ಸದಸ್ಯ:Swapna J BcomD/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೯ ನೇ ಸಾಲು:
ಭಾರತದಲ್ಲಿ ಇನ್ಷೂರೆನ್ಸ್ ಗೆ ಆಳವಾದ ಇತಿಹಾಸವಿದೆ. ಇದರ ಬಗ್ಗೆ ನಾವು ಮನು(ಮನುಸ್ಮೃತಿ), ಯಾಜ್ಞವಲ್ಕ್ಯ(ಧರ್ಮಶಾಸ್ತ್ರ) ಹಾಗು ಕೌಟಿಲ್ಯ (ಅರ್ಥಶಾಸ್ತ್ರ) ಬರಹಗಳಲ್ಲಿ ಕಾಣಬಹುದು. ಈ ಬರಹಗಳಲ್ಲಿ ನಾವು ಮುಖ್ಯವಾಗಿ ಸಂಪನ್ಮೂಲಗಳ ಸಂಚಯಿಸುವಿಕೆಯನ್ನು ವಿಕೋಪಗಳ ಸಂದರ್ಭದಲ್ಲಿ ಉದಾಹರಣೆಗೆ ಬೆಂಕಿ, ಪ್ರವಾಹ, ಸಾಂಕ್ರಾಮಿಕ ಹಾಗು ಕ್ಷಾಮ ಪುನರ್ವಿತರಿಸಬಹುದು ಎಂಬುದನ್ನು ಕಾಣಬಹುದಾಗಿದೆ. ಪ್ರಾಚೀನ ಭಾರತದ ಇತಿಹಾಸವು ಮೊದಲ ಇನ್ಶೂರೆನ್ಸ್ ಕುರುಹುಗಳನ್ನು ಸಮುದ್ರ ವ್ಯಾಪಾರ ಸಾಲ ಹಾಗು ವಾಹಕಗಳ ಒಪ್ಪಂದದ ಮೂಲಕ ಸಂರಕ್ಷಿಸಲ್ಪಟ್ಟಿದೆ. ಭಾರತದ ವಿಮೆಯು ಹೆಚ್ಚುವರಿ ರೂಪುರೇಖುಗಳನ್ನು ಬೇರೆ ದೇಶಗಳಿಂದ ಪಡೆದಿದೆ. ಉದಾಹರಣೆಗೆ ಇಂಗ್ಲಾಂಡ್.
 
1818 ರಲ್ಲಿ ಜೀವ ವಿಮೆ ವ್ಯಾಪಾರವು ಭಾರತ ದೇಶವನ್ನು ಆಗಮಿಸಿತು. ಒರಿಯೆಂಟಲ್ ಲೈಫ್ ಇನ್ಷುರೆನ್ಸ್ ಕಂಪನಿಯು ಮೊದಲನೆಯದಾಗಿತ್ತು. ಈ ಕಂಪನಿಯು 1834ರಲ್ಲಿ ವಿಫಲವಾಯಿತು. 1829ರಲ್ಲಿ ಮದರಾಸಿನ ನ್ಯಾಯ ಸಮ್ಮತವು ಜೀವ ವಿಮೆ ವ್ಯಾಪರವನ್ನು ಮದರಾಸಿನ ಅಧ್ಯಕ್ಷತ್ವದಲ್ಲಿ ನಿರ್ವಹಿಸುತಿತ್ತು. 