Content deleted Content added
ಹೊಸ ಪುಟ: ನನ್ನ ತಂದೆಯ ಹೆಸರು ಸುರೇಶ್,ನನ್ನ ತಾಯಿಯ ಹೆಸರು ಮಹಾಲಕ್ಷ್ಮಿ,ನನ್ನ ತಂದೆ ತಾ...
 
No edit summary
೩ ನೇ ಸಾಲು:
ನಾನು ನನ್ನ ಶಾಲೆಯಲ್ಲಿ ಬಹಳ ಚುರುಕು ವಿದ್ಯಾರ್ಥಿನಿ ಆಗಿದ್ದೆನು ಅದ ಕಾರಣ ನನನ್ನು ಕ್ಲಾಸ್ ಲೀಡರ್ ಆಗಿ ಮಾಡಿದ್ದರು.ನನ್ನ ಶಾಲೆಯ ಹೆಸರು "ಜ್ಞಾನ ಭಾರತಿ ಆಂಗ್ಲ ಶಾಲೆ".ನಾನು ನನ್ನ ಶಾಲೆಯಲ್ಲಿ ಬಹಳಷ್ಟು ಬಹುಮಾನಗಳನ್ನು ಗೆದ್ದಿದ್ದೇನೆ.ನನಗೆ ನನ್ನ ಶಾಲೆಯಲ್ಲಿ "ಬೆಸ್ಟ್ ಸ್ಟೂಡೆಂಟ್" ಅವಾರ್ಡ್ ದೊರಕಿತು.ನಾನು ಈ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ ಏಳನೆಯ ತರಗತಿಯವರೆಗು ಓದಿದೆನು.ನಂತರ ನಾವು ಬೇರೆ ಊರಿಗೆ ಹೋಗಬೇಕಾಗಿ ಬಂದಿತು ಆದಕಾರಣ ನಾನು ಆ ಶಾಲೆಯನ್ನು ಬಿಡಬೇಕಾಗಿ ಬಂದಿತು.ನಾನು ಎಂಟನೆಯ ತರಗತಿಯೆನ್ನು ಬೇರೆ ಶಾಲೆಯಲ್ಲಿ ಮುಂದುವರೆಸಿದೆ.ಆ ಶಾಲೆಯುಲ್ಲಿ ನನಗೆ ಹೊಂದಿಕೊಂಡು ಹೋಗಲು ಸ್ವಲ್ಪ ಕಷ್ಟವಾಯಿತು ಹಾಗು ಆ ಶಾಲೆಯಲ್ಲಿ ವಿದ್ಯಾಭ್ಯಾಸವು ಅಷ್ಟೇನು ಹೇಳಿಕೊಳ್ಳುವಂತಿರಲ್ಲಿಲ್ಲ ಆದ್ದರಿಂದ ನಾನು ಆ ಶಾಲೆಯನ್ನು ಬಿಟ್ಟು ಬೇರೆ ಶಾಲೆಯನ್ನು ಸೇರಿದೆ ಆ ಶಾಲೆಯ ಹೆಸರು "ಶಾಂತಿನಿಕೇತನ ವಿದ್ಯಾ ಸಂಸ್ಥೆ" ನಾನು ಈ ಶಾಲೆಯಲ್ಲಿ ನನ್ನ ಒಂಬತ್ತನೆಯ ತರಗತಿಯನ್ನು ಹಾಗು ನನ್ನ ಹತ್ತನೆಯ ತರಗತಿಯನ್ನು ಮುಗಿಸಿದೆನು.ನಾನು ಒಂಬತ್ತನೆಯ ತರಗತಿಯಲ್ಲಿ ಮೊದಲು ಸೇರಿದ ಕೆಲವು ತಿಂಗಳು ಹೊಂದಿಕೊಂಡು ಹೋಗೂವುದ್ದು ಸ್ವಲ್ಪ ಕಷ್ಟವಾಯಿತು ಆದರೆ ನನ್ನ ಜೊತೆಯೆ ಸೇರಿದ್ದ ಇನ್ನು ಇಬ್ಬರು ಸ್ನೇಹಿತೆಯರು ಇದ್ದಿದ್ದರಿಂದ ನನಗೆ ಅಷ್ಟೇನು ಬೇಸರವಾಗುತಿರಲಿಲ್ಲ ನಾನು ಹಾಗು ಅವರು ಒಟ್ಟಿಗೆ ಇರುತ್ತಿದ್ದೆವು.ನಾವು ಒಳ್ಳೆಯ ಸ್ನೇಹಿತರಾಗಿಯೇ ಎರೆಡು ವರ್ಷ ಜಗಳವಿಲ್ಲದೆ ಸಂತೋಷದಿಂದ ಇದ್ದೆವು.ನಾವು ಎಲ್ಲರು ಹತ್ತನೆಯ ತರಗತಿಯಲ್ಲಿ ಕೇರಳಕ್ಕೆ ಪ್ರವಾಸಕ್ಕೆ ಹೋಗಿದ್ದೆವು.ನಾವು ರೈಲಿನಲ್ಲಿ ಕೇರಳಕ್ಕೆ ಪ್ರಯಾಣ ಮಾಡಿದೆವು.ನಾವು ರೈಲಿನಲ್ಲಿ ಪ್ರಯಾಣ ಮಾಡಿದ್ದರಿಂದ ನಾವು ಹಾಗು ನಮ್ಮ ಪ್ರಾಂಶುಪಾಲರು,ಶಿಕ್ಷಕಿಯರು,ಶಿಕ್ಷಕರು, ಎಲ್ಲರು ಸೇರಿ ತುಂಬಾ ಖುಷಿಯಿಂದ,ಸಂತೋಷವಾಗಿ ಆಟವಾಡಿದೆವು. ನಾವು ಕೇರಳದಲ್ಲಿ ಎಲ್ಲಾ ಸ್ನೇಹಿತರೊಡನೆ ಬಹಳಷ್ಟು ಪೋಟೋಗಳನ್ನು ತೆಗೆದುಕೊಂಡಿದ್ದೆವು.