ಅವಳಿಗಳು(ಅವಳಿತನ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಕೊಂಡಿ ಸೇರಿಸಿದ್ದು
೮ ನೇ ಸಾಲು:
==ತೊಂದರೆಗಳು==
ಮಾನವ ಸೃಷ್ಟಿಕ್ರಿಯೆ ಒಂದು ಮಗುವಿನ ಬೆಳೆವಣಗೆಗೆ, ಹೆರಿಗೆಗೆ ಅತ್ಯಂತ ಸೂಕ್ತವಾಗಿದೆ. ಅವಳಿಗಳು ಹುಟ್ಟುವುದು ಅಪರೂಪವಲ್ಲ. ಆದರೆ ತಾಯಿಗೂ ಮಕ್ಕಳಿಗೂ ಅಪಾಯ ಅಡ್ಡಿ ಆತಂಕಗಳು ಹೆಚ್ಚುತ್ತವೆ. ರಕ್ತಹೀನತೆ, ಏರಿದ ರಕ್ತದೊತ್ತಡ, ಗರ್ಭಜಲ, ಹೆಚ್ಚಾಗಿ ಹೊಟ್ಟೆ ಉಬ್ಬರಿಸುವುದು, ದಿನತುಂಬುವ ಮುನ್ನವೇ ಹೆರಿಗೆ, ಮಧುಮೇಹ ಕಾಯಿಲೆ ಇವೆಲ್ಲ ಬರುವ ಸಾಧ್ಯತೆ ಇದೆ. ಮಕ್ಕಳು ತಲೆ ಮೊದಲಾಗಿ ಇಲ್ಲವೇ ಪೀಠಸ್ಥಾನ ಮೊದಲಾಗಿ ಹೆರಿಗೆಯಾಗದೆ ಇದ್ದರೆ ಶಸ್ತ್ರ ಚಿಕಿತ್ಸೆ ಅಗತ್ಯ ಇದೆ. ಮೊದಲು ಕಾಲುಮುಂದಾಗಿ ಹೆರಿಗೆಯಾದ ಶಿಶುವಿನ ತಲೆಗೆ ಅನಂತರ ಬರುವ ಶಿಶುವಿನ ತಲೆ ಕೊಂಡಿಯಂತೆ ಸಿಕ್ಕಿಕೊಂಡರೆ ಎರಡು ಮಕ್ಕಳ ಹಾಗೂ ತಾಯಿಯ ಜೀವಕ್ಕೂ ಅಪಾಯವಿದೆ. ಅತಿಯಾಗಿ ಗರ್ಭಕೋಶ ಹಿಗ್ಗಿರುವುದರಿಂದ ಹೆರಿಗೆಯಾದ ಮೇಲೆ ಅತಿರಕ್ತಸ್ರಾವಅತಿ[[ರಕ್ತ]]ಸ್ರಾವ ಸಾಮಾನ್ಯ. ಕೆಲವೊಮ್ಮೆ ಗರ್ಭಕೋಶ ಕುಗ್ಗದೆ ತಾಯಿಯ ಜೀವಕ್ಕೆ ಅಪಾಯಕರ ಸ್ಥಿತಿ ಇದ್ದರೆ ಗರ್ಭಕೋಶವನ್ನೇ ತೆಗೆಯಬೇಕಾಗಬಹುದು. ಅವಳಿಗಳಾಗಲು ಕಾರಣವನ್ನು ಇಂದಿಗೂ ಸಿದ್ಧಪಡಿಸಿಲ್ಲ. ಕೆಲವು ತಲೆಮಾರುಗಳಲ್ಲಿ ಹೆಚ್ಚು ಕಾಣಬಹುದು. ಬಂಜೆತನ ನಿವಾರಣಾ ವಿಧಾನಗಳಿಂದಲೂ ಅವಳಿಗಳಾಗಬಹುದು. ತಾಯಿಯ ಕಡೆಯ ಅನುವಂಶೀಯತೆಯೂ ಕಾರಣವಾಗಬಹುದು. ಚಾಂಗ್-ವಿಂಗ್ ಹೆಸರಿನಲ್ಲಿ ಬಾಳಿದ್ದ ಸಯಾಮಿ ಅವಳಿಗಳು (1811-74) ಹೊಟ್ಟೆಯ ಮೇಲ್ಭಾಗದಲ್ಲಿ ಅಂಟಿಕೊಂಡಿದ್ದರು. ತೀರ ಇತ್ತೀಚೆಗೆ ಹೆಸರಾದ ಇರಾನೀ ಸೋದರಿಯರು ಹಿಂದಲೆಯಲ್ಲಿ ಅಂಟಿಕೊಂಡಿದ್ದರು. ಇಬ್ಬರೂ ಬೇರೆಯಾಗುವ ತವಕದಿಂದ ಅಪಾಯಕಾರಿ ಯಾದ ಶಸ್ತ್ರಚಿಕಿತ್ಸೆಗೆ ಒಡ್ಡಿಕೊಂಡು ತಾವೆ ಆಹುತಿಯಾದರು.
 
