ಕಣಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಕೊಂಡಿ ಸೇರ್ಪಡೆ
೬ ನೇ ಸಾಲು:
ಕನ್ನಡದಲ್ಲಿ ಒಂದು ಸೊಗಸಾದ ಗಾದೆಯೂ ಇದೆ."ಹನಿ ಹನಿ ಕೂಡಿದರೆ ಹಳ್ಳ,; ತೆನೆ ತೆನೆ ಕೂಡಿದರೆ ಬಳ್ಳ. ಬಳ್ಳ ಎಂದರೆ ಧವಸ-ಧಾನ್ಯಗಳನ್ನು ಅಳೆಯುವ ಸಾಧನ. ಹಿಂದೆ ರಾಜ-ಮಹಾರಾಜರು ರೈತರಿಂದ ಧವಸ-ಧಾನ್ಯಗಳನ್ನು ವಸೂಲಿ ಮಾಡಿ ಅವನ್ನೇಲ್ಲ ಸಂಗ್ರಹಿಸಿ ದೊಡ್ಡದೊಂದು ಉಗ್ರಾಣವನ್ನು ಕಟ್ಟಿಸಿ ಅದರೊಳಗೆ ವರ್ಷಗಟ್ಟಲೆ ಶೇಖರಿಸಿ ಇಡುತ್ತಿದ್ದರು. ಊರಿಗೆ ಬರಗಾಲ, ಕ್ಷಾಮ ಬಂದಾಗ ಉಗ್ರಾಣದಲ್ಲಿನ ಧವಸ-ಧಾನ್ಯಗಳನ್ನು ಜನರಿಗೆ ದಾನ ಮಾಡುತ್ತಿದ್ದರು. ಈಗಲೂ ಅಂತಹ ಬೃಹತ್ ಉಗ್ರಾಣ/ಕಣಜವನ್ನು ಹಾವೇರಿ ಜಿಲ್ಲೆಯಲ್ಲಿರುವ ಬಂಕಾಪುರದಲ್ಲಿ ಕಾಣಬಹುದು.
 
ಜನಪದರ ಇಡೀ ಜೀವನವೇ ಕಣಜದಲ್ಲಿ[[ಕಣಜ]ದಲ್ಲಿ ಅಡಗಿರುತ್ತದೆ ಎಂಬ ಮಾತಿದೆ. ಜನ ಸಾಮಾನ್ಯರು ರಾಜ-ಮಹಾರಾಜರಂತೆ ಉಗ್ರಾಣಗಳನ್ನು ಕಟ್ಟಿಸುವ ಶಕ್ತಿ ಇಲ್ಲದುದರಿಂದ ತಮ ತಮಗೆ ಅನುಕೂಲವಾಗುವ ರೀತಿಯಲ್ಲಿ ಬಿದಿರಿನಿಂದ ಮಾಡಿದ ಗುಡಾಣ/ಕಣಜಗಳನ್ನು ಸಗಣಿಯಿಂದ ತಾರಿಸಿ ಧವಸ-ಧಾನ್ಯಗಳ ಶೇಖರಣೆಗೆ ಬಳಸುತ್ತಾರೆ.
 
ಕೆಲವರು ಮನೆಯೊಳಗೆ ಸಿಮೆಂಟಿನಲ್ಲಿ ಉಗ್ರಾಣ/ಕಣಜವನ್ನು ಕಟ್ಟಿಸಿದರೆ, ಹಿರಿಯರು ಬೃಹತ್ ಮಡಕೆಯಲ್ಲಿ ಕಣಜವನ್ನು ತಯಾರಿಸಿ ಅದರಲ್ಲಿ ಧವಸ-ಧಾನ್ಯಗಳ ಶೇಖರಿಸಿ ಇಡುತ್ತಿದ್ದರು. ಕಣಜಗಳನ್ನು ಹೊರಗಿನಿಂದ ನೋಡಿದರೆ ಪುಟ್ಟ ಗುಡಿಸಿಲಿನಂತೆ ಗೋಚರಿಸುತ್ತದೆ. ಕಣಜಕ್ಕೆ ಮಳೆ, ಗಾಳಿ ,ಬಿಸಿಲು ಬೀಳದಂತೆ ಜತನ ಮಾಡುತ್ತಿದ್ದರು. ಸಾಮಾನ್ಯವಾಗಿ ಮನೆಯೊಳಗಿನ ಕಡೆಯ ಕತ್ತಲೆ ಕೋಣೆಯೊಳಗೆ, ಇದನ್ನು ಇಡುತ್ತಿದ್ದರು. ಮನೆಯ[[ಮನೆ]]ಯ ಹಿರಿಯರಿಗೆ ಮಾತ್ರ ಕಣಜದ ಕೋಣೆಯೊಳಗೆ ಪ್ರವೇಶ ಇರುತ್ತಿತ್ತು.
 
