ಸಂಘಟಿಸುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸತಾದ ಲೇಖನ ಸೃಷ್ಟಿ
( ಯಾವುದೇ ವ್ಯತ್ಯಾಸವಿಲ್ಲ )

೧೯:೫೫, ೪ ಜನವರಿ ೨೦೧೬ ನಂತೆ ಪರಿಷ್ಕರಣೆ

ಪೀಠಿಕೆ

ಸಂಸ್ಥೆಯ ಉದ್ದೇಶಗಳನ್ನು ನಿರ್ಧರಿಸಿ ಯೋಜನೆಯನ್ನು ಸಿದ್ಧಪಡಿಸಿದ ನಂತರ ಮುಂದಿನ ಹಂತವೆಂದರೆ ಸಂಸ್ಥೆಯ ಉದ್ದೇಶಗಳನ್ನು ಇಡೇರಿಸಲು ಯೋಜನೆಯನ್ನು ಅನುಡಷ್ಠಾನಗೊಳಿಸುವುದಾಗಿದೆ.ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ವಿವಿಧ ಚಟುವಟಿಕೆಗಳ ಸಂಘಟನೆ ಅತಿ ಮುಖ್ಯ ಕಾರ್ಯವಾಗಿದೆ.ಈ ಸಂಬಂಧ ಸಂಘಟಿಸುವಿಕೆಯು ಮಹತ್ವದ ಪಾತ್ರ ವಹಿಸುತ್ತದೆ.

ನಿರ್ವಹಣೆಯ ಕಾರ್ಯದಲ್ಲಿ ಸಂಘಟಿಸುವಿಕೆಯ ಪಾತ್ರವೆಂದರೆ ಸಂಸ್ಥೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಪನ್ಮೂಲಗಳನ್ನು ದಕ್ಷತೆಯಿಂದ ಬಳಸುವುದು ಸಿಬ್ಬಂದಿಯನ್ನು ಒಂದಾಗಿಸುವುದು ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು.ಈ ಸಂಬಂಧ ಪರಿಣಾಮಕಾರಿ ನಿರ್ವಹಣೆಗೆ ಸಂಘಟಿಸುವಿಕೆಯು ಮುಖ್ಯ ಪಾತ್ರ ವಹಿಸುತ್ತದೆ.ಇದರ ಅರ್ಥ ಯೋಜನೆಗಳನ್ನು ಕಾರ್ಯರೂಪಗೊಳಿಸುವುದು.

ಸಂಘಟಿಸುವಿಕೆಯ ಅರ್ಥ

ಸಂಘಟಿಸುವಿಕೆ ಎಂದರೆ ಯೋಜನೆಯ ಕಾರ್ಯಗಳನ್ನು ಗುರುತಿಸುವುದು ಹಾಗೂ ಒಂದುಗೂಡಿಸುವ ಪ್ರಕ್ರಿಯೆಯಾಗಿದೆ.ಈ ಸಂಬಂಧ ಉದ್ದೇಶಗಳ ಈಡೇರಿಕೆಗಾಗಿ ಅಧಿಕಾರ ಸಂಬಂಧಗಳ ಗುರುತಿಸುವಿಕೆ ಹಾಗೂ ಜವಬ್ದಾರಿಗಳ ಹಂಚಿಕೆಯಾಗಿದೆ.ಇದರಿಂದ ಸಿಬ್ಬಂದಿಗಳ ಕಾರ್ಯವು ಯಶಸ್ವಿಯಾಗಿ ಉದ್ದೇಶಗಳ ಈಡೇರಿಕೆಯಾಗುತ್ತದೆ.

ಸಂಘಟಿಸುವುಕೆಯು ನಿರ್ವಹಣೆಯ ಎರಡನೇ ಮುಖ್ಯ ಕಾರ್ಯವಾಗಿದೆ.ಇದು ಸಂಸ್ಥೆಯಲ್ಲಿರುವ ವಿವಿಧ ಚಟುವಟಿಕೆಗಳ ನಡುವೆ ಸಂಬಂಧ ಏರ್ಪಡಿಸುತ್ತದೆ.ಇದರ ಉದ್ದೇಶ ವಿವಿಧ ಸಂಪನ್ಮೂಲಗಳನ್ನು ಅಂದರೆ ಸಿಬ್ಬಂದಿವರ್ಗ,ಯಂತ್ರಗಳು,ಕಚ್ಚಾ ಸಾಮಗ್ರಿ,ಬಂಡವಾಳ ಇವುಗಳ ನಡುವೆ ಸಂಬಂಧ ಏರ್ಪಡಿಸಿ,ಅವಿಗಳನ್ನು ಒಂದುಗೂಡಿಸಿ ನಿಗದಿತ ಉದ್ದೇಶಗಳನ್ನು ಸಾಧಿಸುವುದಾಗಿದೆ.