ಆಂಟಿನ್ ಲಾರೆಂಟ್ ಲವಾಸಿಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Maheshmmhshm ಆಂಟಿನ್ ಲಾರೆಂಟ್ ಲವಾಸಿಯೆ (disambiguation) ಪುಟವನ್ನು ಆಂಟಿನ್ ಲಾರೆಂಟ್ ಲವಾಸಿಯೆ ಕ್ಕೆ ಸರಿಸಿದ್ದಾರೆ: Name
No edit summary
೧೪ ನೇ ಸಾಲು:
|signature = Antoine Lavoisier Signature.svg
}}
ಆಂಟಿನ್ ಲಾರೆಂಟ್ ಲವಾಸಿಯೆ(Antoine-Laurent de Lavoisier) (೨೬ ಆಗಸ್ಟ್ ೧೭೪೨ - ೮ ಮೇ ೧೭೯೪). ಈತ ಒಬ್ಬ ಫ್ರಾನ್ಸ್ ದೇಶದ ನಾಗರೀಕ ಮತ್ತು ರಸಾಯನಶಾಸ್ತ್ರ ತಜ್ಞ. ೧೮ನೇ ಶತಮಾನದಲ್ಲಿ ನಡೆದ ರಸಾಯನಶಾಸ್ತ್ರ ಕ್ರಾಂತಿಯ ಕೇಂದ್ರ ಬಿಂದುವೆಂದೇ ಹೇಳಬಹುದು. ಇವನು ನವೋದಯ ರಸಾಯನ ಶಾಸ್ತ್ರಕ್ಕೆ ಹಾಗು ಜೀವಶಾಸ್ತ್ರಕ್ಕೆ ಕೊಟ್ಟ ಕೊಡುಗೆಗಳನ್ನು ಗಮನಿಸಿದರೆ ಈತನನ್ನು "ಆಧುನಿಕ ರಸಾಯನ ಶಾಸ್ತ್ರದ ಪಿತಾಮಹ" ಎಂದೇ ಹೇಳಬಹುದು.ವಸ್ತುಗಳು ಉರಿಯುವುದು, ಸಿಡಿಮದ್ದು ಸ್ಫೋಟಗೊಳ್ಳುವುದು, ಲೋಹಗಳಿಗೆ ತುಕ್ಕು ಹಿಡಿಯುವುದು, ಪ್ರಾಣಿಗಳ ಉಸಿರಾಟ ಇವೆಲ್ಲವೂ ಒಂದೊಂದು ರೀತಿಯ ದಹನ ಕ್ರಿಯೆಗಳೆಂದು ಮತ್ತು ಪ್ರತಿಯೊಂದು ವಸ್ತುವಿನ ಜೊತೆಗೂ ಅವು ವಿಭಿನ್ನ ವೇಗದಲ್ಲಿ ನಡೆಯುತ್ತವೆ ಎಂದೂ ಜಗತ್ತಿಗೆ ಮೊತ್ತ ಮೊದಲಿಗೆ ಸಾರಿದ ವ್ಯಕ್ತಿ.ದಹನ ಕ್ರಿಯೆಗೆ ಆಮ್ಲಜನಕವು ಅತ್ಯವಶ್ಯವೆಂದು ಹೇಳಿದ್ದಷ್ಟೇ ಅಲ್ಲದೆ ಆಮ್ಲಜನಕ ಮತ್ತು ಜಲಜನಕದ ಇರುವಿಕೆಯನ್ನು ಪತ್ತೆ ಹಚ್ಚಿ ಅವುಗಳಿಗೆ ಹೆಸರು ಕೊಟ್ಟಿದ್ದು ಇದೇ ಲವಾಸಿಯೇ. ಸಿಲಿಕಾನ್ ಎಂಬ ಧಾತುವೊಂದು ಇದ್ದಿರಬಹುದೆಂದು ಈತ ಮೊದಲೇ ಊಹಿಸಿದ್ದ.ಅದುವರೆವಿಗೂ ಇಡೀ ಪ್ರಪಂಚ ಗಂಧಕವನ್ನು ಒಂದು ಸಂಯುಕ್ತ ರಾಸಾಯನಿಕ ವಸ್ತು ಎಂದೇ ಭಾವಿಸಿತ್ತು, ಆದರೆ ಅದು ಸಂಯುಕ್ತ ವಸ್ತುವಿನ ಬದಲಾಗಿ ಮೂಲ ಧಾತು ಎಂದು ಸಾದರ ಪಡಿಸಿದವನು ಈತನೇ.
