ನರವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ.
ಚು ತಿದ್ದುಪಡಿ.
೨೩ ನೇ ಸಾಲು:
== ವಿದ್ಯಾರ್ಹತೆ ==
ಯುನೈಟೆಡ್ ಸ್ಟೇಟ್ಸ್ ([[:w:USA|USA]]) ಹಾಗೂ ಕೆನಡಾ([[:w:Canada|Canada]])ದಲ್ಲಿ ವೈದ್ಯರು, ವೈದ್ಯಕೀಯ ಕಾಲೇಜಿನಿಂದ ಪದವಿಯನ್ನು ಪಡೆದ ನಂತರ ನರವಿಜ್ಞಾನದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಮುಗಿಸಿದ ನಂತರ ನರವಿಜ್ಞಾನಿಗಳು ಎನಿಸಿಕೊಳ್ಳುತ್ತಾರೆ.
ನರವಿಜ್ಞಾನಿಗಳು ಸರಿಸುಮಾರು ೧೨ ವರ್ಷಗಳ ಕಾಲೇಜು ವಿದ್ಯಾಭ್ಯಾಸ ಹಾಗು ಪ್ರಾಯೋಗಿಕ ತರಬೇತಿಯನ್ನು ಮುಗಿಸಿರುತ್ತಾರೆ. ಈ ತರಬೇತಿಯು ನಾಲ್ಕು-ವರ್ಷಗಳ ಪದವಿಪೂರ್ವ ಶಿಕ್ಷಣ ಮತ್ತು ನಾಲ್ಕು ವರ್ಷಗಳ ವೈದ್ಯಕೀಯ ಶಿಕ್ಷಣ ಹಾಗು ನಂತರ ನರವಿಜ್ಞಾನದಲ್ಲಿ ಮೂರು ಅಥವಾ ನಾಲ್ಕು ವರ್ಷಗಳ ತಜ್ಞ ವೈದ್ಯಕೀಯ ತರಬೇತಿಯನ್ನು ಒಳಗೊಂಡಿದೆ. ನಾಲ್ಕು ವರ್ಷಗಳ ತಜ್ಞ ವೈದ್ಯಕೀಯ ತರಬೇತಿಯು ಒಂದು ವರ್ಷದ ಆಂತರಿಕ ವೈದ್ಯಕೀಯ ತರಬೇತಿ ಹಾಗೂ ನರವಿಜ್ಞಾನದಲ್ಲಿ ಮೂರು ವರ್ಷಗಳ ತರಬೇತಿಯ ಅವಧಿ ಸೇರಿದೆ. ಇಚ್ಛೆ ಪಟ್ಟಲ್ಲಿ ನರವಿಜ್ಞಾನದ ತಜ್ಞ ವೈದ್ಯಕೀಯ ತರಬೇತಿಯ ನಂತರ ಒಂದು ಅಥವಾ ಎರಡು ವರ್ಷದ ಸ್ನಾತಕೋತ್ತರ ವಿದ್ಯಾರ್ಥಿವೇತನವನ್ನು ಪಡೆಯಬಹುದು. ಹಲವು ನರವಿಜ್ಞಾನಿಗಳು,ಪಾರ್ಶ್ವವಾಯು ಅಥವಾ ರಕ್ತನಾಳಗಳ ನರವಿಜ್ಞಾನ, ಇಂಟರ್‌‌ವೆನ್ಶನಲ್ ನ್ಯೂರಾಲಜಿ([[:w:interventional neurology|interventional neurology]], ಎಪಿಲೆಪ್ಸಿ (ಅಪಸ್ಮಾರ)([[:w:epilepsy|epilepsy]]), ನ್ಯೂರೊಮಸ್ಕ್ಯೂಲರ್(ನರಸ್ನಾಯುಕ)([[:w:neuromuscular|neuromuscular]]) , ನ್ಯೂರೊ ರೀಹ್ಯಾಬಿಲಿಟೇಷನ್(ಹಾನಿಗೊಂಡ ನರವ್ಯವಸ್ಥೆಗೆ ಚಿಕಿತ್ಸೆ), ನಡವಳಿಕೆ ನರವಿಜ್ಞಾನ, ನಿದ್ರೆ ಔಷಧಿಗಳು, ನೋವು ನಿರ್ವಹಣೆ, ನರಗಳ ರೋಗನಿರೋಧಕ ಶಾಸ್ತ್ರ, ಕ್ಲಿನಿಕಲ್ ನರಶರೀರವಿಜ್ಞಾನ, ಅಥವಾ ಚಲನೆ ಅಸ್ವಸ್ಥತೆಗಳು ಮುಂತಾದ ನರವಿಜ್ಞಾನದ ಒಂದು ಕ್ಷೇತ್ರದಲ್ಲಿ ತಮ್ಮ ತಜ್ಞ ವೈದ್ಯಕೀಯ ತರಬೇತಿಯನ್ನು ಮುಗಿಸಿದ ನಂತರ ಹೆಚ್ಚುವರಿ ಉಪವಿಶೇಷ ತರಬೇತಿಯನ್ನು (ಫೆಲೋಶಿಪ್) ಪಡೆದಿರುತ್ತಾರೆ. <br />ಜರ್ಮನಿಯಲ್ಲಿ, ನರವಿಜ್ಞಾನದ ತಜ್ಞ ವೈದ್ಯಕೀಯ ತರಬೇತಿಯನ್ನು ಪೂರ್ಣಗೊಳಿಸಲು ಒಂದು ವರ್ಷದ ಕಡ್ಡಾಯ ಮನೋವೈದ್ಯ ಶಾಸ್ತ್ರವನ್ನು ಮುಗಿಸಿರಬೇಕು. <br />ಯುನೈಟೆಡ್ ಕಿಂಗ್ಡಂ ಹಾಗು ಐರ್ಲ್ಯಾಂಡ್ ನಲ್ಲಿ, ನರವಿಜ್ಞಾನವು ಸಾಮಾನ್ಯ ವೈದ್ಯಕೀಯ ತರಬೇತಿಯ(ಆಂತರಿಕ) ಒಂದು ಉಪ ವಿಭಾಗವಾಗಿದೆ. ಐದರಿಂದ ಒಂಬತ್ತು ವರ್ಷಗಳ ವೈದ್ಯಕೀಯ ಶಿಕ್ಷಣದ ಹಾಗು ಒಂದು ವರ್ಷ ಆಸ್ಪತ್ರೆಯ ಅಧಿಕಾರಿಯಾಗಿ ಮುಂಚಿತವಾಗಿ-ನೋಂದಣಿ ಮಾಡಿಕೊಂಡ ನಂತರ(ಅಥವಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಎರಡು ವರ್ಷಗಳು) ಒಬ್ಬ ನರವಿಜ್ಞಾನಿಯು, ನರವಿಜ್ಞಾನದಲ್ಲಿ ವಿಶೇಷ ತರಬೇತಿಗೆ ಪ್ರವೇಶವನ್ನು ಪಡೆಯಲು [[ಮೆಂಬರ್ಶಿಪ್ ಆಫ್ ದಿ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್([[:w:Membership of the Royal College of Physicians|Membership of the Royal College of Physicians]]) (ಅಥವಾ ಐರಿಶ್‌ಗೆ ಸಮಾನಾಂತರವಾಗಿ) ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕಾಗುತ್ತದೆ. ಒಂದು ಶತಮಾನದ ಹಿಂದೆ ಕೆಲವು ನರವಿಜ್ಞಾನಿಗಳು, ಮನೋವೈದ್ಯಕೀಯ ಘಟಕಗಳಲ್ಲಿ ಕೆಲವು ವರ್ಷಗಳು ಕೆಲಸ ಮಾಡಿ ಮನೋವೈಜ್ಞಾನಿಕ ಔಷಧ ಶಾಸ್ತ್ರದಲ್ಲಿ ಡಿಪ್ಲೋಮಾ ಪಡೆಯುತ್ತಿದ್ದರು. ಆದರೆ ಈ ವಿಧಾನವು ನಂತರ ವಿರಳವಾಯಿತು. ಈಗ ಪ್ರಾಥಮಿಕ ಮನೋವೈಜ್ಞಾನಿಕ ಪದವಿಯನ್ನು ಪಡೆಯಲು ಮೂರು ವರ್ಷ ತೆಗೆದುಕೊಳ್ಳುವುದರಿಂದ ಇದು ಕಾರ್ಯಸಾಧ್ಯವಾಗಿಲ್ಲ. ಶಿಕ್ಷಣಕ್ಕೆ ಸಂಶೋಧನೆಯ ಅಗತ್ಯವಿದೆ, ಹಾಗು ಉನ್ನತ ಪದವಿಯ ಗಳಿಕೆಯು ವೃತ್ತಿಜೀವನದ ಪ್ರಗತಿಗೆ ಸಹಾಯ ಮಾಡುತ್ತದೆ: ಲಂಡನ್‌ನ ಕ್ವೀನ್ ಸ್ಕ್ವೇರ್‌ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ನ್ಯೂಅರಾಲಜಿಗೆ ಸೇರಿಕೊಂಡ ಮೇಲೆ ಹಲವರಿಗೆ ಇದು ಸರಾಗವಾಯಿತು. ನರವೈಜ್ಞಾನಿಕ ರೋಗಗಳ ಚಿಕಿತ್ಸೆಯಲ್ಲಿ ವಿಶೇಷತೆಯನ್ನು ಪಡೆಯಲು ಕೆಲವು ನರವಿಜ್ಞಾನಿಗಳು ರಿಹ್ಯಾಬಿಲಿಟೇಷನ್ ಔಷಧ ಶಾಸ್ತ್ರವನ್ನು ([[:w:US|US]]ನಲ್ಲಿ ಫಿಸಿಯಾಟ್ರಿ([[ಫಿಸಿಯಾಟ್ರಿ:w:physiatry|physiatry]] ಎಂದು ಪರಿಚಿತ) ಅಧ್ಯಯನ ಮಾಡುತ್ತಾರೆ. ಇದರಲ್ಲಿ ಪಾರ್ಶ್ವವಾಯುವಿಗೆ ಚಿಕಿತ್ಸೆಯ ಜೊತೆಗೆ ಪೆಟ್ಟು ಬಿದ್ದ ಮೆದುಳಿಗೆ ಚಿಕಿತ್ಸೆಯನ್ನು ನೀಡುವ ಕ್ರಮದ ಬಗ್ಗೆ ತಿಳಿಸಲಾಗುತ್ತದೆ.<br />
 
ಭಾರತದಲ್ಲಿ, ನರವಿಜ್ಞಾನಿಯಾಗಲು ಬಯಸುವ ವಿದ್ಯಾರ್ಥಿಯು, ಮೂರು ವರ್ಷಗಳ ತಜ್ಞ ವೈದ್ಯಕೀಯ ತರಬೇತಿಯ ನಂತರ[[ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯ]] ಅಥವಾ ದಿ [[ನ್ಯಾಷನಲ್ ಬೋರ್ಡ್ ಆಫ್ ಏಕ್ಸಾಮಿನೆಶನ್ಸ್]] ನಿಂದ ಅಂಗೀಕೃತಗೊಂಡ ಯಾವುದೇ ವೈದ್ಯಕೀಯ ಕಾಲೇಜಿನಿಂದ ನರವಿಜ್ಞಾನದಲ್ಲಿ ಮೂರು ವರ್ಷಗಳ ಫೆಲೋಶಿಫ್ ಕೋರ್ಸ್ ಮಾಡಬೇಕು. ತರಬೇತಿಯ ಅವಧಿಯ ಕೊನೆಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಹಾಗು DM(ನ್ಯೂರಾಲಜಿ) ಅಥವಾ DNB(ನ್ಯೂರಾಲಜಿ) ಪದವಿಯನ್ನು ನೀಡಲಾಗುತ್ತದೆ. ಈ ವ್ಯಾಸಂಗವನ್ನು MD(ಔಷಧ) ಅಥವಾ DNB(ಔಷಧ) ಪದವಿಯನ್ನು ಹೊಂದಿರುವವರು ಮಾತ್ರ ಮಾಡುವ ಅರ್ಹತೆಯನ್ನು ಪಡೆದಿರುತ್ತಾರೆ. ಆದಾಗ್ಯೂ, ಕೆಲವು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಐದು ವರ್ಷಗಳ ಸಮಗ್ರ ವ್ಯಾಸಂಗದ ನಂತರ ನರವಿಜ್ಞಾನದ DM ಪದವಿಯನ್ನು ಪಡೆಯಲು ಅವಕಾಶವಿರುತ್ತದೆ. ಇದನ್ನು M.B.B.S ಪದವಿಯ ನಂತರ ಈ ಪದವಿಯನ್ನು ನೇರವಾಗಿ ಪಡೆಯಬಹುದು.<ref>[http://www.nimhans.kar.nic.in/aca_admission/prosp_1011.pdf Nic.in]</ref>
"https://kn.wikipedia.org/wiki/ನರವಿಜ್ಞಾನ" ಇಂದ ಪಡೆಯಲ್ಪಟ್ಟಿದೆ