ಶಬ್ದಮಣಿದರ್ಪಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
{{unref}}
ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ (ಉಪಲಬ್ಧ) ಗ್ರಂಥಗಳಲ್ಲಿ '''ಶಬ್ದಮಣಿದರ್ಪಣ'''ವು ಮೊಟ್ಟ ಮೊದಲನೆಯದು. ಕೇಶಿರಾಜ ೨ನೇ ನಾಗವರ್ಮನ ಕೃತಿಗಳಾದ "ಶಬ್ದಸ್ಮೃತಿ" ಮತ್ತು "ಕಾವ್ಯಾವಲೋಕನ" ಗ್ರಂಥಗಳ ಸೂತ್ರ, ವೃತ್ತಿ, ಹಾಗೂ ಪ್ರಯೋಗಗಳನ್ನು ಆಧರಿಸಿದ್ದಾನೆಂದು ವೈಯಾಕರಣರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನವಾಗಿ ಇದು ವಿಧಾತ್ಮಕ ಅಥವಾ ಆದರ್ಶ ರೀತಿಯ ವ್ಯಾಕರಣ. ಆದರೆ ವಿವರಣಾತ್ಮಕ ಮತ್ತು ವರ್ಣನಾತ್ಮಕ ರೀತಿಯ ನಿರೂಪಣಾ ದೃಷ್ಟಿಯನ್ನೂ ಒಳಗೊಂಡಿದೆ. ಡಾ.ಡಿ.ಎಲ್.ನರಸಿಂಹಾಚಾರ್ ಅವರು ಸಂಪಾದಿಸಿರುವ ಶಬ್ದಮಣಿದರ್ಪಣವು ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಮೈಸೂರು ವಿಶ್ವವಿದ್ಯಾನಿಲಯದ ಪದವಿಗೆ ಬೋಧಿಸಲ್ಪಡುತ್ತಿದೆ. ಇದರಲ್ಲಿ ೩೪೩ ಕಂದಪದ್ಯಗಳಿವೆ.
 
==ಕೇಶಿರಾಜನ '''ಶಬ್ದಮಣಿದರ್ಪಣ''' ದ ಇತಿವೃತ್ತ==
*'''[[ಕೇಶಿರಾಜ]]'''ನು ರಚಿಸಿದ '''ಶಬ್ದಮಣಿದರ್ಪಣ'''ವು ಸಮಗ್ರವೂ ಸ್ವಾರಸ್ಯಕರವೂ ಆದ ವ್ಯಾಕರಣ ಗ್ರಂಥ. ಇಡೀ ಕೃತಿ ಕಂದಪದ್ಯಗಳ ರೂಪದಲ್ಲಿದೆ. ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಶಬ್ದಮಣಿದರ್ಪಣವು ಸಂಸ್ಕೃತ ವ್ಯಾಕರಣ ಗ್ರಂಥಗಳನ್ನು ಅನುಸರಿಸಿ ರಚಿಸಲ್ಪಟ್ಟಿದೆ. ಆದರೂ ಇದರಲ್ಲಿ ಕನ್ನಡಕ್ಕೆ ಮಾತ್ರವಿರುವ ವಿಶೇಷ ಸಂಗತಿಗಳ ಕುರಿತೂ ಹೇಳಲಾಗಿದೆ.<ref>http://kanaja.in/archives/14890</ref>
 
*"ಶಬ್ದಮಣಿದರ್ಪಣ"ವು ೧೩ನೇ ಶತಮಾನಕ್ಕೆ ಮೊದಲು ಹಳಗನ್ನಡ ಭಾಷಾಸ್ಥಿತಿಗತಿಗಳು ಹೇಗಿದ್ದುವೆಂಬುದನ್ನು ಸವಿಸ್ತಾರವಾಗಿ, ಸಪ್ರಮಾಣ ವಿವೇಚನೆಯಿಂದ ವರ್ಣಿಸುತ್ತದೆ.
Line ೭೪ ⟶ ೭೩:
*"[[ಶಬ್ದಸ್ಮೃತಿ]]" ಮತ್ತು "[[ಕಾವ್ಯಾವಲೋಕನ]]" - [[ನಾಗವರ್ಮ-೨|೨ನೇ ನಾಗವರ್ಮ]]
*ಶಬ್ದಮಣಿದರ್ಪಣ - ಡಾ.[[ಟಿ.ವಿ.ವೆಂಕಟಾಚಲಶಾಸ್ತ್ರಿ]]
 
== ಉಲ್ಲೇಖ ==
<references />
 
[[ವರ್ಗ:ಕನ್ನಡ ಸಾಹಿತ್ಯ]]
"https://kn.wikipedia.org/wiki/ಶಬ್ದಮಣಿದರ್ಪಣ" ಇಂದ ಪಡೆಯಲ್ಪಟ್ಟಿದೆ