ಯೋಜಿಸುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
ವಿಸ್ತರಣೆ
೪೭ ನೇ ಸಾಲು:
=='''ಯೋಜಿಸುವಿಕೆಯ ಮಿತಿಗಳು'''==
 
# '''೧. ಯೋಜಿಸುವಿಕೆಯು ಕಠಿಣತೆಗೆ ಆಸ್ಪದ ನೀಡುತ್ತದೆ'''
 
# '''ಯೋಜಿಸುವಿಕೆಯು ಬದಲಾಗುವ ಪರಿಸ್ಥಿತಿಯಲ್ಲಿ ನಿಶ್ಚಲಗೊಳ್ಳಬಹುದು'''
ಈ ಯೋಜನೆಯು ಭವಿಷ್ಯದ ಕಾರ್ಯಮಾರ್ಗವನ್ನು ನಿರ್ಧರಿಸುತ್ತದೆ ಮತ್ತು ವ್ಯವಸ್ಥಾಪಕರು ಆ ನಿಗದಿಪಡಿಸಿದ ಕಾರ್ಯಮಾರ್ಗದಲ್ಲಿಯೇ ತಮ್ಮ ಚಟುವಟಿಕೆಗಳನ್ನು ನಡೆಸಬೇಕು.ಇದು ವ್ಯವಸ್ಥಾಪಕರ ಕಾರ್ಯಚರಣೆಯಲ್ಲಿ ಕಠಿಣತೆಗೆ ಕಾರಣವಾಗುತ್ತದೆ.ಇದರಿಂದ ವ್ವವಸ್ಥಾಪಕರ ಕಾರ್ಯಸ್ವಾತಂತ್ರ,ಸ್ವಯಂಪ್ರೇರಣೆ ಮತ್ತು ಸೃಜನಶೀಲತೆಯನ್ನು ನಿರ್ಬಂಧಿಸಿದಂತಾಗುತ್ತದೆ.
# '''ಯೋಜನೆಯು ಸೃಜನಶೀಲತೆಯನ್ನು ಮಿತಗೊಳಿಸುತ್ತದೆ'''
 
# '''ಯೋಜನಾ ಪ್ರಕ್ರಿಯೆ ಹೆಚ್ಚು ವೆಚ್ಚವನ್ನು ಒಳಗೊಂಡಿದೆ'''
# '''೨. ಯೋಜಿಸುವಿಕೆಯು ಬದಲಾಗುವ ಪರಿಸ್ಥಿತಿಯಲ್ಲಿ ನಿಶ್ಚಲಗೊಳ್ಳಬಹುದು'''
# '''ಯೋಜಿಸುವಿಕೆಗೆ ಹೆಚ್ಚಿನ ಸಮಯದ ಅಗತ್ಯವಿದೆ'''
 
# '''ಯೋಜನೆಯು ಯಶಸ್ಸನ್ನು ಖಾತರಿಗೊಳಿಸುವುದಿಲ್ಲಾ'''
ವ್ಯವಹಾರ ಪರಿಸರವು ಚಲನಶೀಲ ಲಕ್ಷಣವನ್ನು ಹೊಂದಿದೆ ಹಾಗೂ ಯಾವುದೂ ಸ್ಥಿರವಲ್ಲ.ಯೋಜಿಸುವಿಕೆಯು ಭವಿಷ್ಯವನ್ನು ಮುನ್ನಂದಾಜಿಸುತ್ತಾದರೂ,ಭವಿಷ್ಯದಲ್ಲಿ ಉಂಟಾಗುವ ಬದಲಾವಣೆಯ ದಿಕ್ಕುಗಳನ್ನು ನಿಖರವಾಗಿ ನಿರ್ಧರಿಸುವುದು ಕಷ್ಟವಾಗುತ್ತದೆ.ಉತ್ಪಾದನಾ ವಿಧಾನ,ಮಾರಾಟ ನೀತಿ,ಆರ್ಥಿಕ ನೀತಿ ,ಮುಂತಾದವುಗಳಲ್ಲಿ ಯಾವುದಾದರು ಅನಿರೀಕ್ಷಿತ ಬದಲಾವಣೆಗಳುಂಟಾದಲ್ಲಿ,ವ್ವವಹಾರದ ಯೋಜನೆಗಳು ನಿಷ್ಕ್ರಿಯಗೊಳ್ಳುತ್ತದೆ.
 
