ಜಯದೇವಿತಾಯಿ ಲಿಗಾಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
ಚು clean up, replaced: → using AWB
೯ ನೇ ಸಾಲು:
}}
 
'''ಜಯದೇವಿತಾಯಿ ಲಿಗಾಡೆ''' -[[ಕನ್ನಡ|ಕನ್ನಡದ]] ಹಾಗು[[ ಮರಾಠಿ]] ಭಾಷೆಯ ಸಾಹಿತಿಗಳು, ಆಧ್ಯಾತ್ಮ ಚಿಂತನಕಾರರು. ಕುಟುಂಬವತ್ಸಲೆ, ಸಾಹಿತ್ಯಸಾಧಕಿ, ಸಮಾಜಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮತಾಯಿ ತಾಯ್ನುಡಿಯ ಸೇವೆಗಾಗಿ ಶ್ರಮಿಸಿ ದವರು. ಕನ್ನಡ ನುಡಿಗೆ, ಕನ್ನಡ ನಾಡಿಗೆ ತನ್ನನ್ನು ಅರ್ಪಿಸಿಕೊಂಡು ಅಜರಾಮರ ಕೀರ್ತಿಪಾತ್ರರಾದ ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರ ಜೀವನ ದರ್ಶನವೆಂದರೆ ಅದೊಂದು ಯಶೋಗಾಥೆ. ಹೆಣ್ಣುಮಕ್ಕಳ ಕುರಿತಾದ ಕಾಳಜಿ ಅವರಿಗೆ ಸಹಜವಾಗಿ ರಕ್ತಗತವಾಗಿತ್ತು. ಜಯದೇವಿತಾಯಿ ಲಿಗಾಡೆ ಅವರೆಂದರೆ ಧವಳವಸ್ತ್ರದ ನಿರಾಡಂಬರ ವೇಷ, ಗಂಭೀರ ವರ್ಚಸ್ಸು, ಅಸ್ಖಲಿತವಾಗಿ ರೂಪುಗೊಂಡ ಒಬ್ಬ ತಪಸ್ವಿನಿಯ ಚಿತ್ರ ಕಣ್ಮುಂದೆ ನಿಂತಂತಾಗುತ್ತದೆ.
 
