ಹೀಕ್ ಕಮೆರ್ಲಿಂಗ್ ಒನ್ನೆಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
೨೦ ನೇ ಸಾಲು:
 
'''ಹೀಕ್ ಕಮೆರ್ಲಿಂಗ್ ಒನ್ನೆಸ್''' ೨೧ ಸೆಪ್ಟೆಂಬರ್ ೧೮೫೩ – ೨೧ ಫೆಬ್ರುವರಿ ೧೯೨೬) [[ನೆದರ್‍ಲ್ಯಾಂಡ್]]ದೇಶದ ಭೌತಶಾಸ್ತ್ರಜ್ಞ ಹಾಗೂ [[ನೋಬೆಲ್ ಪ್ರಶಸ್ತಿ]]ಪಡೆದ ವಿಜ್ಞಾನಿ.ಅಧಿವಾಹಕತೆ(superconductivity)ಯ ಪರಿಶೋಧನೆಗಾಗಿ ಇವರಿಗೆ ೧೯೧೩ನೆಯ ಸಾಲಿನ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು.<ref name="The Nobel Prize in Physics 1913">{{cite web | url=http://www.nobelprize.org/nobel_prizes/physics/laureates/1913/onnes-bio.html | title=ನೋಬೆಲ್ ಪ್ರಶಸ್ತಿ ೧೯೧೩ | accessdate=2 August 2015}}</ref>
==ಬಾಲ್ಯ ಮತ್ತು ಜೀವನ==
ಹುಟ್ಟಿದ್ದು ಹಾಲೆಂಡಿನ ಗ್ರ್ಯೂನಿಂಗೆನ್ ನಗರದಲ್ಲಿ, 1853 ಸೆಪ್ಟೆಂಬರ್ 21ರಂದು. ಅಲ್ಲೇ ಬೆಳೆದು [[ಭೌತವಿಜ್ಞಾನ]] ಮತ್ತು [[ಗಣಿತ ವಿಜ್ಞಾನ]]ಗಳನ್ನು ಓದಿದ. 1871ರಂದು [[ಜರ್ಮನಿ]]ಯ [[ಹೈಡೆಲ್ ಬರ್ಗ್]] ನಗರಕ್ಕೆ ಹೋಗಿ ಬುನ್ಸೆನ್ ಮತ್ತು ಕಿರ್ಕಾಫರೊಂದಿಗೆ ಓದಿ ಮತ್ತೆ ಗ್ರ್ಯೂನಿಂಗಿಗೆ ಹಿಂತಿರುಗಿ ಅಲ್ಲಿ 1879ರಂದು ಡಾಕ್ಟೊರೇಟನ್ನು ಪಡೆದ.
 
==ವೃತ್ತಿ ಜೀವನ ಮತ್ತು ಸಂಶೋಧನೆಗಳು==
ಅನಂತರ ಹಾಲೆಂಡಿನ ಲೈಡನ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಯೋಗಿಕ ಭೌತವಿಜ್ಞಾನದ ಪ್ರಾಧ್ಯಾಪಕನಾಗಿ(1882-1923) ಸಾಯುವುದಕ್ಕೆ ಕೆಲವು ವರ್ಷ ಮುಂಚಿನವರೆಗೂ ಇದ್ದ. ಅಲ್ಲಿ 1894ರಂದು ಉಪಕರಣಗಳಿಂದ ಸಜ್ಜಿತವಾದ ಒಂದು ಪ್ರಯೋಗಶಾಲೆಯನ್ನು ಸ್ಥಾಪಿಸಿ ದ್ರವ ಮತ್ತು ಅನಿಲಗಳ ಮೇಲೆ ಒತ್ತಡದ ಮತ್ತು ಅಲ್ಪತಾಪದ ಪರಿಣಾಮಗಳನ್ನು ಕಂಡುಹಿಡಿಯಲು ಪ್ರಾರಂಭಿಸಿದ ನೋಡಿ-(ಅಲ್ಪತಾಪ ಮತ್ತು ಅತಿವಾಹಕತ್ವ). ಇದರ ಫಲವಾಗಿ 1908ರಂದು ಹೀಲಿಯಂ ಅನಿಲವನ್ನು ದ್ರವೀಕರಿಸಿದ (ನೋಡಿ-ಅನಿಲ ದ್ರವೀಕರಣ) ಮತ್ತು 269ಲಿ ಸೆಂ. ಅಥವಾ 1ಲಿ ಏ ತಾಪವನ್ನು ಉಂಟುಮಾಡಿದ. ಇಂಥ ಅಲ್ಪತಾಪದಲ್ಲಿ ಲೋಹಗಳ ಮೇಲೆ ಪ್ರಯೋಗಗಳನ್ನು ನಡೆಸಿ ಅತಿವಾಹಕತ್ವವನ್ನು ಕಂಡುಹಿಡಿದ.
==ಪ್ರಶಸ್ತಿಗಳು==
ಈ ರೀತಿ ಓನ್ಸ್‌ ನಡೆಸಿದ ಅತ್ಯುತ್ತಮ ಅಲ್ಪತಾಪ ಭೌತವಿಜ್ಞಾನದ ಪ್ರಯೋಗಗಳಿಗಾಗಿ ಮತ್ತು [[ಹೀಲಿಯಂ]] ಅನಿಲವನ್ನು ದ್ರವೀಕರಿಸಿದ್ದಕ್ಕಾಗಿ ಅವನಿಗೆ 1913ರಂದು ಭೌತವಿಜ್ಞಾನದ ನೊಬೆಲ್ ಪಾರಿತೋಷಕವನ್ನು ಕೊಡಲಾಯಿತು. ಓನ್ಸ್‌ ಭೌತವಿಜ್ಞಾನದ ವಿಷಯಗಳ ಮೇಲೆ ಅನೇಕ ಪುಸ್ತಕಗಳನ್ನು ಬರೆದಿದ್ದಾನೆ.
==ನಿಧನ==
1926 ಫೆಬ್ರವರಿ 21ನೆಯ ತಾರೀಖು ಲೈಡನ್ ನಗರದಲ್ಲಿ ಈತ ಅಸುನೀಗಿದ.
==ಉಲ್ಲೇಖಗಳು==
{{reflist}}
Line ೩೦ ⟶ ೩೯:
* [http://www.lorentz.leidenuniv.nl/history/KOL_archive/Communications/index.html Communications from the Kamerlingh Onnes Laboratory] (1885–1898).
* [http://ilorentz.org/history/KOL_archive/dissertations/KamerlinghOnnes.html Ph.D. students] of Kamerlingh Onnes (1885-1924).
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಮೆರ್ಲಿಂಗ್ ಓನ್ಸ್‌, ಹೈಕ್}}
{{Nobel Prize in Physics Laureates 1901-1925}}
 
[[ವರ್ಗ:ಭೌತಶಾಸ್ತ್ರದ ನೊಬೆಲ್ ಪುರಸ್ಕೃತರು]]