ಎಂ. ಡಿ. ಪಲ್ಲವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಕನ್ನಡ ಹಿಂದುಸ್‌ಥ್ಾನಿ ಸಂಗೀತ ಗಾಯಕಿ
Content deleted Content added
"M. D. Pallavi Arun" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
( ಯಾವುದೇ ವ್ಯತ್ಯಾಸವಿಲ್ಲ )

೨೦:೪೫, ೯ ನವೆಂಬರ್ ೨೦೧೫ ನಂತೆ ಪರಿಷ್ಕರಣೆ

ಎ. ಡಿ. ಪಲ್ಲವಿ, ಕರ್ನಾಟಕ ರಾಜ್ಯದ ಸುಪ್ರಸಿದ್ಧ ಸುಗಮ ಸಂಗೀತ ಗಾಯಕಿ. ಹಾಗೆಯೇ ಇವರು ನಟನೆಯಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಇವರು ಸಂಗೀತ ನಿರ್ದೇಶಕರಾದ ಅರುಣ್ ಅವರನ್ನು ಮದುವೆಯಾಗಿರುತ್ತಾರೆ. ದುನಿಯಾ ಚಲನಚಿತ್ರದಲ್ಲಿ ಇವರು ಹಾಡಿರುವ "ನೋಡಯ್ಯ ಕ್ವಾಟೇ ಲಿಂಗವೇ" ಹಾಡಿಗೆ ೨೦೦೭ನೇ ವರ್ಷದ ಉತ್ತಮ ಹಿನ್ನಲೆ ಗಾಯಕಿ ಕರ್ನಾಟಕ  ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ.  

ಸಂಗೀತ

ಪಲ್ಲವಿಯವರು ಹಿಂದೂಸ್ಥಾನೀ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ. ನಂತರದ ದಿನಗಳಲ್ಲಿ ಮೈಸೂರು ಅನಂತಸ್ವಾಮಿಯವರ ಅಡಿಯಲ್ಲಿ ಸುಗಮ ಸಂಗೀತದ ತರಬೇತಿ ಪಡೆದಿದ್ದಾರೆ. 

ನಟನೆ

ನಾಟಕ

ಪಲ್ಲವಿಯವರು ನಾಟಕರಂಗದಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದು, ಹಲವು ಬೀದಿನಾಟಕಗಳನ್ನು ನಿರ್ಮಿಸಿದ್ದಾರೆ. ಇವರು ನಟಿಸಿದ ಕೆಲ ನಾಟಕಗಳೆಂದರೆ, ಹ್ಯಾಮ್ಲೆಟ್, ಫಯರ್ ಅಂಡ್ ರೇನ್, ಬಲಿದಾನ, ಮೈ ಫೇರ್ ಲೇಡಿ, ಗಾಜಿನ ಗೊಂಬೆಗಳು, ವಕ್ರ ಹಾಗೂ ಇತರೆ.                     

ಟೆಲಿವಿಶನ್ ಮತ್ತು ಚಲನಚಿತ್ರ

ಪಲ್ಲವಿಯವರು ಕಿರುತೆರೆಯ ಮಾಯಾಮೃಗ ಹಾಗೂ ಗರ್ವ ಎಂಬ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ಸ್ಟಂಬಲ್ ನಲ್ಲಿ ನಟಿಸಿದ್ದಾರೆ.ಹಾಗೆಯೇ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ಗುಲಾಬಿ ಟಾಕೀಸ್ ನಲ್ಲೂ ಉಮಾಶ್ರೀಯವರೊಂದಿಗೆ ನಟಿಸಿದ್ದಾರೆ.

ಕಂಠದಾನ

ಪಲ್ಲವಿಯವರು ಹಲವಾರು ಚಲನಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಮುಖವಾದವು, ಎದೆಗಾರಿಕೆ, ಆ ದಿನಗಳು, ಐಶ್ವರ್ಯ, ಮೀರ ಮಾಧವ ರಾಘವ. ಇವರು ಕನ್ನಡದ ನಟಿ ಡೈಸಿ ಬೊಪಣ್ಣರವರಿಗೆ, ಐಶ್ವರ್ಯ, ಸತ್ಯವಾನ್ ಸಾವಿತ್ರಿ, ರಾಮ ಶಾಮಭಾಮ, ಬಿಂಬ ಹಾಗೂ ಇತರೆ ಚಲನಚಿತ್ರಗಳಲ್ಲಿ ಕಂಠದಾನ ಮಾಡಿದ್ದಾರೆ

ಉಲ್ಲೇಖ

ಬಾಹ್ಯ ಕೊಂಡಿಗಳು