ಕೆರೆಯ ಪದ್ಮರಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
೧ ನೇ ಸಾಲು:
{{under construction}}
 
[[ಕನ್ನಡ ಸಾಹಿತ್ಯವನ್ನುಸಾಹಿತ್ಯ]]ವನ್ನು ಕಾಲದ ದೃಷ್ಠಿಯಿಂದ ಮೂರು ಪ್ರಮುಖ ವಿಭಾಗಗಳನ್ನಾಗಿ ಮಾಡಿಕೊಂಡು ಅಧ್ಯಯನ ಮಾಡಲಾಗುತ್ತಿದೆ. ಆ ಹಿನ್ನೆಲೆಯಲ್ಲಿ [[ಹಳಗನ್ನಡ]], [[ನಡುಗನ್ನಡ]] ಅಥವಾ ಮಧ್ಯಕಾಲೀನ ಕನ್ನಡ ಮತ್ತು ಆಧುನಿಕ ಅಥವಾ [[ಹೊಸಗನ್ನಡ]] ಸಾಹಿತ್ಯ ಎಂದು ವಿಭಾಗಿಸಿಕೊಂಡು ಧರ್ಮಾಧರಿತ, ಕಾ¯ ಆಧಾರಿತಕಾಲಾಧಾರಿತ ಕ್ರಮಗಳಲ್ಲಿ ಅಧ್ಯಯನ ಮಾಡಲಾಗುವುದು. ಚಂಪೂ ಪ್ರಕಾರದ ಮುಖ್ಯಭೂಮಿಕೆಯಲ್ಲಿ ಸ್ಥಾಪಿತವಾದ 10ನೇ ಶತಮಾನದ ಸಂಸ್ಕøತ ಭೂಯಿಷ್ಠವಾದ ಹಳಗನ್ನಡದ ಪಂಪನಾದಿಯಾಗಿ 12ನೇ ಶತಮಾನದ ಉತ್ತರಾರ್ಧದವರೆಗೂ ಇದ್ದ ಸಾಹಿತ್ಯ ಪ್ರಕಾರವು ವಚನಕ್ರಾಂತಿಯ ಪ್ರಾರಂಭ ಮತ್ತು ಪ್ರೇರಣೆಯಿಂದ ಸಾಹಿತ್ಯ ರಚನೆಯ ಪ್ರಕಾರಗಳು ಹಲವು ರೀತಿಯ ಸ್ವರೂಪದಲ್ಲಿ ಬದಲಾವಣೆಗಳ ಮೂಲಕ ಸ್ಥಾಪಿತಗೊಂಡವು. ಈ ದೇಸಿ ಕಾವ್ಯ ಪ್ರಕಾರಗಳು ಸ್ಥಾಪಿತಗೊಂಡ ಫಲವಾಗಿ ಸಾಮಾನ್ಯರೂ ಕೂಡ ಸಾಹಿತ್ಯ ಓದುವ ಮತ್ತು ಬರೆಯುವ ಅವಕಾಶ ಪಡೆದುಕೊಂಡು ರಾಜಾಶ್ರಯವನ್ನು ನಿರಾಕರಿಸಿ ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ ಕಾವ್ಯಗಳು ರಚನೆಗೊಂಡವು. ವಚನಕ್ರಾಂತಿಯ ಧಾರ್ಮಿಕ ಪ್ರೇರಣೆಯಿಂದ ಪ್ರಭಾವಿತರಾದ 13ನೇ ಶತಮಾನದ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಕೆರೆಯ ಪದ್ಮರಸ ಒಬ್ಬ. ಕೆರೆಯ ಪದ್ಮರಸನ ಕಾಲವು ನಿರ್ದಿಷ್ಟವಾಗಿ ತಿಳಿಯದೇ ಇರುವುದರಿಂದ ಮತ್ತು ಅವನ ಕಾಲದ ಬಗ್ಗೆ ವಿದ್ವಾಂಸರಲ್ಲಿ ಮತ್ತು ಸಾಹಿತ್ಯವಲಯದಲ್ಲಿ ಚರ್ಚೆ ನಡೆಯುತ್ತಿರುವುದರಿಂದ ಅವನ ಕಾಲವನ್ನು ಅಧ್ಯಯನದ ದೃಷ್ಟಿಯಿಂದ ಕವಿ ಚರಿತೆಕಾರರು ತಿಳಿಸಿರುವ ಕಾಲವಾದ ಕ್ರಿ.ಶ.1200 ಎಂದು ಇಟ್ಟುಕೊಳ್ಳಬಹುದು.
