Content deleted Content added
No edit summary
No edit summary
೭ ನೇ ಸಾಲು:
| short quote =
| about me = ಹೆಮ್ಮೆಯ ಕನ್ನಡಿಗ, ಬೆಂಗಳೂರಿನವ, ವಿಕಿಪೀಡಿಯನ್, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಳಕೆದಾರ, ಬೆಂಬಲಿಗ ಮತ್ತು ಪ್ರಚಾರಕ. ಕನ್ನಡ ಮತ್ತು ಅದರ ಸುತ್ತಲಿನ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದೇನೆ. ತಂತ್ರಜ್ಞಾನ ಮನೆ ಮನೆಗೂ ತಲುಪಬೇಕಾದರೆ, ಪ್ರತಿಯೊಂದು ಕನ್ನಡ ಮನ ಅದನ್ನು ಕನ್ನಡದಲ್ಲೇ ಅರ್ಥ ಮಾಡಿಕೊಳ್ಳುವಂತಾಗಬೇಕು. ವಿಕಿಪೀಡಿಯ ಅಂತಹದ್ದೊಂದು ವೇದಿಕೆ. ಕನ್ನಡದಲ್ಲಿರುವ ಅನೇಕಾನೇಕ ವಿಷಯಗಳನ್ನು ಒಂದೆಡೆ ಕ್ರೋಢಿಕರಿಸಲು ಸಾಮಾನ್ಯನಿಗೂ ಸಮಾನ ಅವಕಾಶ ಕೊಡುತ್ತಿರುವ ಕನ್ನಡ ವಿಕಿಪೀಡಿಯಕ್ಕೆ ನನ್ನ ಮತ್ತು ನಿಮ್ಮಂತಹವರನ್ನು ಒಗ್ಗೂಡಿಸುವುದು ಸಧ್ಯದ ಗುರಿ.
ವಿಕಿಮೀಡಿಯ ಭಾರತದ ಸದಸ್ಯನಾಗಿದ್ದು, '''ಕನ್ನಡ ವಿಶೇಷ ಆಸಕ್ತಿ ಬಳಗ'''ವನ್ನು ಕಟ್ಟುವ ಸಣ್ಣದೊಂದು ಪ್ರಯತ್ನವನ್ನು ಮಾಡುತ್ತಿದ್ದೇನೆ. ಉದ್ಯೋಗದಲ್ಲಿ ಬೆಂಗಳೂರಿನ ಸಣ್ಣದೊಂದು ಸಾಫ್ಟ್ವೇರ್ ಕಂಪೆನಿಯ ತಂತ್ರಜ್ಞಾನ ಮತ್ತು ತರಭೇತಿಯ ಮುಖ್ಯಸ್ಥ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಟದೊಡನೆ ಈಗಾಗಲೇ ೧೦ಕ್ಕಿಂತ ಹೆಚ್ಚು ವರ್ಷಗಳನ್ನು ಕಳೆದಿರುವ ನನಗೆ [[ಗ್ನು]]/[[ಲಿನಕ್ಸ್]] ಬಗ್ಗೆ ಕನ್ನಡದಲ್ಲಿ ತಿಳಿಸುವುದೆಂದರೆ ಬಹಳ ಇಷ್ಟ. ನಿಮಗೂ ಇದರಲ್ಲಿ ಆಸಕ್ತಿ ಇದ್ದರೆ [http://linuxaayana.net ಲಿನಕ್ಸಾಯಣ]ಕ್ಕೆ ಒಮ್ಮೆ ಭೇಟಿಕೊಡಿ. ಆಗಾಗ ಕನ್ನಡದಲ್ಲಿ ನಾನು ಬರೆಯುವ ವಿಜ್ಞಾನ, ತಂತ್ರಜ್ಞಾನ, ಕವನ ಇತ್ಯಾದಿಗಳನ್ನು [http://blog.shivu.in ನನ್‌ಮನ]ನಲ್ಲಿ ನೋಡಬಹುದು. [[ಫೋಟೋಗ್ರಫಿ]], [[ಸೈಕ್ಲಿಂಗ್]] ಮತ್ತು [[ಚಾರಣ]] ನನ್ನ ಇನ್ನಿತರ ಆಸಕ್ತಿಗಳು.
