ದಿಮಿತ್ರಿ ಮೆಂಡಲೀವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
clean up, replaced: → (29) using AWB
೨೪ ನೇ ಸಾಲು:
| signature = Mendelejew signature.jpg
}}
 
ದಿಮಿತ್ರಿ ಮೆಂಡಲೀವ್‍ರವರು [[ರಷ್ಯಾ]]ದ [[ರಸಾಯನಶಾಸ್ತ್ರ]]ಜ್ಞ. ಅವರು [[ಆವರ್ತ ಕೋಷ್ಟಕ]]ವನ್ನು ಕಂಡುಹಿಡಿದರು. ಅವರ [[ಜೀವನ]]ವನ್ನು [[ರಸಾಯನಶಾಸ್ತ್ರ]]ದ ಸಂಶೋಧನೆಗಾಗಿ ಮುಡುಪಾಗಿಟ್ಟರು.
 
==ಆರಂಭಿಕ ಜೀವನ ಮತ್ತು ಶಿಕ್ಷಣ==
 
ದಿಮಿತ್ರಿ ಮೆಂಡಲೀವ್‍ರವರು [[ರಷ್ಯಾ]]ದ [[ರಸಾಯನಶಾಸ್ತ್ರ]]ಜ್ಞ ಹಾಗು [[ಸಂಶೋಧಕ]]ರಾಗಿದ್ದರು. ಮೆಂಡಲೀವ್‍ರವರು ವರ್ಕ್‌ನಿ ಅರೆಂಜ಼ಾನಿ ಎಂಬ ಹಳ್ಳಿಯಲ್ಲಿ ಜನಿಸಿದರು. ಈ ಹಳ್ಳಿಯು ಸೈಬೇರಿಯಾದಲ್ಲಿದೆ. ಇವಾನ್ ಪಾವ್‍ಲೊವಿಚ್ ಮೆಂಡಲೀವ್ ಮತ್ತು ಮರಿಯ ದಿಮಿತ್ರಿ‍ಯಿವ್ನ ಮೆಂಡಲೀವ, ಮೆಂಡಲೀವ್‍ರವರ ಪೋಷಕರು. ಅವರ ತಾತ ಪಾವೆಲ್ ಮ್ಯಾಗ್ಸಿಮೊವಿಚ್ ಸೊಕೊಲೊವ್ ಟ್ವರ್ ಪ್ರದೇಶದಲ್ಲಿರುವ ರಷ್ಯನ್ ಧಾರ್ಮಿಕ [[ಚರ್ಚ್]]ನಲ್ಲಿ ಧರ್ಮಗುರುಗಳಾಗಿದ್ದರು<ref>{{cite-web|url=http://www.mendcomm.org/Mendeleev.aspx|title=ವೈಯಕ್ತಿಕ ಪರಿಚಯ}}</ref>. ಮೆಂಡಲೀವ್‍ರವರ ತಂದೆ ಇವಾನ್ ತಮ್ಮ ಸಹೋದರ, ಸಹೋದರಿಯರೊಂದಿಗೆ ಧಾರ್ಮಿಕ ಉಪನ್ಯಾಸಗಳಲ್ಲಿ ಭಾಗವಹಿಸುತ್ತಿದ್ದರಿಂದ ಅವರ ಕುಟುಂಬ ಎಲ್ಲರಿಗೂ ಚಿರಪರಿಚಿತವಾಗಿತ್ತು. ಮೆಂಡಲೀವ್‍ರವರನ್ನು ಅವರ ತಾಯಿ ಸಂಪ್ರದಾಯಸ್ತ ಕ್ರಿಶ್ಚಿಯನ್ ಆಗಿ ಬೆಳೆಸಿದರು. ಮೆಂಡಲೀವ್‍ರವರ ತಾಯಿ ಸಹನೆಯಿಂದ ದೈವತ್ವವನ್ನು ಹುಡುಕಲು ಹಾಗು ವೈಜ್ಞಾನಿಕ ಸತ್ಯವನ್ನು ತಿಳಿಯಲು ಪ್ರೋತ್ಸಾಹಿಸಿದರು. ನಂತರ ಮೆಂಡಲೀವ್ [[ಚರ್ಚ್]]ನಿಂದ ಹೊರನಡೆದರು.
 
