ಅಂಬಕೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
 
೫ ನೇ ಸಾಲು:
ನಿವೇಶನದ ದಕ್ಷಿಣ ಪರಿಧಿಯಲ್ಲಿ ಒಂದು ಇಟ್ಟಿಗೆಗೂಡು ಕಂಡು ಬಂದಿದೆ. ಇದು 1.60ಮೀ ಉದ್ದ ಮತ್ತು 30ಸೆಂಮೀ ಅಗಲವಾಗಿದ್ದು ಪುರ್ವ-ಪಶ್ಚಿಮಾಭಿಮುಖವಾಗಿದೆ. ಇಟ್ಟಿಗೆಗೂಡನ್ನು ಒಂದು ಡೊಗರಿರುವ ಗುಣಿಯಲ್ಲಿ ಮಾಡಿದೆ. ಇದರ ಪಕ್ಕಗಳನ್ನು ಒಣಹುಲ್ಲು ಮಿಶ್ರಿತ ಜೇಡಿಮಣ್ಣಿನಿಂದ ಗಿಲಾವು ಮಾಡಲಾಗಿದೆ. ಇಟ್ಟಿಗೆಗೂಡು ಉಪಯೋಗದಲ್ಲಿದ್ದಾಗ ಗಿಲಾವು ಮಾಡಿರುವ ಭಾಗ ಸುಟ್ಟಿದೆ. ಇದಕ್ಕೆ ಹತ್ತಿರದಲ್ಲಿಯೇ ಬಹಳಷ್ಟು ನಾಶವಾಗಿರುವ ಇದೇ ರೀತಿಯ ಇನ್ನೊಂದು ಇಟ್ಟಿಗೆ ಗೂಡು ಇತ್ತು. ಈ ಗೂಡಿನಲ್ಲಿ ಸುಟ್ಟ ಮಣ್ಣಿನ ಬೊಂಬೆ ಮತ್ತು ಚಕ್ರದ ಮಧ್ಯಭಾಗವೂ ದೊರಕಿದೆ.
ಕಲ್ಲಿನ ಒಂದು ಮಣಿ ಮತ್ತು ಡುಬ್ಬವಿರುವ ಸುಟ್ಟ ಮಣ್ಣಿನ ಗೂಳಿ, ಮಣಿಗಳು ಅಂಡಾಕೃತಿಯ ಚಪ್ಪಟೆ ಬಿಲ್ಲೆಗಳು ಮೊದಲಾದವು ಮತ್ತು ಕೆಲವು ಇತರ ಪ್ರಾಚೀನ ವಸ್ತುಗಳು ದೊರಕಿವೆ. ಕೆಲವು ವಸ್ತುಗಳ ಮೇಲೆ ಬೆರಳಿನ ಗುರುತುಗಳಿವೆ. ಮೂರು ಕಡೆ ರಂಧ್ರಗಳಿರುವ ಒಂದು ಇಟ್ಟಿಗೆ ಚೂರು ಸಹ ದೊರಕಿದೆ. ಈ ರಂಧ್ರಗಳ ಒಂದು ಕೊನೆಯಲ್ಲಿ ವೃತ್ತಾಕಾರವಾಗಿಯೂ ಮತ್ತೊಂದು ಕೊನೆಯಲ್ಲಿ ಲಂಬಾಕಾರವಾಗಿಯೂ ಇದೆ. ಒಂದು ಅರೆಯುವ ಕಲ್ಲು ಮತ್ತು ರುಬ್ಬು ಗುಂಡುಗಳು ದೊರಕಿವೆ.
ಕೆಲವು ಮಡಕೆಗಳ ಆಕಾರಗಳು ಹರಪ್ಪ ಸಂಸ್ಕೃತಿಯ ಅಂತ್ಯ ಕಾಲದ ಗಂಗಾ-ಯಮುನಾ ಸಂಗಮದ ಮತ್ತು ಪುರ್ವ ಪಂಜಾಬಿನ ಮಡಕೆಗಳನ್ನು ಹೋಲುತ್ತವೆ. ಇದನ್ನು ಗಮನಿಸಿದರೆ ಈ ಸಂಸ್ಕೃತಿಗಳು ಸಮಕಾಲೀನವಾಗಿದ್ದಿರಬಹುದು ಅಥವಾ ಈ ಸಂಸ್ಕೃತಿಗಳ[[ಸಂಸ್ಕೃತಿ]]ಗಳ ಪರಸ್ಪರ ಸಂಪರ್ಕದಿಂದ ಉಂಟಾಗಿರಬಹುದೆಂದು ಹೇಳಬಹುದು.
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಅಂಬಕೇರಿ" ಇಂದ ಪಡೆಯಲ್ಪಟ್ಟಿದೆ