"ತಾಳೀಕೋಟೆಯ ಯುದ್ಧ" ಆವೃತ್ತಿಗಳ ಮಧ್ಯದ ಬದಲಾವಣೆಗಳು

[[ಅಹಮದ್ ನಗರ]] , ಬೆರಾರ್ ( ಮುಂದೆ ಹೈದರಾಬಾದ್ ನಿಜಾಮನ ರಾಜ್ಯದ ಭಾಗ,ಇಂದಿನ [[ಮಹಾರಾಷ್ಟ್ರ]]ದ ವಿದರ್ಭ ಪ್ರದೇಶದಲ್ಲಿದೆ) , [[ಬೀದರ್]], [[ಬಿಜಾಪುರ]] ಮತ್ತು ಗೋಲ್ಕೊಂಡದ ಸುಲ್ತಾನರುಗಳ ಒಕ್ಕೂಟದ ಸೇನೆ ಜನವರಿ ೨೬, ೧೫೬೫ರಂದು ಕೃಷ್ಣಾ ನದಿಯ ದಂಡೆಯ ಮೇಲೆ, ರಕ್ಕಸ ಮತ್ತು ತಂಗಡಿ ಎಂಬ ಹಳ್ಳಿಗಳ ನಡುವಿನಲ್ಲಿದ್ದ, ತಾಳೀಕೋಟೆ (ಇದು ಇಂದಿನ [[ಕರ್ನಾಟಕ]] ರಾಜ್ಯದಲ್ಲಿದೆ) ಎಂಬಲ್ಲಿ ವಿಜಯನಗರದ ಸೇನೆಯೊಂದಿಗೆ ಯುದ್ಧ ಹೂಡಿತು. ಇಂತಹಾ ಒಕ್ಕೂಟದ ಸಮರ ವ್ಯೂಹ ಮಧ್ಯಕಾಲದ [[ಭಾರತ]]ದ ಇತಿಹಾಸದಲ್ಲಿ ಅಪರೂಪ. ವಿಜಯನಗರ ಸಾಮ್ರಾಜ್ಯದೊಂದಿಗೆ ವಿರಸವಿದ್ದ ಕೆಲ ಕಿರು ಹಿಂದೂ ರಾಜ್ಯಗಳೂ ಈ ಯುದ್ಧದಲ್ಲಿ ಸುಲ್ತಾನರ ಒಕ್ಕೂಟದ ಬೆಂಬಲಕ್ಕೆ ಬಂದವು. ಸುಲ್ತಾನರುಗಳ ಸೇನೆಯಲ್ಲಿ ೮೦ ಸಾವಿರ ಪದಾತಿಗಳೂ, ೩೦ ಸಾವಿರ ಅಶ್ವಸೈನ್ಯವೂ ಇದ್ದರೆ, ವಿಜಯನಗರದ ಸೇನೆಯಲ್ಲಿ ೧೪೦ ಸಾವಿರ ಕಾಲಾಳುಗಳೂ, ೧೦ ಸಾವಿರ ಅಶ್ವ ಸೈನಿಕರೂ ಇದ್ದರು. ಎರಡೂ ಸೈನ್ಯಗಳಲ್ಲಿ ಬಹುಸಂಖ್ಯೆಯಲ್ಲಿ ಆನೆಗಳೂ ಇದ್ದವು. ಈ ಯುದ್ಧ ಘೋರವಾಗಿದ್ದರೂ ಅಲ್ಪಾವಧಿಯಲ್ಲಿಯೇ ಮುಗಿದುಹೋಯಿತು. ಕಲ್ಲು ಬಂಡೆಗಳ ಈ ಯುದ್ಧ ಪ್ರದೇಶದಲ್ಲಿ, ತೋಪುಗಳಿಂದ ಹಲ್ಲೆ ನಡೆಸಿ, ವಿಜಯನಗರದ ಸೈನ್ಯದ ಮಂಚೂಣಿಯನ್ನು ಒಕ್ಕೂಟದ ಸೇನೆ ಹಣ್ಣು ಮಾಡಿತು. ಈ ಫಿರಂಗಿಗಳ ಈ ತೀವ್ರ ದಾಳಿಯಿಂದ ತತ್ತರಿಸಿದ ವಿಜಯನಗರ ಸೇನೆಯ ಮೇಲೆ ಒಕ್ಕೂಟದ ಸೇನೆ ನುಗ್ಗಿ ಅದನ್ನು ಧೂಳೀಪಟ ಮಾದಿತು. ರಾಮರಾಯನ ಶಿರಛ್ಛೇದ ಮಾಡಿ ಸಾರ್ವಜನಿಕರಿಗೆ ಪ್ರದರ್ಶನ ಮಾಡಲಾಯಿತು. ವಿಜಯನಗರ ಸಾಮ್ರಾಜ್ಯವನ್ನು ಲೂಟಿಮಾಡಿ ಸಂಪೂರ್ಣವಾಗಿ ಧ್ವಂಸಮಾಡಲಾಯಿತು.
 
