ಸದಸ್ಯ:Shivakumara kote/sandbox1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
#ತ್ರೈಲೋಕ್ಯಚೂಢಾಮಣಿ ಸ್ತೋತ್ರ
#ಸಮಯಪರೀಕ್ಷೆ
*ತ್ರೈಲೋಕ್ಯಚೂಢಾಮಣಿ ಸ್ತೋತ್ರ:ಇದು ೩೬ ಸ್ತೋತ್ರಗಳನನ್ನು ಒಳಗೊಂಡಿದೆ. ''ಛತ್ತೀಸರತ್ನಮಾಲೆ'' ಎಂಬ ಇನ್ನೊಂದು ಹೆಸರೂ ಇದೆ.ಇದರಲ್ಲಿ ಅನ್ಯದೇವತಾ ನಿಂದೆ,ಅನ್ಯಮತ ವಿಡಂಬನೆ ಅಧಿಕವಾಗಿದ್ದು ಕವಿ ಉದ್ದೇಶಕ್ಕನುಗುಣವಾಗಿ ವಿಡಂಬನಾ ಸ್ವರೂಪವನ್ನು ಪಡೆದುಕೊಂಡಿದೆ.ತೀರ ಕಡಿಮೆ ಪ್ರಮಾಣದಲ್ಲಿ ಭಕ್ತಿಭಾವ ಹೊಂದಿರುವ ಪದ್ಯಗಳು ಇವೆ. ಉಳಿದಂತೆ ಗದ್ಯಗಳಲ್ಲಿ ಬರುವ ವಾದ ಸರಣಿ,ಪದ್ಯಅಪದ್ಯ ರೂಪ ತಾಳಿರುವ ವಿಡಂಬನೆ ವಿತಮಡವಾದಿ ಮತ್ತು ವಿಡಂಬನಾಕಾರ ಎಂಬ ಬ್ರಹ್ಮಶಿವನ ಸ್ವಭಾವಕ್ಕೆ ತಕ್ಕಂತೆ ಮೂಡಿ ಬಂದಿವೆ.
*ಸಮಯಪರೀಕ್ಷೆ:ಇದು ಕಂದ ವೃತ್ತಗಳ ಕೇವಲ ಪದ್ಯಗಳಿಂದ ಕೂಡಿದ ಗ್ರಂಥ. ''೧೫ ಅಧಿಕಾರ''ಗಳುಳ್ಳ ಬಹು ವಿಸ್ತಾರವಾದ ಗ್ರಂಥ.ಇದು ಛಂದಸ್ಸಿನಲ್ಲಿ ಹೇಗೋ ಹಾಗೆಯೇ ವಿಷಯ ನಿರೂಪಣೆಯಲ್ಲಿಯೂ ಚಂಪೂಮಾರ್ಗಕ್ಕಿಂಥ ಭಿನ್ನವಾದುದುಇದು ಸುಸ್ಪಷ್ಟವಾಗಿ ಮತಪ್ರಚಾರಕ ಗ್ರಂಥ ಅನ್ಯ ಮತ ಪುರಾಣಗಳಲ್ಲಿ ಮತ್ತು ಲೋಕಾಚರಣೆಗಳಲ್ಲಿ ಇರುವ ದೋಷಗಳನ್ನುಎತ್ತಿಹಿಡಿದು ಜೈನಮತವೇ ಶ್ರೇಷ್ಠ ಎಂದು ಹೇಳುವುದು ಇವನ ಮುಖ್ಯ ಉದ್ದೇಶವಾಗಿದೆ.ಇದರಲ್ಲಿ ಅಷ್ಟಾದಶವರ್ಣನೆಗಳಿಲ್ಲ. ಇವನ ಪ್ರಕಾರ ಅನ್ಯಮತದ ಮೂಡ ನಂಬಿಕೆಗಳೇ ಅಷ್ಟಾದಶ ವರ್ಣನೆಗಳು. ಬ್ರಹ್ಮಶಿವನ ಸಮಯಪರೀಕ್ಷೆ ತನ್ನ ಮಿತಿಯೊಳಗೆ ತತ್ಕಾಲೀನ ಜನಜೀವನಚಿತ್ರಣವನ್ನು ಒಳಗೊಂಡಿದೆ.ಇದರಲ್ಲಿ ಅನ್ಯಮತ ವಿಡಂಬನೆ ಹಾಗೂ ಟೀಕೆ ಕಟುವಾಗಿದೆ.ಮತೀಯ ಪಕ್ಷಪಾತ ಹಾಗೂ ಅಸಹನೀಯತೆ ಎದ್ದು ಕಾಣುವ ವಿಡಂಬನಾ ಸಾಹಿತ್ಯ ಗ್ರಂಥವಾಗಿದೆ. ಈತನ ವಿಡಂಬನೆ ಮನರಂಜನಾತ್ಮಕವಾಗಿದೆ.ಅರ್ಧನಾರೀಶ್ವರನ ಪರಿಕಲ್ಪನೆಯನ್ನು ಕುರಿತು ಹೇಳುವಾಗ ಶಂಭು ತನ್ನ ಒಡಲಿನ ಅರ್ಧ ಭಾಗವನ್ನು ಕಾಂತೆಗೆ ಕೊಟ್ಟ, ಪಾರ್ವತಿ ತನ್ನ ಒಡಲಿನ ಅರ್ಧ ಭಾಗವನ್ನು ಶಂಭುವಿಗೆ ಕೊಟ್ಟಳು ಉಳಿದ ಇನ್ನರಡು ಅರ್ಧ ಭಾಗಗಳನ್ನು ಇಬ್ಬರೂ ಯಾರಿಗೆ ಕೊಟ್ಟರು<ref>ಗಂಗಾನಾಯಕ್ ಕೆ.ಎನ್.,(ಪ್ರ.ಸಂ.) ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿ ಮೈಸೂರು ೫೭೦೦೦೬ ಪ್ರಥಮ ಮುದ್ರಣ ೨೦೧೧</ref> ಎಂದು ಅನ್ಯ ಮತ ದೇವತೆಗಳನ್ನು ವಿಡಂಬಿಸಿದ್ದಾನೆ.
==ಉಲ್ಲೇಖ==
"https://kn.wikipedia.org/wiki/ಸದಸ್ಯ:Shivakumara_kote/sandbox1" ಇಂದ ಪಡೆಯಲ್ಪಟ್ಟಿದೆ