇತರ ಮಾನವಾಕೃತಿಗಳನ್ನೂ ಕಂಡ ತೆಲುಗು ಜನಪದರು ಆಕೆಯನ್ನು ಬೊಮ್ಮಲಮ್ಮ (ಗೊಂಬೆಗಳ ಅಮ್ಮ) ಎಂದು ಕರೆದಿದ್ದಾರೆ.
"https://kn.wikipedia.org/wiki/ಬೊಮ್ಮಲಮ್ಮಗುಟ್ಟ" ಇಂದ ಪಡೆಯಲ್ಪಟ್ಟಿದೆ