ಅಂತಾರಾಷ್ಟ್ರೀಯ ಬಾಕಿ ಪಾವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚುNo edit summary
೨ ನೇ ಸಾಲು:
ವ್ಯಾಪಾರದ ಬಾಕಿಯನ್ನು ತೀರಿಸಲು ಒಂದು ದೇಶ ಇನ್ನೊಂದಕ್ಕೆ ಹಣ ಸಂದಾಯ ಮಾಡುತ್ತದಷ್ಟೆ. ದೇಶಗಳ ನಡುವೆ ಜರಗುವ ಈ ಹಣ ಸಂದಾಯವನ್ನು ಅಂತಾರಾಷ್ಟ್ರೀಯ ಬಾಕಿ ಪಾವತಿ ಎನ್ನುತ್ತಾರೆ.
ಯಾವ ದೇಶದ ನಾಣ್ಯದಲ್ಲಿ ಅಂತಾರಾಷ್ಟ್ರೀಯ ಹಣ ಸಂದಾಯ ಮಾಡುವುದು? ಕೊಂಡ ದೇಶದ ಹಣದಲ್ಲೇ, ಮಾರಿದ ದೇಶದ ಹಣದಲ್ಲೇ ಅಥವಾ ಮತ್ತೊಂದು ದೇಶದ ಹಣದಲ್ಲೇ ಎನ್ನುವ ಪ್ರಶ್ನೆ ಏಳುವುದು. ಈ ವಿಷಯದಲ್ಲಿ ವ್ಯಾಪಾರಕ್ಕೊಳಗಾದ ದೇಶಗಳು ಹೇಗೆ ಒಪ್ಪಂದ ಮಾಡಿಕೊಂಡರೂ ಕೊನೆಯಲ್ಲಿ ಒಂದು ದೇಶದ ನಾಣ್ಯ ಇನ್ನೊಂದಕ್ಕೆ ಒಪ್ಪಿಗೆಯಾದ ನಾಣ್ಯವಾಗಿ ಪರಿವರ್ತನೆಯಾಗದೆ ವಿಧಿಯಿಲ್ಲ.
ಪ್ರಪಂಚದಲ್ಲಿ ಚಲಾವಣೆಯಲ್ಲಿರುವ ನಾಣ್ಯಗಳೆಲ್ಲ ಒಂದರಿಂದ ಇನ್ನೊಂದಕ್ಕೆ ನಿರಾತಂಕವಾಗಿ ಪರಿವರ್ತನೆಯಾಗುವುದು ಅಂತಾರಾಷ್ಟ್ರೀಯ ಹಣಕಾಸಿನ ವ್ಯವಸ್ಥೆ ಮತ್ತು ಭದ್ರತೆಗೆ ತಳಹದಿ. ಹಾಗಾದ ಪಕ್ಷದಲ್ಲಿ ಅಂತಾರಾಷ್ಟ್ರೀಯ[[ಅಂತರಾಷ್ಟ್ರೀಯ ವ್ಯಾಪಾರ ವ್ಯವಹಾರದವ್ಯವಹಾರ]]ದ ಜೊತೆಗೆ ಅಂತಾರಾಷ್ಟ್ರೀಯಅಂತರಾಷ್ಟ್ರೀಯ ಹಣಕಾಸಿನ ಸಾಧನ ಸಂಪತ್ತುಗಳು ಬೆಳೆಯುವುವು. ಇದರಿಂದ ಅಂತಾರಾಷ್ಟ್ರೀಯ ಹಣಕಾಸಿನ ಮೌಲ್ಯ ಹೆಚ್ಚುವುದು. ಆದರೆ ನಾಣ್ಯಗಳ ನಿರಾತಂಕ ಪರಿವರ್ತನೆಗೆ ಇರುವ ಅಡ್ಡಿ ಆತಂಕಗಳೇ ಇಂದಿನ ಹಣಕಾಸು ಪ್ರಪಂಚದ ವಿಶೇಷ ಲಕ್ಷಣವಾಗಿದೆ. ಪ್ರತಿಯೊಂದು ದೇಶವೂ ಒಂದಿಲ್ಲೊಂದು ನಿರ್ಬಂಧವನ್ನು ವಿಧಿಸಲು ಹಿಂಜರಿದಿಲ್ಲ. ಹಾಗೆಯೇ ವಿದೇಶಿ ವಿನಿಮಯಗಳ ಮೇಲೆ ಹತೋಟಿಯನ್ನಿಡದ ರಾಷ್ಟ್ರವೊಂದಿಲ್ಲ.
