ನರವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ.
ಚು ತಿದ್ದುಪಡಿ.
೩೪ ನೇ ಸಾಲು:
=== ಸಾಮಾನ್ಯ ಪ್ರಕರಣಗಳ ಹೊರೆ ===
 
ಮೇಲೆ ಹೇಳಿರುವ ಎಲ್ಲ ಪರಿಸ್ಥಿತಿಗಳಲ್ಲೂ, ರೋಗದ ಪತ್ತೆ, ಅದಕ್ಕೆ ಚಿಕಿತ್ಸೆ ಹಾಗು ನಿರ್ವಹಣೆಯ ಎಲ್ಲ ಜವಾಬ್ದಾರಿಯು ನರವಿಜ್ಞಾನಿಗಳ ಮೇಲಿರುತ್ತದೆ.ಶಸ್ತ್ರಚಿಕಿತ್ಸೆಯ ಅಗತ್ಯ ಕಂಡು ಬಂದಾಗ, ನರವಿಜ್ಞಾನಿಗಳು ರೋಗಿಯನ್ನು [[ನ್ಯೂರೊಸರ್ಜನ್]](ನರಶಸ್ತ್ರಚಿಕಿತ್ಸಾ ತಜ್ಞ) ಬಳಿ ಕಳುಹಿಸಬಹುದು. ಕೆಲವು ದೇಶಗಳಲ್ಲಿ, ನರವಿಜ್ಞಾನಿಗಳು ಹೆಚ್ಚಿನ ಕಾನೂನು ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇದರಲ್ಲಿ[[ರೋಗಿಯು]]ಇದರಲ್ಲಿರೋಗಿಯು [[ನಿಧನ]] ಹೊಂದಿರಬಹುದೆಂದು ಅನುಮಾನ ವ್ಯಕ್ತವಾದಾಗ ಅವನಿಗೆ[[ ಮಿದುಳು ನಿಷ್ಕ್ರಿಯ ಸಾವು]]ಸಂಭವಿಸಿದೆಯೇಸಾವುಸಂಭವಿಸಿದೆಯೇ ಎಂಬುದನ್ನು ಪತ್ತೆಹಚ್ಚುವ ಕೆಲಸ ನರವಿಜ್ಞಾನಿಗಳದ್ದಾಗಿರುತ್ತದೆ. ನರವಿಜ್ಞಾನಿಗಳು ಸಾಧಾರಣವಾಗಿ ಆನುವಂಶಿಕ ([[ವಂಶ]]ಪಾರಂಪರಿಕ) ಕಾಯಿಲೆಗಳನ್ನು ಹೊಂದಿರುವ ಜನರಲ್ಲಿ ಪ್ರಮುಖ ನರವೈಜ್ಞಾನಿಕ ಲಕ್ಷಣಗಳು ಕಂಡುಬಂದರೆ ಅಂತಹವರ ಬಗ್ಗೆ ಅತ್ಯಂತ ಕಾಳಜಿ ವಹಿಸುತ್ತಾರೆ, ಇದೊಂದು ಸಾಮಾನ್ಯವಾದ ರೋಗಸ್ಥಿತಿ. ಸಾಧಾರಣವಾಗಿ [[ನರವಿಜ್ಞಾನಿಗಳು]] [[ಲಂಬರ್ ಪಂಕ್ಚರ್]](ಕಟಿರಂಧ್ರ ಚಿಕಿತ್ಸೆ)ನ್ನು ನಡೆಸುತ್ತಾರೆ. ಕೆಲವು ನರವಿಜ್ಞಾನಿಗಳು ನಿರ್ದಿಷ್ಟವಾದ ಉಪವಿಭಾಗಗಳಲ್ಲಿ ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಬಹುದು, ಉದಾಹರಣೆಗೆ [[ಡಿಮೆನ್ಷಿಅ]] (ಬುದ್ದಿಮಾಂದ್ಯತೆ), [[ಚಲನೆಯ ಅವ್ಯವಸ್ಥೆಗಳು]], [[ತಲೆನೋವುಗಳು]], [[ಎಪಿಲೆಪ್ಸಿ]](ಅಪಸ್ಮಾರ), [[ನಿದ್ರಾಹೀನತೆ]], ತೀವ್ರ [[ನೋವಿನ]] ನಿರ್ವಹಣೆ, [[ಮಲ್ಟಿಪಲ್ ಸ್ಕ್ಲೆರೋಸಿಸ್]] (ಪಾರ್ಶ್ವವಾಯು ಹಾಗು ದೋಷಯುಕ್ತ ಮಾತಿಗೆ ಎಡೆ ಮಾಡಿಕೊಡುವ ದೀರ್ಘಕಾಲೀನ ನರಸಂಬಂಧಿ ಕಾಯಿಲೆ) ಅಥವಾ [[ನ್ಯೂರೊಮಸ್ಕ್ಯುಲರ್]] (ನರಸ್ನಾಯುಕ) ಕಾಯಿಲೆಗಳು.
