ಸಂಸ್ಕೃತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{Link FA}}, now given by wikidata.
No edit summary
೧೮ ನೇ ಸಾಲು:
[[ಚಿತ್ರ:Phrase sanskrit.png|thumb|right]]
== ಚರಿತ್ರೆ ==
ಪ್ರಾಚೀನ ಕಾಲದಲ್ಲಿ ಧಾರ್ಮಿಕ ಹಾಗೂ ವೈಜ್ಞಾನಿಕ ಜಿಜ್ಞಾಸೆಗೆ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತ ಆಡುಭಾಷೆಗಳಿಂದ ಸ್ವಲ್ಪ ಭಿನ್ನರೂಪದ್ದಾಗಿತ್ತು ಎಂದು ಚರಿತ್ರಜ್ಞರ ನಂಬಿಕೆ. ಸಂಸ್ಕೃತ ವ್ಯಾಕರಣದ ಮೇಲಿನ ಪುಸ್ತಕಗಳಲ್ಲಿ ಲಭ್ಯವಾಗಿರುವ ಅತ್ಯಂತ ಹಳೆಯದು [[ಪಾಣಿನಿ|ಪಾಣಿನಿಯ]] [[ಅಷ್ಟಾಧ್ಯಾಯೀ|"ಅಷ್ಟಾಧ್ಯಾಯೀ"]] (ಸುಮಾರು ಕ್ರಿ.ಪೂ. ಐದನೆಯ ಶತಮಾನ). ವೇದಗಳ ಕಾಲದ ಸಂಸ್ಕೃತ ಮತ್ತು ಅದರ ನಂತರದ ಕೆಲ ಶತಮಾನಗಳ ಸಂಸ್ಕೃತದ ವ್ಯಾಕರಣ ಎನ್ನಬಹುದು. ನಂತರದ ಶತಮಾನಗಳಲ್ಲಿ ಸ್ವತಂತ್ರ ಸಾಹಿತ್ಯಕ್ಕೆ ಸಹ ಉಪಯೋಗಿಸಲಾದ ಸಂಸ್ಕೃತ ಭಾರತೀಯ ಸಾಹಿತ್ಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿತು. ಆಧುನಿಕ ಭಾರತೀಯ ಭಾಷೆಗಳಲ್ಲಿನ ಅನೇಕ ಪದಗಳು ಸಂಸ್ಕೃತದಿಂದ ಎರವಲು ಪಡೆದವು. ಸಂಸ್ಕೃತ ಭಾಷೆಯು ಭಾರತೀಯ ಎಲ್ಲಾ ಭಾಷೆಗಳ ತಾಯಿಯಾಗಿದೆ.
 
== ಸಂಸ್ಕೃತದ ಕವಿಗಳು ==
ಜಗತ್ತಿನ ಎಲ್ಲ ಭಾಷೆಗಳಿಗೂ ಮೂಲ ಎಂದು ನಂಬಲಾಗಿರುವ ಸಂಸ್ಕೃತವನ್ನು ನೂರಾರು ಮಹಾಕವಿಗಳು, ದಾರ್ಶನಿಕರು ಸಮೃದ್ಧಗೊಳಿಸಿದ್ದಾರೆ. ಆ ಪಟ್ಟಿಯಲ್ಲಿ ಮೊದಲು ಬರುವವರು ವಾಲ್ಮೀಕಿ ಮುನಿ. ಅವರಿಂದಲೇ ಸಂಸ್ಕೃತದ ಮೊದಲ ಶ್ಲೋಕ ಹುಟ್ಟಿತು. ಅದು 'ಮಾ ನಿಷಾದ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀ ಸಮಾಃ. ಯತ್ಕ್ರೌಂಚ ಮಿಥುನಾತ್ ಏಕಮವಧೀಹಿ ಕಾಮಮೋಹಿತಂ' ಎಂಬುದು. ಬೇಡನೊಬ್ಬ ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದಾಗ ಅದನ್ನು ನೋಡಿ ಸಿಟ್ಟುಗೊಂಡ ವಾಲ್ಮೀಕಿ ಮುನಿ ತಮಗೇ ಗೊತ್ತಿಲ್ಲದಂತೆ ಈ ಶ್ಲೋಕ ಹೇಳಿ ಬೇಡನಿಗೆ ಶಾಪ ಕೊಟ್ಟರು. ಶೋಕದಲ್ಲಿ ಹುಟ್ಟಿದ ಅದು ಶ್ಲೋಕವೆಂದು ಪ್ರಸಿದ್ಧಿಗೆ ಬಂತು. ಅವರ ಶಿಷ್ಯ ಭರಧ್ವಾಜ ಮುನಿ ಇದನ್ನು ದಾಖಲಿಸಿದ. ಇದೇ ವಾಲ್ಮೀಕಿ ಮುನಿಗಳು ರಾಮಾಯಣವನ್ನೂ ರಚಿಸಿದರು. ನಂತರ ವ್ಯಾಸರಿಂದ ಮಹಾಭಾರತ ರಚಿತವಾಯಿತು. ಇವರಿಬ್ಬರು ಸಂಸ್ಕೃತದ ಮೂಲ ಕವಿಗಳಾದರೆ, ಈ ಭಾಷೆಯ ಆದಿಕವಿ ಎಂದು ಹೆಸರಾದವರು ಕಾಳಿದಾಸ. ಅಭಿಜ್ಞಾನ ಶಾಕುಂತಲ ನಾಟಕ ಇವರ ಮಹತ್ವದ ಕೃತಿ. ಇದಲ್ಲದೆ ಮಾಲವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ ಎಂಬ ನಾಟಕಗಳನ್ನೂ, ಕುಮಾರಸಂಭವ, ರಘುವಂಶ ಎಂಬ ಮಹಾಕಾವ್ಯಗಳನ್ನೂ, ಮೇಘದೂತ, ಋತುಸಂಹಾರ ಎಂಬ ಖಂಡಕಾವ್ಯಗಳನ್ನೂ ಕಾಳಿದಾಸ ಬರೆದಿದ್ದಾರೆ. ಇವರ ಜೊತೆಗೆ ಭಾಸ, ಭಾರವಿ, ಶ್ರೀಹರ್ಷ, ಬಾಣ ಮುಂತಾದ ಮಹತ್ವದ ಕವಿಗಳು ಸಂಸ್ಕೃತದಲ್ಲಿ ಆಗಿಹೋಗಿದ್ದಾರೆ.
 
'''ಗಮನಿಸಿ : ಕಾಳಿದಾಸರಿಗೆ ಭಾರತದ ಶೇಕ್ಸ್ ಪಿಯರ್ ಎಂಬ ಅಭಿದಾನವೂ ಇದೆ. ಆದರೆ ಕಾಳಿದಾಸರನ್ನು ಹೀಗೆ ಕರೆಯುವ ಯಾವುದೇ ಅಗತ್ಯವಿಲ್ಲ. ಏಕೆಂದರೆ, ಶೇಕ್ಸ್ ಪಿಯರ ಕಾಲ ಏಪ್ರಿಲ್ ೨೬ ೧೫೬೪, ಹಾಗು ಕಾಳಿದಾಸರ ಕಾಲ ೫ ನೇ ಶತಮಾನ. ಕಾಳಿದಾಸರ ಕಾವ್ಯಗಳು ಎಷ್ಟೋ ಶತಮಾನ ಹಳೆಯದು. ಇನ್ನು ಶೇಕ್ಸ್ ಪಿಯರನ್ನು ಇಂಗ್ಲೆಂಡಿನ ಕಾಳಿದಾಸರೆಂದು ಕರೆಯುವುದರಲ್ಲಿ ಅರ್ಥವಿದೆ. ತಪ್ಪಾದ ಈ ವಾಕ್ಯವನ್ನು ಭಾರತೀಯರು ಎಂದೂ ಒಪ್ಪುವುದಿಲ್ಲ, ಒಪ್ಪುವ ಅಗತ್ಯವೂ ಇಲ್ಲ.'''
"https://kn.wikipedia.org/wiki/ಸಂಸ್ಕೃತ" ಇಂದ ಪಡೆಯಲ್ಪಟ್ಟಿದೆ