ಮೆಂಡಲೀವ್‍ರವರು ಕಿರಿಯ ಪುತ್ರ. ಅವರಿಗಿಂತ ಹಿರಿಯ ಸಹೋದರ ಸಹೋದರಿಯರು ಎಷ್ಟು ಮಂದಿ ಎಂಬ ಮಾಹಿತಿ ಸರಿಯಾಗಿ ಲಭ್ಯವಿಲ್ಲ. ವಿವಿಧ ಮೂಲಗಳಿಂದ ಅವರಿಗೆ ೧೧, ೧೩, ೧೪ ಅಥವಾ ೧೭ ಸಹೋದರ ಸಹೋದರಿಯರಿದ್ದರೆಂದು ತಿಳಿದುಬರುತ್ತದೆ. ಇದರ ಬಗ್ಗೆ ನಿಕರವಾದ ಮಾಹಿತಿ ಲಭ್ಯವಿಲ್ಲ. ಮೆಂಡಲೀವ್‍ರವರ ತಂದೆ [[ಕಲೆ]], ರಾಜಕೀಯ ಹಾಗು [[ತತ್ವಶಾಸ್ತ್ರ]]ದ ಶಿಕ್ಷಕರಾಗಿದ್ದರು. ಅವರ ತಂದೆ ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ತಮ್ಮ ಕಣ್ಣುಗಳನ್ನು ದಾನಮಾಡಿದರು. ಆದುದರಿಂದ ತಮ್ಮ ಶಿಕ್ಷಕ ವೃತ್ತಿಯನ್ನು ಕಳೆದುಕೊಂಡರು. ಇದರಿಂದಾಗಿ ಅವರ ತಾಯಿ ಕೆಲಸ ಮಾಡಲೇಬೇಕಾದ ಪರಿಸ್ಥಿತಿ ಬಂತು. ಅವರ ತಾಯಿ ತಮ್ಮ ಗಾಜಿನ ಕಾರ್ಖಾನೆಯನ್ನು ಮತ್ತೆ ಪುನರಾರಂಭಿಸಿದರು. ಮೆಂಡಲೀವ್ ೧೩ನೇ ವಯಸ್ಸಿನಲ್ಲಿದ್ದಾಗ ತಮ್ಮ ತಂದೆಯನ್ನು ಕಳೆದುಕೊಂಡರು ಹಾಗು ಅವರ ತಾಯಿಯ ಗಾಜಿನ ಕಾರ್ಖಾನೆ ಬೆಂಕಿಯ ಅನಾಹುತದಿಂದ ನಿರ್ನಾಮವಾಯಿತು. ಮೆಂಡಲೀವ್‍ರವರು ಟೊಬೊಲ್ಸ್ಕ್‌ನಲ್ಲಿ ಜಿಮ್ನಾಯಿಸಮ್ ತರಬೇತಿಯಲ್ಲಿ ಭಾಗವಹಿಸಿದರು.
 
ಅವರ ಉನ್ನತ ವಿದ್ಯಾಭ್ಯಾಸಕ್ಕಾಗಿ ೧೮೪೯ರಲ್ಲಿ ಮೆಂಡಲೀವ್‍ರವರ ತಾಯಿ ಮೆಂಡಲೀವ್‍ರವರೊಡನೆ [[ರಷ್ಯಾ]]ದೆಲ್ಲೆಡೆ ಸಂಚರಿಸಿದರು. ಮಾಸ್ಕೊ‍ನ ವಿಶ್ವವಿದ್ಯಾನಿಲಯ ಮೆಂಡಲೀವ್‍ರವರ ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಲಿಲ್ಲ. ಬಡ ಮೆಂಡಲೀವ್‍ರವರ ಕುಟುಂಬ ಸೆಂಟ್ ಪೀಟರ್ಸ್‍ಬರ್ಗ್‍ಗೆ ಹಿಂತಿರುಗಿದರು. ಮೆಂಡಲೀವ್‍ರವರು ೧೮೫೦ರಲ್ಲಿ ಸೆಂಟ್ ಪೀಟರ್ಸ್‍ಬರ್ಗ್‍ನಲ್ಲಿರುವ ಮೆಯಿನ್ ಪೆಡಗಾಜಿಕಲ್ ಇನ್ಸ್‌ಸ್ಟಿಟ್ಯೂಟ್‍ನಲ್ಲಿ ಪ್ರವೇಶ ಪಡೆದರು. ಅವರ ಪದವಿ ನಂತರ ಅವರಿಗೆ ಟಿ.ಬಿ ಸೋಂಕು ತಗುಲಿತು. ಇದರಿಂದಾಗಿ ಕಪ್ಪುಸಾಗರದ ಉತ್ತರ ತೀರದಲ್ಲಿರುವ ಕ್ರಿಮಿಯನ್ ಪೆನಿನ್‍ಸುಲಗೆ ೧೮೫೫ರಲ್ಲಿ ಪ್ರಯಾಣ ಬೆಳೆಸಿದರು. ಅವರು ಅಲ್ಲಿರುವ ಸಿಮ್‍ಫೆರೋಪೊಲ್ ಜಿಮ್ನಾ‌ಯಿಸಮ್ ನಂ.೧ ರಲ್ಲಿ [[ವಿಜ್ಞಾನ]]ದಲ್ಲಿ ಪ್ರಾವಿಣ್ಯ ಹೊಂದಿದರು. ಅವರು ೧೮೫೭ರಲ್ಲಿ ಉತ್ತಮ ಆರೋಗ್ಯದೊಂದಿಗೆ ಸೆಂಟ್ ಪೀಟರ್ಸ್‌ಬರ್ಗ್‌ಗೆ ಮರಳಿದರು.
 
