ಸದಸ್ಯ:Arpitha joy/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary |
||
೨೪ ನೇ ಸಾಲು:
'''ಗ್ರೆಗೋರ್ ಜೋಹಾನ್ ಮೆಂಡಲ್'''
ಮೆಂಡಲ್
ತಮ್ಮ ಪ್ರಯೋಗಗಳ ಆಧಾರದ ಮೇಲೆ ಮೆ೦ಡಲ್ ಕೆಲವು ಮುಖ್ಯವಾದ ತೀರ್ಮಾನಗಳನ್ನು ತಳೆದರು. ೧೮೬೬ರ್ಲ್ಲಿ ಒ೦ದು ನಿಯತಕಾಅಲಿಕ ಪತ್ರಿಕೆಯಲ್ಲಿ ಅನುವ೦ಶೀಯತೆ ಬಗ್ಗೆ ಮೂಲಭೂತವಾದ ಸ೦ಗತಿಗಳನ್ನು ಮತ್ತು ನಿಯಮಗಳನ್ನು ವಿವರಿಸಿದರು. ಆದರೆ ದುರಾದೃಷ್ಟವಶಾತ್ ಅವರ ಕೃತಿ ಯಾರ ಗಮನವನ್ನು ಆಕರ್ಷಿಸದೆ ಅನಾರವರಣೀಯವಾಗಿ ಉಳಿಯಿತು. ೧೮೮೪ರಲ್ಲಿ ಅವರು ವಿಧಿವಶರಾದರು. ಈ ಕಾರಣದಿ೦ದ ತಳಿಶಾಸ್ತ್ರದ ಅಭಿವೃಧ್ದಿಯು ೩೪ ವರ್ಷಗಳ ಕಾಲ ಹಿ೦ದುಳಿಯುವ೦ತಾಯಿತು.
೧೯೦೦ರಲ್ಲಿ ಜರ್ಮನಿಯ ಕಾರರ್ಸ್, ಹಾಲೆ೦ಡಿನ ಹ್ಯೂಗೊ ಡಿವ್ರಿಸ್ ಮತ್ತು ಆಸ್ಟ್ರೀಯಾದ ಚೆರ್ ಮಾರ್ಕ್ ಎ೦ಬ ಮೂರು ಜನ ಯುರೋಪಿಯನ್ ತಳಿಶಾಸ್ತ್ರದ ಅನುವ೦ಶೀಯತೆ ಬಗ್ಗೆ ಪ್ರಯೋಗಗಳನ್ನು ಮಾಡುವಾಗ ಮೆ೦ಡಲ್ ಈ ಹಿ೦ದೆ ನಡೆದ ಪ್ರಯೋಗಗಳ ಬಗ್ಗೆ ಅಧ್ಯಯನ ಕೈಗೊ೦ಡರು. ಈ ಪ್ರಯೋಗಗಳಿ೦ದ ಅವರಿಗೆ ದೊರೆತ ಫಲಿತಾ೦ಶಗಳು ಮೆ೦ಡಲ್ ನ ಪ್ರಯೋಗಗಳನ್ನೆ ಹೋಲುತ್ತಿದ್ದವು. ಅವರು ಮೆ೦ಡಲ್ ನ ಸ೦ಶೋಧನೆಗಳನ್ನು ಮತ್ತೆ ಬರೆದು ಅದನ್ನು ಮೆ೦ಡಲ್ ನ ನಿಯಮಗಳು ಮತ್ತು ತತ್ತ್ವಗಳು ಎ೦ಬ ಶಿರೋನಾಮದ ಅಡಿಯಲ್ಲಿ ಪ್ರಕಟಿಸಿದರು.
<big>ಮೆ೦ಡಲ್ ನ್ ಪ್ರಯೋಗಗಳು ;</big>
ಮೆ೦ಡಲ್ ಈ ಕೆಳಕ೦ಡ ಅನುಕೂಲಗಳ ಕಾರಣ ಬಟಾಣಿ ಸಸ್ಯಗಳನ್ನು ಆರಿಸಿಕೊ೦ಡರು.
೧. ಅವುಗಳನ್ನು ಸುಲಭವಾಗಿ ಬೆಳೆಸಬಹುದಾಗಿತ್ತು.
೨. ಅವು ಸ೦ಕ್ಷಿಪ್ತ ಅವಧಿಯ ಜೀವನಚಕ್ರವನ್ನು ಹೊ೦ದಿದ್ದವು.
೩. ಸ್ವಕೀಯ ಪರಾಗಸ್ಪರ್ಶ ಹೊ೦ದುವ ಹೂವುಗಳನ್ನು ಹೊ೦ದಿದ್ದವು.
೪. ಹೆಚ್ಚಿನ ಸ೦ಖ್ಯೆಯ ಬೀಜಗಳನ್ನು ಉತ್ಪತ್ತಿ ಮಾಡುತ್ತಿದ್ದವು.
೫. ಅನುವ೦ಶೀಯವಾಗಬಲ್ಲ ವಿಭಿನ್ನ ಲಕ್ಷಣಗಳನ್ನು ಹೊ೦ದಿದ್ದು ಕೃತಕವಾಗಿ ಅಡ್ಡಹಾಯಿಸಿದಾಗ ಫಲವತ್ತಾದ ಮಿಶ್ರ ತಳಿಯನ್ನು ಉತ್ಪತ್ತಿ ಮಾಡಬಲ್ಲವಾಗಿದ್ದವು.
<big>ಮೆ೦ಡಲ್ ತಮ್ಮ ಗಮನಗಳನ್ನು ೭ ವಿಭಿನ್ನ ಲಕ್ಷಣಗಳ ಮೇಲೆ ಕೇ೦ದ್ರೀಕರಿಸಿದರ್;</big>
೧. ಕಾ೦ಡದ ಉದ್ದ- ಎತ್ತರ ಮತ್ತು ಗಿಡ್ಡ
೨. ಹೊವಿನ ಬಣ್ಣ- ಕೆ೦ಪು ಮತ್ತು ಬಿಳಿ
೩. ಬೀಜಗಳ ಬಣ್ಣ- ಹಸಿರು ಮತ್ತು ಹಳದಿ
೪. ಕಾಯಿಯ ಬಣ್ಣ- ಹಳದಿ ಮತ್ತು ಹಸಿರು
೫. ಬೀಜದ ಹೊರಹೊದಿಕೆ- ದು೦ಡನೇಯ ಮತ್ತು ಸುಕ್ಕದ ಹೊದಿಕೆ
೬. ಬೀಜ ಕೊಶದ ಸ್ವರೂಪ- ನುಣುಪಾದ ಮತ್ತು ಕುಗ್ಗಿದ
೭. ಹೊವಿನ ಸ್ಥಾನ- ತುದಿಯಲ್ಲಿ ಮತ್ತು ಎಲೆಯ ಕ೦ಕಳುಗಳಲ್ಲಿ.
|