==ಜನನ, ಜೀವನ==
೧೬ ನೇ ಸಾಲು:
* ಮಡಕಿ ಚೆನ್ನಬಸಪ್ಪನವರದು ವೈಭವದ ಶ್ರೀಮಂತ ಜೀವನವಾದರೂ ಮಗಳದು ನಿರಾಡಂಬರ ಜೀವನ. ಸೊಲ್ಲಾಪುರದಲ್ಲಿ ಕನ್ನಡ ಶಾಲೆಗಳು ಇರಲಿಲ್ಲವಾದ್ದರಿಂದ ಮರಾಠಿ ಶಾಲೆಯಲ್ಲಿ ಓದಬೇಕಾಯಿತು. ಆದರೆ ಮನೆಯಲ್ಲಿ ತಾಯಿಯ ಕೀರ್ತನೆ, ಬಡಜನ ಸೇವೆ ಮತ್ತು ಶರಣಭಾವದ ಭಕ್ತಿಶ್ರದ್ಧೆಗಳಲ್ಲಿ ಜಯದೇವಿ ಕನ್ನಡದ ಹೃದ್ಭಾವ ಮತ್ತು ಸಾಂಸ್ಕೃತಿಕ ಮನೋಭಾವಗಳನ್ನು ಮೈಗೂಡಿಸಿಕೊಂಡರು.
*ಜಯದೇವಿಯವರ ಮದುವೆ ಅವರಿಗೆ ಹದಿನಾಲ್ಕು ವರ್ಷ ವಯಸ್ಸಾಗಿದ್ದಾಗ ಹದಿನಾರು ವರ್ಷದ ಮದುಮಗನೊಂದಿಗೆ ವೈಭವದಿಂದ ನಡೆಯಿತು. ಮದುವೆಯಾಗಿ ಗಂಡನ ಮನೆಗೆ ಹೋದಾಗ ಗಂಡನಮನೆ ಹಲವು ಹಿಂಸೆ ಸಂಕೋಲೆಗಳ ಸೆರೆಯಂತಿತ್ತು. ಆದರೆ ಜಯದೇವಿಯವರ ಸಹನ ಶೀಲತೆ – ಶಾಂತಸ್ವಭಾವಗಳು ಮನೆಯವರನ್ನು ಗೆಲ್ಲುತ್ತಾ ಬಂದವು. ಮರಾಠಿಯಲ್ಲಿ ಆರನೆಯ ವರ್ಗದವರೆಗೆ ಕಲಿತಿದ್ದ ಜಯದೇವಿಯವರು ಇಬ್ಬರು ಮಕ್ಕಳಾದ ನಂತರ ಕನ್ನಡ ಕಲಿತು ವಚನಸಾಹಿತ್ಯವನ್ನು ಅಧ್ಯಯನ ಮಾಡಿದರು.
* ಮುಂದೆ ಅದೇ ಅವರ ಸಾಹಿತ್ಯ ರಚನೆಗೆ ದಾರಿದೀಪವಾಯಿತು. ಮನೆಯವರ ಪ್ರೋತ್ಸಾಹದಿಂದ ವೀರಶೈವ ಮಹಾಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ ಅನೇಕ ಸಲ ಅಧ್ಯಕ್ಷೆಯೂ ಆಗಿದ್ದರು. ದಾಂಪತ್ಯವು ಐದು ಮಕ್ಕಳಿಂದ ಮಧುರವಾಯಿತು. ದೇಶಪ್ರೇಮ, ಶರಣನಿಷ್ಠೆ, ಗಾಂಧೀವಾದಗಳು ಅವರ ಬದುಕಿನ ಹೆಗ್ಗುರಿಗಳಾದವು. ಸೊಲ್ಲಾಪುರದ ಸಿದ್ದರಾಮೇಶ್ವರನ ಗುಡಿಗೆ ಹೋಗಿ ಬಂದ ಮೇಲೆಯೇ ಅವರ ಊಟ. ಎಷ್ಟು ತಡವಾದರೂ ಸರಿ. ಆಕಸ್ಮಿಕವಾಗಿ [[೧೯೪೬]]ರಲ್ಲಿ ಅವರು ತಮ್ಮ ಪತಿಯನ್ನು ಕಳೆದುಕೊಂಡರು.
 
