ಕರ್ಣಕೀಟಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
'''ಕರ್ಣಕೀಟಗಳು''' ಕೀಟವರ್ಗದ ಡರ್ಮಾಪ್ಟಿರ ಗಣಕ್ಕೆ ಸೇರಿದ ಕೀಟಗಳು (ಇಯರ್ ವಿಗ್ಸ್‌). ಇವು ನಿದ್ರಿಸುವವರ [[ಕಿವಿ]]ಯೊಳಕ್ಕೆ ಹೋಗುವುದೆಂಬ ತಪ್ಪು ಭಾವನೆಯಿಂದ ಈ ಹೆಸರು ಬಂದಿದೆ. ಇವುಗಳ ದೇಹದ ಹಿಂಭಾಗದ ಕೊನೆಯಲ್ಲಿ ಕೊಂಡಿಗಳಂತಿರುವ ಎರಡು ರಚನೆಗಳಿವೆ. ಇದರಿಂದಾಗಿ ಇವಕ್ಕೆ ಕೊಂಡಿಕೀಟ ಅಥವಾ ಕೊಂಡಿಹುಳು ಎಂಬ ಹೆಸರೂ ಇದೆ.
 
ಪ್ರೌಢಕೀಟಗಳಿಗೆ ಸಾಮಾನ್ಯವಾಗಿ ಎರಡು ಜೊತೆ ರೆಕ್ಕೆಗಳಿವೆ. ಮುಂದಿನ ಜೊತೆ ರೆಕ್ಕೆಗಳು ಒರಟು ಮತ್ತು ಸಣ್ಣವು. ಇವುಗಳ ಮೇಲೆ ನಾಳವಿನ್ಯಾಸವಿಲ್ಲ. ಹಿಂದಿನ ಜೊತೆ ರೆಕ್ಕೆಗಳು ಅಗಲವಾಗಿ, ತೆಳುವಾಗಿ ಪೊರೆಯಂತಿವೆ. ಇವುಗಳ ಮೇಲೆ ನಾಳಗಳಿವೆ. ಕೀಟ ಹಾರದಿದ್ದಾಗ ಇವು ಮುಂದಿನ ರೆಕ್ಕೆಗಳ ಕೆಳಗೆ ಮಡಿಚಿಕೊಂಡಿರುತ್ತವೆ. ವದನಾಂಗಗಳು ಆಹಾರವನ್ನು ಅಗಿಯುವುದಕ್ಕೆ ಸಹಕಾರಿಯಾಗಿವೆ. ಶರೀರದ ಕೊನೆಯಲ್ಲಿರುವ ಕೊಂಡಿಗಳು ಈ ಕೀಟಗಳ ಪ್ರಧಾನ ಲಕ್ಷಣ. ಕೊಂಡಿಗಳ ಆಕಾರ ಮತ್ತು ಉದ್ದ ವಿವಿಧ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿವೆ. ಅಲ್ಲದೆ ಒಂದೇ ಪ್ರಭೇದದ ಗಂಡು ಹಾಗೂ ಹೆಣ್ಣು ಕೀಟಗಳಲ್ಲಿ ಇವು ಭಿನ್ನವಾಗಿರುತ್ತವೆ. ಇದರಿಂದ ಗಂಡು, ಹೆಣ್ಣುಗಳನ್ನು ಗುರುತಿಸ ಬಹುದು. ಕೊಂಡಿಗಳನ್ನು ತಮ್ಮ ಆಹಾರವಾದ ಇತರ ಸಣ್ಣ ಕೀಟಗಳನ್ನು ಹಿಡಿಯುವುದಕ್ಕೂ ಎಳೆದುಕೊಂಡು ಹೋಗುವುದಕ್ಕೂ ತಮ್ಮ ರಕ್ಷಣೆಗೂ ಉಪಯೋಗಿಸುತ್ತವೆ. ಗಂಡು ಹೆಣ್ಣುಗಳ ಸಂಭೋಗಕ್ಕೆ ಕೊಂಡಿ ಸಹಕಾರಿ ಎನ್ನಲಾಗಿದೆ. ಕೆಲವು ಪ್ರಭೇದಗಳು ತಮ್ಮ ರಕ್ಷಣೆಗಾಗಿ ಇನ್ನೊಂದು ಮಾರ್ಗವನ್ನವಲಂಬಿಸಿವೆ. ಇವುಗಳ 2 ಮತ್ತು 3ನೆಯ ಉದರ ಖಂಡಗಳ ಮೇಲ್ಭಾಗದಲ್ಲಿ ವಾಸನೆಯ ಗ್ರಂಥಿಗಳಿವೆ. ಇವುಗಳಿಂದ ದುರ್ವಾಸನೆಯುಳ್ಳ ಕಂದುಮಿಶ್ರಿತ ಹಳದಿಬಣ್ಣದ ದ್ರವವೊಂದು ಉತ್ಪತ್ತಿಯಾಗುತ್ತದೆ. ಇದನ್ನು ಇವು ಸು. 3 ಇಂಚು-4 ಇಂಚು ದೂರ ಚಿಮ್ಮಿಸಬಲ್ಲವು.
 
