ಕಂಬಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
೩ ನೇ ಸಾಲು:
ಪ್ರಾರಂಭ: ಋಗ್ವೇದದ ಕಾಲದಿಂದಲೂ ಉಣ್ಣೆಯ ವಸ್ತ್ರ ಬಳಕೆಯಲ್ಲಿ ಇತ್ತೆಂಬುದಕ್ಕೆ ಆಧಾರವಿದೆ. ಊರ್ಣವತೀ ಯುವತಿಃ ಶೀಲ ಮಾವತಿ, ಊರ್ಣವಂತಂ ಊರ್ಣವಸತ ಶೃಂದ್ರುವ ಮುಂತಾದ ಋಗ್ವೇದೋಕ್ತಿಗಳನ್ನು ಗಮನಿಸಬಹುದು. ಉಣ್ಣೆ, ನಾರು, ರೇಷ್ಮೆ ಮುಂತಾದವುಗಳಿಂದ ನೇದ ಬಟ್ಟೆಗಳು ದೇವತಾಕಾರ್ಯಗಳಲ್ಲಿ ತೊಟ್ಟುಕೊಳ್ಳಲು ಉಪಯೋಗಿಸಬಹುದಾದ ಮಡಿವಸ್ತ್ರಗಳೆಂದೂ ವೈದಿಕ ಕಾಲದಿಂದಲೂ ಬೆಳೆದು ಬಂದಿರುವ ಸಂಪ್ರದಾಯವೂ ಉಣ್ಣೆ ವಸ್ತ್ರದ ಪ್ರಾಚೀನತೆಗೆ ಸಾಕ್ಷಿ.
 
ಮಧ್ಯ ಏಷ್ಯದ[[ಏಷ್ಯ]]ದ ಅಲೆಮಾರಿ ಜನ ಮೊದಲು ಕುರಿಗಳನ್ನು ಸಾಕಿ ಉಣ್ಣೆಯಿಂದ ನೂಲನ್ನು ತೆಗೆದು ನೇಯುವುದನ್ನು ಕಲಿತಿದ್ದರೆಂದು ಅನೇಕ ಐತಿಹಾಸಿಕ ವಿವರಗಳು ತಿಳಿಸುತ್ತವೆ. ಇವರೇ ಅನಂತರ ಯುರೋಪಿನ ಇತರ ಭಾಗಗಳಿಗೂ ಭಾರತಕ್ಕೂ ವಲಸೆ ಹೋಗಿ ಉಣ್ಣೆಯ ಕುಶಲ ಕೈಗಾರಿಕೆಯನ್ನು ಎಲ್ಲ ಕಡೆಗಳಲ್ಲಿಯೂ ಪ್ರಚಾರಮಾಡಿ ಬೆಳೆಸಿದರು ಎಂದು ಹೇಳಬಹುದು. ಹೀಗೆ ಉಣ್ಣೆಯ ವಸ್ತ್ರ ತಯಾರಿಕೆ-ಅದರಲ್ಲಿಯೂ ಪ್ರಮುಖವಾಗಿ ಕಂಬಳಿ ರತ್ನಗಂಬಳಿ-ಅತಿ ಪ್ರಾಚೀನವಾದುದು. ಇದು ಜನಜೀವನದೊಂದಿಗೆ ಹಾಸುಹೊಕ್ಕಾಗಿ ಬೆಳೆದು ಕಾಲಾನುಸಾರ ವಿವಿಧ ಮಾರ್ಪಾಡುಗಳನ್ನೂ ದರ್ಜೆಗಳನ್ನೂ ಪಡೆದಿದೆ.
 
ಪ್ರ.ಶ.ಪು. 3000 ವರ್ಷಗಳಷ್ಟು[[ವರ್ಷ]]ಗಳಷ್ಟು ಪ್ರಾಚೀನವಾದ ಒಂದು ಮಗ್ಗ ಮತ್ತು ಅದರಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರನ್ನು ಈಜಿಪ್ಟಿನ ಭಿತ್ತಿಚಿತ್ರವೊಂದರಲ್ಲಿ ಚಿತ್ರಿಸಲಾಗಿದೆ. ಒರಟು ಸಾಧನಗಳಿಂದ ನೇಯುವ ಕಲೆ ಈಜಿಪ್ಟಿನ ಜನಾಂಗಕ್ಕೆ ಇನ್ನೂ ಹಿಂದಿನಿಂದಲೇ ತಿಳಿದಿತ್ತೆಂದು ಇದರಿಂದ ಸ್ಪಷ್ಟವಾಗುವುದು. ಬಹುಶಃ ಅದು ಇರಾನ್, ಮೆಸೊಪೊಟೇಮಿಯಗಳಲ್ಲಿ ಆರಂಭವಾಗಿರಬೇಕು. ಮೊದಲನೆಯ ಉಣ್ಣೆಯ ಜಮಖಾನೆ ಬ್ಯಾಬಿಲೋನ್ ಅಥವಾ ನಿನೆವೆಯಲ್ಲಿ ಪ್ರ.ಶ.ಪು. 5000 ವರ್ಷಗಳಿಗಿಂತ ಮೊದಲೇ ತಯಾರಾಗಿರಬೇಕು ಎಂಬುದು ಪಾಶ್ಚಾತ್ಯ ವಿದ್ವಾಂಸರ ಮತ. ಬ್ಯಾಬಿಲೋನಿಯನ್ನರು ಚತುರ ನೇಯ್ಗೆಯ ಕಲೆಗೆ ಹೆಸರಾದವರೆಂದು ರೋಮಿನ ಚರಿತ್ರಕಾರ ಪ್ಲಿನಿ ಹೇಳಿದ್ದಾನೆ. ಜಮಖಾನೆಯ ಉಪಯೋಗವನ್ನು ತಿಳಿಸುವ ಅತ್ಯಂತ ಪುರಾತನ ಪುರಾವೆಗಳಲ್ಲಿ ಬೈಬಲ್ಲೂ ಸೇರಿದೆ. ನೆಲಕ್ಕೆ ಹಾಸುವ ನೇಯ್ಗೆಯ ಕಂಬಳಿಗಳು ಬಹಳ ಹಿಂದಿನ ಕಾಲದಲ್ಲಿಯೇ ಭಾರತ, ಚೀನ, ಅರೆಬಿಯ, ಪರ್ಷಿಯ ಮತ್ತು ಅಸ್ಸೀರಿಯ ದೇಶಗಳ ಜನರಲ್ಲಿ ಬಳಕೆಯಲ್ಲಿದ್ದುವು. ಪ್ರ.ಶ.ಪು. ಸು. 1500 ವರ್ಷಗಳಿಗಿಂತ ಮುಂಚೆಯೇ ರತ್ನಗಂಬಳಿಗಳನ್ನು ದೇವಾಲಯಗಳಲ್ಲಿ ಉಪಯೋಗಿಸಲು ನೇಯುವ ಕಲೆ ಈಜಿಪ್ಟಿನವರಿಗೆ ತಿಳಿದಿತ್ತು. ಅವು ಈಗಿನ ಕಂಬಳಿ ಜಮಖಾನೆಗಳಂತಿರದಿದ್ದರೂ ಮೃದುವಾದ ಉಣ್ಣೆಯಿಂದ ಜುಂಗು ಜುಂಗಿನ ಮೇಲ್ಮೈವುಳ್ಳ ನೆಲಗಂಬಳಿಗಳಾಗಿದ್ದುವೆಂದು ಹೇಳಬಹುದು. ಈಗ ಉಳಿದಿರುವ ಅತ್ಯಂತ ಪ್ರಾಚೀನವಾದ ಹಾಸು ಸಾಧನ ಪ್ರ.ಶ. 2ನೆಯ ಶತಮಾನದ್ದು, ಇದಕ್ಕೆ ಜುಂಗಿನ ಮೇಲ್ಮೈ ಇದೆ. ಇದನ್ನು ಆಧುನಿಕ ಜಮಖಾನೆಯ ಅತ್ಯಂತ ಪ್ರಾಚೀನ ರೂಪ ಎಂದು ಹೇಳಬಹುದು.
