ಮುಕ್ತಾಯಕ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಒಂದಷ್ಟು ವಿಷಯವನ್ನು ಸೇರಿಸಲಾಗಿದೆ.
ಕೊಂಡಿ ಸೇರ್ಪಡೆ
೧ ನೇ ಸಾಲು:
ಅನುಭಾವಿ ಶಿವಶರಣೆ , ಜನ್ಮಸ್ಥಳ- ಲಕ್ಕುಂಡಿ. ಅಂಕಿತ- ಅಜಗಣ್ನ
==ಮುಕ್ತಾಯಕ್ಕನ ಹಿನ್ನೆಲೆ==
ಮುಕ್ತಾಯಕ್ಕ [[ಲಕ್ಕುಂಡಿ]] ಗ್ರಾಮದವಳು. ಲಕ್ಕಂಡಿ ಗ್ರಾಮ ಗದುಗಿನ[[ಗದುಗ]] ಜಿಲ್ಲೆಯಲ್ಲಿದೆ. ಮುಕ್ತಾಯಕ್ಕ ಅಜಗಣ್ಣನ ಸೋದರಿ. ಇವರಿಬ್ಬರದು ಅನನ್ಯ ಭ್ರಾತೃಪ್ರೇಮ. ಈಕೆಯ ಆಧ್ಯಾತ್ಮದ ಗುರು, ತಂದೆ ಎಲ್ಲವೂ ಅಣ್ಣನೇ ಆಗಿದ್ದನು. ಮುಕ್ತಾಯಕ್ಕನಿಗೆ ೧೦ವರ್ಷದಲ್ಲಿ 'ಮಸಳಿಕಲ್ಲು' ಎಂಬ ಗ್ರಾಮಕ್ಕೆ ಮದುವೆ ಮಾಡಿ ಕೊಡುವರು. ೧೨ನೇ ಶತಮಾನದ ಶಿವಶರಣೆಯರ ಸಮೂಹದ ಆಧ್ಯಾತ್ಮಿಕ ಸಿದ್ದಾಂತದ ವಿಷಯದಲ್ಲಿ, ವಿಶಾಲ ಮನೋಭಾವ, ದಿಟ್ಟ ವ್ಯಕ್ತಿತ್ವ, ಸ್ವತಂತ್ರ ಪ್ರವೃತ್ತಿಯ ಹೆಣ್ಣೆಂದು ಮುಕ್ತಾಯಕ್ಕನನ್ನು ಗುರ್ತಿಸುತ್ತೇವೆ. ಈಕೆ ಪ್ರಖರ ವೈಚಾರಿಕತೆಯ, ತಾತ್ವಿಕ ಪರಿಜ್ಞಾನದ, ಸೈದ್ಧಾಂತಿಕ ವಿಶ್ಲೇಷಣೆಯ ಉನ್ನತ ತತ್ವಜ್ಞಾನಿ. ಕಾಯದ ಸೀಮೆಯ, ಭಾವದ ಭ್ರಾಂತಿಯ, ಜೀವಮಾಯೆಯನ್ನು ಕಳೆದುಕೊಂಡರೂ ದ್ವೇತಾದ್ವೇತದ ಸಾಕಾರ, ನಿರಾಕಾರದ ನಾನು-ನೀನುಎಂಬ ವಿಭಿನ್ನ ತಿಳುವಳಿಕೆಯ ತಿಮಿರದಂಚಿನಲಿ ಸಿಲುಕಿ ತೊಳಲಾಡುವ ಸಾಧಕಿಯಾಗಿ ಮುಕ್ತಾಯಕ್ಕ ನಮಗೆ ಕಾಣಿಸುತ್ತಾಳೆ. ಅವಳು ತನ್ನ ವಚನಗಳಲ್ಲಿ ಅಲ್ಲಮಪ್ರಭು, ಚನ್ನಬಸವಣ್ಣ, ಮರುಳ ಶಂಕರದೇವ ಮುಂತಾದ ಶರಣರ ಕಾರುಣ್ಯದಿಂದ ತಾನು ಪರಿಣಾಮಿಯಾದುದನ್ನು ವಿನಮ್ರತೆಯಿಂದ ಸ್ಮರಿಸಿದ್ದಾಳೆ.
 
==ಮುಕ್ತಾಯಕ್ಕನ ಪ್ರಮುಖ ವಚನಗಳು==
"https://kn.wikipedia.org/wiki/ಮುಕ್ತಾಯಕ್ಕ" ಇಂದ ಪಡೆಯಲ್ಪಟ್ಟಿದೆ