1870 ರಲ್ಲಿ ಬ್ರಿಟಿಷ್ ಶಾಸನವನ್ನು ಕಂಡೆವು. ಮತ್ತು ಹತ್ತೊಂಬತ್ತನೆಯ ಶತಮಾನದ ಕಳೆದ ಮೂರು ದಶಕಗಳಲ್ಲಿ ಬಾಂಬೆ ಮ್ಯುಚುವಲ್(1871), ಒರಿಎಂಟಲ್ (1874), ಮತ್ತು ಎಂಪೈರ್ ಆಫ್ ಇಂಡಿಯಾ(1897) ಗಳನ್ನು ಬಾಂಬೆ ರೆಸಿಡೆನ್ಸಿಯಲ್ಲಿ ಆರಂಭಿಸಿದರು. ಆದರೆ ಈ ಯುಗವು ವಿದೇಶಿ ಪ್ರಾಬಲ್ಯವನ್ನು ಹೊಂದಿತ್ತು, ಅದು ಒಳ್ಳೆಯ ವ್ಯಾಪಾರವನ್ನು ನಡೆಸುತ್ತಿತ್ತು, ಉದಾಹರಣೆಗೆ ಆಲ್ಬರ್ಟ್ ಜೀವ ಭರವಸೆ(ಅಲ್ಬೆರ್ಟ್ ಲೈಫ್ ಅಶ್ಯೂರೆನ್ಸ್), ರಾಯಲ್ ವಿಮೆ(ರಾಯಲ್ ಇನ್ಶೂರೆನ್ಸ್), ಲಿವೆರ್ ಪೂಲ್ ಅಂಡ್ [[ಲಂಡನ್ ಗ್ಲೋಬ್ ಇನ್ಶೂರೆನ್ಸ್]] ಹಾಗು ಭಾರತೀಯ ಕಂಪನಿಗಳಿಗೆ ಇವು ಬಹಳ ಪೈಪೋಟಿ ನೀಡುತ್ತಿದ್ದವು.
1914 ರಲ್ಲಿ, ಭಾರತ [[ಸರ್ಕಾರ]]ವು ಜೀವ ವಿಮೆಯ ಲಾಭದ ಬಗ್ಗೆ ಪ್ರಚಾರಮಾಡಲು ಸಿದ್ಧವಾಯಿತು. ದ ಇಂಡಿಯನ್ ಲೈಫ್ ಅಶ್ಯೂರನ್ಸ್ ಕಂಪನಿ ಆಕ್ಟ್,1912 ಇದು ಜೀವ ವಿಮೆಯನ್ನು ನಿಯಂತ್ರಿಸುವ ಮೊದಲ ಶಾಸನಬದ್ಧ ಕ್ರಮವಾಗಿತ್ತು. ಭಾರತ ದೇಶದ ಹಾಗು ಬಾಹ್ಯ ದೇಶದ ಜೀವ ವಿಮೆ ಹಾಗು ಇತರ ಸಾಮಾನ್ಯ ವಿಮೆ ಇದರೊಂದಿಗೆ ಪ್ರಾವಿಡೆಂಟ್ ಇನ್ಶೂರೆನ್ಸ್ ಸೊಸೈಟಿಯ ಅಂಕಿ ಅಂಶಗಳ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರವನ್ನು ಪ್ರೇರೇಪಿಸಲು 1928 ರಲ್ಲಿ ಇಂಡಿಯನ್ ಇನ್ಶುರನ್ಸ್ ಕಂಪನೀಸ್ ಆಕ್ಟ್ ಅನ್ನು ಜಾರಿಗೆಗೊಳಿಸಲಾಯಿತು.1938ರಲ್ಲಿ ವಿಮೆ ಸಾರ್ವಜನಿಕರ ಆಸಕ್ತಿಯನ್ನು ರಕ್ಷಿಸಲು ಹಾಗು ಹಿಂದಿನ ಶಾಸನವನ್ನು ಕ್ರೋಢೀಕರಿಸಿ, ತಿದ್ದುಪಡಿಸಿದರು. ಸಮಗ್ರ ನಿಬಂಧನೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದರು.