 
ಕಂಬಳಿ ಮತ್ತು ಜಮಖಾನೆಯ ನೇಯ್ಗೆಯಲ್ಲಿ ಪರ್ಷಿಯ ಅತ್ಯಂತ ಪ್ರಾಚೀನ ದೇಶವೆಂದು ಇತಿಹಾಸಕಾರರ ಅಭಿಮತ. ಇಲ್ಲಿನ ರತ್ನಗಂಬಳಿಗಳಿಗೆ ವಿಶ್ವದಾದ್ಯಂತ ಅರಮನೆ ಮತ್ತು ಶ್ರೀಮಂತ ಗೃಹಗಳ ಬೇಡಿಕೆಯಿತ್ತೆಂದು ತಿಳಿದಿದೆ. ಪ್ರ.ಶ.ಪು.538ರಲ್ಲಿ ಪರ್ಷಿಯನ್ನರು ಬ್ಯಾಬಿಲೋನನ್ನು ಗೆದ್ದಮೇಲೆ ಪರ್ಷಿಯದ ಕಂಬಳಿ ತಯಾರಿಕೆ ಏಳಿಗೆಗೊಂಡಿತು. ಪರ್ಷಿಯದ ಕಂಬಳಿ ನೇಯ್ಗೆಯ ಕಲೆಗಾರಿಕೆ ಉಪಮಾತೀತವಾದ ಕಲೆಗಾರಿಕೆ. ಈ ಕಂಬಳಿಗಳನ್ನು ಆ ಕಾಲದ ಅತ್ಯಂತ ಐಶ್ವರ್ಯಯುತ ಸಾಧನಗಳೆಂದು ಪರಿಗಣಿಸಲಾಗಿತ್ತು. ಗ್ರೀಕ್ ಮತ್ತು ರೋಮ್ ದೇಶಗಳೆರಡೂ ಅಂಥ ರತ್ನಗಂಬಳಿ ಮತ್ತು ಜಮಖಾನೆಗಳನ್ನು ಬಹಳವಾಗಿ ಹೊಗಳಿವೆ. ಅಲೆಕ್ಸಾಂಡರನ ಸೈನಿಕರು ತಮ್ಮ ಪುರ್ವದೇಶದ ಯುದ್ಧಗಳಿಂದ ಹಿಂತಿರುಗುವಾಗ ಜೊತೆಯಲ್ಲಿ ಉತ್ತಮ ಜಮಖಾನೆಗಳನ್ನು ತಂದರೆಂದೂ ರೋಮನರು ಆ ಪ್ರದೇಶವನ್ನು ಆಕ್ರಮಿಸಿಕೊಂಡಾಗ ಅಲ್ಲಿದ್ದ ಪುರಾತನ ಮಗ್ಗಗಳು ಮತ್ತೂ ಪಶ್ಚಿಮಕ್ಕೆ ಎಂದರೆ ಇಟಲಿಯವರೆಗೆ ತಮ್ಮ ದಾರಿಯನ್ನು ಕಂಡುಕೊಂಡುವೆಂದೂ ತಿಳಿದುಬರುತ್ತದೆ. ಶತಮಾನಗಳ ಅನಂತರ ತುರ್ಕರು ಕಾನ್ಸ್‌ಸ್ಟಾಂಟಿನೋಪಲನ್ನು ಆಕ್ರಮಿಸಿಕೊಂಡಾಗ ಅದು ಅನೇಕ ನುರಿತ ಕಲಾವಿದರನ್ನು ಇಟಲಿಯತ್ತ ರವಾನಿಸಿತು. ಆದ್ದರಿಂದಲೇ ಫ್ರಾನ್ಸ್‌ನಲ್ಲಿ ಯುರೋಪಿನ ಇತರ ಭಾಗಗಳಲ್ಲಿಲ್ಲದ ಜಮಖಾನೆಗಳ ಅತ್ಯಂತ ಪ್ರಾಚೀನ ಅವಶೇಷಗಳು ಉಳಿದಿವೆ.
"https://kn.wikipedia.org/wiki/ಕಂಬಳಿ" ಇಂದ ಪಡೆಯಲ್ಪಟ್ಟಿದೆ