 
=== ಅತಿವ್ಯಾಪಿಸಿದ ಕ್ಷೇತ್ರಗಳು ===
ಇತರ ವಿಶೇಷ ವಿಭಾಗಗಳೊಂದಿಗೆ ಇದು ಅತಿವ್ಯಾಪಿಸಿಕೊಂಡಿದೆ. ಇದು ದೇಶದಿಂದ ದೇಶಕ್ಕೆ ಹಾಗು ಸ್ಥಳೀಯ ಭೌಗೋಳಿಕ ಪ್ರದೇಶದೊಳಗೂ ಸಹ ಅತಿವ್ಯಾಪನೆಯು ಬದಲಾವಣೆ ಹೊಂದುತ್ತವೆ. ತೀವ್ರವಾದ [[ತಲೆ ನೋವಿಗೆ]] ಸಾಮಾನ್ಯವಾಗಿ [[ನರ ಶಸ್ತ್ರಚಿಕಿತ್ಸಾ ತಜ್ಞ]]ರು ಚಿಕಿತ್ಸೆ ನೀಡುತ್ತಾರೆ, ಆದರೆ ತಲೆಗುಂಟಾದ ಪೆಟ್ಟಿನ [[ಸಿಕ್ವೀಲ]](ರೋಗಲಕ್ಷಣ ಸ್ಥಿತಿ)ವನ್ನು ನರವಿಜ್ಞಾನಿಗಳು ಅಥವಾ [[ರೀಹ್ಯಾಬಿಲಿಟೆಶನ್ ಔಷಧಶಾಸ್ತ್ರದಲ್ಲಿ ಪರಿಣತಿಯನ್ನು ಹೊಂದಿರುವ ವೈದ್ಯರು]] ಚಿಕಿತ್ಸೆ ನೀಡುತ್ತಾರೆ. ಆದಾಗ್ಯೂ, ಪಾರ್ಶ್ವವಾಯುವನ್ನು ಸಾಂಪ್ರದಾಯಿಕವಾಗಿ ಆಂತರಿಕ ಔಷಧಶಾಸ್ತ್ರದಿಂದ ಅಥವಾ ಆಸ್ಪತ್ರೆ ವೈದ್ಯರು ನಿರ್ವಹಿಸುತ್ತಾರೆ. ರಕ್ತನಾಳಗಳ ನರವಿಜ್ಞಾನ ಹಾಗು [[ಇಂಟರ್‌ವೆನ್ಷನಲ್ ನರವಿಜ್ಞಾನಿ]]ಗಳು ಹುಟ್ಟಿಕೊಂಡ ಮೇಲೆ ಪಾರ್ಶ್ವವಾಯು ತಜ್ಞರಿಗೆ ಬೇಡಿಕೆ ಸೃಷ್ಟಿಯಾಗಿದೆ. [[JCAHO]] ಪ್ರಮಾಣೀಕೃತ ಪಾರ್ಶ್ವವಾಯು ಕೇಂದ್ರಗಳ ಸ್ಥಾಪನೆಯಿಂದ ಪ್ರಾಥಮಿಕ ಹಾಗು ತೃತೀಯ ಶ್ರೇಣಿಯ ಆಸ್ಪತ್ರೆಗಳಲ್ಲಿ ಪಾರ್ಶ್ವವಾಯುವಿಗೆ ಚಿಕಿತ್ಸೆ ನೀಡುವಲ್ಲಿ ನರವಿಜ್ಞಾನಿಗಳ ಪಾತ್ರವೂ ಹೆಚ್ಚಾಗಿದೆ. ಕೆಲವು ಸಂದರ್ಭಗಳಲ್ಲಿ ನರಮಂಡಲ ವ್ಯವಸ್ಥೆಯ [[ಸೋಂಕಿನ ಕಾಯಿಲೆ]]ಗಳಿಗೆ ಚಿಕಿತ್ಸೆಯನ್ನು ತಜ್ಞರು ನೀಡುತ್ತಾರೆ. [[ತಲೆ ನೋವಿಗೆ]] ಹಲವಾರು ಸಂದರ್ಭಗಳಲ್ಲಿ, ತೀವ್ರವಲ್ಲದ ಪರಿಸ್ಥಿತಿಯಲ್ಲಿ [[ಸಾಮಾನ್ಯ ವೈದ್ಯರು]] ರೋಗವನ್ನು ಪತ್ತೆಹಚ್ಚಿ, ಸೂಕ್ತವಾದ ಚಿಕಿತ್ಸೆಯನ್ನು ಪ್ರಾಥಮಿಕವಾಗಿ ನೀಡುತ್ತಾರೆ. ಇದೇ ರೀತಿಯಾಗಿ, ಹಲವು ಸಂದರ್ಭಗಳಲ್ಲಿ [[ಸೈಆಟಿಕ]] ಸೊಂಟದ-ನರದ ನೋವು ಹಾಗು ಇತರ ಯಾಂತ್ರಿಕ ಬೆನ್ನುಮೂಳೆಯ ನರದ ನೋವುಗಳಿಗೆ ಸಾಮಾನ್ಯ ವೈದ್ಯರು ಚಿಕಿತ್ಸೆ ನೀಡುತ್ತಾರೆ, ಆದಾಗ್ಯೂ ಅವರನ್ನು ನರವಿಜ್ಞಾನಿಗಳು ಅಥವಾ ಒಬ್ಬ ಶಸ್ತ್ರಚಿಕಿತ್ಸಕ ಎಂದು ಕರೆಯಲಾಗುತ್ತದೆ (ನರಶಸ್ತ್ರಚಿಕಿತ್ಸಾ ತಜ್ಞ ಅಥವಾ [[ಮೂಳೆತಜ್ಞ]]).