[[Image:_ _ _ Kanaja 2.JPG|thumb| ಕಣಜ]]
 
==‘ಕಣಜ’ - ಒಂದು ನುಡಿ ನಡೆಯ ನೋಟ==
ಬಿದಿರು ಸೀಳುಗಳಿಂದ ಆಳೆತ್ತರಕ್ಕೆ ಕೊೞವೆ ಪರಿಜಿಗೆ ಎಣೆದು [[ಸಗಣಿ]] ಅಲ್ಲದಿದ್ದರೆ ಕೆಮ್ಮಣ್ಣಿಂದ ಸಾರಿಸಿ ಧವಸಗಳನ್ನು ಕೂಡಿಡಲು ಮಾಡಿದ கூடை ಕೂಡೈ(ತ) > ಗೂಡೆ ‘ಕಣಜ’ ಎನಿಸುತ್ತದೆ. ಇದನ್ನು ಮನೆಯ ಒಳಗಾಗಲೀ ಹೊಱಗೆ ಜಗಲಿಯಲ್ಲಾಗಲೀ ಇಡುವುದು ವಾಡಿಕೆ. ಈ ಕಣಜ ತಮಿೞಿನಲ್ಲಿ களஞ்சியம் ಕಳಞ್ಜಿಯಮ್, தொம்பை ತೊಮ್ಬೈ ಎಂದು ಕರೆಸಿಕೊಳ್ಳುತ್ತದೆ. ತೊಮ್ಬೈ ಕನ್ನಡಕ್ಕೆ ಬರುವಾಗ ತೊಂಬೆ ಆಗುತ್ತದೆ.
 
ಇನ್ನೂ ಹೆಚ್ಚು ಧವಸ ಉಳ್ಳವರು ಆಱೆಂಟು ಅಡಿಗಳ ಹಲಗೆಗಳನ್ನು ಪೆಟ್ಟಿಗೆಯ ಪರಿಜಿಗೆ ಹೊಂದಿಸಿ ದವಸಗಳನ್ನು ಕೂಡಿಡಲು ಅಲ್ಲದೆ ಬೞಸಲು ಬೇಕಾದಾಗ ತಳಮಟ್ಟದಲ್ಲಿ ಹೊಂದಿಸಿರುವ ಎರಡು ಹಿಡಿಗಳಲ್ಲಿ ಮೇಲಿನದನ್ನು ಎೞೆದು ಮತ್ತೆ ಅದನ್ನು ಒಳತಳ್ಳಿದಾಗ ಅದಱ ಕೆಳಕ್ಕೆ ತಳವಿರುವ ಒಂದು ಅಡಿ ಚಚ್ಚೌಕದ ಚೌಕಟ್ಟಿಗೆ ಧವಸ ತುಂಬಿಕೊಳ್ಳುತ್ತದೆ. ಇದನ್ನು ಹೊಱ ಎೞೆದು ದವಸವನ್ನು ಹೊಱ ಹಾಕಿ ತಳಚೌಕಟ್ಟನ್ನ ಒಳತಳ್ಳಿ ಬಿಡಬಹುದು, ಇಲ್ಲವೆ ಮುಂದುರಿಸಬಹುದು. ಹೀಗೆ ಕಣಜದ ಬೞಕೆಯಾಗುತ್ತದೆ.
"https://kn.wikipedia.org/wiki/ಕಣಜ" ಇಂದ ಪಡೆಯಲ್ಪಟ್ಟಿದೆ