ಸೂಕ್ಷ್ಮ ಜೀವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಸೂಕ್ಷ್ಮಜೀವಿ ಎಂದರೆ ಸೂಕ್ಷ್ಮದರ್ಶಕದ ಮೂಲಕ ಮಾತ್ರವೇ ಕಾಣಿಸುವಂಥಹ ಜೀವಿಯಾಗಿದೆ. ಸೂಕ್ಷ್ಮಜೀವಿಗಳ ಕುರಿತು ಅಧ್ಯಯನ ಮಾಡುವಂಥ ಶಾಸ್ತ್ರವನ್ನು ಸೂಕ್ಷ್ಮಜೀವಶಾಸ್ತ್ರ ಎಂದು ಕರೆಯಲಾಗುತ್ತದೆ. ಬ್ಯಾಕ್ಟೀರಿಯಾ,ಆರ್ಕಿಯಾ,ಮತ್ತು ಹೆಚ್ಚಾಗಿ ಎಲ್ಲಾ ಪ್ರೋಟೋಸೋವಗಳು ಸೂಕ್ಷ್ಮ ಜೀವಿಗಳು. ಕೆಲವು ಶಿಲೀಂಧ್ರಗಳು,ಪಾಚಿ ಮತ್ತು ಕೆಲವು ಪ್ರಾಣಿಗಳು(rotifiers) ಸಹ ಸೂಕ್ಷ್ಮಜೀವಿಗಳು.<ref>https://en.wikipedia.org/wiki/Microorganism</ref> ಕೆಲವು ಸೂಕ್ಷ್ಮಜೀವಶಾಸ್ತ್ರಜ್ಞರು ವೈರಸ್‌ಗಳನ್ನೂ ಸಹ ಸೂಕ್ಷ್ಮಜೀವಿಗಳು ಎಂದು ಪರಿಗಣಿಸಿದ್ದಾರೆ.
 
ಜೈವಿಕಗೋಳದ ಎಲ್ಲಾ ಭಾಗಗಳಲ್ಲೂ ಸೂಕ್ಷ್ಮಜೀವಿಗಳು ಕಂಡುಬರುತ್ತವೆ. ಮಣ್ಣು, ೭ ಮೈಲಿ ಆಳವಿರುವ ಸಾಗರ, ಭೂಮಿಯ ಹೊರಪದರದ ಒಳಗಿರುವ ಬಂಡೆಗಳು, ೪೦ ಮೈಲಿ ಎತ್ತರವಿರುವ ವಾತಾವರಣ- ಇಂಥಹ ಪ್ರದೇಶಗಳಲ್ಲಿಯೂ ಸೂಕ್ಷ್ಮಜೀವಿಗಳು ಕಂಡು ಬರುತ್ತವೆ. ಸೂಕ್ಷ್ಮಜೀವಿಗಳು ವಿಭಜಕಗಳಾಗಿ ಕಾರ್ಯ ನಿರ್ವಹಿಸುವುದರಿಂದ ಪರಿಸರ ವ್ಯವಸ್ಥೆಯಲ್ಲಿ ಪೌಷ್ಟಿಕ ಮರುಬಳಕೆ ಮಾಡುತ್ತವೆ. ಸಾರಜನಕ ಚಕ್ರದಲ್ಲಿ ಸಾರಜನಕ ಹೊಂದಿಸುವಂಥ ಕೆಲಸವನ್ನೂ ಸಹ ಸೂಕ್ಷ್ಮಜೀವಿಗಳು ಮಾಡುತ್ತವೆ. ಆಹಾರ ಮತ್ತು ಪಾನೀಯ ತಯಾರಣೆಯಲ್ಲಿಯೂ ಸೂಕ್ಷ್ಮಜೀವಿಗಳ ಪಾತ್ರ ಮಹತ್ತರವಾದುದು. ತಳೀಯ ಎಂಜಿನಿಯರಿಂಗ್ ಅನ್ನು ಆಧರಿಸಿರುವಂಥ ಆಧುನಿಕ ತಂತ್ರಜ್ಞಾನಗಳಲ್ಲಿ ಸೂಕ್ಷ್ಮಜೀವಿಗಳನ್ನು ಉಪಯೋಗಿಸುತ್ತಾರೆ.
೪೧ ನೇ ಸಾಲು:
 
==ಉಲ್ಲೇಖ==
<references />
<references />
"https://kn.wikipedia.org/wiki/ಸೂಕ್ಷ್ಮ_ಜೀವಿ" ಇಂದ ಪಡೆಯಲ್ಪಟ್ಟಿದೆ