[[ನಿದ್ರಾಹೀನತೆ]]ಗೆ [[ಪಲ್ಮನೋಲಜಿಸ್ಟ್]](ಶ್ವಾಸಕೋಶ ರೋಗಗಳ ತಜ್ಞರು) ಗಳು ಚಿಕಿತ್ಸೆ ನೀಡುತ್ತಾರೆ. [[ಮಿದುಳು ಲಕ್ವ]]ಗೆ ಪ್ರಾರಂಭಿಕ ಹಂತದಲ್ಲಿ [[ಮಕ್ಕಳ ತಜ್ಞ]]ರು ಚಿಕಿತ್ಸೆ ನೀಡುತ್ತಾರೆ, ಆದರೆ ರೋಗಿಯು ಒಂದು ನಿಶ್ಚಿತವಾದ ವಯಸ್ಸನ್ನು ತಲುಪಿದಾಗ ಚಿಕಿತ್ಸೆಯನ್ನು ವಯಸ್ಕರಿಗೆ ಚಿಕಿತ್ಸೆ ನೀಡುವ ಒಬ್ಬ ನರವಿಜ್ಞಾನಿ ನೀಡುತ್ತಾನೆ. ಯುನೈಟೆಡ್ ಕಿಂಗ್ಡಮ್ ಹಾಗು ಇತರ ದೇಶಗಳಲ್ಲಿ, ವಯಸ್ಸಾದ ರೋಗಿಗಳು ಎದುರಿಸುವ ಪಾರ್ಕಿನ್ಸನ್ ಕಾಯಿಲೆ,ಪಾರ್ಶ್ವವಾಯು,ಬುದ್ಧಿಮಾಂದ್ಯತೆ ಅಥವಾ ನಡಗೆಯ ದೋಷಗಳು ಸೇರಿದಂತೆ ಚಲನೆಯ ಅವ್ಯವಸ್ಥೆಗಳನ್ನು [[ವೃದ್ಧರೋಗ್ಯಶಾಸ್ತ್ರ]] ದಲ್ಲಿ ಪರಿಣತಿ ಪಡೆದ ವೈದ್ಯರು ಚಿಕಿತ್ಸೆ ನೀಡುತ್ತಾರೆ.[[ಪ್ರಾಯೋಗಿಕ ನ್ಯೂರೋಸೈಕೊಲಜಿಸ್ಟ್]] ಗಳಿಗೆ ಸಾಮಾನ್ಯವಾಗಿ [[ಮಿದುಳಿನ]]-[[ನಡವಳಿಕೆ]]ಯ ಸಂಬಂಧಗಳನ್ನು [[ನಿರ್ಧರಿಸಲು]] ಕರೆ ನೀಡಲಾಗುತ್ತದೆ. ಇದು [[ರೋಗ ಲಕ್ಷಣಗಳ ವ್ಯತ್ಯಾಸ]], [[ರೀಹ್ಯಾಬಿಲಿಟೆಶನ್]] ಕಾರ್ಯತಂತ್ರಗಳ ಯೋಜನೆ, [[ಅರಿಯುವ ಪ್ರಕ್ರಿಯೆ]]ಯಲ್ಲಿರುವ ಬಲ ಹಾಗು ದುರ್ಬಲತೆಯನ್ನು ದಾಖಲೆಮಾಡುವುದು ಹಾಗು ಸಮಯ ಕಳೆದಂತೆ ರೋಗಿಗಳಲ್ಲಾಗುವ ಬದಲಾವಣೆಯನ್ನು ಅಂದಾಜಿಸುವುದ್ದಕ್ಕೆ ಸಹಾಯ ಮಾಡುತ್ತದೆ (ಉದಾಹರಣೆಗೆ, ಅಪಸಾಮಾನ್ಯ [[ವಯಸ್ಸನ್ನು]] ಗುರುತಿಸುವುದು ಅಥವಾ [[ಡಿಮೆನ್ಷಿಅ]](ಬುದ್ಧಿಮಾಂದ್ಯತೆ)ಯ ಪ್ರಗತಿಯನ್ನು ಪತ್ತೆ ಹಚ್ಚುವುದು).
"https://kn.wikipedia.org/wiki/ನರವಿಜ್ಞಾನ" ಇಂದ ಪಡೆಯಲ್ಪಟ್ಟಿದೆ