 
| about my work = ನಾನು ೨೦೦೭ ರಿಂದ ವಿಕಿಪೀಡಿಯದಲ್ಲಿದ್ದೇನೆ. ಅದಕ್ಕಿಂತ ಮುಂಚೆ ಕೇವಲ ವಿಕಿಪೀಡಿಯವನ್ನು ಮಾಹಿತಿಗಾಗಿ ಬಳಸುತ್ತಿದ್ದರೂ, ೨೦೦೭ರ ನಂತರವೇ ಕನ್ನಡ ವಿಕಿಪೀಡಿಯ ಯೋಜನೆಗಳ ಸುತ್ತ ನನ್ನ ಕೈಲಾದ ಕಾಣಿಕೆಗಳನ್ನು ನೀಡುತ್ತಾ ಬಂದಿದ್ದೇನೆ. ಈಗ ಸಕ್ರಿಯ ಸ್ವಯಂಸೇವಕನಾಗಿ, ಸಂಪಾದಕನಾಗಿ, ಮೇಲ್ವಿಚಾರಕನಾಗಿಯೂ ಕನ್ನಡ ವಿಕಿಯ ಸುತ್ತ ಕೆಲಸ ನಿರ್ವಹಿಸುತ್ತೇನೆ. ಟೆಂಪ್ಲೇಟುಗಳು, ಮಾಹಿತಿ ಮತ್ತು ಯೋಜನೆಗಳ ನಿರ್ವಹಣೆ ವಿಕಿಯ ಸುತ್ತಲಿನ ನನ್ನ ಮುಖ್ಯ ಆಸಕ್ತಿಗಳು. ವಿಕಿಪೀಡಿಯ ಕಾರ್ಯಾಗಾರಗಳು, ಸಮ್ಮಿಲನಗಳು, ವಿಕಿ ಸಂಪಾದನೋತ್ಸವಗಳನ್ನು ಆಯೋಜಿಸಿ, ನಿರ್ವಹಿಸುತ್ತಾ ಬಂದಿದ್ದೇನೆ. ನನ್ನ ವಿಕಿಪೀಡಿಯ ಸಂಬಂಧಿತ ಲೇಖನಗಳು ಹಲವು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬೆಂಗಳೂರು ವಿಶ್ವವಿದ್ಯಾನಿಲಯದ ತರಗತಿಗಳ ಪಠ್ಯದಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನ ತನ್ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಪ್ರಕಟಿಸಿದ 'ವಿಜ್ಞಾನ-ತಂತ್ರಜ್ಞಾನ' ಪುಸ್ತಕದಲ್ಲಿಯೂ ವಿಕಿ ಇತಿಹಾಸ, ಕನ್ನಡ ವಿಕಿಯ ಸ್ಥಿತಿಗತಿ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಕುರಿತು ನಾನು ಬರೆದ ಲೇಖನಗಳನ್ನು ಪ್ರಕಟಿಸಲಾಗಿದೆ. ಉದ್ಯೋಗದಲ್ಲಿ ಬೆಂಗಳೂರಿನ ಸಣ್ಣದೊಂದು ಸಾಫ್ಟ್ವೇರ್ ಕಂಪೆನಿಯ ತಂತ್ರಜ್ಞಾನ ಮತ್ತು ತರಭೇತಿಯ ಮುಖ್ಯಸ್ಥನಾಗಿದ್ದೇನೆ.
| contact me = * ಐ.ಆರ್.ಸಿ: techfiz
* ಟ್ವಿಟರ್: omshivaprakash
"https://kn.wikipedia.org/wiki/ಸದಸ್ಯ:Omshivaprakash" ಇಂದ ಪಡೆಯಲ್ಪಟ್ಟಿದೆ