"ಕಲ್ಲುಪ್ಪು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೇರಿಸಿದ್ದು
(ಹೊಸ ಪುಟ: '''ಕಲ್ಲುಪ್ಪು''' : ನೈಸರ್ಗಿಕವಾಗಿ ದೊರೆಯುವ ಸೋಡಿಯಂ ಕ್ಲೋರೈಡ್ , (ಅಡುಗೆ ಉಪ್ಪು...)
 
(ಕೊಂಡಿ ಸೇರಿಸಿದ್ದು)
 
'''ಕಲ್ಲುಪ್ಪು''' : ನೈಸರ್ಗಿಕವಾಗಿ ದೊರೆಯುವ ಸೋಡಿಯಂ ಕ್ಲೋರೈಡ್ , (ಅಡುಗೆ ಉಪ್ಪು). ರಾಕ್ಸಾಲ್ಟ್‌ ರೂಢಿಯ ಹೆಸರು, ಹ್ಯಾಲೈಟ್ ಶಾಸ್ತ್ರೀಯ ನಾಮ. ಇದಕ್ಕೆ ಖನಿಜಗಳಲ್ಲೆಲ್ಲ ಹೆಚ್ಚು ವ್ಯಾಪ್ತಿ ಇದೆ. ಇದು ಐಸೊಮೆಟ್ರಿಕ್ ಹರಳು ಗುಂಡಿನಲ್ಲಿ, ಅದರಲ್ಲಿಯೂ ಘನಾಕೃತಿಯಲ್ಲಿ, ಸ್ಫಟಿಕೀಕರಿಸುತ್ತದೆ. ಹರಳುಗಳಲ್ಲಿ ಉತ್ಕೃಷ್ಟ ಸೀಳುಗಳಿವೆ. ಇದರ ಕಾಠಿಣ್ಯ ೨.೫, ಸಾಪೇಕ್ಷ ಸಾಂದ್ರತೆ ೨.೧೬. ಬಣ್ಣದಲ್ಲಿ ನಿರ್ವರ್ಣ ಅಥವಾ ಬಿಳುಪೂ. ಕಲ್ಮಷಗಳಿಂದ ಕೂಡಿದಾಗ ಹಳದಿ, ಕೆಂಪು, ನೀಲಿ ಅಥವಾ ಊದಾ ಛಾಯೆಯನ್ನು ತೋರುವುದುಂಟು.
ಕಲ್ಲುಪ್ಪು ಪ್ರಪಂಚದ ನಾನಾ ಕಡೆ ಕೇಂಬ್ರಿಯನ್ ಕಾಲದಿಂದ ಇತ್ತೀಚಿನ ಕಾಲದವರೆಗಿನ ಎಲ್ಲ ಜಲಜಶಿಲೆಗಳಲ್ಲಿಯೂ ವಿಶಾಲವಾಗಿ ಹರಡಿದೆ. ಸಾಮಾನ್ಯವಾಗಿ ಇದು ಜಿಪ್ಸಮ್, ಅನ್ಹಿಡ್ರೈಟ್, ಜೇಡಿಮಣ್ಣು, ಸಿಲ್ವೈಟ್, ಕಾರ್ನಲೈಟ್ ಮತ್ತು ವಿಲೀನವಾಗದ ವಿವಿಧ ಉಪ್ಪುಗಳೊಡನೆ[[ಉಪ್ಪು]]ಗಳೊಡನೆ ಬೆರೆತಿರುತ್ತದೆ. ಜಲಜ ಶಿಲಾಸ್ತೋಮಗಳಲ್ಲಿ ಕಲ್ಲುಪ್ಪಿನ ಸ್ತರಗಳು ಕೆಲವು ಅಡಿಗಳಿಂದ ಹಿಡಿದು ಸಾವಿರ ಅಡಿಗಳವರೆಗೆ ಮಂದವಾಗಿರುತ್ತವೆ. ಆಳದಲ್ಲಿರುವ ಸ್ತರಸಂಚಯನೆಗಳು ಭೂಚಲನೆಗೊಳಗಾದಾಗ ವಿರೂಪ ಹೊಂದಿ ಅಲ್ಲಲ್ಲೆ ತಮ್ಮ ಮೇಲಿರುವ ಸ್ತರಗಳನ್ನು ಮೇಲೆತ್ತಿ ಬಾಗಿಸುತ್ತವೆ. ಆಕಾರದಲ್ಲಿ ಗೋಳ, ನಳಿಕೆ ಅಥವಾ ನಾಯಿಕೊಡೆಯಂತಿರುತ್ತವೆ. ಇವೇ ಲವಣ ಗುಮ್ಮಟಗಳು. ನಿಸರ್ಗದಲ್ಲಿ ಕಲ್ಲೆಣ್ಣೆಯ ಸಂಗ್ರಹಕ್ಕೆ ಇವು ಉತ್ತಮ ಅಡಚುಗಳು (ಆಯಿಲ್ ಟ್ರ್ಯಾಪ್ಸ್‌). ಸಾಗರ ಅಥವಾ ಸಮುದ್ರ ನೀರಿನಲ್ಲಿ ಸೋಡಿಯಂ ಕ್ಲೋರೈಡ್ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಈ ನೀರಿನ ಸತತ ಇಂಗುವಿಕೆಯಿಂದ ಕ್ರಮೇಣ ಕಲ್ಲುಪ್ಪಿನ ಸ್ತರಗಳಾಗುವುವು. ಮೂಲಸಾಗರದ ಸಂಪರ್ಕ ಕಳೆದುಕೊಂಡ ಭಾಗಗಳಲ್ಲಿ ಈ ತೆರನಾದ ಇಂಗುವಿಕೆ ಉಷ್ಣ ಮತ್ತು ಶುಷ್ಕ ವಾತಾವರಣದಿಂದ ತೀವ್ರಗತಿಯಲ್ಲಿ ನಡೆಯುವುದು.
 
ವಿಶಾಲವಾದ ಕಲ್ಲುಪ್ಪಿನ ನಿಕ್ಷೇಪಗಳು ಪ್ರಪಂಚದ ಹಲವಾರು ದೇಶಗಳಲ್ಲಿವೆ. ಇವುಗಳಲ್ಲಿ ಮುಖ್ಯವಾದವು ಆಸ್ಟ್ರಿಯ, ಪೋಲೆಂಡ್, ಚೆಕೋಸ್ಲೊವಾಕಿಯ, ಜರ್ಮನಿ, ಸ್ಪೇನ್, ಬ್ರಿಟನ್ ಮತ್ತು ಭಾರತದಲ್ಲಿವೆ. ಉತ್ತರ ಅಮೆರಿಕದ ಸಂಯುಕ್ತಸಂಸ್ಥಾನದಲ್ಲಿ ಕಾನ್ಸಾಸ್ ಮಿಚಿಗನ್, ನ್ಯೂಯಾರ್ಕ್ ಒಹಾಯೊ, ಓಕ್ಲಹೋಮ, ಪೆನ್ಸಿಲ್ವೇನಿಯ ಮತ್ತು ಟೆಕ್ಸಾಸ್ ಪ್ರದೇಶಗಳಲ್ಲಿ ವಿಶಾಲವಾದ ಉಪ್ಪಿನ ಸ್ತರಗಳಿವೆ.
೪೫೦

edits

"https://kn.wikipedia.org/wiki/ವಿಶೇಷ:MobileDiff/615381" ಇಂದ ಪಡೆಯಲ್ಪಟ್ಟಿದೆ