ಭಾರತೀಸುತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೪ ನೇ ಸಾಲು:
ಗ್ರಾಮೀಣ ಪರಿಸರದ ಹಿನ್ನೆಲೆಯ ಕಾದಂಬರಿಕಾರರಾದ ಶಾನಭಾಗ ರಾಮಯ್ಯ ನಾರಾಯಣರಾವ್ (ಭಾರತೀಸುತ) ಅವರು ಮಡಿಕೇರಿಯ ಬಳಿಯ ಬಿಳಿಗೇರಿ ಗ್ರಾಮದಲ್ಲಿ ಮೇ ೧೫, ೧೯೧೫ರಂದು ಜನಿಸಿದರು. ತಂದೆ ರಾಮಯ್ಯ, ತಾಯಿ ಸುಬ್ಬಮ್ಮ. ಏಳನೆಯ ತರಗತಿ ಓದುತ್ತಿದ್ದಾಗಲೇ ತಂದೆಯ ಪ್ರೀತಿಯಿಂದ ವಂಚಿತರಾದರು. ಪ್ರೌಢಶಾಲೆ ವ್ಯಾಸಂಗ ಮಾಡುವಾಗ ಪಂಜೆಯವರ ಶಿಷ್ಯರಾಗಿ ಸಾಹಿತ್ಯ ಸಂಸ್ಕಾರ ಪಡೆದ ಭಾಗ್ಯ ಅವರದ್ದಾಗಿತ್ತು.
 
ಸ್ವಾತಂತ್ರ್ಯ ಚಳವಳಿಯ ಕಾವಿನಿಂದ ಓದಿಗೆ ತಿಲಾಂಜಲಿ ಕೊಟ್ಟ ಭಾರತೀಸುತರು [[ಕಣ್ಣಾನೂರು]] ಹಾಗೂ [[ತಿರುಚನಾಪಳ್ಳಿ]] ಸೆರೆಮನೆಗಳಲ್ಲಿದ್ದಾಗ ಗಾಂಧೀ ತತ್ತ್ವಗಳನ್ನು ಮೈಗೂಡಿಸಿಕೊಂಡರು. ಸತ್ಯಾಗ್ರಹಿಯಾದರೂ ಅವರು ರಾಜಕೀಯ ವ್ಯಕ್ತಿಯಾಗಲಿಲ್ಲ. ಬಿಡುಗಡೆಯ ನಂತರ ಕೆಲಕಾಲ ಕಾಫಿ ಎಸ್ಟೇಟಿನಲ್ಲಿ ಗುಮಾಸ್ತೆ ಕೆಲಸ ಮಾಡಿದರು. 1942ರಲ್ಲಿ ಶಾಲಾ ಶಿಕ್ಷಕರಾಗಿ ನೇಮಕಗೊಂಡರು. ೧೯೪೫ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದರು. ೧೯೭೩ರವರೆಗೂ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸಿದರು.
 
==ಕಾದಂಬರಿ ಲೋಕದಲ್ಲಿ==
"https://kn.wikipedia.org/wiki/ಭಾರತೀಸುತ" ಇಂದ ಪಡೆಯಲ್ಪಟ್ಟಿದೆ