ಕತಾರ್ಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
'''ಕತಾರ್ಸಿಸ್''' : ಭೇದಿ, ವಿರೇಚನೆ ಎಂಬ ಅರ್ಥವನ್ನುಳ್ಳ ಈ ಪ್ರಾಚೀನ [[ಗ್ರೀಕ್]] ಪದ ವೈದ್ಯಕ್ಕೆ ಸೇರಿದುದು. ತತ್ತ್ವಜ್ಞರು ಕ್ರಮೇಣ ಇದನ್ನು ಕೆಲವು ಕಲೆಗಳು ಉಂಟುಮಾಡುವ ಪರಿಣಾಮಕ್ಕೆ ಅನ್ವಯಿಸಿದರು.
 
==ಗ್ರೀಕ್ ರುದ್ರನಾಟಕಗಳಲ್ಲಿ==
ರುದ್ರನಾಟಕದ (ಗಂಭೀರ ನಾಟಕ) ಮೇಲೆ [[ಪ್ಲೇಟೊ]] ಮಹಾಶಯನಿಗೆ ವಿಶೇಷ ಆಗ್ರಹ. ಅದರಿಂದ ಆಗುವ ಕೇಡನ್ನು ಆತ ಹೀಗೆ ಬಣ್ಣಿಸಿದ: ನಾಟಕಶಾಲೆಯಲ್ಲಿ ಅದನ್ನು ವೀಕ್ಷಿಸುತ್ತ ನೋಟಕರು ತಮ್ಮ ಮರುಕವನ್ನು ತಡೆದಿಡಲಾರದೆ ಎಲ್ಲರೆದುರಿಗೂ ಗಟ್ಟಿಯಾಗಿ ರೋದಿಸುತ್ತಾರೆ. ಆ ವರ್ತನೆಯಿಂದ ಅವರ ದಾಢರ್ಯ್‌ಕ್ಕೂ ಸಂಯಮಕ್ಕೂ ಹಾನಿ, ಅವರ ಪೌರುಷಕ್ಕೇ ಅಪಾಯ. ಆದ್ದರಿಂದ ಆದರ್ಶ ಗಣರಾಜ್ಯದಿಂದ ನಾಟಕಕರ್ತರನ್ನು ಗಡೀಪಾರು ಮಾಡತಕ್ಕದ್ದು.
 