೧೫ ನೇ ಸಾಲು:
1950 ಯ ಇನ್ಶೂರೆನ್ಸ್ ಅಮೆಂಡ್ ಮೆಂಟ್ ಆಕ್ಟ್ ನ ಮುಖ್ಯ ಗುರಿಯು ಪ್ರಧಾನ ಸಂಸ್ಥೆಗಳನ್ನು ರದ್ಧುಪಡಿಸುವುದಾಗಿತ್ತು. ಆದರೆ ದೊಡ್ಡ ಮೊತ್ತದ ವಿಮೆ ಕೇಂದ್ರಗಳಿದ್ದವು ಹಾಗು ಸ್ಪರ್ಧೆಯ ಮಟ್ಟ ಹೆಚ್ಚಿತ್ತು. ಹಾಗು ನ್ಯಾಯಸಮ್ಮತವಲ್ಲದ ವಹಿವಾಟುಗಳು ನಡೆಯುತ್ತಿವೆ ಎಂದು ಆರೋಪಗಳಿದ್ದವು. ಇದರಿಂದ ಭಾರತ ಸರ್ಕಾರವು ವಿಮೆ ವ್ಯಾಪಾರವನ್ನು ರಾಷ್ಟ್ರೀಕರಣಗೊಳಿಸಲು ಘೋಷಿಸಿತು.
ಜೀವ ವಿಮಾ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ, [[ಜೀವ ವಿಮಾ ನಿಗಮ]] ಅಸ್ತಿತ್ವಕ್ಕೆ ಬರಬೇಕೆಂದು ಸುಗ್ರೀವಾಜ್ಞೆ ಹೊರಡಿಸಲಾಯಿತು. ಎಲ್.ಐ.ಸಿ.(ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಯು 154 ಭಾರತೀಯ, ಹಾಗು 16 ಬಾಹ್ಯ ದೇಶದ ಮತ್ತು 75 ಪ್ರಾವಿಡೆಂಟ್ ಸೊಸೈಟಿ- ಮೊತ್ತ 245 ಹೊಂದಿತು. ಎಲ್.ಐ.ಸಿ.ಯು 1990 ರಲ್ಲಿ ಏಕಸ್ವಾಮ್ಯವನ್ನು ಅನುಭವಿಸುತ್ತಿತ್ತು. ಪುನಃ ಅದನ್ನು ಖಾಸಗಿ ವಲಯಕ್ಕೆ ವರ್ಗಾಯಿಸಲಾಯಿತು.
 
17ನೆಯ ಶತಮಾನದ ಪಶ್ಚಿಮದ ಕೈಗಾರಿಕಾ ಕ್ರಾಂತಿಗೆ ಹಾಗು ಸಮುದ್ರ ಶುಲ್ಕ ವ್ಯಾಪಾರ ಹಾಗು ವಾಣಿಜ್ಯದ ತರುವಾಯ ಬೆಳವಣಿಗೆ ಸಾಮಾನ್ಯ ವಿಮೆಯ ಇತಿಹಾಸವಾಗಿದೆ. ಬ್ರಿಟಿಷರ ಆಳ್ವಿಕೆಯ ಪರಂಪರೆಯಾಗಿ ಇದು ಭಾರತಕ್ಕೆ ಆಗಮಿಸಿತು. ಬ್ರಿಟಿಷರು 1850ರಲ್ಲಿ, ಕಲ್ಕತ್ತಾದಲ್ಲಿ ಟ್ರೈಟೊನ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಸ್ಥಾಪನೆಯ ಮೂಲಕ ತನ್ನ ಬೇರುಗಳನ್ನು ಹೊಂದಿದೆ. 1907ರಲ್ಲಿ 'ದಿ ಇಂಡಿಯನ್ ಮರ್ಕಂಟೈಲ್ ಇನ್ಶೂರೆನ್ಸ್ ಲಿಮಿಟೆಡ್ ಸ್ಥಾಪನೆಯಾಯಿತು.ಈ ಕಂಪನಿಯು ಎಲ್ಲಾ ವರ್ಗದ ಸಾಮಾನ್ಯ ವಿಮೆ ವ್ಯಾಪಾರವನ್ನು ನಿರ್ವಹಿಸುವ ಮೊದಲ ಸಂಸ್ಥೆಯಾಗಿತ್ತು.
"https://kn.wikipedia.org/wiki/ಸದಸ್ಯ:Swapna_J_BcomD/sandbox" ಇಂದ ಪಡೆಯಲ್ಪಟ್ಟಿದೆ