ಸದಸ್ಯರ ಚರ್ಚೆಪುಟ:Banuchander S/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಆಲತಿಗಿರಿ ಬೆಳೆಯುವುದನ್ನು ನೋಡುತ್ತೇವೆ. ಭಾರತದಲ್ಲಿ ೬೫ ಬೇರೆ ಬೇರೆ ಪ್ರಕಾ...
 
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
 
೧ ನೇ ಸಾಲು:
ಆಲತಿಗಿರಿ
ಬೆಳೆಯುವುದನ್ನು ನೋಡುತ್ತೇವೆ. ಭಾರತದಲ್ಲಿ ೬೫ ಬೇರೆ ಬೇರೆ ಪ್ರಕಾರದ ಈ ಜಾತಿಯ ಮರಗಳಿವೆ.ಕೆಲವು ಹೆಮ್ಮರಗಳಾಗುತ್ತವೆ,ಮತ್ತೆ ಕೆಲವು ಮರಗಳ ಮೇಲೆ ಬಳ್ಳಿಗಳಂತೆ ಹಬ್ಬುತ್ತವೆ.
ಆಲ (ಫೈಕಸ್ ಬೆಂಗಾಲೆನ್ಸಿಸ್),ಅರಳಿಮರ ಅಥವಾ ಅಶ್ವತ್ಥ ವೃಕ್ಷ (ಫೈಕಸ್ ರಿಲಿಜಿಯೋಸ ),ಅಂಜೂರ ಅಥವಾ ಸೀಮೆ ಮರ, (ಫೈಕಸ್ ಕ್ಯಾರಿಕಾ ) ಅತ್ತಿಮರ(ಫೈಕಸ್ ಗ್ಲಾಮರೇಟ ), ಗೋಡ್ಡುಮಿಟ್ಟಲ ಅಥವಾ ತಜ್ಜಿಗೋಳಿ (ಫೈಕಸ್ ಗಿಬ್ಬೋಸ), ಕಾಡರಳೆ, ಬೆಟ್ಟರಳೆ (ಫೈಕಸ್ ರಂಫೈ) ಬಸರೀಮರ, ಕರಿಬಸರಿ (ಫೈಕಸ್ ಲ್ಯಾಕರ್),ಗರ್ಗತ್ತಿ (ಫೈಕಸ್ ಆಸ್ಟರಿಮ ) , ಪಿನಿವಾಲ, ಪೆಲ್ಲಾಳ (ಫೈಕಸ್ ರೆಟ್ಯೂಸ ),ಕಲ್ಲರಸೆ (ಫೈಕಸ್ ಆರ್ನೊಟಿಯಾನ ) ರಬ್ಬರಿನ ಮರ (ಫೈಕಸ್ ಇಲಾಸ್ಟಿಕ) - ಇವು ಈ ಜಾತಿಗೆ ಸೇರಿದ ಹೆಚ್ಚು ಪರಿಚಿತವಾದ ಮರಗಳು.
 
