ಉಮಾ ಶಿವಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
ಕೊಂಡಿ ಸೇರ್ಪಡೆ
೩ ನೇ ಸಾಲು:
[[ಚಿತ್ರ:7e.jpg|thumb|right|200px| 'ಉಮಾ ಶಿವಕುಮಾರ್']]
 
[[ಕನ್ನಡ]] ಚಲನ ಚಿತ್ರ ರಂಗದ ಹಿರಿಯ ಅಭಿನೇತ್ರಿ [[ಉಮಾ ಶಿವಕುಮಾರ್]], ಸುಮಾರು ೧೭೦ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯ ನೀಡಿದ್ದಾರೆ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯ ಪಾತ್ರದಲ್ಲೂ ಅತ್ಯುತ್ತಮ ವಾಗಿ ಕಾಣಿಸಿಕೊಂಡಿದ್ದಾರೆ. ಪ್ರಮುಖವಾಗಿ ಅವರಿಗೆ 'ಗಯ್ಯಾಳಿ ಪಾತ್ರ' ತುಂಬಾ ಚೆನ್ನಾಗಿ ಒಪ್ಪುತ್ತಿತ್ತು. ೬೦ ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ 'ಬಜಾರಿಯಾ ಪಾತ್ರ'ದಲ್ಲಿ ಕಾಣಿಸಿಕೊಂದು ಮನೆಯ ಮಾತಾಗಿದ್ದ ಉಮಾ ಶಿವಕುಮಾರ್, 'ಬಡ್ಡಿ ಬಂಗಾರಮ್ಮ' (೧೯೮೪)ಎಂಬ ಚಿತ್ರದ ನಂತರ ಬಹಳ ಪ್ರಸಿದ್ಧರಾದರು. " ಬಂಗಾರದಂತ ನನ್ನ ಪಿಂಗಾಣಿ ಪಾತ್ರೆ ಒಡೆದುಹಾಕಿಬಿಟ್ಟೆಯಲ್ಲೊ ನಿನ್ನ ಕೈ ಸೇದೋಗ; ಏನೋ ಶೇಷ, ನಿನ್ನ ನಮಸ್ಕಾರಕ್ಕೆ ಬೆಂಕಿ ಹಾಕ.ಎಲ್ಲೋ ಬಡ್ಡಿ ದುಡ್ಡು.ಎಲ್ಲಾ ಖರ್ಚಾಗೋಯ್ತ. ನಸುಗುನ್ನಿ. ನಿನ್ನ ಕತ್ತಿನಲ್ಲಿರುವ ತಾಳಿ ಬಿಚ್ಛಿಡು." " ಕೊಡು ತಾಳೀನ, ಮಾನ ಮರ್ಯಾದೆ ಇಲ್ಲದವನು ಯಾಕೆ ನನ್ನತ್ರ ಸಾಲ ತಗೊಂಡೆ." ಈ ತರಹದ ಸಂಭಾಷಣೆಯ ಪಾತ್ರಗಳು ಅವರಿಗೆ ಬಲು ಪ್ರಿಯ. ಹೆಚ್ಚಾಗಿ ಅವರ ಪಾತ್ರಗಳು, ಜಗಳ ಗಂಟಿ ಅತ್ತೆ, ಬಾಯಿಬಡಕ ತಾಯಿ, ಗಂಡುಬೀರಿ ಬಜಾರಿ ಹೆಂಗಸಿನ ಪಾತ್ರಗಳಾಗಿರುತ್ತಿದ್ದವು. ಬೆಂಗಳೂರಿನ [[ಚಾಮರಾಜಪೇಟೆ]]ಯಲ್ಲಿಚಾಮರಾಜಪೇಟೆಯಲ್ಲಿ 'ಬಡ್ಡಿ ಬಂಗಾರಮ್ಮ ಬ್ಯೂಟಿ ಪಾರ್ಲರ್', ನಡೆಸುತ್ತಿದ್ದ ಹಿರಿಯ ನಟಿ 'ಉಮಾ ಶಿವಕುಮಾರ್', ಕಳೆದ ಎರಡು ದಶಕ ಗಳಿಂದ ಚಿತ್ರರಂಗದಿಂದ ದೂರವಿದ್ದರು.
==ಪರಿವಾರ==
ಶ್ರೀಮತಿ. ಉಮಾ ಶಿವಕುಮಾರರಿಗೆ, ಒಬ್ಬ ಮಗ, ಮತ್ತು ಒಬ್ಬ ಮಗಳು ಇದ್ದಾರೆ. ಇವರಿಬ್ಬರೂ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸವಾಗಿದ್ದಾರೆ.
"https://kn.wikipedia.org/wiki/ಉಮಾ_ಶಿವಕುಮಾರ್" ಇಂದ ಪಡೆಯಲ್ಪಟ್ಟಿದೆ