# '''೩. ಯೋಜನೆಯು ಸೃಜನಶೀಲತೆಯನ್ನು ಮಿತಗೊಳಿಸುತ್ತದೆ'''
 
ಯೋಜನೆಗಳನ್ನು ಮೇಲಿನ ಹಂತದ ನಿರ್ವಹಣಾಂಗವು ರೂಪಿಸುತ್ತದೆ.ಪರಿಣಾಮವಾಗಿ ಮಧ್ಯಮ ಹಂತದ ನಿರ್ವಹಣಾಂಗ ಮತ್ತು ಇನ್ನಿತರ ನಿರ್ಧಾರ ಕೈಗೊಳ್ಳುವ ಸಿಬ್ಬಂದಿಗಳಿಗೆ ಯೋಜನಾ ಪರಿಮಿತಿಯ ಹೊರಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡುವುದಿಲ್ಲ.ಇದರಿಂದ ಯೋಜನೆಯು ಅಧೀನಾಧಿಕಾರಿಗಳ ಸೃಜನಾತ್ಮಕತೆಯನ್ನು ಮಿತಗೊಳಿಸುತ್ತದೆ.
 
# '''೪. ಯೋಜನಾ ಪ್ರಕ್ರಿಯೆ ಹೆಚ್ಚು ವೆಚ್ಚವನ್ನು ಒಳಗೊಂಡಿದೆ'''
 
ಯೋಜಿಸುವುದು ಹೆಚ್ಚು ವೆಚ್ಚದಾಯಕವಾದ ಪ್ರಕ್ರಿಯೆಯಾಗಿದೆ.ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ,ಉತ್ತಮ ಕಾರ್ಯಮಾರ್ಗದ ಆಯ್ಕೆ ಮತ್ತು ಅವಲೋಕನ ಹೆಚ್ಚು ವೆಚ್ಚವನ್ನು ಒಳಗೊಂಡಿದೆ.ಹೀಗಾಗಿ ಕೆಲವೊಮ್ಮೆ ಯೋಜನೆಯ ತಯಾರಿಕೆಗೆ ಮಾಡುವ ವೆಚ್ಚವು ಅದರಿಂದಾಗುವ ಪ್ರಯೋಜನಕ್ಕಿಂತ ಹೆಚ್ಚಾಗಿರುತ್ತದೆ.
 
# '''೫. ಯೋಜಿಸುವಿಕೆಗೆ ಹೆಚ್ಚಿನ ಸಮಯದ ಅಗತ್ಯವಿದೆ'''
 
ಯೋಜನಾ ತಯಾರಿಕಾ ಪ್ರಕ್ರಿಯೆಯು ಹೆಚ್ಚು ಸಮಯವನ್ನು ಬಯಸುತ್ತದೆ.ಅಂಕಿ-ಅಂಶಗಳ ಸಂಗ್ರಹಣೆ ಮತ್ತು ವಿಶ್ಲೇಷಣೆ ಮಾಡಲು,ಕಾರ್ಯಮಾರ್ಗಗಳ ಆಯ್ಕೆ ಮತ್ತು ಅವಲೋಕನ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ.
# '''೬. ಯೋಜನೆಯು ಯಶಸ್ಸನ್ನು ಖಾತರಿಗೊಳಿಸುವುದಿಲ್ಲಾ'''
 
ಸಂಸ್ಥೆಯೊಂದರ ಯಶಸ್ಸು ಉತ್ತಮವಾದ ಯೋಜನೆಗಳನ್ನು ತಯಾರಿಸಿ,ಜಾರಿಗೊಳಿಸಿದಾಗ ಮಾತ್ರ ಸಾಧ್ಯವಾಗುತ್ತದೆ.ಯಾವುದೇ ಯೋಜನೆಯನ್ನು ಸಿದ್ದಪಡಿಸಿದ ಸಂತರ,ಅದನ್ನು ವಾಸ್ತವಿಕ ಕಾರ್ಯವಾಗಿ ಪರಿವರ್ತಿಸಬೇಕಾದ ಅಗತ್ಯವಿದೆ,ಇಲ್ಲದಿದ್ದರೆ ಅದು ನಿರರ್ಥಕವಾಗಿತ್ತದೆ.ಸಾಮಾನ್ಯವಾಗಿ ವ್ಯವಸ್ಥಾಪಕರು ಹಿಂದೆ ಯೋಗ್ಯವೆಂದು ರುಜುವಾತಾದ ಮತ್ತು ಯಶಸ್ವಿಯಾದ ಯೋಜನೆಗಳ ಮೇಲೆ ಅವಲಂಬಿತವಾಗಿವ ಪ್ರವೃತ್ತಿಯನ್ನು ಹೊಂದಿರುತ್ತಾರೆ.ಆದರೆ ಹಿಂದೆ ಯಶಸ್ವಿಯಾದ ಯೋಜನೆಗಳು ಮತ್ತೆ ಮತ್ತೆ ಯಶಸ್ವಿಯಾಗುತ್ತವೆ ಎಂಬುದರಲ್ಲಿ ಹುರುಳಿರುವುದಿಲ್ಲ.ಹೀಗಾಗಿ ಯೋಜನೆಗಳು ಕೇವಲ ಭವಿಷ್ಯದ ಕಾರ್ಯಮಾರ್ಗಗಳ ವಿಶ್ಲೇಷಣೆಗೆ ಮಾತ್ರ ಅನುವು ಮಾಡಿಕೊಡುತ್ತದೆ.
 
