ಲವಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೮ ನೇ ಸಾಲು:
ಉಪ್ಪಿನ ಗಣಿಗಳಿಂದ ಉಪ್ಪನ್ನು ಉತ್ಪಾದಿಸುವುದು, ಸಮುದ್ರದ ನೀರನ್ನು ಭಾಷ್ಪೀಕರಿಸಿ ಉಪ್ಪನ್ನು ಪಡೆಯುವುದು ಖನಿಜಯುಕ್ತ ಕೆರೆಗಳಲ್ಲಿನ ನೀರಿನ ಮೂಲಕ ಉಪ್ಪು ಉತ್ಪಾಧಿಸುವುದು ಪ್ರಮುಖವಾದ ವಿಧಾನಗಳಾಗಿವೆ. ಇದರ ಪ್ರಮುಖವಾದ ಕೈಗಾರಿಕಾ ಉತ್ಪನ್ನಗಳೆಂದರೆ ಕಾಸ್ಟಿಕ್ ಸೋಡಾ ಹಾಗೂ ಕ್ಲೋರಿನ್. ಪಾಲಿವಿನೈಲ್ ಕ್ಲೋರೈಡ್, ಪ್ಲಾಸ್ಟಿಕ್, ಪೇಪರ್ ಪಲ್ಪ್ ಮುಂತಾದವುಗಳ ಉತ್ಪಾದನೆಯಲ್ಲಿಯೂ ಉಪ್ಪಿನ ಬಹಳವಾದ ಬಳಕೆಯಿದೆ. ಸುಮಾರು ೨೦೦ ಮಿಲಿಯನ್ ಟನ್ ಪ್ರತಿವರ್ಷ ಉತ್ಪಾದನೆಯಾಗುತ್ತಿದ್ದು ಅದರಲ್ಲಿ ಕೇಲವ ೬ ಶೇಕಡಾದಷ್ಟು ಉಪ್ಪು ಮನುಷ್ಯನ ಬಳಕೆಗಾಗಿ ವಿನಿಯೋಗವಾಗುತ್ತದೆ. ಉಳಿದಂತೆ ರಸ್ತೆಗಳಲ್ಲಿ ಮಂಜು ಕರಗಿಸುವುದು, ಕೃಷಿ ಕ್ಷೇತ್ರ, ಮತ್ಸ್ಯ ಕ್ಷೇತ್ರದಲ್ಲಿ ಬಳಕೆಯಾಗುತ್ತದೆ. ಮನುಷ್ಯನ ಆಹಾರದಲ್ಲಿ ಬಳಕೆಯಾಗುವ ಉಪ್ಪು ಟೇಬಲ್ ಸಾಲ್ಟ್, ಹರಳು ಉಪ್ಪು ರೂಪದಲ್ಲಿರುತ್ತದೆ. ಇತ್ತ್ತೀಚೆಗೆ ಅಯೋಡಿನ್ ಕೊರತೆಯನ್ನು ಹೋಗಲಾಡಿಸಲು ಅಯೋಡೈಸ್ಡ್ ಉಪ್ಪಿನ ಬಳಕೆ ಜನಪ್ರಿಯವಾಗುತ್ತಿದೆ. ಉಪ್ಪು ಹಲವಾರು ಸಂಸ್ಕರಿತ ಆಹಾರದಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತಿದೆ.
==ಉಪ್ಪಿನ ಚರಿತ್ರೆ==
[[File:Salzproduktion-Halle.jpg|thumb|ಹಾಲೆ ಎಂಬ ಪ್ರದೇಶದಲ್ಲಿ ಉಪ್ಪಿನ ಉತ್ಪಾದನೆ]] (1670)]]
ಮಾನವನು ಯಾವಾಗಲೂ ಉಪ್ಪಿನ ಆಕರಗಳ ಸುತ್ತ ಸಮುದಾಯವಾಗಿ ಬದುಕಲು ಪ್ರಯತ್ನಿಸಿದ ಅಥವಾ ಉಪ್ಪಿನ ವ್ಯಾಪಾರ ಕೇಂದ್ರದ ಬಳಿ ತಮ್ಮ ಸಾಮುದಾಯಿಕ ಬದುಕನ್ನು ಕಟ್ಟಿಕೊಂಡ.
 
೫೫ ನೇ ಸಾಲು:
ಕೃತಕವಾಗಿ ಶೈತೀಕರಣಕ್ಕಾಗಿ, ಆಹಾರವನ್ನು ಸಂರಕ್ಷಿಸಲು -ವಿಶೇಷವಾಗಿ ಮಾಂಸವನ್ನು ಸಂರಕ್ಷಿಸಲು, ಸಾವಿರಾರು ವರ್ಷಗಳಿಂದ ಉಪ್ಪನ್ನು ಬಳಸಲಾಗುತ್ತಿದೆ. ಕ್ರಿಸ್ತಪೂರ್ವ ೬೦೫೦ಕ್ಕೂ ಮುಂಚೆ ನವಶಿಲಾಯುಗದ ಮಾನವನು ಉಪ್ಪನ್ನು ಉತ್ಪಾದಿಸುತ್ತಿದ್ದ ಕುರಿತು ರೋಮಾನಿಯಾ ದೇಶದಲ್ಲಿನ ಉತ್ಖನನದಲ್ಲಿ ತಿಳಿದುಬಂದಿದೆ. ಚೀನಾ ದೇಶದ ಶಾಂಘೈ ಬಳಿಯ ಕ್ಷೇಚೀ ಸರೋವರ(Xiechi Lake) ಕ್ರ.ಪೂ ೬೦೦೦ ವರ್ಷಗಳ ಹಿಂದೆ ಉಪ್ಪಿನ ಉತ್ಪಾದನೆ ಇದ್ದ ಕುರಿತ ಸಾಕ್ಷ್ಯಗಳು ದೊರೆತಿವೆ.
 
ಸಸ್ಯ ಜನ್ಯವಾದುದಕ್ಕಿಂತ ಪ್ರಾಣಿಜನ್ಯವಾದ ಮಾಂಸ, ರಕ್ತ ಹಾಗೂ ಹಾಲಿನಲ್ಲಿ ಉಪ್ಪಿನ ಅಂಶವು ಹೆಚ್ಚಾಗಿರುತ್ತದೆ. ಆದುದರಿಂದ ಧಾನ್ಯಗಳು ಮತ್ತು ತರಕಾರಿಗಳನ್ನು ಬಳಸುವವರು ಉಪ್ಪನ್ನು ಹೆಚ್ಚುವರಿಯಾಗಿ ಬಳಸಲೇಬೇಕಾಗುತ್ತದೆ. <ref>http://www.britannica.com/EBchecked/topic/519712/salt-NaCl |title=Salt (NaCl) |last=Wood |first=Frank Osborne |publisher=Encyclopædia Britannica online |accessdate=9 October 2013}}</ref>
 
[[Category:ರಸಾಯನಶಾಸ್ತ್ರ]]
"https://kn.wikipedia.org/wiki/ಲವಣ" ಇಂದ ಪಡೆಯಲ್ಪಟ್ಟಿದೆ