==ಎಲ್ಲರಿಗೂ ತಾಯಿಯಾದ ಜಯದೇವಿ==
೩೮ ನೇ ಸಾಲು:
*ಕನ್ನಡಿಗರು ಎಲ್ಲಾ ರೀತಿಯಲ್ಲೂ ಹೆಚ್ಚಾಗಿದ್ದಾರೆ ಎಂದು ಸರ್ವವೇದ್ಯವಾಗಿದ್ದರೂ ಸೊಲ್ಲಾಪುರ ಕರ್ನಾಟಕಕ್ಕೇ ಸೇರಬೇಕೆಂಬ ಜಯದೇವಿ ತಾಯಿಯವರ ನಿರಂತರ ಯತ್ನಗಳು ಮರಾಠಿಗರ ಕುತಂತ್ರದಿಂದ ಮತ್ತು ಕನ್ನಡಿಗರ ನಿಷ್ಕ್ರಿಯತೆಯಿಂದ ಫಲಕೊಡಲಿಲ್ಲ. ಈ ಕಾಯಕ್ಕಾಗಿ ಅವರು ಎಲ್ಲಾ ಮಂತ್ರಿಗಳು, ಕಡೆಗೆ ಇಂದಿರಾಗಾಂಧಿಯವರನ್ನು ಭೇಟಿ ಮಾಡಿ ಮಹಾಜನ ಆಯೋಗದ ಶಿಫಾರಸ್ಸು ಅನ್ವಯಿಸಿ ಸೊಲ್ಲಾಪುರ ಕರ್ನಾಟಕದ ಭಾಗವಾಗಬೇಕೆಂದು ಮನವಿಸಲ್ಲಿಸಿ ಅವರಿಂದ ಆಶ್ವಾಸನೆ ಪಡೆದುಕೊಂಡರೂ ಕನ್ನಡದ ಮಂತ್ರಿಗಳ ಮತ್ತು ಶಾಸಕರ ಔದಾಸೀನ್ಯ ಅದನ್ನು ಆಗಗೊಡ ಲಿಲ್ಲ.
*ಹೈದರಾಬಾದ್ ಪ್ರಾಂತ್ಯದ ಅನೇಕ ಭಾಗಗಳಲ್ಲಿ ಕನ್ನಡಿಗರು ವಲಸೆಹೊಗಿದ್ದರು. ಅವರೆಲ್ಲರಿಗೆ ಬೆಂಬಲವಾಗಿ ಕನ್ನಡತನವನ್ನು ಅಲ್ಲಿ ಉಳಿಸಿದರು, ಅಲ್ಲಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದರು. ಸ್ವಯಂಸೇವಾ ಶಿಕ್ಷಕರನ್ನು ಕಳಿಸಿದರು. ಆಗಿನ ಮುಖ್ಯಮಂತ್ರಿಗಳು ‘ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರೇ ಸಿಗುವುದಿಲ್ಲ’ ಎಂಬ ಕಾರಣ ಮುಂದೊಡಿದಾಗ ತಾಯಿಯವರು ಸ್ವಂತ ಖರ್ಚಿನಿಂದ ನಾಲ್ಕುನೂರು ಜನ ಶಿಕ್ಷಕರನ್ನು ನೇಮಿಸಿದ್ದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ.
==ಅಪರೂಪವಾದ ಸಾಧನೆ==
ಒಬ್ಬಳು ಹೆಣ್ಣುಮಗಳು, ಒಂದು ಜೀವಮಾನದಲ್ಲಿ ಅದೂ ತನ್ನ ಇತಿಮಿತಿಗಳಲ್ಲಿ ಇಷ್ಟೊಂದು ಬಗೆಯ ಸಾಧನೆಗಳನ್ನು ಸಾಧಿಸಿದ್ದು ಇತಿಹಾಸದಲ್ಲೇ ಅಪರೂಪವೆನ್ನಬಹುದು. ಅವರ ಶ್ರಮಕ್ಕೆ ತಕ್ಕ ಫಲವನ್ನು ಅವರು ಕಾಣಲಿಲ್ಲ. ಯಾವ ಅಧಿಕಾರವನ್ನೂ ಬಯಸಲಿಲ್ಲ. ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯಲಿಲ್ಲ. ನಾಡಿಗಾಗಿ – ನುಡಿಗಾಗಿ – ಮಹಿಳೆಯರಿಗಾಗಿ – ಕಾರ್ಮಿಕರಿಗಾಗಿ – ಅಸ್ಪೃಶ್ಯರಿಗಾಗಿ ಮಾಡಿದ ಅವರ ಸೇವೆ – ಚಿಂತನೆಗಳು ಸ್ಮರಣೀಯವಾಗಿವೆ. ತಾಯಿಯವರು ಜುಲೈ ೨೫, ೧೯೮೬ರಲ್ಲಿ ನಿಧನರಾದರು.
 
==ಸಾಹಿತ್ಯ ರಚನೆ==
Line ೮೧ ⟶ ೮೦:
ಶೀಲದ ಮರ್ಮವ ತಿಳಿಸಿ ಸಲವು ಸಿದ್ಧರಾಮ.
</poem>
ಇಲ್ಲಿ ತಾಯಿಯವರ ಅಂತರಾಳದ ಆರ್ತಭಕ್ತಿಯ ಪರಾಕಾಷ್ಟೆಯನ್ನು ಕಾಣಬಹುದಾಗಿದೆ.
 