==ವೃತ್ತಿ ಜೀವನ==
[[File:Dmitri Ivanowitsh Mendeleev.jpg|right|thumb|ದಿಮಿತ್ರಿ ಮೆಂಡಲೀವ್]]
೧೮೫೯ ರಿಂದ ೧೮೬೧ರ ನಡುವೆ ಅವರು ಹೈಡೆಲ್‍ಬರ್ಗ್‌ನಲ್ಲಿ ದ್ರವ ಕ್ಯಪಿಲರಿಯನ್ನು ಹಾಗು ರೋಹಿತದ ಬಗ್ಗೆ ಅಧ್ಯಯನ ಮಾಡಿದರು. ೧೮೬೧ರ ಆಗಸ್ಟ್ ಅಂತ್ಯದಲ್ಲಿ ಅವರು ರೋಹಿತ ವಿಷಯದ ಮೇಲೆ ತಮ್ಮ ಮೊದಲ ಪುಸ್ತಕವನ್ನು ಬರೆದರು. ೪ನೇ ಏಪ್ರಿಲ್ ೧೮೬೨ರಲ್ಲಿ ಮೆಂಡಲೀವ್‍ರವರಿಗೆ ಫಿಯೊಜ಼್‌ವ ನಿಕಿಟಿಕ್ನ ಲೆಸ್ಚೇವ ಅವರೊಂದಿಗೆ ನಿಶ್ಚಿತಾರ್ಥವಾಯಿತು ಹಾಗು ಅವರು ೨೭ನೇ ಏಪ್ರಿಲ್ ೧೮೬೨ರಲ್ಲಿ ಸೆಂಟ್ ಪೀಟರ್ಸ್‌ಬರ್ಗ್‌ನ ನಿಕೋಲೇವ್ ಎಂಜಿನಿಯರಿಂಗ್ ಇನ್ಸ್‌ಸ್ಟಿಟ್ಯೂಟ್ [[ಚರ್ಚ್]]ನಲ್ಲಿ ವಿವಾಹವಾದರು. ೧೮೬೪ರಲ್ಲಿ ಮೆಂಡಲೀವ್‍ರವರು ಸೆಂಟ್ ಪೀಟರ್ಸ್‌ಬರ್ಗ್ ತಾಂತ್ರಿಕ ಇನ್ಸ್‌ಸ್ಟಿಟ್ಯೂಟ್‍ನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು ಹಾಗು ೧೮೬೫ರಲ್ಲಿ ಸೆಂಟ್ ಪೀಟರ್ಸ್‌ಬರ್ಗ್ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು.
 
೧೮೬೫ರಲ್ಲಿ [[ನೀರು|ನೀರಿನೊಂದಿಗೆ]] ಆಲ್ಕೋಹಾಲ್‍ನ ಸಮ್ಮಿಶ್ರಣದ ಕುರಿತು ಬರೆದ ಅವರ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರಕಿತು. ೧೮೬೭ರಲ್ಲಿ ಮೆಂಡಲೀವ್‍ರವರಿಗೆ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕಿತು. ೧೮೭೧ರಲ್ಲಿ ಸೆಂಟ್ ಪೀಟರ್ಸ್‌ಬರ್ಗ್‌ನ [[ರಸಾಯನಶಾಸ್ತ್ರ]] ವಿಭಾಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ರೀತಿಯಲ್ಲಿ ಮಾಡಿದರು. ಮೆಂಡಲೀವ್‍ರವರು ೧೮೭೬ರಲ್ಲಿ ಅನ್ನಾ ಇವನೋವ ಪೊಪೊವಾ ಅವರನ್ನು ಇಷ್ಟಪಟ್ಟರು. ೧೮೮೧ರಲ್ಲಿ ಆಕೆಯ ಬಳಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡರು ಹಾಗು ಆಕೆ ಒಪ್ಪಿಗೆ ಸೂಚಿಸಿಲ್ಲವಾದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು. ೧೮೮೨ರಲ್ಲಿ ಪೊಪೊವಾರವರನ್ನು ವಿವಾಹವಾದ ಒಂದು ತಿಂಗಳ ನಂತರ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದರು. ಅವರು ವಿಚ್ಛೇದನ ಪಡೆದ ನಂತರವೂ [[ರಷ್ಯಾ]]ದ ಧಾರ್ಮಿಕ [[ಚರ್ಚ್]]ನ ನಿಯಮಗಳ ಪ್ರಕಾರ ಏಳು ವರ್ಷಗಳ ಕಾಲ ದ್ವಿಪತ್ನಿತ್ವವನ್ನು ಹೊಂದಿರುತ್ತಾರೆ. ಮೆಂಡಲೀವ್‍ರವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದರೂ ಸಹ ಅವರ ವಿಚ್ಛೇದನ ಹಾಗು ಸ್ಥಳೀಯ ವಿವಾದಗಳಿಂದ ಅವರಿಗೆ ರಷ್ಯನ್ ಅಕಾಡೆಮಿ ಆಫ್ ಸೈನ್ಸ್‌ನಲ್ಲಿ ಪ್ರವೇಶ ದೊರಕಲಿಲ್ಲ. ಅವರ ಎರಡನೇ [[ಪತ್ನಿ|ಹೆಂಡತಿ]]ಯ ಮಗಳಾದ ಲಿಯುಬೊವ್, ಖ್ಯಾತ ರಷ್ಯನ್ ಕವಿಯಾದ ಅಲೆಕ್ಸಾಂಡರ್ ಬ್ಲಾಕ್‌ರವರನ್ನು ವಿವಾಹವಾದರು. ಅವರ ಮೊದಲ [[ಪತ್ನಿ|ಹೆಂಡತಿ]]ಗೆ ವ್ಲಾಡಿಮಿರ್ ಎಂಬ [[ಮಗ|ಪುತ್ರ]] ಹಾಗು ಓಲ್ಗಾ ಎಂಬ ಪುತ್ರಿ ಇದ್ದರು. ಅವರ ಎರಡನೇ [[ಪತ್ನಿ|ಹೆಂಡತಿ]]ಗೆ ಇವಾನ್ ಎಂಬ ಪುತ್ರ ಹಾಗು ಅವಳಿ ಜವಳಿ ಮಕ್ಕಳಿದ್ದರು.
 