== ಇತಿವೃತ್ತ ==
*[[ಹರಿಹರ]]-ರಾಘವಾಂಕರಂತಹ[[ರಾಘವಾಂಕ]]ರಂತಹ ಮಹಾಕವಿಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನವಸಾಹಿತ್ಯ ಪ್ರಕಾರಗಳನ್ನು ಸೃಷ್ಟಿಸಿ, ವಿಶಿಷ್ಟ ಸ್ಥಾನವನ್ನು ಗಳಿಸಿ ಸಾಹಿತ್ಯದ ಮೈಲುಗಲ್ಲನ್ನು ಸ್ಥಾಪಿಸಲು ನೆರವಾದ ಕೆರೆಯ ಪದ್ಮರಸನ ಕಾಲವು ಕ್ರಿ.ಶ.1200. ಈತನ ತಂದೆ ಮಾಯಿದೇವ, ತಾಯಿ ಮಂಗಳದೇವಿ. ಈತನ ಕೃತಿ ‘ದೀಕ್ಷಾಬೋಧೆ.’ ದೀಕ್ಷಾಬೋಧೆಯು ವೀರಶೈವ ದೀಕ್ಷೆಯನ್ನು ತಿಳಿಸುವ ಕನ್ನಡದ ಮೊದಲ ಸ್ವತಂತ್ರ ಕೃತಿ. ಇದರ ಪ್ರಮುಖ ಗುರಿ ವೀರಶೈವ ಮತತತ್ವವನ್ನು ಪ್ರತಿಪಾದಿಸುವುದು. ರಗಳೆ ಕಾವ್ಯ ಪ್ರಕಾರದಲ್ಲಿರುವ ದೀಕ್ಷಾಬೋಧೆ ಕೃತಿಯು ಮುಖ್ಯವಾಗಿ ಮೂರು ಪ್ರಮುಖ ಸ್ಥಲಗಳಿಂದ ಕೂಡಿದೆ. ಈ ಮೂರು ಸ್ಥಲಗಳೂ ಕೂಡ ವಿಭಿನ್ನ ಮತ್ತು ವೈಶಿಷ್ಟ್ಯತೆಯಿಂದ ಕೂಡಿವೆ. ಯಾವುದೇ ಕೃತಿ ರಚನೆಗೆ ಮೂಲಕಾರಣವಿರುವಂತೆ; ಪ್ರಭಾವ, ಪ್ರೇರಣೆ ಇರುವಂತೆ ಪದ್ಮರಸನ ದೀಕ್ಷಾಬೋಧೆ ಕೃತಿಗೆ ಆಂಧ್ರದ ವೈಧಿಕ ಸಂಪ್ರದಾಯದ ತ್ರಿಭುವನತಾತನು ಪದ್ಮರಸನ ಜೊತೆ ಧರ್ಮತತ್ವಗಳ (ವೀರಶೈವ ಮತ್ತು ವೈಧಿಕ) ನಡುವೆ ನಡೆಸಿದ ವಾದ-ವಿವಾದಗಳೇ ಪ್ರಮುಖ ಪ್ರೇರಣೆಯಾಗಿದೆ.<ref>https://kanaja.in/archives/102459</ref>