 
ದಹನ ಕ್ರಿಯೆಗೆ ಆಮ್ಲಜನಕವು ಅತ್ಯವಶ್ಯವೆಂದು ಹೇಳಿದ್ದಷ್ಟೇ ಅಲ್ಲದೆ ಆಮ್ಲಜನಕ ಮತ್ತು ಜಲಜನಕದ ಇರುವಿಕೆಯನ್ನು ಪತ್ತೆ ಹಚ್ಚಿ ಅವುಗಳಿಗೆ ಹೆಸರು ಕೊಟ್ಟಿದ್ದು ಇದೇ ಲವಾಸಿಯೇ. ಸಿಲಿಕಾನ್ ಎಂಬ ಧಾತುವೊಂದು ಇದ್ದಿರಬಹುದೆಂದು ಈತ ಮೊದಲೇ ಊಹಿಸಿದ್ದ.ಅದುವರೆವಿಗೂ ಇಡೀ ಪ್ರಪಂಚ ಗಂಧಕವನ್ನು ಒಂದು ಸಂಯುಕ್ತ ರಾಸಾಯನಿಕ ವಸ್ತು ಎಂದೇ ಭಾವಿಸಿತ್ತು, ಆದರೆ ಅದು ಸಂಯುಕ್ತ ವಸ್ತುವಿನ ಬದಲಾಗಿ ಮೂಲ ಧಾತು ಎಂದು ಸಾದರ ಪಡಿಸಿದವನು ಈತನೇ.
ಲವಾಸಿಯೇ ನ ಬಹಳ ಮುಖ್ಯ ಒಂದು ಅಧ್ಯಯನವೆಂದರೆ ಅದು ದಹನ ಕ್ರಿಯೆಯಲ್ಲಿ ಆಮ್ಲಜನಕದ ಪಾತ್ರವನ್ನು ಕುರಿತಾಗಿದ್ದು. ೧೭೭೮ ರಲ್ಲಿ ಆಮ್ಲಜನಕವನ್ನು ಹಾಗು ೧೭೮೩ರಲ್ಲಿ ಜಲಜನಕವನ್ನು ಪತ್ತೆ ಹಚ್ಚಿದ ಲವಾಸಿಯೇ ದಹನಕ್ರಿಯೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ , ಅಲ್ಲಿಯವರೆಗೂ ಪ್ರಚಲಿತದಲ್ಲಿದ್ದ [https://en.wikipedia.org/wiki/Phlogiston_theory ಫ್ಲೋಜಿಸ್ಟಾನ್ ಪ್ರಮೇಯ] ತಪ್ಪೆಂದು ಸಾರಿ ಹೇಳಿದ. ಫ್ಲೋಜಿಸ್ಟಾನ್ ಪ್ರಮೇಯ ದಹನ ಕ್ರಿಯೆಯ ರಹಸ್ಯವನ್ನು ಹೀಗೆ ಬಣ್ಣಿಸುತ್ತದೆ "ದಹನವಾಗಬಲ್ಲ ವಸ್ತುಗಳಲ್ಲಿ ಬೆಂಕಿಯಂತಹ 'ಫ್ಲೋಜಿಸ್ಟಾನ್' ಎಂಬ ವಸ್ತುವೊಂದು ಅಡಗಿರುತ್ತದೆ, ಹೊತ್ತಿ ಉರಿಯಲು ಇದೇ ಕಾರಣ". ಲವಾಸಿಯೇ ಮೆಟ್ರಿಕ್ ಪದ್ಧತಿಯನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡಿದ್ದಾನೆ ಹಾಗು ರಾಸಾಯನಿಕಗಳ ವರ್ಗೀಕರಣ ನವೀಕರಣ ಕಾರ್ಯದಲ್ಲೂ ಕೈ ಜೋಡಿಸಿದ್ದಾನೆ.
[[ವರ್ಗ:ರಸಾಯನಶಾಸ್ತ್ರ ತಜ್ಞ]]