ಯೂರೋಪಿನಾದ್ಯಂತ ಇರುವ ವಿಜ್ಞಾನ ಸಂಸ್ಥೆಗಳ ಪ್ರಶಂಸೆಗೆ ಮೆಂಡಲೀವ್‍ರವರು ಪಾತ್ರರಾಗಿದ್ದರು. ಅವರಿಗೆ ೧೮೮೨ರಲ್ಲಿ ರಾಯಲ್ ಸೊಸೈಟಿ ಆಫ್ ಲಂಡನ್ ನೀಡುವ ಡೇವಿ ಮೆಡಲ್<ref>{{cite-web|url=https://royalsociety.org/grants-schemes-awards/awards/davy-medal/|title=ರಾಯಲ್ ಸೊಸೈಟಿ ಆಫ್ ಲಂಡನ್ ನೀಡುವ ಡೇವಿ ಮೆಡಲ್}}</ref> ದೊರಕಿತು. ೧೭ ಆಗಸ್ಟ್ ೧೮೯೦ರಲ್ಲಿ ಅವರು ಸೆಂಟ್ ಪೀಟರ್ಸ್‌ಬರ್ಗ್ ವಿಶ್ವವಿದ್ಯಾನಿಲಯಕ್ಕೆ ರಾಜಿನಾಮೆ ನೀಡಿದರು. ೧೮೯೨ರಲ್ಲಿ ರಾಯಲ್ ಸೊಸೈಟಿಯ ವಿದೇಶ ಪ್ರತಿನಿಧಿಯಾಗಿ ಆಯ್ಕೆಯಾದರು.
 
೧೯೦೫ರಲ್ಲಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್‌ನ ಸದಸ್ಯರಾಗಿ ಮೆಂಡಲೀವ್‍ರವರು ಆಯ್ಕೆಯಾದರು. ಮೆಂಡಲೀವ್‍ರವರ ಆವರ್ತ ಕೋಷ್ಟಕದ ಕುರಿತ ಸಂಶೋಧನೆಗಾಗಿ ೧೯೦೬ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಸಮಿತಿಯು ಸ್ವೀಡಿಷ್ ಅಕಾಡೆಮಿಗೆ, [[ರಸಾಯನಶಾಸ್ತ್ರ]] ವಿಭಾಗದ [[ನೊಬೆಲ್ ಪ್ರಶಸ್ತಿ]] ನೀಡಲು ಶಿಫಾರಸು ಮಾಡಿತು. ಸ್ವೀಡಿಷ್ ಅಕಾಡೆಮಿಯ [[ರಸಾಯನಶಾಸ್ತ್ರ]] ವಿಭಾಗದವರು ಇದಕ್ಕೆ ಸಹಕರಿಸಿದರು. ಅಕಾಡೆಮಿಯ ಸದಸ್ಯರ ಒಮ್ಮತದಂದೆ ಒಬ್ಬರನ್ನು ಆಯ್ಕೆಮಾಡಲಾಗುತ್ತದೆ. ಸಮಿತಿಯ ಹಿರಿಯ ಸದಸ್ಯರಾದ ಪೀಟರ್ ಕ್ಲಾಸನ್, ಹೆನ್ರಿ ಮೊಯಿಸನ್‌ರವರನ್ನು ಶಿಫಾರಸು ಮಾಡುತ್ತಾರೆ. ಸ್ವಾಂಟೆ ಅರ್ರೇನಿಯಸ್, [[ರಸಾಯನಶಾಸ್ತ್ರ]]ದ ನೊಬಲ್ ಕಮಿಟಿಯ ಸದಸ್ಯರಾಗಿರದಿದ್ದರೂ, ಅಲ್ಲಿನ ಸದಸ್ಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅರ್ರೇನಿಯಸ್‌ರವರು ಆವರ್ತಕ ವ್ಯವಸ್ಥೆಯು ತುಂಬಾ ಹಳೆಯದೆಂದು ಹೇಳಿದ್ದರಿಂದ ಮೆಂಡಲೀವ್‍ರವರು ಪ್ರಶಸ್ತಿಯಿಂದ ವಂಚಿತರಾದರು. ಅರ್ರೇನಿಯಸ್‍ರವರ ವಿಘಟನೆಯ ಸಿದ್ಧಾಂತವನ್ನು ಮೆಂಡಲೀ‍ವ್‍ರವರು ಟೀಕಿಸಿದ್ದರಿಂದ ಅರ್ರೇನಿಯಸ್‍ರವರಿಗೆ ಮೆಂಡಲೀವ್‍ರವರ ಮೇಲೆ ದ್ವೇಷವಿತ್ತೆಂದು ಅವರ ಸಮಕಾಲಿನರು ಹೇಳುತ್ತಾರೆ<ref>{{cite-web|url=https://books.google.co.in/books?id=BXYiYM6WdGsC&pg=PA37&lpg=PA37&dq=arrhenius+mendeleev&source=bl&ots=wr9K8nTrhQ&sig=U52_j97wtNPkMdd_9YpOvbn9kjg&hl=en&sa=X&ved=0ahUKEwi2353PuKHJAhWme6YKHWWwBEkQ6AEIUTAM#v=onepage&q=arrhenius%20mendeleev&f=false|title=ಮೆಂಡಲೀವ್‍ರವರಿಗೆ ನೊಬೆಲ್ ಪ್ರಶಸ್ತಿ ಕೈ ತಪ್ಪಲು ಕಾರಣ}}</ref>. ಎಲ್ಲಾ ವಾದ ವಿವಾದಗಳ ನಂತರ ೧೯೦೬ರ [[ರಸಾಯನಶಾಸ್ತ್ರ]] ವಿಭಾಗದ [[ನೊಬೆಲ್ ಪ್ರಶಸ್ತಿ]]ಗೆ ಅಕಾಡೆಮಿಯ ಸದಸ್ಯರೆಲ್ಲಾ ಸೇರಿ ಮೊಯಿಸನ್‍ರವರನ್ನು ಆಯ್ಕೆ ಮಾಡಿದರು. ಪುನಃ ೧೯೦೭ರಲ್ಲಿ ಮೆಂಡಲೀವ್‍ರವರಿಗೆ ಪ್ರಶಸ್ತಿ ಕೈ ತಪ್ಪಿತು.
 