*ಹೊಯ್ಸಳ ನರಸಿಂಹ ಬಲ್ಲಾಳನಲ್ಲಿ ಮಂತ್ರಿಯಾಗಿದ್ದ ಪದ್ಮರಸನಿಗೆ ಅವನ ಸಾಮಾಜಿಕ ಕಾರ್ಯಗಳಿಗೆ ಜನ ಮೆಚ್ಚಿ ನೀಡಿದ್ದು ‘ಕೆರೆಯ ಪದ್ಮರಸ’ ಎಂಬ ತಲೆಬರಹ. ಸಂಸ್ಕøತ ಮತ್ತು ಕನ್ನಡ ಭಾಷೆಯಲ್ಲಿ ಪರಿಣತನಾಗಿದ್ದ ಪದ್ಮರಸ ತೆಲುಗಿನ ತ್ರಿಭುವನತಾತನನ್ನು ವಾದದಲ್ಲಿ ಸೋಲಿಸಿದ ಮೇಲೆ ವಾದದ ನಿರ್ಣಯದಂತೆ ಸೋತವರು ದೀಕ್ಷೆ ಪಡೆಯಬೇಕಾದ್ದರಿಂದ ತ್ರಿಭುವನತಾತನು ಕೆರೆಯ ಪದ್ಮರಸನಿಂದ ‘ಶಿವಶರಣರ’ ದೀಕ್ಷಾ ವಿಧಾನಗಳನ್ನು ತತ್ವಸಿದ್ಧಾಂತಗಳನ್ನು ಕಾಲಕ್ರಮೇಣ ಆಚರಣೆಯ ಮೂಲಕ ದೀಕ್ಷೆ ಪಡೆದು, ತನ್ನವರಿಗೂ ಶಿವದೀಕ್ಷೆ ಪಡೆದುಕೊಂಡ ಪ್ರಸಂಗವನ್ನು ಪದ್ಮರಸನು ತನ್ನ ಕೃತಿ ದೀಕ್ಷಾಬೋಧೆಯ ಮೂಲಕ ನಿವೇದಿಸಿದ್ದಾನೆ.
*ಹರಿಹರ-ರಾಘವಾಂಕ ಮತ್ತು ಕೆರೆಯ ಪದ್ಮರಸ ಈ ಮೂವರು ಕವಿಗಳ ಕಾಲ ವಿಚಾರವು ಬಹಳ ಚರ್ಚೆಗೆ ಗ್ರಾಸವಾಗಿವೆ. ಮೂವರ ಕಾಲವು ಒಂದೇ ಕಾಲಾವಧಿಯ ಪರಿಧಿಯಲ್ಲೇ ತೋಯ್ದಾಡುವುದರಿಂದ ಇವರು ಮೂರು ಜನರು ಸಮಕಾಲೀನರೆಂದು ಇದುವರೆಗೂ ಚರ್ಚಿಸಿರುವ ಸಾಹಿತ್ಯ ಚರಿತ್ರೆಕಾರರ ಮತ್ತು ವಿದ್ವಾಂಸರ ಮಾತುಗಳು ಮತ್ತು ಅಭಿಪ್ರಾಯಗಳಲ್ಲಿ ಕಾಣಬಹುದಾಗಿದೆ. ಕಾಲ ವಿಚಾರದ ಚರ್ಚೆ ಈ ಲೇಖನದಲ್ಲಿ ಅಪ್ರಸ್ತುತವೆಂದು ಹೇಳುತ್ತ, ಎಲ್ಲಾ ಸಂಶೋಧಿತ, ಚರ್ಚಿತ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪದ್ಮರಸ ಮತ್ತು ಹರಿಹರ-ರಾಘವಾಂಕ ಕಾಲವನ್ನು ಹನ್ನೆರಡನೆಯ ಶತಮಾನದ ಕೊನೆಯ ಹಾಗೂ ಹದಿಮೂರನೆಯ ಶತಮಾನದ ಪೂರ್ವಾರ್ಧವೆಂದು ಗ್ರಹಿಸಬಹುದು.
"https://kn.wikipedia.org/wiki/ಕೆರೆಯ_ಪದ್ಮರಸ" ಇಂದ ಪಡೆಯಲ್ಪಟ್ಟಿದೆ