==ಯುದ್ಧಾನಂತರ==
 
ಈ ಯುದ್ಧ ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯದ ಅವನತಿಗೆ ಕಾರಣವಾದದ್ದಷ್ಟೇ ಅಲ್ಲ, ಸಂಪೂರ್ಣ [[ಭಾರತ]]ದಲ್ಲಿಯೇ ಹಿಂದೂ ರಾಜ್ಯಗಳ ಕೊನೆಗಾಲಕ್ಕೆ ನಾಂದಿ ಹಾಡಿತು. ವಿಜಯೋನ್ಮತ್ತ ಸುಲ್ತಾನರ ಸೇನೆ, ಇತರ ಕಳ್ಳಕಾಕರು ಮತ್ತು ಕಾಡುನಿವಾಸಿಗಳ ಗುಂಪುಗಳೊಂದಿಗೆ ವಿಜಯನಗರಕ್ಕೆ ಲಗ್ಗೆ ಇಟ್ಟಿತು. ಲೂಟಿ, ದರೋಡೆ, ಕಗ್ಗೊಲೆ, ಸುಲಿಗೆಗಳು ಅವ್ಯಾಹತವಾಗಿ ನಡೆದವು. ಕೊಡಲಿ, ಗಡಾರಿ, ಕತ್ತಿ ಇತ್ಯಾದಿಗಳೊಂದಿಗೆ ನಗರವನ್ನು ಹಾಳುಗೆಡವಿ, ಬೆಂಕಿ ಹಚ್ಚಲಾಯಿತು. ಈ ಧಾಳಿಯಿಂದ ವಿಜಯನಗರ ಮುಂದೆಂದೂ ಚೇತರಿಸಿಕೊಳ್ಳಲಿಲ್ಲ. [[ಪೆನುಗೊಂಡೆ]]ಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಜಯನಗರ ಮತ್ತೆ ಮೇಲೇಳುವ ಪ್ರಯತ್ನ ಮಾಡಿದರೂ, ಅದು ಯಶಸ್ವಿಯಾಗಲಿಲ್ಲ. ಜನಬೆಂಬಲ ಅಳಿಯ ರಾಮರಾಯನ ತಮ್ಮನ ಪರವಾಗಿದ್ದ ಕಾರಣ , ಪಟ್ಟವೇರುವ ತಿರುಮಲನ ಪ್ರಯತ್ನ ಫಲಿಸಲಿಲ್ಲ. ಅದಕ್ಕಾಗಿ ಆತ ಮತ್ತೂ ಆರು ವರ್ಷ ಕಾಯಬೇಕಾಯಿತು. ಈ ಆರು ವರ್ಷಗಳಲ್ಲಿ ಅರಾಜಕತೆ ತಾಂಡವವಾಡಿತು. ಅಳಿಯ ರಾಮರಾಯನಿಂದ ಮಹತ್ವದ ಸ್ಥಾನಗಳಿಗೆ ನೇಮಿಸಲ್ಪಟ್ಟಿದ್ದ ಅವನ ಹತ್ತಿರದ ಸಂಬಂಧಿಕರಲ್ಲಿ ಈಗ ಒಳಜಗಳ ಪ್ರಾರಂಭವಾಯಿತು. ಅಷ್ಟೇ ಅಲ್ಲ ಇದರಿಂದ ಅಸಂತುಷ್ಟರಾಗಿದ್ದ ಸಾಮ್ರಾಜ್ಯ ನಿಷ್ಠ ಅಧಿಕಾರಿಗಳು ಈಗ ದಂಗೆ ಎದ್ದರು. ಹಿಂದೆ ಯಶಸ್ವಿಯಾಗಿ ನಢೆದುಕೊಂಡು ಬಂದಿದ್ದ ಪಾಳೆಯಗಾರಿ ಪದ್ಧತಿಯೂ ಸಾಮ್ರಾಜ್ಯವು ಅನೇಕ ಹೋಳಾಗುವುದಕ್ಕೆ ಕಾರಣವಾಯಿತು.
 
[[ವರ್ಗ:ವಿಜಯನಗರ ಸಾಮ್ರಾಜ್ಯ]]
೧,೧೩೦

edits

"https://kn.wikipedia.org/wiki/ವಿಶೇಷ:MobileDiff/62160" ಇಂದ ಪಡೆಯಲ್ಪಟ್ಟಿದೆ