ರಾಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
ಕಪ್ಪು ಮದ್ದುಪುಡಿಯ ದೊರಕುವಿಕೆಯು ರಾಕೆಟ್‍ಗಳ, ಬಾಂಬ್‌ಗಳ ಮತ್ತು ಫಿರಂಗಿಗಳ ತಯಾರಿಕೆಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದೆ. ಚೀನಾ ದೇಶದ ಬೆಂಕಿ ಬಾಣಗಳು ಸಹ ರಾಕೆಟ್‍ ಅವಿಷ್ಕಾರಕ್ಕೆ ಮುನ್ನುಡಿಯಾಗಿವೆ.
೧೭೯೨ರಲ್ಲಿ ಪ್ರಥಮ ಕಬ್ಬಿಣ ಹೊದಿಕೆಯ ರಾಕೆಟ್‍ಗಳನ್ನು ಮೈಸೂರು ರಾಜ್ಯವನ್ನು ಆಳಿದ [[ಹೈದರಾಲಿ|ಹೈದರಾಲಿ]] ಮತ್ತು ಅವನ ಮಗನಾದ [[ಟಿಪ್ಪುಸುಲ್ತಾನ]] ಇವರುಗಳು ಬ್ರಿಟಿಷರ ವಿರುದ್ಧ ಆಂಗ್ಲೋ-ಮೈಸೂರು ಯುದ್ಧದಲ್ಲಿ ರಾಕೆಟ್‍ಗಳನ್ನು ಬಳಸಿದರು. ನಂತರ ಬ್ರಿಟಿಷರು ಈ ರಾಕೆಟ್‍ಗಳ ತಂತ್ರಜ್ಞಾನದಲ್ಲಿ ಅತೀವ ಆಸಕ್ತಿಯನ್ನು ತಳೆದು ೧೯ನೇ ಶತಮಾನದಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಿದರು. ಮೈಸೂರು ಯುದ್ಧದಲ್ಲಿ ಬಳಕೆಯಾದ ರಾಕೆಟ್‍ಗಳು ಅತ್ಯಂತ ಶಕ್ತಿಶಾಲಿಯಾಗಿದ್ದು ಕಬ್ಬಿಣದ ಟ್ಯೂಬ್‍ಗಳನ್ನು ಹೊಂದಿದ್ದು ನೋದನಕಾರಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದವು. ಈ ರಾಕೆಟ್‍ಗಳು ಸುಮಾರು ೨ ಕಿ.ಮೀ ದೂರದ ವ್ಯಾಪ್ತಿಯನ್ನು ಹೊಂದಿದ್ದವು. ನಾಲ್ಕನೇ ಆಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪುಸುಲ್ತಾನನ ಸೋಲಿನ ನಂತರ ಬ್ರಿಟಿಷರು ಕಬ್ಬಿಣದ ಹೊದಿಕೆಯುಳ್ಳ ರಾಕೆಟ್‍ಗಳನ್ನು ವಶಪಡಿಸಿಕೊಂಡು, ಅಭಿವೃದ್ಧಿಪಡಿಸಿ ನೆಪೋಲಿಯಾನಿಕ್ ಯುದ್ಧದಲ್ಲಿ ಬಳಸಿದರು.
 
===ಅಧುನಿಕ ರಾಕೆಟ್‍ನ ಪಿತಾಮಹರು===
ಅಧುನಿಕ ರಾಕೆಟ್‍ ಪಿತಾಮಹರಾದ ರಷ್ಯಾದ ಕಾನ್ಸ್ಟಂಟೇನ್ ತ್ಸಿಯೋಲ್‍ಕೋವಸ್ಕಿ ಮತ್ತು ಅಮೇರಿಕಾದ ರಾಬರ್ಟ್ ಗೊಡ್ಡಾರ್ಡ್ ಇವರುಗಳು ೨೦ನೇ ಶತಮಾನದಲ್ಲಿ ರಾಕೆಟ್‍ ಬೆಳವಣಿಗೆಗೆ ಕಾರಣರಾದರು.[[File:Dr. Robert H. Goddard - GPN-2002-000131.jpg|thumb|ಡಾ.ರಾಬರ್ಟ್ ಎಚ್.ಗೊಡ್ಡಾರ್ಡ್]]
"https://kn.wikipedia.org/wiki/ರಾಕೆಟ್" ಇಂದ ಪಡೆಯಲ್ಪಟ್ಟಿದೆ