ಅಂಜೂರದ ಗಿಡ :೧೫' - ೩೦' ಎತ್ತರ ಬೆಳೆಯುವ ಗಿಡ.ಮೂಲತಃ ಭಾರತದ ಸಸ್ಯವಲ್ಲದಿದ್ದರೂ ಈಗ ಇಲ್ಲಿ ಎಷೋ ಕಡೆ ಇದನ್ನು ಹಣ್ಣಿಗಾಗಿ ಬೆಳೆಸುತ್ತಾರೆ.ಆರ್ದ್ರ ಮತ್ತು ಉಷ್ಣವಾದ ಹವೆ , ಕಪ್ಪುಭೂಮಿ ಮತ್ತು ನೀರಿನ ಸೌಕರ್ಯವಿದ್ದಲ್ಲಿ ಚೆನ್ನಾಗಿ ಬೆಳೆಯುತ್ತವೆ.ಅರ್ಧ ಅಂಗುಲ ದಪ್ಪವಾದ ಕಾಂಡದಿಂದ ಅಂಟನ್ನು ತಯಾರಿಸುವರು.ಹೋಸ ಗಿಡಗಳನ್ನು ಗೂಟನೆಟ್ಟು ಬೆಳೆಸುವುದೂ ಇದೆ. ಅಂಜೂರದ ಮರ ಜುಲೈ-ಅಕ್ಟೋಬರ್ ಮತ್ತು ಜನವರಿ-ಮೇ ತಿಂಗಳು ಹೀಗೆ ವರ್ಷದಲ್ಲಿ ಎರಡು ಸಲ ಹಣ್ಣು ಬಿಡುವುದು. ಮೈಸೂರುರಾಜ್ಯದಲ್ಲಿ ಒಂದು ಗಿಡಕ್ಕೆ ಸು. 180-300ರವರೆಗೆ ಹಣ್ಣುಗಳಾಗುತ್ತವೆ. ಗಿಡದ ಮೇಲೆಯೇ ಉಳಿದಿರುವ ಹಣ್ಣುಗಳನ್ನು ಕೊಯ್ಯುತ್ತಾರೆ; ಕೆಳಗೆ ಬಿದ್ದವನ್ನು ಸಂಗ್ರಹಿಸುತ್ತಾರೆ. ಬಿಸಿಲಿನಲ್ಲಿ ಒಣಗಿಸಿದ ಅಂಜೂರಗಳು ಮಾರಾಟಕ್ಕೆ ಸಿದ್ಧವಾಗುತ್ತವೆ. ಈ ಹಣ್ಣಿನಿಂದ ಜಾಮ್, ಮಾದಕಪೇಯ ಮುಂತಾದುವನ್ನು ತಯಾರಿಸುವರು. ಇದೊಂದು ಪೌಷ್ಟಿಕವಾದ ಹಣ್ಣು. ಇದರಲ್ಲಿ ಎ, ಬಿ, ಸಿ ಮತ್ತು ಡಿ ಅನ್ನಾಂಗಗಳು ಇವೆ. ಮಾಂಸವನ್ನು ಬೇಗ ಕುದಿಸಲಿಕ್ಕೆ ಇದರ ಕಾಯಿಯನ್ನು ಸೇರಿಸುವರು. ಇದೊಂದು ಔಷಧೀಯ ವಸ್ತುವೂ ಹೌದು.(ನೋಡಿ - ಅಂಜೂರ ).
 
ಅತ್ತಿಮರ : ಹೊಳೆ ಹಳ್ಳಗಳ ದಂಡೆಯ ಮೇಲೆ ಸಾಧಾರಣ ಎತ್ತರದಲ್ಲಿ ಬೆಳೆಯುತ್ತದೆ. ಹಳ್ಳಿಗಳ ಸುತ್ತಮುತ್ತಲೂ ಕಾಣಬಹುದು. ದಪ್ಪ ಟೊಂಗೆ ಮತ್ತು ಬೊಡ್ಡೆಗಳ ಮೇಲೆ ಮಾರ್ಚ್, ಜುಲೈ ಅವಧಿಯಲ್ಲಿ ನೂರಾರು ಹಣ್ಣುಗಳಾಗುತ್ತವೆ. ಕುರಿ, ಆಡು, ದನಕರುಗಳಿಗೆ ಇದರ ಎಲೆಯನ್ನು ಮೇವಾಗಿ ತಿನ್ನಿಸುತ್ತಾರೆ. ಹರವಾಗಿ ಬೆಳೆಯುವುದರಿಂದ ಇದು ನೆರಳಿನ ಗಿಡ. ಇದರ ಕಟ್ಟಿಗೆಯಿಂದ ಪೆಟ್ಟಿಗೆ, ಹಲಗೆ, ಚಕ್ಕಡಿಗಳ ಹಲ್ಲು ಇತ್ಯಾದಿ ಮರಮುಟ್ಟುಗಳನ್ನು ತಯಾರಿಸುತ್ತಾರೆ. ಅರಗಿನ ಹುಳುವನ್ನು ಕೂಡ ಈ ಮರದ ಎಲೆಗಳ ಮೇಲೆ ಸಾಕುವರು.(ನೋಡಿ - ಅತ್ತಿಮರ)
 