=='''ಯೋಜಿಸುವಿಕೆಯ ಪ್ರಕ್ರಿಯೆ ಅಥವಾ ಯೋಜನಾ ಪ್ರಕ್ರಿಯೆಯಲ್ಲಿನ ಹಂತಗಳು''' ==
 
# '''೧. ಉದ್ದೇಶಗಳನ್ನು ಸ್ಥಾಪಿಸುವುದು ಅಥವಾ ನಿರ್ಧರಿಸುವುದು'''
 
# '''ಯೋಜಿಸುವಿಕೆಯ ಪ್ರಗತಿ ಅಥವಾ ಊಹೆಗಳನ್ನು ಅಭಿವೃದ್ದಿಪಡಿಸುವುದು'''
ಉದ್ದೇಶಗಳನ್ನು ನಿರ್ಧರಿಸುವುದು ಯೋಜನಾ ಪ್ರಕ್ರಿಯೆಯ ಮೊದಲ ಕಾರ್ಯವಾಗಿದೆ.ಉದ್ದೇಶಗಳು ಸಂಸ್ಥೆಯ ಗುರಿಗಳಾಗಿದ್ದು,ಸಂಸ್ಥೆಯು ಏನನ್ನು ಸಾಧಿಸಬೇಕೆಂಬುದನ್ನು ಸ್ಪಷ್ಟಪಡಿಸುತ್ತದೆ.ಉದ್ದೇಶಗಳು ಸಾಧ್ಯವಾದಷ್ಟು ಮಟ್ಟಿಗೆ ನಿರ್ದಿಷ್ಟವಾಗಿರಬೇಕು.ಪ್ರತಿಯೊಂದು ವ್ಯವಹಾರ ಸಂಸ್ಥೆಯು ಕೆಲವು ಉದ್ದೇಶಗಳನ್ನು ಹೊಂದಿರಲೇಬೇಕು.ಉದ್ದೇಶಗಳನ್ನು ಅಥವಾ ಗುರಿಗಳನ್ನು ಒಟ್ಟು ಸಂಸ್ಥೆಗೆ ನಿಗದಿಪಡಿಸಬಹುದು ಮತ್ತು ಪ್ರತಿ ವಿಭಾಗಕ್ಕೆ ಅಥವಾ ಸಂಸ್ಥೆಯಲ್ಲಿನ ಒಂದು ಘಟಕಕ್ಕೆ ನಿಗದಿಪಡಿಸಬಹುದು.ಉದ್ದೇಶಗಳನ್ನು ಪ್ರತಿಯೊಂದು ವಿಭಾಗಕ್ಕೆ ಮತ್ತು ಎಲ್ಲಾ ನೌಕರರಿಗೆ ಸ್ಪಷ್ಟವಾಗಿ ತಿಳಿಸಿರಬೇಕು.
# '''ಪರ್ಯಾಯ ಕಾರ್ಯಮಾರ್ಗಗಳನ್ನು ಗುರುತಿಸುವುದು'''
# '''ಪರ್ಯಾಯ ಕಾರ್ಯಮಾರ್ಗಗಳ ವಿಶ್ಲೇಷಣೆ'''
# '''೨. ಯೋಜಿಸುವಿಕೆಯ ಪ್ರಗತಿ ಅಥವಾ ಊಹೆಗಳನ್ನು ಅಭಿವೃದ್ದಿಪಡಿಸುವುದು'''
# '''ಉತ್ತಮವಾದ ಪರ್ಯಾಯ ಕಾರ್ಯಮಾರ್ಗದ ಆಯ್ಕೆ'''
 
