ಬೊಮ್ಮಲಮ್ಮಗುಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬ ನೇ ಸಾಲು:
[[ವೇಮುಲವಾಡ]] [[ಚಾಲುಕ್ಯರು]] ಕ್ರಿ.ಶ. ೭೫೦ ರಿಂದ ಕ್ರಿ.ಶ. ೯೭೩ ವರೆಗೆ ಅಂದರೆ ಸುಮಾರು ಎರಡು ಶತಮಾನಗಳ ಕಾಲ ಮೊದಲು ಬೋದನ್ ಅನ್ನು ಆನಂತರ ವೇಮುಲವಾಡವನ್ನು ರಾಜಧಾನಿಯಾಗಿ ಮಾಡಿಕೊಂಡು ’ಸಪಾದಲಕ್ಷ’ ರಾಜ್ಯವನ್ನು (ಇಂದಿನ [[ನಿಜಾಮಾಬಾದ್]], [[ಕರೀಂನಗರ]] ಜಿಲ್ಲೆಗಳ ಪ್ರಾಂತ್ಯವನ್ನು) ಆಳುತ್ತಿದ್ದರು. ಇವರು [[ರಾಷ್ಟ್ರಕೂಟ]]ರ ಸಾಮಂತರು. ಇವರಲ್ಲಿ ರಾಜನೀತಿಜ್ಞನೂ, ವಿದ್ಯಾವಿಶಾರದನೂ, ಕವಿಪಂಡಿತಪೋಷಕನೂ ಆಗಿದ್ದ [[ಅರಿಕೇಸರಿ II]], ಕ್ರಿ.ಶ.೯೩೦ರಿಂದ ೯೫೫ರವರೆಗೆ ವೇಮುಲವಾಡ ರಾಜಧಾನಿಯಿಂದ ಆಳುತ್ತಿದ್ದ. ಈತನ ಆಸ್ಥಾನದಲ್ಲಿದ್ದ ಮಹಾಕವಿ [[ಪಂಪ]]ನು ಕನ್ನಡದ ಆದಿಕವಿ. ಪಂಪನು ರಚಿಸಿದ [[ವಿಕ್ರಮಾರ್ಜುನ ವಿಜಯ]] ಹಾಗೂ [[ವೃಷಭನಾಥಚರಿತೆ]]ಗಳು ಕನ್ನಡದ ಪ್ರಸಿದ್ಧ ಕಾವ್ಯಗಳು. ಪಂಪನ ಕಾವ್ಯಕೃಷಿಯನ್ನು ಮೆಚ್ಚಿ ಅರಿಕೇಸರಿಯು ಪಂಪನಿಗೆ ’ಕವಿತಾಗುಣಾರ್ಣವ’ ಎಂಬ ಬಿರುದಿನಿಂದ ಸನ್ಮಾನಿಸಿ ’ಧರ್ಮಪುರ’ ಎಂಬ ಗ್ರಾಮವನ್ನು ಉಂಬಳಿಯಾಗಿ ಕೊಡುತ್ತಾನೆ. ಈ ಧರ್ಮಪುರಕ್ಕೆ ಉತ್ತರ ದಿಕ್ಕಿನಲ್ಲಿರುವುದೇ ಬೊಮ್ಮಲಮ್ಮಗುಟ್ಟ.
