ಗೀಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Geeza.jpg ಹೆಸರಿನ ಫೈಲು Yannರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
ಕೊಂಡಿ ಸೇರ್ಪಡೆ
೧ ನೇ ಸಾಲು:
ಉತ್ತರ ಈಜಿಪ್ಟನಲ್ಲಿ ನೈಲ್ ನದಿಯ [[ಪಶ್ಚಿಮ]] ದಂಡೆಯ ಮೇಲೆ, ಕೈರೋ ನಗರಕ್ಕೆ ಇದಿರಾಗಿದ್ದ ಒಂದು ನಗರ. ಗೀಜ಼ ಆಡಳಿತ ವಿಭಾಗದ ಮುಖ್ಯ ಪಟ್ಟಣ. ಕೈರೋದ ಉಪನಗರದಂತಿದೆ. ಕೈರೋಗೂ ಗೀಜ಼ಕ್ಕೂ ನೈಲ್ ನದೀ ದ್ವೀಪಗಳಾದ ರೋಡ ಮತ್ತು ಗೆಜ಼ಿರಗಳ ಮೂಲಕ ಸೇತುವೆಗಳಿವೆ. ಇದು ಕೈರೋ ವಿಶ್ವವಿದ್ಯಾಲಯದ ಕೇಂದ್ರ. ಇಲ್ಲಿ ಪ್ರಾಣಿ ಮತ್ತು ಸಸ್ಯಶಾಸ್ತ್ರಕ ಉದ್ಯಾನಗಳುಂಟು. ಇದು ಈಜಿಪ್ಟಿನ ಚಲನಚಿತ್ರ ಉದ್ಯಮದ ಕೇಂದ್ರ. ಇಲ್ಲಿ ಹತ್ತಿ, ಜವಳಿ, ಪಾದರಕ್ಷೆ, ಬೀರ್, ಇಟ್ಟಿಗೆ ಕೈಗಾರಿಕೆಗಳಿವೆ. ಪ್ರಸಿದ್ಧ ಪಿರಮಿಡ್ಗಳು ಇರುವುದು ಇಲ್ಲಿಂದ ಪಶ್ಚಿಮಕ್ಕೆ, 8 ಕಿಮೀ ದೂರದಲ್ಲಿ.
 
 
ಹಳೆಯ [[ಈಜಿಪ್ಟ್]] ರಾಜ್ಯವನ್ನು ಆಳಿದ ಮೂರನೆಯ ವಂಶದ ರಾಜರ (ಪ್ರ.ಶ.ಪು. 2649-2620) ಕಾಲದಿಂದ ಕಲ್ಲಿನ ಪಿರಮಿಡ್ಡುಗಳನ್ನು ಕಟ್ಟುವ ಪದ್ಧತಿ ಆರಂಭವಾಯಿತು. ಈ ವಾಸ್ತುಶಿಲ್ಪ ಕುಶಲತೆ ಬಹುಬೇಗ ನಾಲ್ಕನೆಯ ವಂಶದ ರಾಜರ ಕಾಲದಲ್ಲಿ (ಪ್ರ.ಶ.ಪು. 2600-2500) ಅತ್ಯಂತ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿತು. ಇವರು ಗೀಜ಼ದಲ್ಲಿ ಕಟ್ಟಿಸಿದ 2 ಪಿರಮಿಡ್ಗಳಲ್ಲಿ ಈ ವಾಸ್ತುಶಿಲ್ಪದ ಶ್ರೇಷ್ಟಮಟ್ಟವನ್ನು ನೋಡಬಹುದು. ಗೀಜ಼ದಲ್ಲಿ ಪಿರಮಿಡ್ಗಳಲ್ಲದೆ, ಒಂದು ಸಿಂಹದ ದೇಹ ಮತ್ತು ಮನುಷ್ಯನ ತಲೆಯುಳ್ಳ ಸ್ಫಿಂಕ್ಸ್, ಭೂಮಿಯಲ್ಲಿ ಸುಮಾರು 25 ಮೀ ಕೆಳಗೆ ಕೊರೆದು ಮಾಡಿದ ಸುರಂಗಮಾರ್ಗವುಳ್ಳ ಅನೇಕ ಕೋಣೆ ಗೋರಿಗಳು ಇವೆ.
 
 
"https://kn.wikipedia.org/wiki/ಗೀಜ" ಇಂದ ಪಡೆಯಲ್ಪಟ್ಟಿದೆ