# '''ಯೋಜನೆಯನ್ನು ಜಾರಿಗೊಳಿಸುವುದು'''
ಯೋಜಿಸುವಿಕೆಯು ಅನಿಶ್ಚಿತ ಭವಿಷ್ಯದಲ್ಲಿ ಸಂಸ್ಥೆಯ ಉದ್ದೇಶಗಳನ್ನು ಸಾಧಿಸುವುದಕ್ಕೆ ಅಗತ್ಯವಾಗಿದೆ.ಆದುದರಿಂದ ಯೋಜನೆಗಳನ್ನು ಕೆಲವೊಂದು ಊಹೆಗಳ ಆಧಾರದ ಮೇಲೆ ತಯಾರಿಸಲಾಗುತ್ತದೆ.ಯೋಜನಾ ಪ್ರಮಿತಿಗಳು,ಭವಿಷ್ಯದ ಪರಿಸ್ಥಿತಿ ಮತ್ತು ಘಟನೆಗಳಿಗೆ ಸಂಬಂಧಿಸಿದ ಊಹೆ ಅಥವಾ ಕಲ್ಪನೆಗಳಾಗಿವೆ.ಅಂದರೆ ಭವಿಷ್ಯದ ಜನಸಂಖ್ಯಾ ಬೆಳವಣಿಗೆಯ ಪ್ರವೃತ್ತಿ,ರಾಜಿಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿನ ಬದಲಾವಣೆಗಳು,ಉತ್ಪಾದನಾ ವೆಚ್ಚ ಮತ್ತು ಬೆಲೆಗಳಲ್ಲಿನ ಏರಿಳಿತಗಳು,ಸರ್ಕಾರ ಹಾಗು ಕಾನೂನಿನ ನಿಯಮ ಮತ್ತು ನಬಂಧನೆಗಳಲ್ಲಿನ ಬದಲಾವಣೆ ಮುಂತಾದ ಅಂಶಗಳಿಗೆ ಸಂಬಂಧಿಸಿದಂತೆ ಮಾಡಿದ ಊಹೆ ಅಥವಾ ಕಲ್ಪನೆಗಳಾಗಿವೆ.ನಿರ್ವಹಣಾಂಗವು ಯೋಜನೆಗಳನ್ನು ಯೋಜನಾ ಮಿತಿಯೊಳಗೆ ತಯಾರಿಸಬೇಕು.
# '''ಪ್ರಗತಿ ವಿಶ್ಲೇಷಣೆ ಅಥವಾ ಮುಂಬರಿಕೆ'''
# '''೩. ಪರ್ಯಾಯ ಕಾರ್ಯಮಾರ್ಗಗಳನ್ನು ಗುರುತಿಸುವುದು'''
 
ಉದ್ದೇಶಗಳನ್ನು ಸ್ಥಾಪಿಸಿ,ಯೋಜನಾ ಊಹೆಗಳನ್ನು ನಿರ್ಧರಿಸಿದ ನಂತರ,ಸಂಸ್ಥೆಯು ತನ್ನ ಉದ್ದೇಶಗಳನ್ನು ಸಾಧಿಸಲು ಅವಶ್ಯಕವಾದ ಲಭ್ಯವಿರುವ ಪರ್ಯಾಯ ಕಾರ್ಯಮಾರ್ಗಗಳನ್ನು ಅಥವಾ ಕಾರ್ಯಾಚರಣೆ ವಿಧಾನಗಳನ್ನು ಗುರುತಿಸಬೇಕು.ಉದ್ದೇಶಗಳನ್ನು ಸಾಧಿಸಲು ಹಲವಾರು ಕಾರ್ಯಮಾರ್ಗಗಳಿರಬಹುದು.ಹೀಗಾಗಿ ನಿರ್ವಹಣಾಂಗವು ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಲಭ್ಯವಿರುವ ಎಲ್ಲಾ ಕಾರ್ಯ ಮಾರ್ಗಗಳನ್ನು ತಿಳಿದುಕೊಳ್ಳಬೇಕು.
# '''೪. ಪರ್ಯಾಯ ಕಾರ್ಯಮಾರ್ಗಗಳ ವಿಶ್ಲೇಷಣೆ'''
 
ಮುಂದಿನ ಹಂತವು ಪ್ರತಿಯೊಂದು ಪರ್ಯಾಯ ಕಾರ್ಯಮಾರ್ಗಗಳ ಸತ್ವ ಮತ್ತು ನೂನ್ಯತೆಗಳನ್ನು ವಿಶ್ಲೇಷಿಸುವುದಾಗಿದೆ.ಎಲ್ಲಾ ಪರ್ಯಾಯ ಮಾರ್ಗಗಳು ತಮ್ಮದೆ ಆದ ಗುಣದೋಷಗಳನ್ನು ಹೊಂದಿದೆ ಮತ್ತು ಪ್ರತಿಯೊಂದು ಕಾರ್ಯಮಾರ್ಗವನ್ನು,ಉದ್ದೇಶ ಸಾಧಿಸುವಿಕೆಗೆ ಸಂಬಂಧಿಸಿದಂತೆ ವಿಶ್ಲೇಷಣೆ ಮಾಡುವ ಅಗತ್ಯವಿದೆ.
# '''೫. ಉತ್ತಮವಾದ ಪರ್ಯಾಯ ಕಾರ್ಯಮಾರ್ಗದ ಆಯ್ಕೆ'''
 
