೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
೨೦೧೫ನೇ ಸಾಲಿನ [[ನೊಬೆಲ್ ಪ್ರಶಸ್ತಿ]]ಗಳನ್ನು ಪ್ರಕಟಿಸಲಾಗಿದ್ದು,[[ಡಿಸೆಂಬರ್]] ೧೦, [[೨೦೧೫]]ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ವರ್ಷದ ವಿವಿಧ ಕ್ಷೇತ್ರಗಳ ನೊಬೆಲ್ ವಿಜೇತರ ವಿವರ ಹಾಗೂ ಅವರ ಸಾಧನೆಗಳ ಬಗ್ಗೆ ಒಂದು ಕಿರು ನೋಟ ಇಲ್ಲಿದೆ.
==ಭೌತಶಾಸ್ತ್ರ==
[[ಬ್ರಹ್ಮಾಂಡ]]ದ ಸೃಷ್ಟಿಗೆ ಕಾರಣವಾದ ಮೂಲಭೂತ ಕಣಗಳ ಪೈಕಿ ಒಂದು ರೂಪದ [[ನ್ಯೂಟ್ರಿನೊ]] ಎಂಬ ಹೆಸರಿನ ಸಣ್ಣ ಕಣಗಳ ಕುರಿತು ಹೊಸ ಬೆಳಕು ಚೆಲ್ಲಿರುವ ಜಪಾನಿನ [[ಟಕಾಕಿ ಕಜಿಟಾ]][[File:Takaaki Kajita 0198.jpg|thumb|ಟಕಾಕಿ ಕಜಿಟಾ]] ಹಾಗೂ ಕೆನಡಾದ [[ಆರ್ತರ್ ಬಿ ಮೆಕ್ ಡೊನಾಲ್ಡ್]][[File:Arthur B. McDonald 20195198-50002015.jpg|thumb|ಆರ್ತರ್ ಬಿ ಮೆಕ್ ಡೊನಾಲ್ಡ್]] ಅವರು ಈ ಸಾಲಿನ [[ಭೌತಶಾಸ್ತ್ರ]] ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಎಲೆಕ್ಟ್ರಿಕ್ ಚಾರ್ಜ್ ಇಲ್ಲದ, [[ಸೂರ್ಯ]], [[ನಕ್ಷತ್ರ]] ಹಾಗೂ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ನಡೆಯುವ ಪರಮಾಣು ಪ್ರಕ್ರಿಯೆಯಲ್ಲಿ ಸೃಷ್ಟಿಯಾಗುವ ನ್ಯೂಟ್ರಿನೊ ಕಣಗಳು [[ಊಸರವಳ್ಳಿ]]ಯಂತೆ ಅಲ್ಲಿ ಕಾಣಿಸಿಕೊಂಡು ಇಲ್ಲಿ ಮಾಯವಾಗಿದ್ದವು.ಈ ಕಣಗಳು ಎಲ್ಲಿ ಹೋಗುತ್ತಿದ್ದವು ಎಂಬುದೇ ವಿಜ್ಞಾನಿಗಳಿಗೆ ತಿಳಿಯುತ್ತಿರಲಿಲ್ಲ. ಈ ಚಮತ್ಕಾರಿ ಕಣಗಳು [[ದ್ರವ್ಯರಾಶಿ]] ಹೊಂದಿದ್ದು, ಇವು ಆಗಾಗ್ಗೆ ಅಸ್ತಿತ್ವ ಅಥವಾ ರೂಪವನ್ನು ಬದಲು ಮಾಡಿಕೊಳ್ಳುತ್ತವೆ ಎಂದು ವಿವರಿಸಿದ್ದರು.
ಟಕಾಕಿ ಅವರು [[ಟೋಕಿಯೊ]] ವಿವಿಯಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದರೆ, ಮೆಕ್ ಡೊನಾಲ್ಡ್ ಅವರು [[ಕೆನಡಾ]]ದ ಕಿಂಗ್ ಸ್ಟನ್ ವಿವಿಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನ್ಯೂಟ್ರಿನೊ ಕಣಗಳು ಬೆಳಕಿನ ವೇಗದಲ್ಲಿ ಚಲಿಸುತ್ತವೆ. [[ಭೂಮಿ]]ಯ ಮೇಲೆ ಅಥವಾ [[ಬ್ರಹ್ಮಾಂಡ]]ದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಬೆಳಕಿನ ಕಣಗಳು ([[ಫೋಟಾನ್]] ಎಂದು ಕರೆಯುತ್ತಾರೆ). ಇದರ ನಂತರದ ಸ್ಥಾನ ನ್ಯೂಟ್ರಿನೊಗಳದ್ದು. ೧೯೬೦ರಿಂದಲೂ ಈ ಕಣಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದ ವಿಜಾನಿಗಳು, ಸೂರ್ಯ ಮತ್ತು ಇನ್ನಿತರ ನಕ್ಷತ್ರಗಳಲ್ಲಿ ನಡೆಯುವ ಪರಮಾಣು ಪ್ರಕ್ರಿಯೆಯ ಪ್ರಮಾಣವನ್ನು ಅಂದಾಜಿಸಿ ಭೂಮಿಯ ಮೇಲೆ ಇಷ್ಟು ನ್ಯೂಟ್ರಿನೊಗಳು ಇರಬಹುದು ಎಂದು ಅಂದಾಜಿಸುತ್ತಿದ್ದರು. ಆದರೆ, ಅವನ್ನು ಲೆಕ್ಕ ಹಾಕುವಾಗ ಮಾತ್ರ ಅಂದಾಜಿಸಿದ್ದಕ್ಕಿಂತ ಎರಡು ಅಥವಾ ಮೂರು ಪಟ್ಟು[[ಕಣ]]ಗಳು ನಾಪತ್ತೆಯಾಗುತ್ತಿದ್ದವು. ಇವು ಎಲ್ಲಿ ಹೋದವು ಎಂಬ ಯಕ್ಷಪ್ರಶ್ನೆವಿಜ್ಞಾನಿಗಳನ್ನು ಕಾಡುತ್ತಿತ್ತು.