೧೯೦೭ರಲ್ಲಿ ಇನ್‍ಫ್ಲೂಯೆಂಜ಼ ಕಾಯಿಲೆಯಿಂದಾಗಿ ತಮ್ಮ ೭೨ನೇ ವಯಸ್ಸಿನಲ್ಲಿ ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಿಧನರಾದರು. ೧೦೧ ಪರಮಾಣು ಸಂಖ್ಯೆಯ 'ಮೆಂಡಲೀವಿಯಮ್' ಅನ್ನು ದಿಮಿತ್ರಿ ಮೆಂಡಲೀವ್‍ರವರ ಗೌರವಾರ್ಥ ಈ [[ಮೂಲಧಾತು]]ವಿಗೆ ನಾಮಕರಣ ಮಾಡಲಾಗಿದೆ.
 
==[[ಆವರ್ತ ಕೋಷ್ಟಕ]]<ref>{{cite-web|url=http://corrosion-doctors.org/Periodic/Periodic-Mendeleev.htm|title=ಮೆಂಡಲೀವ್‍ರವರ ಆವರ್ತ ಕೋಷ್ಟಕ}}</ref>==
[[File:Mendelejevs periodiska system 1871.png|thumb|right|ಮೆಂಡಲೀವ್‍ರವರ [[ಆವರ್ತ ಕೋಷ್ಟಕ]]]]
[[File:Periodic table monument.jpg|thumb|right|ಸ್ಲೊವಾಕಿಯದಲ್ಲಿ ಮೆಂಡಲೀವ್ ಮತ್ತು ಅವರ ಆವರ್ತ ಕೋಷ್ಟಕದ ಗೌರವಾರ್ತ ನಿರ್ಮಿಸಿರುವ ಪ್ರತಿಮೆ]]
೧೮೬೩ರಲ್ಲಿ ೫೬ ಪರಿಚಿತ [[ಮೂಲಧಾತು]]ಗಳಿದ್ದವು. ಇತರ ವಿಜ್ಞಾನಿಗಳು ಮೊದಲೇ ಕೆಲವು [[ಮೂಲಧಾತು]]ಗಳ ಆವರ್ತ‍ನವನ್ನು ಗುರುತಿಸಿದ್ದರು. ಜಾನ್ ನ್ಯೂಲೆಂಡ್ ತಮ್ಮ 'ಲಾ ಆಫ್ ಆಕ್ಟೇವ್‍'ನಲ್ಲಿ<ref>{{cite-web|url=http://gradestack.com/CBSE-Class-10th-Course/Periodic-Classification/Newlands-Law-of-Octaves/15027-2998-4596-study-wtw|title=ಜಾನ್ ನ್ಯೂಲೆಂಡ್‍ರ 'ಲಾ ಆಫ್ ಆಕ್ಟೇವ್}}</ref> ಆವರ್ತ‍ನವು ಪರಮಾಣು ತೂಕಕ್ಕೆ ಸಂಬಂಧಿಸಿದೆ ಎಂದು ೧೮೬೪ರಲ್ಲಿ ಪ್ರಸ್ತಾಪಿಸಿದರು ಹಾಗು ಇದನ್ನು ೧೮೬೫ರಲ್ಲಿ ಪ್ರಕಟಿಸಿದರು. ಇವರ ಈ 'ಲಾ ಆಫ್ ಆಕ್ಟೇವ್‍'ನಿಂದಾಗಿ ಹೊಸ [[ಮೂಲಧಾತು]]ವಾದ ಜರ್ಮೇನಿಯಮ್‍ನ ಗುಣಗಳನ್ನು ತಿಳಿಯಲು ಸಾಧ್ಯವಾಯಿತು. ೧೮೮೭ರವರೆಗೂ ಇವರ ಈ ಪರಿಕಲ್ಪನೆಯನ್ನು ಕೆಮಿಸ್ಟ್ಸ್ ಸೊಸೈಟಿಯು ಪರಿಗಣಿಸಲಿಲ್ಲ ಹಾಗು ಟೀಕಿಸಿದರು. ಇನ್ನೊಬ್ಬ ವ್ಯಕ್ತಿ ಲೋಥರ್ ಮೆಯೆರ್ ೧೮೬೪ರಲ್ಲಿ ಆವರ್ತ ಕೋಷ್ಟಕದ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಿಸಿದರು. ಅವರು ತಮ್ಮ ಬರವಣಿಗೆಯಲ್ಲಿ ೨೮ [[ಮೂಲಧಾತು]]ಗಳನ್ನು ಅದರ ವೆಲೆನ್ಸಿಯಾನುಸಾರ ವಿಂಗಡಿಸಿದರು. ಆದರೆ ಅದರಲ್ಲಿ ಯಾವುದೇ ಹೊಸ [[ಮೂಲಧಾತು]]ಗಳ ಪರಿಚಯವಿರಲಿಲ್ಲ.
 
