"ಓಕಿನಾವ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚಿತ್ರ ಸೇರ್ಪಡೆ
(ಚಿತ್ರ ಸೇರ್ಪಡೆ)
[[File:Busena Resort11n4272.jpg|thumb|ಓಕಿನಾವ]]
 
'''ಓಕಿನಾವ''': ಜಪಾನಿನ [[ದಕ್ಷಿಣ]]ಕೊನೆಯಲ್ಲಿರುವ ರ್ಯುಕ್ಯುರೆಟ್ಟೊ [[ದ್ವೀಪ]] ಸಮುದಾಯದ ಅತಿ ದೊಡ್ಡ ದ್ವೀಪ. ಹಳೆಯ ಶಿಲೆಗಳ ಮೇಲೆ [[ಜ್ವಾಲಾಮುಖಿ]]ಯ ಭಸ್ಮಸಂಚಯನದಿಂದಾಗಿ ಈ ದ್ವೀಪ ಮೈತಳೆದಿದೆ. ಇದರ ಸುತ್ತಣ ದ್ವೀಪಗಳಲ್ಲಿ ಕೆಲವು ಹವಳದಿಂದಾದವು. ಕೆಲವಕ್ಕೆ ಹವಳದ ಅಂಚುಗಳಿವೆ. ಈ ದ್ವೀಪ ಸಾಮಾನ್ಯವಾಗಿ ಸಮಮಟ್ಟದ ಇಳಿಜಾರುಗಳಿಂದ ಕೂಡಿದೆ. ಆದರೆ ಇದರ [[ಉತ್ತರ]] ಭಾಗದಲ್ಲಿ ಏರುಪೇರುಗಳಿವೆ. [[ದಕ್ಷಿಣ]]ಭಾಗ ಮೈದಾನ. ದ್ವೀಪದ [[ಜನಸಂಖ್ಯೆ]]ಯ ಬಹುಪಾಲು ವಾಸಿಸುವುದು ಈ ಪ್ರದೇಶದಲ್ಲೇ. ಉಪೋಷ್ಣವಲಯದ ವಾಯುಗುಣ ಇದೆ. [[ಮಳೆ]] ವಿಪರೀತ, ಆಗಾಗ ಚೀನ ಸಮುದ್ರದಲ್ಲಿ ತಲೆದೋರುವ ಚಂಡಮಾರುತಕ್ಕೂ ಈ ದ್ವೀಪ ಬಲಿಯಾಗುವುದುಂಟು, ಬತ್ತ, [[ಕಪ್ಪು]]ಸಕ್ಕರೆ, ಬಾಳೆ[[ಹಣ್ಣು]], ಸಿಹಿಗೆಣಸು ಇವು ಇಲ್ಲಿಯ ಪ್ರಮುಖ [[ಕೃಷಿ]] ಉತ್ಪನ್ನಗಳು, ಪೈನಾಪಲ್ ಇನ್ನೊಂದು ಮುಖ್ಯ ಉತ್ಪನ್ನ. ಇದನ್ನು ಡಬ್ಬಿಗಳಲ್ಲಿ ತುಂಬಿ ರಫ್ತು ಮಾಡುತ್ತಾರೆ. [[ಮೀನು]]ಗಾರಿಕೆ ಹಳೆಯ ಪ್ರಮುಖ ಉದ್ಯಮ. ಅರಗಿನ ಹಾಗೂ ಮಣ್ಣಿನ ವಸ್ತುಗಳನ್ನು ಮಾಡುವ ಕೈಗಾರಿಕೆ ಹಿಂದಿನಿಂದಲೂ ಬಂದದ್ದು. ತಿಮಿಂಗಿಲದ ವಸ್ತು ಹಾಗೂ ಗಂಧಕದ ಶುದ್ಧೀಕರಣ ಉದ್ಯಮಗಳು ಈಚೆಗೆ ಬೆಳೆಯುತ್ತಿವೆ.
 
೨೪೩

edits

"https://kn.wikipedia.org/wiki/ವಿಶೇಷ:MobileDiff/633229" ಇಂದ ಪಡೆಯಲ್ಪಟ್ಟಿದೆ