ಕರ್ಣಕೀಟಗಳು ನಿಶಾಚರಿಗಳು. ಹಗಲಿನಲ್ಲಿ ನೆಲದಲ್ಲಿನ ಸಂದುಗಳು, ಬಿರುಕುಗಳು, ಮರದ ಪೊಟರೆಗಳಲ್ಲಿ ಇರುತ್ತವೆ. ಇವುಗಳ ಮುಖ್ಯ ಆಹಾರ ಕೊಳೆತಿರುವ ಮಾಂಸ ಹಾಗೂ ಇತರ ಸಣ್ಣ ಪುಟ್ಟ ಪ್ರಾಣಿಗಳು. ಕೆಲವೊಮ್ಮೆ ಕೊಳೆತ ಸಸ್ಯಪದಾರ್ಥಗಳನ್ನೂ ತಿನ್ನವುದುಂಟು.
 
ಕರ್ಣಕೀಟಗಳ ಜೀವನದ ಸ್ವಾರಸ್ಯವಾದ ವಿಷಯ ಎಂದರೆ ತಾಯಿಕೀಟ ತನ್ನ [[ಮೊಟ್ಟೆ|ಮೊಟ್ಟೆಗಳನ್ನು,]] ಮರಿಗಳನ್ನು ಜಾಗರೂಕತೆಯಿಂದ ರಕ್ಷಿಸಿ ಪಾಲನೆ ಮಾಡುವುದು. ಮೊಟ್ಟೆಗಳನ್ನು ನೆಲದಲ್ಲಿ ಕೊರೆದ ತೂತುಗಳಲ್ಲಿಟ್ಟು ಅವು ಒಡೆದು ಮರಿಗಳಾಗಿ ಬೆಳೆದು ದೊಡ್ಡವಾಗುವವರೆಗೂ ಅವನ್ನು ಕಾಪಾಡುತ್ತದೆ.
 
ಈ ಕೀಟಗಳು ಪ್ರಪಂಚದಾದ್ಯಂತ ಇವೆಯಾದರೂ ಇವುಗಳ ಸಂಖ್ಯೆ ಯುರೋಪ್ ಮತ್ತು ಉಷ್ಣವಲಯದ ದೇಶಗಳಲ್ಲಿ ಹೆಚ್ಚು. ವಿವಿಧ ಪ್ರಬೇಧಗಳ ಒಟ್ಟಾರೆ ಸಂಖ್ಯೆ ಸುಮಾರು 1,200. ಇದರಲ್ಲಿ ಸುಮಾರು 120 ಪ್ರಬೇಧಗಳು ಭಾರತದಲ್ಲಿವೆಯೆಂದು ಅಂದಾಜು. ಇವುಗಳಲ್ಲಿ ಮುಖ್ಯವಾದವು ಇವು: 1 ಲೆಬಿಡ್ಯೂರಿಡೀ ಕುಟುಂಬಕ್ಕೆ ಸೇರಿದ ಲೆಬಿಡ್ಯೂರ ರೈಪೇರಿಯ, 2 ಲೇಬಿಡೀ ಕುಟುಂಬದ ಲೇಬಿಯ ಮೈನರ್, 3 ಫಾರ್ಫಿಕ್ಯುಲಿಡೀ ಕುಟುಂಬದ ಫಾರ್ಫಿಕ್ಯುಲ ಆರಿಕ್ಯುಲೇರಿಯ, 4 ಕೆಲಿಸೋಸಿಡೀ [[ಕುಟುಂಬ]]ಕ್ಕೆ ಸೇರಿದ ಪ್ರೋರಿಯಸ್ ಅಬ್ಡಾಮಿನ್ಯಾಲಿಸ್. ಈ ವರೆಗೆ ಕೇವಲ 15 ಪ್ರಭೇದಗಳ ಕ್ರೋಮೊಸೋಮುಗಳನ್ನು ವಿವರಿಸಿದ್ದಾರೆ. (ಪಿ.ಎಂ.;ಜೆ.ಪಿ.ಸಿ.)
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಕರ್ಣಕೀಟಗಳು" ಇಂದ ಪಡೆಯಲ್ಪಟ್ಟಿದೆ