ಬಂಗಾರವು ಪ್ರಪಂಚದ ಎಲ್ಲಾ ರಾಷ್ಟ್ರಗಳು ನಿಸ್ಸಂಕೋಚವಾಗಿ ತೆಗೆದುಕೊಳ್ಳುವ, ತೀವ್ರವಾಗಿ ಬಳಸುವ ಅಂತಾರಾಷ್ಟ್ರೀಯ ಹಣಸಂದಾಯ ಸಾಧನ. ಆದರೆ ಈ ಲೋಹದ ವಾರ್ಷಿಕ ಉತ್ಪತ್ತಿ ಸಾಕಷ್ಟಿಲ್ಲದೆ ಬಹಳ ಕಡಿಮೆಯಾಗಿದೆ; ಅಲ್ಲದೆ ಉತ್ಪತ್ತಿಯ ಸಣ್ಣ ಭಾಗ ಮಾತ್ರ ಹಣಕಾಸಿನ ವ್ಯವಸ್ಥೆಗೆ ದೊರಕುತ್ತಿದೆ. ಜೊತೆಗೆ ವಿಶ್ವದ ಹಣಕಾಸಿನ ವ್ಯವಹಾರಕ್ಕೆ ಬರುವ ಬಂಗಾರವೆಲ್ಲ ಕೆಲವೇ ರಾಷ್ಟ್ರಗಳ ಹಿಡಿತದಲ್ಲಿರುವುದರಿಂದ ಅಂತಾರಾಷ್ಟ್ರೀಯ ಹಣಕಾಸಿನ ಮೌಲ್ಯ ಹೆಚ್ಚಿಸಲು ಬಂಗಾರ ಪ್ರಯೋಜನಕಾರಿಯಾಗಿಲ್ಲ.
ಆದುದರಿಂದ ಪ್ರತಿಯೊಂದು ದೇಶವೂ ತನ್ನ ಹಣ ಸಂದಾಯ ಸ್ಥಿತಿಯನ್ನು ನೇರವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದಕ್ಕಾಗಿ ಒಂದು ನಿಯಮಿತ ಕಾಲಾವಧಿಯಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಿಂದ ತನಗೆ ಮತ್ತು ತನ್ನ ದೇಶೀಯರಿಗೆ ಬರಬೇಕಾದ ಮತ್ತು ಮಿಕ್ಕೆಲ್ಲಾ ದೇಶಗಳಿಗೂ ಮತ್ತು ದೇಶೀಯರಿಗೂ ತಾನು ಕೊಡಬೇಕಾದ ಆಯವ್ಯಯಪಟ್ಟಿಯನ್ನು ಪ್ರತಿಯೊಂದು ದೇಶವೂ ತಯಾರಿಸುತ್ತದೆ. ಈ ಲೆಕ್ಕಾಚಾರವನ್ನೇ ಹಣಸಂದಾಯ ಸಮತೋಲನವೆನ್ನುವುದು. ಮಿಕ್ಕೆಲ್ಲಾ ಆಯವ್ಯಯಗಳ ಪಟ್ಟಿಯಂತೆ ಈ ಲೆಕ್ಕದ ಎರಡು ಭಾಗಗಳನ್ನು ಪರಸ್ಪರ ಸರಿತೂಗಿಸಿರುತ್ತದೆ. ಈ ಎರಡೂ ಭಾಗಗಳ ಸರಿಸಮಾನತೆ ದೇಶದ ಹಣ ಸಂದಾಯ ಸ್ಥಿತಿಯಲ್ಲಿ ಸಮತೆ ಇದೆಯೆಂದು ಹೇಳುವುದಿಲ್ಲ. ಹೇಗೆಂದರೆ, ದೇಶದ ಹಣಸಂದಾಯ ಸ್ಥಿತಿಯಲ್ಲಿ ಅಸಮತೆ ಇದ್ದಾಗಲೂ ಕೂಡ ಹಣಸಂದಾಯ ಸಮತೋಲನ ಸಮವಾಗಿಯೇ ಇರುವುದು. ಸರಿಸಮಾನತೆಯನ್ನು ಗಳಿಸಲು ಕೈಗೊಂಡ ವಿವರಗಳನ್ನು ತೋರಿಸುವುದು ಈ ಲೆಕ್ಕದ ವೈಶಿಷ್ಟ್ಯವೆನ್ನಬಹುದು. ಒಂದು