ಇದು ನಿರ್ಧಾರಕೈಗೊಳ್ಳುವ ನಿಜವಾದ ಸಮಯವಾಗಿದೆ.ಪ್ರತಿಯೊಂದು ಕಾರ್ಯಮಾರ್ಗವನ್ನು ವಿಶ್ಲೇಷಿಸಿದ ನಂತರ ಸಂಸ್ಥೆಯ ಉದ್ದೇಶಗಳನ್ನು ಸಾಧಿಸಲು ಉತ್ತಮವಾದ ಕಾರ್ಯಮಾರ್ಗವನ್ನು ಆಯ್ಕೆ ಮಾಡಬೇಕು.ಉತ್ತಮವಾದ ಕಾರ್ಯಮಾರ್ಗ ಅಥವಾ ಕಾರ್ಯವಿಧಾನವು ಸುಲಭವಾಗಿ ಕಾರ್ಯರೂಪಕ್ಕೆ ತರುವಂತದ್ದಾಗಿರಬೇಕು,ಲಾಭದಾಯಕವಾಗಿರಬೇಕು ಮತ್ತು ನಕಾರಾತ್ಮಕ ಪರಿಣಾಮಗಳನ್ನು ಹೊಂದಿರಬೇಕು.
# '''೬. ಯೋಜನೆಯನ್ನು ಜಾರಿಗೊಳಿಸುವುದು'''
 
ಈ ಹಂತವು ಉದ್ದೇಶಗಳನ್ನು ಸಾಧಿಸುವ ಸಲುವಾಗಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಂಬಂಧಿಸಿದೆ.ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ನೀತಿ,ಕಾರ್ಯವಿಧಾನ,ಬಜೆಟ್ಟು ಮತ್ತು ಕಾರ್ಯಕ್ರಮಗಳು ಅವಶ್ಯಕವಾಗಿವೆ.ಇದಕ್ಕೆ ಅಧೀನಾಧಿಕಾರಿಗಳಿಗೆ ಅಗತ್ಯವಾದ ಅಧಿಕಾರ ಮತ್ತು ಜವಾಬ್ದಾರಿನ ನೀಡುವುದು ಅಗತ್ಯವಾಗಿರುವುದರ ಜೊತೆಗೆ ಅವರ ಸಹಕಾರ,ಭಾಗವಹಿಸುವಿಕೆ ಮತ್ತು ಅರ್ಪಣಾ ಮನೋಭಾವವು ಅವಶ್ಯಕವಾಗಿದೆ.
# '''೭. ಪ್ರಗತಿ ವಿಶ್ಲೇಷಣೆ ಅಥವಾ ಮುಂಬರಿಕೆ'''
 
ಯೋಜನೆಗಳನ್ನು ಜಾರಿಗೊಳಿಸಿ,ಸಂಸ್ಥೆಯ ಚಟುವಟಿಕೆಗಳು ಅಂಗೀಕರಿಸಿದ ಯೋಜನೆಗಳ ರೀತಿಯಲ್ಲಿ ನಡಿಯುತ್ತಿವೆಯೆ ಎಂಬುದನ್ನು ನೋಡುವುದು ಕೂಡ ಯೋಜಿಸುವಿಕೆಯ ಪ್ರಕ್ರಿಯೆಯ ಭಾಗವಾಗಿದೆ.ಯೋಜನೆಗಳನ್ನು ಮೇಲ್ವಚಾರಣೆ ಮಾಡುವುದೂ ಕೂಡ ಉದ್ದೇಶಗಳು ಸಾಧಿಸಲ್ಪಡುವುದನ್ನು ಖಾತರಿಪಡಿಸಿಕೊಂಡಷ್ಟೆ ಮುಖ್ಯವಅಗಿದೆ.
 
=='''ಯೋಜನೆಯ ವಿಧಗಳು'''==
"https://kn.wikipedia.org/wiki/ಯೋಜಿಸುವಿಕೆ" ಇಂದ ಪಡೆಯಲ್ಪಟ್ಟಿದೆ