==ಜಿನವಲ್ಲಭ==
ಈ ಪಂಪನ ತಮ್ಮನೇ [[ಜಿನವಲ್ಲಭ]]. ಜೈನಮತಾಭಿವೃದ್ಧಿಗಾಗಿ ವಿಶೇಷ ಕೃಷಿ ನಡೆಸಿದ ಈ ಜಿನವಲ್ಲಭ ಬೊಮ್ಮಲಮ್ಮಗುಡ್ಡದ ಮೇಲಿನ ಉಬ್ಬುಶಿಲ್ಪಗಳನ್ನುಬಂಡೆಯಲ್ಲಿ ಕೆತ್ತಿಸಿಹದಿನಾಲ್ಕು ಅಡಿಗಳ ವಿಸ್ತಾರದಲ್ಲಿ ಉಬ್ಬುಶಿಲ್ಪಗಳನ್ನೂ ಅದರ ತಳಭಾಗದಲ್ಲಿ ಕನ್ನಡ ತೆಲುಗು ಸಂಸ್ಕೃತ ನುಡಿಗಳಲ್ಲಿ ಶಾಸನಶಾಸನವನ್ನೂ ಹಾಕಿಸಿದ್ದಾನೆಕೆತ್ತಿಸಿದ್ದಾನೆ. ಆ ಕಲ್ಬರಹದಲ್ಲಿ ಓಂ ನಮಃ ಸಿದ್ದೇಭ್ಯ ಎಂದು ಶುರುವಾಗುವ ದೀರ್ಘ ಕನ್ನಡ ಗದ್ಯದೊಂದಿಗೆ ಮೂರು [[ಸಂಸ್ಕೃತ ವೃತ್ತ]]ಗಳೂ, ಆರು ಕನ್ನಡ ವೃತ್ತಗಳೂ, ಮೂರು ತೆಲುಗು [[ಕಂದಪದ್ಯ]]ಗಳೂ ಕೊನೆಯಲ್ಲಿ [[ಕನ್ನಡ ವಚನ]]ಗಳೂ ಇವೆ. ಸಂಸ್ಕೃತ ವೃತ್ತಗಳಲ್ಲಿ ಜಿನವಲ್ಲಭನು ತಾನು ’ವಾಚಕಾಭರಣ’ ಎಂಬ ಬಿರುದಿನಿಂದ ಕೀರ್ತಿತನಾಗಿದ್ದೇನೆಂದು ಹೇಳಿಕೊಳ್ಳುತ್ತಾನೆ.
 
==ಅಮೂಲ್ಯ ಶಾಸನ==
ಗಂಗಾಧರಂ ಶಾಸನ ಎಂದೇ ಪ್ರಸಿದ್ಧವಾಗಿರುವ ಈ ಶಾಸನದಲ್ಲಿನ ಕನ್ನಡ ಪಠ್ಯದಲ್ಲಿ ಪಂಪನ ಕುರಿತಾದ ಎಷ್ಟೋ ವಿವರಗಳು ದಾಖಲಾಗಿವೆ. ಈ ಶಾಸನ ದೊರೆಯುವವರೆಗೆ ಪಂಪನ ತಾಯ್ತಂದೆಯರು ಹಾಗೂ ಹುಟ್ಟೂರುಗಳ ಕುರಿತಂತೆ ಮಾಹಿತಿ ಏನೂ ಇರಲಿಲ್ಲವಾಗಿ ಗಂಗಾಧರಂ ಶಾಸನ ಕನ್ನಡ ಸಾಹಿತ್ಯಚರಿತ್ರೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಅದೇ ರೀತಿ ತೆಲುಗು ಕಂದ ಪದ್ಯಗಳೂ ಸಹಾ ತೆಲುಗಿನ ಸಾಹಿತ್ಯಚರಿತ್ರೆಯ ದೃಷ್ಟಿಯಿಂದ ಅತ್ಯಂತ ಪ್ರಮುಖ ಸ್ಥಾನ ಪಡೆಯುತ್ತವೆ. ಇದುವರೆಗೆ ನನ್ನಯ (ಕ್ರಿ.ಶ.೧೦೫೧) ಕವಿಯನ್ನೇ ತೆಲುಗಿನ ಆದಿಕವಿ ಎಂದು ಭಾವಿಸಲಾಗಿತ್ತು. ಆದರೆ ನನ್ನಯನಿಗಿಂತ ಮೊದಲೇ ಬರೆಯಲಾಗಿರುವ ಈ ತೆಲುಗು ಕಂದಪದ್ಯಗಳ ಮೂಲಕ ತೆಲುಗಿನ ಪ್ರಾಚೀನತೆ ಕ್ರಿ.ಶ. ೯೪೫ರಷ್ಟು ಹಿಂದಕ್ಕೆ ಹೋಗುತ್ತದೆ. ಇದರ ಆಧಾರದಿಂದ ಇದೀಗ ತೆಲುಗಿಗೆ [[ಶಾಸ್ತ್ರೀಯಭಾಷೆ]] ಸ್ಥಾನ ಪ್ರಾಪ್ತವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
"https://kn.wikipedia.org/wiki/ಬೊಮ್ಮಲಮ್ಮಗುಟ್ಟ" ಇಂದ ಪಡೆಯಲ್ಪಟ್ಟಿದೆ