ಕ್ವಾಂಟಮ್ ಮೆಕ್ಯಾನಿಕ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯ ನೇ ಸಾಲು:
ಒಂದು ವಸ್ತುವು ತನ್ನ ಆಂತರಿಕ ಶಕ್ತಿಯಿಂದಾಗಿ ತನ್ನ ಮೇಲ್ಮೈಯಿಂದ ಹೊರಸೂಸುವ ವಿದ್ಯುದಯಸ್ಕಾಂತೀಯ ವಿಕಿರಣವನ್ನು ಉಷ್ಣದ ವಿಕಿರಣವೆನ್ನುತ್ತಾರೆ. ಒಂದು ವಸ್ತುವನ್ನು ಸಾಕಷ್ಟು ಬಿಸಿಮಾಡಿದಾಗ ಅದು ವಿದ್ಯುದಯಸ್ಕಾಂತೀಯ ರೋಹಿತದ ಕೆಂಪು ಭಾಗದ ಕಡೆಯಿಂದ ಬೆಳಕನ್ನು ಹೊರಸೂಸುತ್ತದೆ. ಆಗ ಅದು ಕೆಂಪಾಗಿ ಕಾಣುತ್ತದೆ. ಅದನ್ನು ಮತ್ತೂ ಕಾಯಿಸಿದರೆ ಅದು ಕೆಂಪು ಬಣ್ಣದಿಂದ ಹಳದಿ, ಬಿಳಿ ಮತ್ತು ನೀಲಿ ಬಣ್ಣಗಳಿಗೆ ಬದಲಾಗುತ್ತದೆ. ಏಕೆಂದರೆ ಹೆಚ್ಚು ಹೆಚ್ಚು ಕಾಯಿಸಿದಾಗ ಅದು ಕಡಿಮೆ ತರಂಗಾಂತರದ (ಹೆಚ್ಚಿನ ಕಂಪನಾಂಕದ) ಬೆಳಕನ್ನು ಹೊರಸೂಸುತ್ತದೆ.
ಒಂದು ಪರಿಪೂರ್ಣವಾದ ಸೂಸುಗವು (ಉತ್ಸರ್ಜಕ) ಒಂದು ಪರಿಪೂರ್ಣ ಹೀರುಕವೂ ಆಗಿರುತ್ತದೆ. ಆ ವಸ್ತುವು ತಣ್ಣಗಿರುವಾಗ ಅದರ ಮೇಲ್ಮೈಗೆ ಬಿದ್ದ ಎಲ್ಲಾ ಬೆಳಕನ್ನೂ ಅದು ಹೀರುತ್ತದೆ. ಇದರಿಂದಾಗಿ ಅದು ಸಂಪೂರ್ಣ ಕಪ್ಪಗೆ ಕಾಣುತ್ತದೆ. ಆದ್ದರಿಂದ ಅದನ್ನು “[[ಕಪ್ಪುಕಾಯ]]([[:w:Black Body|Black Body]])” ಎನ್ನುತ್ತಾರೆ. ಮತ್ತು ಅದು ಹೊರಸೂಸುವ ವಿಕಿರಣವನ್ನು “[[ಕಪ್ಪುಕಾಯ ವಿಕಿರಣ]]” ಎಂದೂ ಕರೆಯುತ್ತಾರೆ.
೧೯ನೇ ಶತಮಾನದ ಉತ್ತರಾರ್ಧದಲ್ಲಿ ಉಷ್ಣತೆ ಮತ್ತು ಬೆಳಕಿನ ಸಂಬಂಧವನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಯನ್ನು ವಿಜ್ಞಾನಿಗಳು ಆರಂಭಿಸಿದರು. ೧೮೫೯ರಲ್ಲಿ [[ಗುಸ್ತಾವ್ ಕಿರ್ಚಾಫನು]] ಜರ್ಮನಿಯ ಹೈಡಲ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ತನ್ನ ಸಂಶೋಧನೆಗೋಸ್ಕರ ಒಂದು “ಕಪ್ಪುಕಾಯ”ವೆಂಬ ಪರಿಕಲ್ಪನೆಯನ್ನು ಮೊದಲ ಬಾರಿಗೆ ಹುಟ್ಟುಹಾಕಿದನು.<ref>ಕುಮಾರ್, ಮಂಜಿತ್; ಕ್ವಾಂಟಮ್ (Quantum). ISBN 978-93-80143-10-1</ref> ತರುವಾಯ ಇತರ ವಿಜ್ಞಾನಿಗಳಿಗೆ ಉಷ್ಣತೆ-ಬೆಳಕಿನ ಸಂಬಂಧವನ್ನರಿಯಲು ಈ ಪರಿಕಲ್ಪನೆ ಬಹಳ ಸಹಾಯಮಾಡಿತು. ಹಾಗೂ ೧೯ನೇ ಶತಮಾನದ ಕೊನೆಯ ಹೊತ್ತಿಗೆ ತಾಪಮಾನ ಮತ್ತು ಬೆಳಕಿನ ಸಂಬಂಧವನ್ನು ಪ್ರಾಯೋಗಿಕವಾಗಿ ತೋರಿಸಲಾಗಿತ್ತು.