ಅರಳಿಮರ :ಇದೊಂದು ಹೆಮ್ಮರ. ಹಿಂದೂ ಧರ್ಮೀಯರು ಇದನ್ನು ಪವಿತ್ರವಾದ ಮರವೆಂದು ಪುಜೆ ಮಾಡುವರು. ನೆರಳಿಗಾಗಿಯೂ ಬೆಳೆಸಬಹುದು. ಇದರ ಕಟ್ಟಿಗೆಯನ್ನು ಹೋಮ ಹವನಾದಿ ಧಾರ್ಮಿಕ ವ್ರತಾಚರಣೆಗಳಲ್ಲಿ ಉಪಯೋಗಿಸುತ್ತಾರೆ. ಇದರ ತೊಗಟೆಯ ಕಷಾಯವನ್ನು ಕಜ್ಜಿ ಹುಣ್ಣುಗಳಿಗೆ ಔಷಧವಾಗಿ ಬಳಸುವುದುಂಟು. ಅರಳಿಮರಗಳನ್ನು ತೋಟಗಳಲ್ಲೂ ದೇವಸ್ಥಾನಗಳ ಪರಿಸರದಲ್ಲೂ ಹೆದ್ದಾರಿಯ ಇಬ್ಬದಿಗಳಲ್ಲೂ ನೆರಳಿಗಾಗಿ ಬೆಳೆಸುತ್ತಾರೆ. ಕೆಲವು ಜಾತಿಯ ಅರಗಿನ ಹುಳುಗಳನ್ನು ಬೆಳೆಸುವುದಕ್ಕೂ ಇವುಗಳ ಉಪಯೋಗವಿದೆ. ಎಲೆಯನ್ನು ದನಕರು, ಆಡು, ಕುರಿಗಳಿಗೆ ಮೇವಾಗಿ ಬಳಸುತ್ತಾರೆ. ಇವುಗಳ ಹಾಲಿನಲ್ಲಿರುವ ಜಿಗುಟಾದ ದ್ರವದಿಂದ ರಬ್ಬರನ್ನು ಮಾಡಬಹುದು. ಅರಳಿಮರವನ್ನು ಸೌದೆಯಾಗಿ ಉಪಯೋಗಿಸುತ್ತಾರೆ. ಕೆಲವು ಜಾತಿಯ ಮರಗಳ ಎಲೆ, ಬೇರು ಮತ್ತು ತೊಗಟೆಯ ಕಷಾಯವನ್ನು ಭೇದಿ, ವಾಂತಿ, ಹಲ್ಲುನೋವು, ದಮ್ಮು ಇತ್ಯಾದಿ ರೋಗಗಳಿಗೆ ಉಪಯೋಗಿಸುತ್ತಾರೆ.(ನೋಡಿ - ಅರಳಿಮರ)
 
ಆಲದ ಮರ :ಇದು ಸು. ೧೦0' ಎತ್ತರ ಬೆಳೆದು ಒಳ್ಳೆ ಹರವಾಗಿ ಹಬ್ಬುತ್ತದೆ. ಮರದ ಟೊಂಗೆಗಳಿಂದ ಜೋತುಬಿದ್ದ ಬಿಳಲುಗಳು ಅಥವಾ ಜಡೆ ಬೇರುಗಳು ಟೊಂಗೆಗಳಿಗೆ ಕಂಬಗಳಂತೆ ಆಧಾರ ಕೊಟ್ಟು ಅದರ ಹಬ್ಬುವಿಕೆಗೆ ಸಹಾಯ ಮಾಡುತ್ತವೆ. ಈ ಮರಗಳನ್ನು ದಾರಿಯುದ್ದಕ್ಕೂ ನೆರಳಿಗಾಗಿ ಬಳಸುತ್ತಾರೆ. ಇದರ ಎಲೆ ಆಡು, ಕುರಿ, ದನಕರುಗಳಿಗೆ ಒಳ್ಳೆಯ ಆಹಾರ. ಕಾಗದ ತಯಾರಿಕೆಗೆ ಬೇಕಾಗುವ ಪಲ್ಪನ್ನು ತಯಾರಿಸಲು ಇದರ ಕಟ್ಟಿಗೆಯನ್ನು ಬಳಸುವರು. ಈ ಮರ ಸೌದೆಗೆ ಉಪಯೋಗವಾಗುತ್ತದೆ. ಆಲದ ಮರದ ಹಾಲನ್ನು ಹಲ್ಲುನೋವಿನ ಶಮನಕ್ಕೂ ಗಂಟುಕಟ್ಟಿದ ಹುಣ್ಣುಗಳಿಗೆ, ಬೆಚ್ಚಾರದಂತೆ ಬಾವುಬಂದ ಭಾಗಕ್ಕೆ ಲೇಪವಾಗಿಯೂ ಉಪಯೋಗಿಸುವುದುಂಟು. ಚಿಗುರಿನ ಕಷಾಯವನ್ನು ಭೇದಿಗೆ ಔಷಧವಾಗಿ ಕೊಡುತ್ತಾರೆ. ಹಾಲನ್ನು ಸಂಧಿವಾತಕ್ಕೆ ಉಪಯೋಗಿಸುತ್ತಾರೆ.(ನೋಡಿ - ಆಲದ ಮರ)
 