ಗಂಗಾ, ಜಮುನಾ ಮುಂದಲೆ ಅಂಟಿಕೊಂಡಿದ್ದ ನೇಪಾಳಿ ಸೋದರಿಯರು. ಮೂರೂವರೆ ದಿನಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಮೂಲಕ ಇಬ್ಬರನ್ನು ಬೇರ್ಪಡಿಸಲಾಯಿತು.
 
ತ್ರಿವಳಿ, ನಾಲ್ವಳಿ ಮಕ್ಕಳಾಗುವುದರಲ್ಲಿನ ಅಪಾಯ ಗುರುತಿಸಿ ಇತ್ತೀಚೆಗೆ ಆರೋಗ್ಯವಾಗಿ ಒಂದೇ ಮಗು ಬೆಳೆಯಲಿ ಎಂದು ಉದ್ದೇಶಿಸಿ ಭ್ರೂಣ ಇಳಿಕೆ ಚಿಕಿತ್ಸೆ ಮಾಡಲಾಯಿತು. ಇಲ್ಲಿ ಬೇಡವಾದ ಶಿಶುವಿನ ಹೃದಯ ಬಡಿತವನ್ನು ಸ್ಕ್ಯಾನಿಂಗ್ ಪರೀಕ್ಷೆಯ ಮೂಲಕ ಗುರುತಿಸುತ್ತಾರೆ. ಹೃದಯಕ್ಕೆ[[ಹೃದಯ]]ಕ್ಕೆ ಪೊಟಾಶಿಯಂ ಕ್ಲೋರೈಡ್ ಅನ್ನು ಚುಚ್ಚುಮದ್ಡಿನ ಮೂಲಕ ಸ್ಕ್ಯಾನಿಂಗ್ ಮಾಡಿಕೊಂಡೇ ಕರಾರುವಾಕ್ಕಾಗಿ ಕೊಡಲಾಗುತ್ತದೆ. ಆ ಭ್ರೂಣ ಸಾಯುತ್ತದೆ, ಉಳಿಯುವ ಭ್ರೂಣ/ ಪಿಂಡಗೂಸು ಆರೋಗ್ಯವಾಗಿ ಬೆಳೆಯುತ್ತದೆ.
ವ್ಯಕ್ತಿತ್ವ ಬೆಳೆವಣಿಗೆಯಲ್ಲಿ ಪರಿಸರದ ಪಾತ್ರವನ್ನು ಕಂಡುಕೊಳ್ಳಲು ಅವಳಿಗಳನ್ನು ಬಹುವಾಗಿ ಬಳಕೆ ಮಾಡಲಾಗಿದೆ.
 
"https://kn.wikipedia.org/wiki/ಅವಳಿಗಳು(ಅವಳಿತನ)" ಇಂದ ಪಡೆಯಲ್ಪಟ್ಟಿದೆ