ತಾಳೀಕೋಟೆಯ ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೭ ನೇ ಸಾಲು:
*ವಿಜಯನಗರದ ಕಾಲಾಳುಗಳ ಶಸ್ತ್ರ ಬಿದಿರಿನಿಂದ ಮಾಡಿದ ಬಿಲ್ಲು. ಸುಲ್ತಾನರ ಸೇನೆಯ ಬಿಲ್ಲು ಸಿಡಿಬಿಲ್ಲಿನಂತಿದ್ದು , ಲೋಹದಿಂದ ಮಾಡಲಾಗಿತ್ತು. ಬಿದುರಿನ ಬಿಲ್ಲುಗಳಿಗಿಂತಲೂ ಇವು ಹೆಚ್ಚು ಶಕ್ತಿಯುತವಾಗಿಯೂ, ನಿಖರವಾಗಿಯೂ ಇದ್ದವು. ವಿಜಯನಗರದ ಈಟಿಗಳು ಏಳು ಅಟಿ ಉದ್ದದ್ದಾಗಿದ್ದರೆ, ಎದುರಾಳಿಗಳದ್ದು ಹದಿನೈದು ಅಡಿ ಉದ್ದವಿತ್ತು.
 
* ಸುಲ್ತಾನರ ಸೈನ್ಯದ ಫಿರಂಗಿ ದಳದವರು ತ, ಆ ಕಾಲದಲ್ಲಿ ಅತ್ಯುತ್ತಮ ಎಂದು ಪರಿಗಣಿಸಲಾಗು ತ್ತಿದ್ದಪರಿಗಣಿಸಲಾಗುತ್ತಿದ್ದ ತುರ್ಕಿಸ್ಥಾನದಿಂದ ಬಂದವರಾಗಿದ್ದರು. ವಿಜಯನಗರ ಅವಲಂಬಿತವಾಗಿದ್ದ ಯೂರೋಪಿನ ಸಂಬಳದ ಸಿಪಾಯಿಗಳಿಗೆ ತರಬೇತಿಯ ಕೊರತೆಯಿತ್ತು.
 
*ಇಷ್ಟೆಲ್ಲಾ ಅನಾನುಕೂಲಗಳಿದ್ದರೂ, ವಿಜಯನಗರದ ಸೋಲಿಗೆ ಮುಖ್ಯ ಕಾರಣ ಅವರ ಸೇನೆಯ ಇಬ್ಬರು ಮುಖ್ಯ ಸೇನಾಧಿಕಾರಿಗಳ ವಿಶ್ವಾಸದ್ರೋಹ ಎಂಬುದನ್ನು ಇತಿಹಾಸಜ್ಞರು ಒಪ್ಪುತ್ತಾರೆ. ಈ ಇಬ್ಬರು ಗಿಲಾನಿ ಸೋದರರ ಸುಪರ್ದಿನಲ್ಲಿ ಸಾವಿರಾರು ಸೈನಿಕರ ಪಡೆಯಿತ್ತು. ಇವರಿಬ್ಬರು ಮೊದಲು ಆದಿಲ್ ಶಾಯಿಶಾಹಿ ದೊರೆಗಳ ಸೈನ್ಯದಲ್ಲಿದ್ದು , ಅಲ್ಲಿಂದ ರಾಮರಾಯನ ಸೇನೆಗೆ ಪಕ್ಷಾಂತರ ಮಾಡಿದ್ದರು. ಯುದ್ಧ ನಿರ್ಣಾಯಕ ಘಟ್ಟದಲ್ಲಿದ್ದಾಗ ಈ ಇಬ್ಬರು ಸಹೋದರರು ಯುದ್ಧಭೂಮಿಯಿಂದ ಓಡಿಹೋದರು. ವಿಜಯನಗರವನ್ನು ಕ್ರಿ.ಶ. ೧೫೬೭ರಲ್ಲಿ ಸಂದರ್ಶಿಸಿದ್ದ ಫ್ರೆಂಡ್ರಿಚಿ ಮತ್ತು ಅಂಕೆಟಿ ದು ಪೆರಾನ್ ಎಂಬ ಯೂರೋಪಿನ ಪ್ರವಾಸಿಗಳ ಬರವಣಿಗೆಗಳೂ ಈ ವಿಷಯವನ್ನು ಧೃಡಪಡಿಸುತ್ತದೆ.
 
[[ವರ್ಗ:ವಿಜಯನಗರ ಸಾಮ್ರಾಜ್ಯ]]
"https://kn.wikipedia.org/wiki/ತಾಳೀಕೋಟೆಯ_ಯುದ್ಧ" ಇಂದ ಪಡೆಯಲ್ಪಟ್ಟಿದೆ