೧೯೮೬ರಲ್ಲಿ ‘ಸಾವಿರದ ಪದಗಳು’ ಸಂಕಲನದ ರೂಪದಲ್ಲಿ ಪ್ರಕಟಗೊಂಡಿದೆ. ತಾಯಿಯವರು ರಚಿಸಿದ ನಾಲ್ಕುಸಾವಿರ ಪದ್ಯಗಳಲ್ಲಿ ಸಾವಿರ ಪದ್ಯಗಳನ್ನು ಆಯ್ಕೆ ಮಾಡಿಕೊಂಡು ಈ ಸಂಕಲನವನ್ನು ರೂಪಿಸಲಾಗಿದೆ. ಇಲ್ಲಿ ದೈವದ ಕುರಿತಾಗಿ ಭಕ್ತಿಗೀತೆಗಳು, ಶಿವಶರಣ-ಶರಣೆಯಾರ ಕುರಿತು ಭಾವಗೌರವ ನುಡಿಗಳು ಮತ್ತು ಶ್ರೇಷ್ಠ ಜೀವಿಗಳ ಪುಣ್ಯಸ್ಮರಣೆಗಳು ಹೀಗೆ ಮೂರುವಿಧದಲ್ಲಿ ಇದು ಮುಪ್ಪುಗೊಂಡಿದೆ. ಶಿವಶರಣ – ಶರಣೆಯರ ಬಗ್ಗೆ ಹೇಳುವಾಗ ಬಸವಣ್ಣನವರಿಗೆ ಯಾವಾಗಲೂ ತಾಯಿಯವರು ಪ್ರಥಮ ಸ್ಥಾನ ನೀಡಿದ್ದಾರೆ.
Line ೧೨೦ ⟶ ೧೧೯:
ಕಲಿಸಿರಿ ಮತ್ತೆ ನುಡಿಸಿರಿ’.
</poem>
ಎಂದು ತಮ್ಮ ವಿನೀತಭಾವವನ್ನೇ ಮೆರೆದಿದ್ದರೂ ಶ್ರೀ ಸಿದ್ಧರಾಮ ಪುರಾಣವು ಕನ್ನಡದ ಅಪರೂಪ ಕೃತಿಗಳಲ್ಲಿ ಒಂದು ಎಂಬುದರಲ್ಲಿ ಅನುಮಾನವಿಲ್ಲ.
 
==ಹಿರಿಯರ ಪ್ರಶಂಸೆ==
# ಡಾ. ವಿ.ಕೃ. ಗೋಕಾಕರು ಈ ಕೃತಿಯನ್ನು ಕುರಿತು “ಮಹಿಳಾ ಹೃದಯದ ರಸಾನುಭವ ತನ್ನ ಸಂಪತ್ತನ್ನೆಲ್ಲಾ ಈ ಕೃತಿಯಲ್ಲಿ ಸೂರೆಮಾಡಿಕೊಂಡಿದೆ. ಹಿಂದೆ ಅನಾಮಧೇಯವಾಗಿ ತನ್ನ ದುಃಖ ಸುಖ, ಭಕ್ತಿಗಳನ್ನು ಜಾನಪದ ತ್ರಿಪದಿಯಲಿ ತೋಡಿಕೊಂಡ ತಾಯಿಯ ಹೃದಯ ಇಂದು ಪ್ರಜ್ಞಾಪೂರ್ವಕವಾಗಿ ಅದೇ ಸೊಗಸಿನ ಹಾಡನ್ನು ಹಾಡಿದೆ. ಜಯದೇವಿ ತಾಯಿಯವರ ಈ ಕೃತಿ ಘನವಾದುದು. ಅದಕ್ಕೂ ಘನತರವಾಗಿ ಹಿಂದೆ ಚಾರಿತ್ರ್ಯ ನಿಂತಿದೆ” ಎಂದಿದ್ದಾರೆ.
# ಡಾ. ಜಿ. ಪಿ. ರಾಜರತ್ನಂ ಅವರು “ತಾಯಿ ಜಯದೇವಿಯವರು ಹತ್ತು ವರ್ಷಗಳ ತಪಸ್ಸಿನಿಂದ ಆರುನೂರು ಪುಟಗಳ ಈ ಬೃಹತ್ ಕೃತಿಯನ್ನು ರಚಿಸಿದ್ದಾರೆ. ಇಂಥ ಕಾವ್ಯಗಳಲ್ಲಿ ಮೊದಲನೆಯದು ಮಾಸ್ತಿಯವರ ‘ನವರಾತ್ರಿ’, ಎರಡನೆಯದು ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’, ಮೂರನೆಯದು ‘ಶ್ರೀ ಸಿದ್ಧರಾಮ ಪುರಾಣ’, ಕವಯತ್ರಿ ಸೊಲ್ಲಾಪುರದ ಕನ್ನಡ ಕೋಟೆಯ ತಾಯಿ ಜಯದೇವಿ, ಇವರು ಸಂಚಿಯ ಹೊನ್ನಮ್ಮನ ನಂತರ ಕಾವ್ಯರಚನೆಯಲ್ಲಿ ಯಶಸ್ಸು ಸಾಧಿಸಿದವರು. ಇನ್ನೂ ಒಂದು ವಿಶೇಷವೆಂದರೆ ಸರ್ವಜ್ಞ ಕವಿಯ ತ್ರಿಪದಿ ಛಂದಸ್ಸಿನಲ್ಲಿ ನಾಲ್ಕು ಸಾವಿರ ಪದ್ಯಗಳ ಮಹಾಕಾವ್ಯ ರಚಿಸಿದವರು ಎಂಬುದರಲ್ಲಿ ಸಂದೇಹವಿಲ್ಲ” ಎಂದು ಮನಸಾರೆ ಮೆಚ್ಚಿಕೊಂಡಾಡಿದ್ದಾರೆ.
 