ಶಿಕ್ಷಕರಾದ ನಂತರ ಮೆಂಡಲೀವ್‍ರವರು ಪ್ರಿನ್ಸಿಪಲ್ಸ್ ಆಫ್ ಕೆಮಿಸ್ಟ್ರಿ (ಎರಡು ಸಂಪುಟಗಳು ೧೮೬೮-೧೮೭೦) ಎಂಬ ಪುಸ್ತಕವನ್ನು ಬರೆದರು. ಮೆಂಡಲೀವ್‍ರವರು ತಮ್ಮ ಆವರ್ತ ಕೋಷ್ಟಕದಲ್ಲಿ [[ಮೂಲಧಾತು]]ಗಳನ್ನು ಅದರ ರಸಾಯನಿಕ ಗುಣಲಕ್ಷಣಗಳ ಪ್ರಕಾರ ವಿಂಗಡಿಸಲು ತೀರ್ಮಾನಿಸಿದರು.
 
ಈ ಮಾದರಿಯಲ್ಲಿ ಹೆಚ್ಚುವರಿ [[ಮೂಲಧಾತು]]ಗಳನ್ನು ಸೇರಿಸುವ ಮೂಲಕ ಮೆಂಡಲೀವ್‍ರವರು [[ಆವರ್ತ ಕೋಷ್ಟಕ]]ದಲ್ಲಿ ಅವರ ವಿಸ್ತೃತ ಆವೃತ್ತಿಯನ್ನು ಅಭಿವೃದ್ಧಿಪಡಿಸಿದರು. ೬ ಮಾರ್ಚ್ ೧೮೬೯ರಲ್ಲಿ ಮೆಂಡಲೀವ್‍ರವರು [[ಮೂಲಧಾತು]]ಗಳನ್ನು ಅದರ ಪರಮಾಣು ತೂಕ ಮತ್ತು ವೆಲೆನ್ಸಿಯಾನುಸಾರ ವಿಂಗಡಿಸಬಹುದೆಂದು ರಷ್ಯನ್ ಕೆಮಿಕಲ್ ಸೊಸೈಟಿಯಲ್ಲಿ ಪ್ರಸ್ತುತ ಪಡಿಸಿದರು.
 
ಇದರಲ್ಲಿನ ಕೆಲವು ಮುಖ್ಯ ಅಂಶಗಳೆಂದರೆ,
 
* [[ಮೂಲಧಾತು]]ಗಳನ್ನು ಅದರ ಪರಮಾಣು ತೂಕದ ಪ್ರಕಾರ ವಿಂಗಡಿಸಿದರೆ ಅವು ಒಂದು ಸ್ಪಷ್ಟ ಆವರ್ತನವನ್ನು ಪ್ರದರ್ಶಿಸುತ್ತದೆ.
 
* ರಸಾಯನಿಕ ಗುಣಲಕ್ಷಣಗಳಲ್ಲಿ ಹೋಲಿಕೆ ಇರುವ [[ಮೂಲಧಾತು]]ಗಳ ಪರಮಾಣು ತೂಕ ಸುಮಾರು ಒಂದೇ ರೀತಿಯಲ್ಲಿ ಇರುತ್ತದೆ (ಉದಾ:Pt, Ir, Os) ಅಥವಾ ನಿಯಮಿತವಾಗಿ ಹೆಚ್ಚಿರುತ್ತದೆ (ಉದಾ:K, Rb, Cs).
 