ಬಸರೀಮರ :ಹೆಚ್ಚಾಗಿ ರಸ್ತೆಗಳ ಇಬ್ಬದಿಗಳಲ್ಲಿ ನೆರಳಿಗಾಗಿ ಬೆಳೆಸುತ್ತಾರೆ. ಇದರ ಎಲೆಗಳನ್ನು ಕುರಿ, ಆಡು, ದನಕರುಗಳಿಗೆ ಮೇಯಿಸುತ್ತಾರೆ; ತಿಪ್ಪೆಯಲ್ಲಿ ಸಂಗ್ರಹಿಸಿ ಗೊಬ್ಬರವನ್ನೂ ಮಾಡುವುದುಂಟು.
 
ರಬ್ಬರಿನ ಮರ : ಮಳೆ ಹೆಚ್ಚಾಗಿದ್ದು ಆರ್ದ್ರತೆಯಿಂದ ಕೂಡಿದ ಉಷ್ಣವಾದ ಹವೆಯಲ್ಲಿ ಬೆಳೆಯುವ ಹೆಮ್ಮರ. ಅಸ್ಸಾಂ, ಕೇರಳ ಮತ್ತು ಕರ್ನಾಟಕರಾಜ್ಯಗಳಲ್ಲಿ ಇದರ ತೋಟಗಳಿವೆ. 20 ವರ್ಷಕ್ಕೂ ಮಿಕ್ಕಿ ಬೆಳೆದ ಬೊಡ್ಡೆಗಳ ಮೇಲೆ v ಆಕೃತಿಯ ಕಚ್ಚು ಹಾಕಿ ಒಸರುವ ಹಾಲನ್ನು ನೆಲದಮೇಲೆ ಹರವಿದ ಚಾಪೆಗಳ ಮೇಲೆ ಕೂಡಿಸಿ ಹದಮಾಡಿದ ರಬ್ಬರನ್ನು ಉತ್ಪಾದಿಸುತ್ತಾರೆ. ಸೌದೆಯಾಗಿಯೂ ಈ ಮರ ಉಪಯೋಗವಿದೆ.(ನೋಡಿ - ರಬ್ಬರ್ - ಮರ)
 
