ಅಂತಾರಾಷ್ಟ್ರೀಯ ಬಾಕಿ ಪಾವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
==ಅಂತರಾಷ್ಟ್ರೀಯ ಬಾಕಿ ಪಾವತಿ==
ವ್ಯಾಪಾರದ ಬಾಕಿಯನ್ನು ತೀರಿಸಲು ಒಂದು ದೇಶ ಇನ್ನೊಂದಕ್ಕೆ ಹಣ ಸಂದಾಯ ಮಾಡುತ್ತದಷ್ಟೆ. ದೇಶಗಳ ನಡುವೆ ಜರಗುವ ಈ ಹಣ ಸಂದಾಯವನ್ನು ಅಂತಾರಾಷ್ಟ್ರೀಯ ಬಾಕಿ ಪಾವತಿ ಎನ್ನುತ್ತಾರೆ.
ಯಾವ ದೇಶದ ನಾಣ್ಯದಲ್ಲಿ ಅಂತಾರಾಷ್ಟ್ರೀಯ ಹಣ ಸಂದಾಯ ಮಾಡುವುದು? ಕೊಂಡ ದೇಶದ ಹಣದಲ್ಲೇ, ಮಾರಿದ ದೇಶದ[[ದೇಶ]]ದ ಹಣದಲ್ಲೇ ಅಥವಾ ಮತ್ತೊಂದು ದೇಶದ ಹಣದಲ್ಲೇ ಎನ್ನುವ ಪ್ರಶ್ನೆ ಏಳುವುದು. ಈ ವಿಷಯದಲ್ಲಿ ವ್ಯಾಪಾರಕ್ಕೊಳಗಾದ ದೇಶಗಳು ಹೇಗೆ ಒಪ್ಪಂದ ಮಾಡಿಕೊಂಡರೂ ಕೊನೆಯಲ್ಲಿ ಒಂದು ದೇಶದ ನಾಣ್ಯ ಇನ್ನೊಂದಕ್ಕೆ ಒಪ್ಪಿಗೆಯಾದ ನಾಣ್ಯವಾಗಿ ಪರಿವರ್ತನೆಯಾಗದೆ ವಿಧಿಯಿಲ್ಲ.
ಪ್ರಪಂಚದಲ್ಲಿ ಚಲಾವಣೆಯಲ್ಲಿರುವ ನಾಣ್ಯಗಳೆಲ್ಲ ಒಂದರಿಂದ ಇನ್ನೊಂದಕ್ಕೆ ನಿರಾತಂಕವಾಗಿ ಪರಿವರ್ತನೆಯಾಗುವುದು ಅಂತಾರಾಷ್ಟ್ರೀಯ ಹಣಕಾಸಿನ ವ್ಯವಸ್ಥೆ ಮತ್ತು ಭದ್ರತೆಗೆ ತಳಹದಿ. ಹಾಗಾದ ಪಕ್ಷದಲ್ಲಿ [[ಅಂತರಾಷ್ಟ್ರೀಯ ವ್ಯವಹಾರ]]ದ ಜೊತೆಗೆ ಅಂತರಾಷ್ಟ್ರೀಯ ಹಣಕಾಸಿನ ಸಾಧನ ಸಂಪತ್ತುಗಳು ಬೆಳೆಯುವುವು. ಇದರಿಂದ ಅಂತಾರಾಷ್ಟ್ರೀಯ ಹಣಕಾಸಿನ ಮೌಲ್ಯ ಹೆಚ್ಚುವುದು. ಆದರೆ ನಾಣ್ಯಗಳ ನಿರಾತಂಕ ಪರಿವರ್ತನೆಗೆ ಇರುವ ಅಡ್ಡಿ ಆತಂಕಗಳೇ ಇಂದಿನ ಹಣಕಾಸು ಪ್ರಪಂಚದ ವಿಶೇಷ ಲಕ್ಷಣವಾಗಿದೆ. ಪ್ರತಿಯೊಂದು ದೇಶವೂ ಒಂದಿಲ್ಲೊಂದು ನಿರ್ಬಂಧವನ್ನು ವಿಧಿಸಲು ಹಿಂಜರಿದಿಲ್ಲ. ಹಾಗೆಯೇ ವಿದೇಶಿ ವಿನಿಮಯಗಳ ಮೇಲೆ ಹತೋಟಿಯನ್ನಿಡದ ರಾಷ್ಟ್ರವೊಂದಿಲ್ಲ.
ಬಂಗಾರವು ಪ್ರಪಂಚದ ಎಲ್ಲಾ ರಾಷ್ಟ್ರಗಳು ನಿಸ್ಸಂಕೋಚವಾಗಿ ತೆಗೆದುಕೊಳ್ಳುವ, ತೀವ್ರವಾಗಿ ಬಳಸುವ ಅಂತಾರಾಷ್ಟ್ರೀಯ ಹಣಸಂದಾಯ ಸಾಧನ. ಆದರೆ ಈ ಲೋಹದ ವಾರ್ಷಿಕ ಉತ್ಪತ್ತಿ ಸಾಕಷ್ಟಿಲ್ಲದೆ ಬಹಳ ಕಡಿಮೆಯಾಗಿದೆ; ಅಲ್ಲದೆ ಉತ್ಪತ್ತಿಯ ಸಣ್ಣ ಭಾಗ ಮಾತ್ರ ಹಣಕಾಸಿನ ವ್ಯವಸ್ಥೆಗೆ ದೊರಕುತ್ತಿದೆ. ಜೊತೆಗೆ ವಿಶ್ವದ ಹಣಕಾಸಿನ ವ್ಯವಹಾರಕ್ಕೆ ಬರುವ ಬಂಗಾರವೆಲ್ಲ ಕೆಲವೇ ರಾಷ್ಟ್ರಗಳ ಹಿಡಿತದಲ್ಲಿರುವುದರಿಂದ ಅಂತಾರಾಷ್ಟ್ರೀಯ ಹಣಕಾಸಿನ ಮೌಲ್ಯ ಹೆಚ್ಚಿಸಲು ಬಂಗಾರ ಪ್ರಯೋಜನಕಾರಿಯಾಗಿಲ್ಲ.