* [[ಮೂಲಧಾತು]]ಗಳನ್ನು ಅದರ ಪರಮಾಣು ತೂಕದ ಪ್ರಕಾರ ವಿಂಗಡಿಸಿದರೆ, [[ಮೂಲಧಾತು]]ಗಳ ಪರಮಾಣು ತೂಕ, ವೆಲೆನ್ಸಿಗೆ ಅನುರೂಪವಾಗಿರುತ್ತದೆ ಹಾಗು ಸ್ವಲ್ಪ ಮಟ್ಟಿಗೆ ಅದರ ರಸಾಯನಿಕ ಗುಣಲಕ್ಷಣಗಳಲ್ಲಿ ಹೋಲಿಕೆ ಇರುತ್ತದೆ. ಇದನ್ನು ನಾವು Li, Be, B, C, N, O ಮತ್ತು F ಸರಣಿಯಲ್ಲಿ ಕಾಣಬಹುದು. ಅತ್ಯಂತ ವ್ಯಾಪಕವಾಗಿ ಹರಡಿರುವ [[ಮೂಲಧಾತು]] ಸಣ್ಣ ಪರಮಾಣು ತೂಕ ಹೊಂದಿರುತ್ತದೆ.
 
* ಪರಮಾಣು ತೂಕ [[ಮೂಲಧಾತು]]ವಿನ ಪಾತ್ರವನ್ನು ನಿರ್ಧರಿಸುತ್ತದೆ.
 
* ಆಲ್ಯೂಮಿನಿಯಂ<ref>{{cite-web|url=http://www.rsc.org/periodic-table/element/13/aluminium|title=ಆಲ್ಯೂಮಿನಿಯಂ ಬಗ್ಗೆ ಮಾಹಿತಿ}}</ref> ಮತ್ತು ಸಿಲಿಕಾನ್‍ಗೆ ಹೋಲಿಕೆಯಾಗುವ, ಪರಮಾಣು ತೂಕ ೬೫ ಮತ್ತು ೭೫ ರ ನಡುವೆ ಬರುವ ಒಂದು [[ಮೂಲಧಾತು]]ವಿನ ಆವಿಷ್ಕಾರಕ್ಕಾಗಿ ನಾವು ನಿರೀಕ್ಷಿಸಬಹುದು.
 
* ಕೆಲವು [[ಮೂಲಧಾತು]]ಗಳ ವಿಶಿಷ್ಟ ಗುಣಗಳನ್ನು ಅವುಗಳ ಪರಮಾಣು ತೂಕದಿಂದ ವಿವರಿಸಬಹುದು.
 
==ಇತರ ಸಾಧನೆಗಳು==
[[File:Mendeleyev gold Barry Kent.JPG|thumb|right|ಮೆಂಡಲೀವ್ ಪದಕ]]
ಮೆಂಡಲೀವ್‍ರವರು [[ರಸಾಯನಶಾಸ್ತ್ರ]]ಕ್ಕೆ ಇನ್ನೂ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. [[ರಷ್ಯಾ]]ದ [[ರಸಾಯನಶಾಸ್ತ್ರ]]ಜ್ಞ ಹಾಗು [[ವಿಜ್ಞಾನ]] ಇತಿಹಾಸಗಾರರಾದ ಲೆವ್ ಚುಗೇವ್, ಮೆಂಡಲೀವ್‍ರವರನ್ನು "[[ರಸಾಯನಶಾಸ್ತ್ರ]]ದ ಮೇಧಾವಿಯೆಂದು, ಉತ್ತಮ [[ಭೌತಶಾಸ್ತ್ರ]]ಜ್ಞನೆಂದು, ದ್ರವಗಳ ಚಲನೆ, ಹವಾಮಾನ, ಭೂವಿಜ್ಞಾನ ಇನ್ನೂ ಹಲವು ಕ್ಷೇತ್ರಗಳ (ಉದಾ: ಸ್ಪೋಟಕಗಳು, ಪೆಟ್ರೋಲಿಯಂ, ಇಂಧನಗಳು, ಇತ್ಯಾದಿ) ಉತ್ತಮ ಸಂಶೋಧಕನೆಂದು, [[ರಸಾಯನಶಾಸ್ತ್ರ]] ಉದ್ಯಮದ ನಿಪುಣನೆಂದು ಹಾಗು ಆರ್ಥಿಕ ಕ್ಷೇತ್ರದ ಮೂಲಚಿಂತಕನೆಂದು" ಹೇಳುತ್ತಾರೆ. ಮೆಂಡಲೀವ್‍ರವರು ೧೮೬೯ರ ರಷ್ಯನ್ ಕೆಮಿಕಲ್ ಸೊಸೈಟಿಯ ಸಂಸ್ಥಾಪಕರಾಗಿದ್ದರು. ಅವರು ರಕ್ಷಣಾತ್ಮಕ ವ್ಯಾಪಾರದ ಹಾಗು ಕೃಷಿ ಕೆಲಸದ ಸಿದ್ಧಾಂತ ಮತ್ತು ಆಚರಣೆಯ ಮೇಲೆ ಸಂಶೋಧನೆ ನಡೆಸಿದರು.
 