ದೇಶದ ಹಣಸಂದಾಯ ವ್ಯವಹಾರಗಳ ತಪಶೀಲುಗಳನ್ನು ತೋರಿಸುವುದಲ್ಲದೆ ಈ ವ್ಯವಹಾರವನ್ನು ಸರಿಸಮಗೊಳಿಸಲು ಮಾಡಿದ ಏರ್ಪಾಡುಗಳನ್ನು ತೋರಿಸುವುದು ಹಣ ಸಂದಾಯ ಸಮತೋಲನದ ಮುಖ್ಯೋದ್ದೇಶ ವೆನ್ನಬಹುದು. ಹಣಸಂದಾಯ ಸಮತೋಲನ ಖಾತೆಯ ಲೆಕ್ಕಾಚಾರ ಹೇಗೇ ಇರಲಿ, ಋಣಾಧಿಕ್ಯ ಇಲ್ಲದೆ ಆಯಾಧಿಕ್ಯ ಆ ದೇಶದ ಹಣಸಂದಾಯ ಸ್ಥಿತಿಯಲ್ಲಿ ಏರ್ಪಟ್ಟಿರುವ ಅಸಮತೆಯನ್ನು ತೋರಿಸುತ್ತದೆ. ಎರಡನೆಯ ಮಹಾಯುದ್ಧದಿಂದೀಚೆಗೆ ಋಣಾಧಿಕ್ಯದಿಂದ ಉಂಟಾದ ಅಸಮ ಹಣಸಂದಾಯಸ್ಥಿತಿ ವಿಶ್ವದಾದ್ಯಂತ ಹರಡಿರುವ ಕ್ಲಿಷ್ಟ ಸಮಸ್ಯೆಯಾಗಿದೆ: ವಿಶೇಷವಾಗಿ ಹಿಂದುಳಿದ ಮತ್ತು ಮುಂದುವರಿಯುತ್ತಿರುವ ರಾಷ್ಟ್ರಗಳನ್ನು ಬಹುಕಾಲದಿಂದ ಪೀಡಿಸುತ್ತಿದೆ. ಹಣಸಂದಾಯ ಸ್ಥಿತಿಯ ಅಸಮತೆ ತಾತ್ಕಾಲಿಕವಾಗಿ ಕಂಡುಬರಬಹುದು ಅಥವಾ ಮೂಲಭೂತ ಕಾರಣಗಳಿಂದುಂಟಾಗಿರಬಹುದು. ದೇಶದ ಆರ್ಥಿಕ ಸ್ಥಿತಿಯಲ್ಲಿ ನಿಜವಾದ ಕುಂದುಕೊರತೆಗಳೇನೂ ಇಲ್ಲದಿದ್ದರೂ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಹಾರದ ಅತಿರೇಕದಿಂದ ದೇಶದ ಹಣ ಸಂದಾಯ ಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಅಸಮತೆ ಕಂಡುಬರಬಹುದು. ಹಾಗಲ್ಲದೆ ದೇಶದ ಆರ್ಥಿಕ ವ್ಯವಸ್ಥೆಯ ನ್ಯೂನಾತಿರೇಕಗಳ ಪರಿಣಾಮವಾಗಿ ಹಣಸಂದಾಯ ಸ್ಥಿತಿಯಲ್ಲಿ ಅಸಮತೆ ಅವಿರಳವಾಗಿ ಉದ್ಭವಿಸಬಹುದು. ಇಂಥ ಮೂಲಭೂತ ಅಸಮತೆ, ಮುಂದುವರಿಯುತ್ತಿರುವ ರಾಷ್ಟ್ರಗಳು ಪದೇಪದೇ ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಇದನ್ನು ನಿವಾರಿಸಲು ದೇಶದ ಆರ್ಥಿಕ ಸ್ಥಿತಿಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡದೆ ಸಾಧ್ಯವಿಲ್ಲ.