ಪ್ಲೇಟೊವಿನ ಆಕ್ಷೇಪಕ್ಕೆ ಸೂಕ್ತ ಸಮಾಧಾನವನ್ನಿತ್ತು ರುದ್ರನಾಟಕವನ್ನು [[ಅರಿಸ್ಟಾಟಲ್]] ಸಮರ್ಥಿಸಿದ. ಅವನ ವಿವರಣೆಯಂತೆ ರುದ್ರನಾಟಕ ಮೂರು ತೆರದಲ್ಲಿ ಪ್ರಯೋಜಕ. ಆದರೆ ಅವನ ಅಭಿಪ್ರಾಯಗಳು ವಿಶದವಾಗಿ ಪೋಷಿತವಾಗಿಲ್ಲ. ತನ್ನ ಪಾಲಿಟಿಕ್ಸ್‌ ಗ್ರಂಥದಲ್ಲಿ ಆತ ಸಂಗೀತ ಒದಗಿಸಿಕೊಡುವ ವಿರೇಚನವನ್ನು ಪ್ರಾಸಂಗಿಕವಾಗಿ ನಮೂದಿಸಿ, ಮುಂದೆ ಅದನ್ನು ತನ್ನ ಪೊಯಟಿಕ್ಸ್‌ನಲ್ಲಿ ಬಿಡಿಸಿ ಬಿಡಿಸಿ ತಿಳಿಯಪಡಿಸುವುದಾಗಿ ಭರವಸೆ ಕೊಟ್ಟ. ನಮಗೆ ಉಪಲಬ್ಧವಾಗಿರುವ ಪೊಯಟಿಕ್ಸ್‌ನ ಒಂದನೆಯ ಭಾಗದಲ್ಲಾದರೂ ಗಂಭೀರ ನಾಟಕದ ಕಾರ್ಯವನ್ನು ಹೇಳುವ ಸಂದರ್ಭದಲ್ಲಿ ಭಯ ಮರುಕಗಳ ಮೂಲಕ ಆ ಭಾವಗಳ ವಿರೇಚನವನ್ನು ಅದು ಎಸಗುತ್ತದೆ ಎಂಬ ಒಂದೇ ಒಂದು ಸಂದಿಗ್ಧ ವಾಕ್ಯವಿದೆ. ಮತ್ತಾವ ಕಡೆಯಲ್ಲೂ ಕತಾರ್ಸಿಸ್ ಪದದ ಯಾವ ವಿವರಣೆಯೂ ಸಿಕ್ಕುವುದಿಲ್ಲ. ಅವನ ನಿಜವಾದ ಅಭಿಪ್ರಾಯ ಏನಾಗಿತ್ತೆಂಬುದನ್ನು ನಿರ್ದಿಷ್ಟವಾಗಿ ತಿಳಿಯುವಂತಿಲ್ಲ. ಪಾಶ್ಚಾತ್ಯ ಪಂಡಿತರು ಅದಕ್ಕೆ ಅರವತ್ತು ವಿಧದ ಅರ್ಥಗಳನ್ನು ಊಹಿಸಿದ್ದಾರಂತೆ; ಹೀಗಿದ್ದರೂ ಅರಿಸ್ಟಾಟಲನ ಇಂಗಿತ ಏನಾಗಿದ್ದಿರಬಹುದೆಂದು ಹೆಚ್ಚು ಕಡಿಮೆ ಮನವೊಪ್ಪುವಂತೆ ಗೊತ್ತುಹಿಡಿಯಲು ಅವಕಾಶ ಇಲ್ಲದಿಲ್ಲ.
 
ರುದ್ರನಾಟಕ ನೋಟಕನ ಭಾವನೆಗಳನ್ನು ಕೆರಳಿಸಿ ಹೊರಗೆಳೆಯುವುದನ್ನು ಅರಿಸ್ಟಾಟಲ್ ಒಪ್ಪಿಕೊಂಡ. ಹಾಗಾಗುವದರಿಂದ ಕೆಡುಕಿಗೆ ಬದಲು ಒಳ್ಳೆಯದೇ ಆಗುವುದೆಂದು ಅವನ ಜವಾಬು. ಭಾವಗಳನ್ನು ಆಂತರ್ಯದೊಳಗೆ ಅದುಮಿಟ್ಟರೆ ಕಲ್ಮಷವನ್ನು ಒಳಗಿಟ್ಟುಕೊಂಡಂತೆ ಮಾನಸಿಕ ಆರೋಗ್ಯಕ್ಕೆ ಬಾಧೆ. ಯುಕ್ತ ರೀತಿಯಲ್ಲಿ ಅವನ್ನು ಆಗಾಗ ಹೊರಗೆಡವಿದರೆ ಚಿತ್ತ ತನ್ನ ಮೇಲಣ ಭಾರವನ್ನು ಕೊಡವಿಕೊಂಡು ಹಗುರವಾಗುತ್ತದೆ. ಜೀವನದ ಲವಲವಿಕೆ ದೃಢವಾಗುತ್ತದೆ. ಹೀಗೆ ರುದ್ರನಾಟಕ ಹೋಮಿಯೋಪತಿ ವೈದ್ಯದ ಔಷಧದಂತೆ ಚಿಕಿತ್ಸೆ ನಡೆಸುತ್ತದೆ.
"https://kn.wikipedia.org/wiki/ಕತಾರ್ಸಿಸ್" ಇಂದ ಪಡೆಯಲ್ಪಟ್ಟಿದೆ