ಕಣ್ಣಾನೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
clean up, replaced: → (2) using AWB
೧ ನೇ ಸಾಲು:
'''ಕಣ್ಣಾನೂರು''' : [[ಕೇರಳ]] ರಾಜ್ಯದ ಒಂದು ಜಿಲ್ಲೆ (ಸು. ೭,೦೯೯ ಚ.ಕಿಮೀ) ಹಾಗೂ ಮುಖ್ಯಪಟ್ಟಣ. ಪಟ್ಟಣ ದಕ್ಷಿಣ ರೈಲುಮಾರ್ಗದ ಪಶ್ಚಿಮ ತೀರಪ್ರದೇಶದಲ್ಲಿದ್ದು ಮಂಗಳೂರಿನ ದಕ್ಷಿಣಕ್ಕೆ ಸು. ೧೩೧ ಚ. ಕಿಮೀ ದೂರದಲ್ಲಿದೆ. [[ಅರಬ್ಬೀ ಸಮುದ್ರ]]ದ ದಂಡೆಯಲ್ಲಿರುವ ಈ ನಗರಕ್ಕೆ ಒಂದು ಸಣ್ಣ ಬಂದರಿದೆ. ಇಲ್ಲಿಂದ ಹೊರದೇಶಗಳಿಗೆ ಕೊಬ್ಬರಿ ಹಾಗೂ ತೆಂಗಿನ ನಾರು ರಫ್ತಾಗುತ್ತದೆ. ಇಲ್ಲಿ ನೇಯುವ, ನೂಲುವ ಹಾಗೂ ಉಡುಪುಗಳನ್ನು ತಯಾರಿಸುವ ದೊಡ್ಡ ದೊಡ್ಡ ಕಾರ್ಖಾನೆಗಳಿವೆ.
 
ಈ ನಗರ ೧೨ ಮತ್ತು ೧೩ನೆಯ ಶತಮಾನಗಳಲ್ಲಿ ಪರ್ಷಿಯ ಮತ್ತು [[ಅರೇಬಿಯ]] ದೇಶಗಳೊಡನೆ ವ್ಯಾಪಾರ ಸಂಪರ್ಕವಿಟ್ಟುಕೊಂಡಿದ್ದಂಥ ಪ್ರಮುಖ ವಾಣಿಜ್ಯ ಕೇಂದ್ರವೆನಿಸಿತ್ತು. ಅದುವರೆಗೂ ದಕ್ಷಿಣ [[ಭಾರತ]]ದ ಸ್ವತಂತ್ರ ನಾಡಿನಲ್ಲಿದ್ದ ಈ ಸ್ಥಳ ೧೮ನೆಯ ಶತಮಾನದಲ್ಲಿ ಕಲ್ಲಿಕೋಟೆಯ ಕೊಲಾಟ್ಟರಿ ರಾಜನ ರಾಜಧಾನಿಯೆನಿಸಿತು.೧೪೯೮ರಲ್ಲಿ ವ್ಯಾಸ್ಕೊ ಡ ಗಾಮ ಇಲ್ಲಿಗೆ ಬಂದಿದ್ದ. ೧೫೦೫ರಲ್ಲಿ ಪೋರ್ಚುಗೀಸರು ಇಲ್ಲಿ ಒಂದು ಕೋಟೆಯನ್ನು ನಿರ್ಮಿಸಿದರು. ಈಗಿರುವ ಕೋಟೆ ಡಚ್ಚರಿಂದ ನಿರ್ಮಿತವಾಗಿದ್ದು [[೧೭೭೧]]ರಲ್ಲಿ ಅದನ್ನು ಆಲಿ ರಾಜನಿಗೆ ಮಾರಲಾಯಿತು. ೧೭೮೩ರಲ್ಲಿ ಇದು ಬ್ರಿಟಿಷರ ವಶವಾಗಿ ಈಸ್ಟ್‌ ಇಂಡಿಯ ಕಂಪನಿಯ ಆಡಳಿತಕ್ಕೆ ಒಳಪಟ್ಟಿತು. ಅಲ್ಲಿಂದ [[೧೮೮೭]]ರ ವರೆಗೂ ಬ್ರಿಟಿಷರ ಮಿಲಿಟರಿ ಠಾಣ್ಯವಾಗಿತ್ತು.
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಣ್ಣಾನೂರು|ಕಣ್ಣಾನೂರು}}
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಕೇರಳ]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಣ್ಣಾನೂರು|ಕಣ್ಣಾನೂರು}}
"https://kn.wikipedia.org/wiki/ಕಣ್ಣಾನೂರು" ಇಂದ ಪಡೆಯಲ್ಪಟ್ಟಿದೆ