ಈಥರ್‍ನ ರಸಾಯನಿಕ ಸಂಶೋಧನೆಯ ಒಂದು ಪ್ರಯತ್ನದಲ್ಲಿ ಅವರು ಹೈಡ್ರೋಜನ್‍‍ಗಿಂತ<ref>{{cite-web|url=http://www.rsc.org/periodic-table/element/1/hydrogen|title=ಹೈಡ್ರೋಜನ್ ಬಗ್ಗೆ ಮಾಹಿತಿ}}</ref> ಕಡಿಮೆ ಪರಮಾಣು ತೂಕದ ಎರಡು ಜಡ ರಸಾಯನಿಕ ಅಂಶಗಳ [[ಮೂಲಧಾತು]]ಗಳು ಅಸ್ತಿತ್ವದಲ್ಲಿದೆ ಎಂಬ ಕಲ್ಪನೆಯನ್ನು ಮುಂದಿಟ್ಟರು. ಆ ಎರಡು [[ಮೂಲಧಾತು]]ಗಳಲ್ಲಿ ಹಗುರವಾಗಿರುವ [[ಮೂಲಧಾತು]] ಎಲ್ಲ ಸೂಕ್ಷ್ಮಗ್ರಾಹಿ, ಎಲ್ಲಾ ವ್ಯಾಪಕ [[ಅನಿಲ]]ಗಳಲ್ಲಿ ಆದು ಹೋಗುವುದೆಂದು ಹಾಗು ಸ್ವಲ್ಪ ಭಾರವಾದ [[ಮೂಲಧಾತು]] ಕೊರೋನಿಯಮ್ ಎಂದು ಭಾವಿಸುತ್ತಾರೆ.
 
ಭೌತ ರಸಾಯನ [[ವಿಜ್ಞಾನ]] ವಿಭಾಗದಲ್ಲಿ ಅವರು ಶಾಖದ ಜೊತೆ ದ್ರವದ ವಿಸ್ತರಣೆಯ ಕುರಿತು ತನಿಖೆ ಮಾಡಿದರು ಹಾಗು 'ಗೇ-ಲುಸ್ಯಾಕ್ ಲಾ'ನ<ref>{{cite-web|url=http://study.com/academy/lesson/gay-lussacs-law-gas-pressure-and-temperature-relationship.html|title=ಗೇ-ಲುಸ್ಯಾಕ್ ಲಾ}}</ref> [[ಅನಿಲ]] ವಿಸ್ತರಣೆಗೆ ಹೋಲುವಂತೆ ಒಂದು ಸೂತ್ರವನ್ನು ರೂಪಿಸಿದರು.
 
ಮೆಂಡಲೀವ್‍ರವರು [[ರಷ್ಯಾ]]ದ ಸಾಮ್ರಾಜ್ಯಕ್ಕೆ ಮೆಟ್ರಿಕ್ ವ್ಯವಸ್ಥೆಯನ್ನು ಪರಿಚಯಿಸಿದರು.
 
ನೈಟ್ರೋಸೆಲ್ಯುಲೋಸ್ ಆಧರಿತ ಒಂದು ಹೊಗೆರಹಿತ ಪುಡಿಯಾದ ಪೈರೊಕೊಲೋಡಿಯನ್ ಅನ್ನು ಮೆಂಡಲೀವ್‍ರವರು ಕಂಡುಹಿಡಿದರು. ಈ ಕೆಲಸವನ್ನು [[ರಷ್ಯಾ]]ದ ನೌಕಾಪಡೆ ಮೆಂಡಲೀವ್‍ರವರಿಗೆ ವಹಿಸಿತ್ತು. ಆದರೆ ನೌಕಾಪಡೆ ಪೈರೊಕೊಲೋಡಿಯನ್ ಅನ್ನು ಬಳಸಲೇ ಇಲ್ಲ. ೧೮೯೨ರಲ್ಲಿ ಪೈರೊಕೊಲೋಡಿಯನ್ ಅನ್ನು ಉತ್ಪಾದಿಸಿದರು.
 
ಮೆಂಡಲೀವ್‍ರವರು ಪೆಟ್ರೋಲಿಯಂ ಮೂಲವನ್ನು ಅಧ್ಯಯನ ಮಾಡಿದರು ಹಾಗು ಅವರು ಹೈಡ್ರೋಕಾರ್ಬ‍ನ್‍ಗಳು ಅಬಿಯೊಜೆನಿಕ್ ಹಾಗು ಅಬಿಯೊಜೆನಿಕ್ ಪೆಟ್ರೋಲಿಯಂನ ಮೂಲ [[ಭೂಮಿ]]ಯೊಳಗಿನ ಆಳದಲ್ಲಿ ಎಂಬ ತೀರ್ಮಾನಕ್ಕೆ ಬರುತ್ತಾರೆ. ಮೆಂಡಲೀವ್‍ರವರು ಪೆಟ್ರೋಲಿಯಂ [[ಭೂಮಿ]]ಯ ಆಳದಲ್ಲಿ ಜನಿಸಿದೆ ಹಾಗು ನಾವು ಅದರ ಮೂಲವನ್ನು ಅಲ್ಲಿ ಮಾತ್ರ ಹುಡುಕಲು ಸಾಧ್ಯವೆಂದು ಬರೆಯುತ್ತಾರೆ.
 
==ಹೊರಗಿನ ಸಂಪರ್ಕಗಳು==
* http://www.famousscientists.org/dmitri-mendeleev/
Line ೯೩ ⟶ ೬೬:
* http://www.chem.msu.su/eng/misc/mendeleev/welcome.html
* http://www.chem.msu.su/eng/misc/mendeleev/welcome.html
 
==ಉಲ್ಲೇಖಗಳು==