ಆಲತಿಗಿರಿ : ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಒಂದು ಪ್ರೇಕ್ಷಣೀಯ ಸ್ಥಳ. ನಾಗಮಂಗಲದ ಉತ್ತರಕ್ಕೆ 10 ಕಿಮೀ ದೂರದಲ್ಲಿದೆ. ಮೈಸೂರು-ತುಮಕೂರು ರಸ್ತೆಯ ಪೂರ್ವಕ್ಕೆ ತೋರುವ ಗಿರಿಶ್ರೇಣಿಯಲ್ಲಿ ಆಲತಿಗಿರಿಯ ಉನ್ನತ ಶಿಖರ ಗೋಚರಿಸುತ್ತದೆ. ಇಲ್ಲಿನ ಶ್ರೀಮಲ್ಲೇಶ್ವರಗುಹಾಲಯ ಹೆಚ್ಚು ಗಮನಾರ್ಹ. ಪ್ರಕೃತಿ ಸೌಂದರ್ಯಕ್ಕೂ ಈ ನೆಲೆ ಹೆಸರಾದುದು. ಆಲತಿಗಿರಿಶ್ರೇಣಿ ದಕ್ಷಿಣೋತ್ತರವಾಗಿ ಹಬ್ಬಿದೆ. ಗಿರಿಯ ನೆತ್ತಿಯ ಗುಹಾಲಯವನ್ನು ತಲುಪಲು ಪೂರ್ವ ಹಾಗೂ ಪಶ್ಚಿಮ ದಿಕ್ಕುಗಳಿಂದ ಸೋಪಾನಗಳನ್ನು ಕಡೆಯಲಾಗಿದೆ. ಈಗ ಇವು ಸವೆದಿವೆ. ಬೆಟ್ಟದ ಮೇಲಿನ ಕಲ್ಲುಬಂಡೆಗಳಲ್ಲಿ ಬಿರುಕುಗಳು ಕಾಣಿಸುತ್ತವೆ. ಬೆಟ್ಟಕ್ಕೆ ಈ ಹೆಸರು ಬಂದುದು ಸಮೀಪದಲ್ಲೇ ಇರುವ ಆಲತಿ ಎಂಬ ಹಳ್ಳಿಯಿಂದ. ಇಲ್ಲಿರುವ ಪಾಂಡವರ ಗುಹೆ, ಮಲ್ಲೇಶ್ವರಗುಹೆ ಎರಡೂ ಪ್ರಸಿದ್ಧವಾದುವು. ಅತ್ಯಂತ ಆಳವಾದ ಡೊಣೆಯೊಂದು ಗುಹಾಲಯದ ಸಮೀಪದಲ್ಲೇ ಇದೆ.
 
ಮಲ್ಲೇಶ್ವರಗುಹೆಗೆ ಸಂಬಂಧಿಸಿದಂತೆ ಒಂದು ಐತಿಹ್ಯವಿದೆ. ತಾಯಿಯನ್ನು ಕಡಿದು ಬೇಸರಗೊಂಡ ಪರಶುರಾಮ ಲೋಕಸಂಚಾರವನ್ನು ಕೈಕೊಂಡು ಈ ಗಿರಿಯತ್ತ ಬಂದು ವಿಸ್ತಾರವಾಗಿ ಹಬ್ಬಿದ್ದ ಗಿರಿಯನ್ನೇರಿ ಎತ್ತರವಾದ ದೊಡ್ಡ ಬಂಡೆಯೊಂದರ ಬುಡದಲ್ಲಿ ಕುಳಿತು ಆಯಾಸದಿಂದ ಹಾಯ್ ಮಲ್ಲೇಶ ಎಂದು ಉದ್ಗರಿಸಿದನೆಂದೂ ಬಂಡೆಯೊಳಗಿ ನಿಂದ ಓ ಎಂಬ ಧ್ವನಿ ಬಂದಿತೆಂದೂ ಆಗ ಆತ ಆಶ್ಚರ್ಯದಿಂದ ಬಂಡೆಯ ಕಡೆ ನೋಡಿ ಪುರ್ವ ದಿಕ್ಕಿನಿಂದ ಅದನ್ನು ತನ್ನ ಕೊಡಲಿಯಿಂದ ಕಡಿಯತೊಡಗಿ, ಒಬ್ಬ ಮನುಷ್ಯ ಪ್ರವೇಶಿಸುವಷ್ಟು ಭಾಗವನ್ನು ಬಂಡೆಯಲ್ಲಿ ಕಡಿದು ಅದರ ಗರ್ಭವನ್ನು ಪ್ರವೇಶಿಸಿದನೆಂದೂ ಬಂಡೆಯ ಒಡಲಲ್ಲಿ ಜಲ ಕಾಣಿಸಿಕೊಂಡಿತೆಂದೂ ಅದರ ಮಧ್ಯೆ ಮಲ್ಲೇಶ್ವರಲಿಂಗ
Return to the user page of "Banuchander S/sandbox".