ಆದರೆ ಅಭಿಜಾತ ಭೌತಶಾಸ್ತ್ರವು ಈ ಸಂಬಂಧವು ಹೀಗೇಕೆ ಎಂದು ವಿವರಿಸಲು ಅಸಮರ್ಥವಾಗಿತ್ತು. ಇದನ್ನು ಬಗೆಹರಿಸುವಲ್ಲಿ ಮೊದಲು ಯಶಸ್ವಿಯಾದ ಪರಿಕಲ್ಪನೆಯನ್ನು [[ಮ್ಯಾಕ್ಸ್ ಪ್ಲಾಂಕನು]] ೧೯೦೦ರಲ್ಲಿ ಮುಂದಿಟ್ಟನು. ಅವನು ಒಂದು ಗಣಿತೀಯವಾದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದನು. ಇದರ ಪ್ರಕಾರ ಉಷ್ಣತಾ ವಿಕಿರಣವು ಸಂಗತ ಆಂದೋಲಕಗಳೊಡನೆ ([[:w:Harmonic oscillator|Harmonic oscillators]]) ಸಮತೋಲನದಲ್ಲಿರುತ್ತದೆ. ತನ್ನ ಪ್ರಯೋಗಗಳ ಫಲಿತಾಂಶವನ್ನು ಗಣಿತೀಯವಾಗಿ ಮರು ಉತ್ಪಾದಿಸಲು ಒಂದು ಪ್ರಮುಖವಾದ ಊಹೆಯನ್ನು ಅವನು ಮಾಡಬೇಕಾಯಿತು:
ಪ್ರತಿಯೊಂದು ಆಂದೋಲಕವು ಉತ್ಪಾದಿಸುವ ಶಕ್ತಿಯು ಅದರ ಮೂಲ ಆವೃತ್ತಿಯಲ್ಲಿರುವ ಶಕ್ತಿಯ ಇಡಿಯ ಘಟಕಗಳಾಗಿರುತ್ತದೆ. ಅದು ಹೊರಸೂಸುವ ಶಕ್ತಿಯು ಮನಸ್ವಿಯಾದ ಮೊತ್ತವಾಗಿರಲು ಸಾಧ್ಯವಿಲ್ಲ. ಅಂದರೆ ಆಂದೋಲಕದ ಶಕ್ತಿಯು ಘಟಕೀಕರಣಗೊಂಡಿದೆ ಅಥವಾ ಕ್ವಾಂಟೀಕರಣಗೊಂಡಿದೆ. ಆಂದೋಲಕದ ಶಕ್ತಿಯ ಪ್ರತಿ ಘಟಕವು (ಕ್ವಾಂಟಮ್) ಅದರ ಮೂಲ ಆವೃತ್ತಿಯ ಅನುಪಾತದಲ್ಲಿರುತ್ತದೆ. ಮತ್ತು ಈ ಅನುಪಾತದ ನಿಯತಾಂಕವನ್ನು “[[ಪ್ಲಾಂಕನ ನಿಯತಾಂಕ]]”ವೆಂದು ಕರೆಯುತ್ತಾರೆ. ಪ್ಲಾಂಕನ ಈ ನಿಯಮವೇ ಮೊದಲನೆ ಕ್ವಾಂಟಮ್ ಸಿದ್ಧಾಂತ. ಅವನ ಈ ಸಂಶೋಧನೆಗೆ ೧೯೧೮ರಲ್ಲಿ [[ನೊಬೆಲ್ ಪ್ರಶಸ್ತಿ|ನೊಬೆಲ್ ಪಾರಿತೋಷಕ]]ವನ್ನು ಕೊಡಲಾಯಿತು.