==ವಿವಿಧ ಕ್ಷೇತ್ರಗಳಲ್ಲಿ ಸೇವೆ==
Line ೧೩೪ ⟶ ೧೩೩:
# ಸಾಕ್ಷರತಾ ಮಂಡಲಿ,
# ಕರ್ನಾಟಕದ ವಿದ್ಯಾವರ್ಧಕ ಸಂಘ,
# ವಿಶ್ವವಿದ್ಯಾಲಯಗಳಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಕ್ರಿಯಾಶೀಲರಾಗಿದ್ದರು.
 
==ಪ್ರಶಸ್ತಿ ಗೌರವಗಳು==
Line ೧೪೦ ⟶ ೧೩೯:
# ೧೯೭೪ರಲ್ಲಿ ಮಂಡ್ಯದಲ್ಲಿ ನಡೆಸಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,
# ಕರ್ನಾಟಕದ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನದ ಅಧ್ಯಕ್ಷತೆ,
# ಕರ್ನಾಟ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿ ಮೊದಲಾದ ಪ್ರಶಸ್ತಿ ಗೌರವಗಳು ತಾಯಿಯವರಿಗೆ ಸಂದಿವೆ.
 
==ಮಾಹಿತಿ ಕೃಪೆ==
ಶಶಿಕಲಾ ವೀರಯ್ಯಸ್ವಾಮಿ ಅವರ ಡಾ. ಜಯದೇವಿತಾಯಿ ಲಿಗಾಡೆ ಅವರ ಕುರಿತ 'ಸಾಲು ದೀಪಗಳು' ಕೃತಿಯಲ್ಲಿ ಬರಹ.
 
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ: ಸಮಾಜ ಸೇವಕರು]]
[[ವರ್ಗ: ಸಮಾಜ ಸೇವಕಿಯರು]]
[[ವರ್ಗ:ಸಾಹಿತಿಗಳು|ಜಯದೇವಿತಾಯಿ ಲಿಗಾಡೆ]]
[[Categoryವರ್ಗ:ಲೇಖಕಿಯರು|ಜಯದೇವಿತಾಯಿ ಲಿಗಾಡೆ]]
[[ವರ್ಗ:೧೯೧೨ ಜನನ]]
[[ವರ್ಗ:೧೯೮೯ ನಿಧನ]]