೨೦೧೫ನೇ ಸಾಲಿನ ನೊಬೆಲ್ ಪ್ರಶಸ್ತಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫ ನೇ ಸಾಲು:
 
==ಸಾಹಿತ್ಯ==
ಸೋವಿಯತ್ ಒಕ್ಕೂಟದಿಂದ ಪ್ರತ್ಯೇಕಗೊಂಡ ತನ್ನ ತವರು ಬೆಲಾರಸ್ನ ಹೊಸ ಅಸ್ತಿತ್ವದ ಹುಡುಕಾಟ ಮತ್ತು ಎರಡನೇ ಜಾಗತಿಕ ಯುದ್ದದಿಂದ ಘಾಸಿಗೊಂಡ ಹೃದಯಗಳ ಮಾನವೀಯತೆಯ ಹುಡುಕಾಟವನ್ನು ತಮ್ಮ ಕಾದಂಬರಿಗಳಲ್ಲಿ ಸೆರೆಹಿಡಿದ [[ಸ್ವೆಟ್ಲಾನಾ ಅಲೆಕ್ಸೀವಿಕ್]] ಅವರಿಗೆ ಈ ಬಾರಿಯ ಸಾಹಿತ್ಯದ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
೬೭ ವರ್ಷದ ಅಲೆಕ್ಸೀವಿಕ್ ತಮ್ಮ ಬರಹಗಳಲ್ಲಿ ಚಿತ್ರಿಸಿದ ಎರಡನೇ ಜಾಗತಿಕ ಯುದ್ದದ ಪ್ರತ್ಯಕ್ಷ ಸಾಕ್ಷಿಗಳ ನೋವು, ನರಳಿಕೆ ಹಾಗೂ ಚರ್ನೊಬಿಲ್ ದುರಂತದ ಭಾವನಾತ್ಮಕ ಬರವಣಿಗೆ ಅಂತರಾಷ್ಟೀಯ ಮಾನ್ಯತೆಗಳಿಸಿದ್ದು, ಮಾನವ ನಿರ್ಮಿತ ದುರಂತಗಳೆಡೆಗೆ ಜಗತ್ತಿನ ಕಣ್ಣು ತೆರೆಸಿದೆ.ಈ ಎರಡು ದುರಂತಗಳಿಗೆ ಸಾಕ್ಷಿಯಾದವರ ನೋವಿಗೆ ಅಕ್ಷರ ರೂಪ ಕೊಟ್ಟ ಅಲೆಕ್ಸೀವಿಕ್ ಕೃತಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅವರನ್ನು ಹಲವು ಅಂತರಾಷ್ಟೀಯ ಪ್ರಶಸ್ತಿಗಳು ಹುಡುಕಿ ಬಂದಿವೆ.
ರಷ್ಯಾದ ಆಕ್ರಮಣಕಾರಿ ನೀತಿಗಳ ವಿರೋಧಯಾಗಿದ್ದರೂ ರಷ್ಯನ್ ಭಾಷೆಯಲ್ಲಿ ಬರೆಯುವ ಅಲೆಕ್ಸೀವಿಕ್ ಕೃತಿಗಳು ಅವರು ತವರು ಬೆಲಾರಾಸ್ನಲ್ಲೇ. ನಿಷೇಧಕ್ಕೆ ಒಳಗಾಗಿದ್ದು ವಿಪರ್ಯಾಸ. ದೀರ್ಘ ಕಾಲದಿಂದ ಬೆಲಾರಸ್ ಆಳುತ್ತಿರುವ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಸರ್ವಾಧಿಕಾರ ಜತೆಗಿನ ಅಲೆಕ್ಸೀವಿಕ್ ಗುದ್ದಟ ಇದಕ್ಕೆ ಕಾರಣ. ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ೧೧ನೇ ಮಹಿಳಾ ಲೇಖಕಿ ಅಲೆಕ್ಸೀವಿಕ್.