ಅಲ್ಲಿ ನಾವು ಕೊವ್ವಲ್ಲಮ್ ಬೀಚ್ ಗೆ ಹೋಗಿದ್ದೆವು,ನಾವು ಎಲ್ಲರು ಸೇರಿ ಕೇರಳದಲ್ಲಿರುವ ಪದ್ಮನಾಭ ದೇವಸ್ಥಾನಕ್ಕೆ ಹೋಗಿದ್ದೆವು,ನಮ್ಮ ಜೊತೆ ನಮ್ಮ ಶಾಲೆಯ ಶಿಕ್ಷಕಿಯರು,ಪ್ರಾಂಶುಪಾಲರು,ಶಿಕ್ಷಕರು ಎಲ್ಲರು ಬಂದಿದ್ದರು.ನಾವು ಈ ಸ್ಥಳವಲ್ಲದೆ ಕನ್ಯಾಕುಮಾರಿಯಲ್ಲಿರುವ ತಿರುವಳ್ಳುವರ್ ಪ್ರತಿಮೆಯನ್ನು ನೋಡಿದೆವು,ಇದು ನನ್ನ ಕೇರಳ ಪ್ರವಾಸದ ಅನುಭವ.ನಾನು ಹಾಗು ನನ್ನ ಪ್ರಾಣಾ ಸ್ನೇಹಿತೆ ಹತ್ತನೆಯ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಒಂದೇ ತರಗತಿಯಲ್ಲಿ ಇದ್ದೆವು.ಇಬ್ಬರು ಒಳ್ಳೆಯ ಅಂಖಗಳನ್ನು ಪಡೆದು ಇಬ್ಬರು ಒಂದೇ ಕಾಲೇಜಿಗೆ ಪಿ.ಯು.ಸಿ ಓದಲು ಸೇರಿದೆವು,ಇಬ್ಬರು ಒಂದೇ ವಿಷಯವನ್ನು ತೆಗೆದುಕೊಂಡೆವು ,ಆದರೆ ಇಬ್ಬರು ಬೇರೆ ಭಾಗಗಳಲ್ಲಿ ಇದ್ದೆವು.ನಾವು ಎರಡನೆಯ ಪಿ.ಯು.ಸಿ ಯಲ್ಲಿ ಇಬ್ಬರು ಒಂದೆ ಶಿಕೋಣಿಗೆ(ಬೋಧನಾ ಕೇಂದ್ರಕ್ಕೆ) ಸೇರಿದೆವು.ನಂತರ ನಾವು ಎರಡನೆಯ ಪಿ.ಯು.ಸಿಯ ಪರೀಕ್ಷೆಯನ್ನು ಮುಗಿಸಿದೆವು .ನಂತರ ನಾನು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ನಾನು ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಎಸ್.ಸಿ ಯನ್ನು ಓದುತ್ತಿದ್ದೇನೆ.ನನ್ನ ಸ್ನೇಹಿತೆ ಅಂಕಿತ ಈಗ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ.
ನಾನು ನನ್ನ ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬುದು ನನ್ನ ಗುರಿ ಹಾಗು ಧ್ಯೆಯ.ನಾನು ಅದಕ್ಕಾಗಿ ಬಹಳ ಕಷ್ಟಪಡುತ್ತಿದ್ದೇನೆ
ನನ್ನ ತಂದೆಯವರಿಗೆ ನಾನು ವೈದ್ಯೆ ಆಗಬೇಕೆನ್ನುವ ಆಸೆ ಇತ್ತು,ಆದರೆ ನಾನಾ ಕಾರಣದಿಂದಾಗಿ ನಾನು ಮೆಡಿಕಲ್ ಓದಲು ಸಾಧ್ಯವಾಗಲ್ಲಿಲ್ಲ,ಆದರೆ ನಾನು ಈಗ ಕಂಪ್ಯೂಟರ್ ಸೈನ್ಸ್ ತೆಗೆದುಕೊಂಡು ತುಂಬ ಚೆನ್ನಾಗಿ ಓದುತ್ತಿದ್ದೆನೆ. ನನ್ನ ತಂದೆಯವರು ಹಾಗು ನಮ್ಮ ಮನೆಯ ಸದಸ್ಯರು ನನಗೆ ಪ್ರೋತ್ಸಾಹ ಮಾಡಿದ್ದರಿಂದ ನಾನು ಇಷ್ಟು ಸಾದನೆಮಾಡಲುಸಾಧನೆ ಮಾಡಲು ಸಾಧ್ಯವಾಯಿತು.ನಾನು ಕ್ರೈಸ್ಟ್ ಕಾಲೇಜಿನಲ್ಲಿ ಓದುತ್ತಿರುವುದು ನನಗೆ ತುಂಬ ಹೆಮ್ಮೆಯಾಗುತ್ತಿದೆ.
"https://kn.wikipedia.org/wiki/ಸದಸ್ಯ:C_s_anjali" ಇಂದ ಪಡೆಯಲ್ಪಟ್ಟಿದೆ